ದಹಿಗೆ ನಹಿ ಎನ್ನುವವರಿಗೆ ಹಲಾಲ್ ಸಹಿ?

dahi2ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಆಹಾರ ಉತ್ಪನ್ನಗಳು ಒಂದು ರಾಜ್ಯದಲ್ಲಿ ತಯಾರಾಗಿ ಮತ್ತೊಂದು ರಾಜ್ಯಗಳಲ್ಲಿ ಮಾರಾಟಗುವ ಕಾರಣ ಭಾರತದ ಅತಿ ಹೆಚ್ಚು ಜನರು ಮಾತನಾಡುವಂತಹ ಹಿಂದಿ ಭಾಷೆಯಲ್ಲಿಯೂ ಅದರ ಹೆಸರನ್ನು ನಮೂದಿಸಬೇಕು ಎಂಬ ಆದೇಶವನ್ನು ಹೊರಡಿಸಿತ್ತು. ಇದರ ಅನುಸಾರವಾಗಿ ಕರ್ನಾಟಕದ ಹೆಮ್ಮೆಯ ನಂದಿನಿ ಮೊಸರಿನ ಪ್ಯಾಕೆಟ್‌ಗಳ ಮೇಲೆ ‘ದಹಿ’ (Dahi) ಎಂದು ಹಿಂದಿಯಲ್ಲಿ ಮುದ್ರಣವಾದದ್ದನ್ನು ಕಂಡು ಯಥಾ ಪ್ರಕಾರ ಕನ್ನಡಪರ ಹೋರಾಟಗಾರರು ಹಿಂದಿ ಹೇರಿಕೆ ಎಂದು ಅಬ್ಬರಿಸಿದರೆ, ಚುನಾವಣಾ ಸಮಯದಲ್ಲಿ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹಾ ಇದನ್ನು ಒಪ್ಪಲು ಸಾಧ್ಯವಿಲ್ಲ. ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ಬಿಜೆಪಿ ಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು ಎಂದು  ಟ್ವೀಟ್ ಮಾಡಿದ್ದಾರೆ.

ನಿಜ ಹೇಳಬೇಕೆಂದರೆ, ಎಂದಿನಂತೆ ಈ ಪರಿಯಾದ ವಿರೋಧ ಆರಂಭವಾಗಿದ್ದೇ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಸಂಸದರಿಂದಲೇ. ಡಿಎಂಕೆಯ ಟಿಕೆಎಸ್ ಇಳಂಗೋವನ್ ಆವರು ಪ್ರತೀ ರಾಜ್ಯವು ಅವರ ಭಾಷೆಯಲ್ಲಿ ಬರೆಯುವುದಕ್ಕೆ, ಎಫ್‌ಎಸ್‌ಎಸ್‌ಎಐ ಏಕೆ ಹಸ್ತಕ್ಷೇಪ ಮಾಡುತ್ತಿದೆ? ಸಂವಿಧಾನದ ಪ್ರಕಾರ ಎಲ್ಲಾ ಭಾಷೆಗಳಿಗೆ ಸಮಾನ ಗೌರವವಿದೆ ಅದನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ದೇಶದಲ್ಲಿ ಯಾವುದೇ ಒಂದು ಭಾಷೆ ರಾಷ್ಟ್ರೀಯ ಭಾಷೆಯಾಗಲು ಸಾಧ್ಯವಿಲ್ಲ ಮತ್ತು ಅದನ್ನು ಡಿಎಂಕೆ ಒಪ್ಪುವುದಿಲ್ಲ ಎಂದು ಗರ್ಜಿಸಿದ್ದಾರೆ. ಇದರ ಮುಂದುವರೆದ ಭಾಗವಾಗಿ, ಎಂ.ಕೆ.ಸ್ಟಾಲಿನ್ ಈ ನಿರ್ದೇಶನವನ್ನು ಹಿಂದಿ ಹೇರಿಕೆಯ ಪ್ರಕರಣ ಎಂದು ಟೀಕಿಸಿ, ದಕ್ಷಿಣ ಭಾರತದ ಜನರು ಇದರಿಂದ ದೂರವಿಡಬೇಕು. ಹಿಂದಿ ಹೇರಿಕೆಯ ನಿರ್ಲಜ್ಜ ಒತ್ತಾಯಗಳು ಹಿಂದಿಯಲ್ಲಿ ಮೊಸರು ಪ್ಯಾಕೆಟ್‌ ಮೇಲೂ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ, ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಇದು ದೂರ ಮಾಡುತ್ತದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕು ಎಂದಿದ್ದಾರೆ.

dahiತಮ್ಮ ಆದೇಶಕ್ಕೆ ತಮಿಳರು ಮತ್ತು ಕನ್ನಡಿಗರಿಂದ ಈ ಪರಿಯ ವಿರೋಧಕ್ಕೆ ಮಣಿದ ಎಫ್‌ಎಸ್‌ಎಸ್‌ಎಐ ಮೊಸರು ಪ್ಯಾಕೆಟ್​​ಗಳ ಮೇಲೆ ಇಂಗ್ಲೀಷ್ ನಲ್ಲಿ ಕರ್ಡ್, ಹಿಂದಿಯಲ್ಲಿ ದಹಿ, ಕನ್ನಡಲ್ಲಿ ಮೊಸರು ಮತ್ತು ಝಾಮುತ್ ದೌಡ್ ಎಂದು ಲೇಬಲ್ ಮಾಡಬಹುದು ಎಂದು ಹೇಳುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವಂತೆ ನಿಟ್ಟುಸಿರು ಬಿಟ್ಟಿದೆ.

ಸ್ವಾತ್ರಂತ್ರ್ಯದ ನಂತರ 565 ಸಣ್ಣ ಸಣ್ಣ ರಾಜ್ಯಗಳನ್ನು ಒಗ್ಗೂಡಿಸಿಸಿ ಭಾರತ ಎಂಬ ಒಕ್ಕೂಟ ದೇಶವನ್ನಾಗಿ ಮಾಡಿದ ನಂತರ 1956 ರಲ್ಲಿ ಭಾಷಾವಾರು ಅಧಾರದಲ್ಲಿ ರಾಜ್ಯಗಳನ್ನು ವಿಂಗಡಿಸಿದ ನಂತರವೂ ತಮ್ಮ ರಾಜಕೀಯ ಲಾಭಕ್ಕಾಗಿ 60ರ ದಶಕದಲ್ಲಿ ತಮಿಳುನಾಡಿನಲ್ಲಿ ಆರಂಭವಾದ ದ್ರಾವಿಡ ಚಳುವಳಿಯ ಕಿಚ್ಚು ಈಗ ನಿಧಾನವಾಗಿ ಕರ್ನಾಟಕಕ್ಕೂ ಹಬ್ಬುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹೌದು ನಿಜ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಮತ್ತು ಕನ್ನಡಿಗನೇ ಸಾರ್ವಭೌಮ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಅದೇ ರೀತಿಯಲ್ಲಿ ನೆರೆಹೊರೆ ರಾಜ್ಯಗಳು ಮತ್ತು ಅವರ ಭಾಷೆಗಳನ್ನೂ ಗೌರಸುವುದೇ ನಿಜವಾದ ಕನ್ನಡಿಗರ ಸಂಸ್ಕಾರವಾಗಿದೆ.

ಚುನಾವಣಾ ಸಮಯದಲ್ಲಿ ಹಿಂದಿ ಹೇರಿಕೆ ಎಂದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳು ಮುಂದಾಗಿರುವ ಪ್ರಾದೇಶಕ ಪಕ್ಷವಾದ ಜೆಡಿಎಸ್ ಅವರ ಈ ಹೋರಾಟ ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ. ಸಾಂಧರ್ಭಿಕ ಶಿಶುಗಳಾಗಿ ಈ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ದೇವೇಗೌಡರು ಮತ್ತು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಕುಮಾರಸ್ವಾಮಿಯವರು ಸಮಯಕ್ಕೆ ತಕ್ಕಂತೆ ಹಿಂದಿ ಮತ್ತು ಬೆಂಗಾಲಿ ಭಾಷೆಯಲ್ಲಿ ಮಾತನಾಡಿದ್ದನ್ನು ಮರೆತು ಹೋದಂತಿದೆ. ಹಿಂದಿ ಹೇರಿಕೆ ಎನ್ನುವ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರೇ ಪ್ರಧಾನ ಮಂತ್ರಿಗಳಾಗಿದ್ದಾಗ ದೆಹಲಿಯ ಕೆಂಪು ಕೋಟೆಯಲ್ಲಿ ಕನ್ನಡಲ್ಲಿ ಬರೆದುಕೊಂಡು ಹಿಂದಿ ಭಾಷಣವನ್ನು ಓದಿದರೆ, ಇನ್ನು ಪಶ್ಚಿಮಬಂಗಾಳದ ಮುಖ್ಯಮಂತ್ರಿಯನ್ನು ಓಕೈಸುವ ಸಲುವಾಗಿ ಆಕೆಯ ಮುಂದೆ ಕೈಕಟ್ಟಿ ಮಂಡಿಯೂರಿ ಮತ್ತೆ ಕನ್ನಡಲ್ಲಿ ಬರೆದುಕೊಂಡು ಬಂಗಾಲಿಯಲ್ಲಿ ಭಾಷಣ ಮಾಡಿದ್ದನ್ನು ಮರೆತು ಈ ರೀತಿ ಭಾಷೆಯ ಆಧಾರದ ಮೇಲೆ ಜನರನ್ನು ರೊಚ್ಚಿಗೆಬ್ಬಿಸುತ್ತಿರುವುದು ನಿಜಕ್ಕೂ ಮಾರಕವಾಗಿದೆ

WhatsApp Image 2023-03-31 at 11.40.50 (1)ಇನ್ನೂ ಮಜವಾದ ವಿಷಯವೆಂದರೆ, ಈಗಾಗಲೇ ಲಸ್ಸಿ ಮತ್ತು ಮ್ಯಾಂಗೋ ಲಸ್ಸಿ ಎಂದು ಮುದ್ರಣ ಮಾಡಿದ ಉತ್ಪನ್ನಗಳು ಬಹಳ ವರ್ಷಗಳಿಂದಲೂ ನಂದಿನಿಯಲ್ಲಿ ಮಾರಟವಾಗುತ್ತಿದ್ದರೂ ಆಗಿಲ್ಲದ ಆರ್ಭಟ ಈಗ ದಹಿ ಎಂಬ ಪದ ಮೇಲೆ ಏಕೆ ಆಗುತ್ತಿದೆ? ಎಂಬುದರ ಸಮಯ ಮತ್ತು ಸಂದರ್ಭವನ್ನು ಖಂಡಿತವಾಗಿಯೂ ಕನ್ನಡಿಗರು ಅರ್ಥ ಮಾಡಿಕೊಳ್ಳುತ್ತಾರೆ. ಲಸ್ಸಿ ಎಂಬುದನ್ನು ಕನ್ನಡವಾಗಿ ಬದಲಿಸ ಬೇಕು ಎಂದಾದಲ್ಲಿ ಜನಮಾನಸದಲ್ಲಿ ಈಗಾಗಲೇ ಚಿರಪರಿಚಿತವಾಗಿರುವ, ಬಿರಿಯಾನಿ, ಕಬಾಬ್, ಗೋಬಿ ಮಂಚೂರಿ, ಪಾನಿ ಪುರಿ, ಧಹಿ ಪುರಿ, ಮಸಾಲ ಪುರಿ ಅದೆಲ್ಲಾ ಭಿಡಿ ಭಯ್ಯಾ ಏಕ್ ಚಾರ್ ಸೌ ಬೀಸ್ ಜರ್ದಾ ಪಾನ್ ದೇನಾ ಎಂದು ಕೇಳಿ ಬಾಯಿ ತುಂಬಾ ಪಾನ್ ಹಾಕಿಕೊಂಡು ತುಪುಕ್ ಎಂದು ರಸ್ತೆಯಲ್ಲೇ ಉಗಿದು ಹೋಗುವ ಹೋರಾಟಗಾರಿಗೆ ಈ ಪದಗಳೆಲ್ಲವೂ ಕನ್ನಡದ್ದಲ್ಲಾ ಎಂಬ ಪರಿಜ್ಞಾನನವಿಲ್ಲವೇ? ಅದೇ ರೀತಿ ಮಾಲ್ ಬಿಡಿ ಯಾವುದೇ ಸಣ್ಣ ತರಕಾರಿ ಅಂಗಡಿಗಳಲ್ಲಿಯೂ ಹಣ್ಣು ಮತ್ತು ತರಕಾರಿಗಳಿಗೆ ಇಂಗ್ಲೀಷ್ ಹೆಸರಿನಲ್ಲೇ ಇರುತ್ತದೆ ಅದರ ಬಗ್ಗೆ ಏಕೆ ಚಕಾರವಿಲ್ಲಾ? ಇನ್ನು ಸಣ್ಣ ಮಕ್ಕಳಿಗೆ ಪ್ರಾಣಿ ಪಕ್ಷಗಳ ಕನ್ನಡದ ಹೆಸರಿನ ಪರಿಚಯವೇ ಇರದೇ ಸಂಪೂರ್ಣವಾಗಿ ಇಂಗ್ಲೀಷ್ ಮಯವಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿಗಳು ಏನನ್ನುತ್ತಾರೋ?

halalಊರಿನ ಹೊರವಲಯದಲ್ಲಿ ಮಾರಾಟವಾಗುತ್ತಿದ್ದ ಕುರಿ ಕೋಳಿ, ಮೀನು, ಹಂದಿ ಮಾಂಸಗಳು ಇಂದು ಆಕರ್ಷಣೀಯವಾದ ಜಾಹೀರಾತುಗಳಿಂದ ಜನರನ್ನು ಮರಳು ಮಾಡುತ್ತಾ ಚೆಂದನೆಯ ಪ್ಯಾಕಿನಲ್ಲಿ ಸಾಧಾರಣ ತರಕಾರಿ ಅಂಗಡಿಗಳಲ್ಲಿಯೂ ಲಭ್ಯವಿದ್ದು ಅಗತ್ಯವಿದ್ದ ಯಾರು ಬೇಕಾದರೂ ಖರೀದಿಸ ಬಹುದಾಗಿದೆ. ಅದು ಇಷ್ಟೇ ಆಗಿದ್ದಲ್ಲಿ ಯಾರ ಆಕ್ಷೇಪಣೆ ಇರುತ್ತಿರಲಿಲ್ಲ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅ ಪ್ಯಾಕಿನ ಮೇಲೆ ಹಲಾಲ್ ಎಂಬ ಮುದ್ರೆ ಒತ್ತಿರುವುದು ಆತಂಕಕ್ಕೆ ಈಡು ಮಾಡಿದೆ. ಅದಕ್ಕಾಗಿಯೇ ಹಲಾಲ್ ಎಂದರೆ ಏನು ಎಂಬುದನ್ನು ಎಲ್ಲರೂ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾಗಿದೆ.

halal_certificateಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಎಂಬ ಸರ್ಕಾರಿ ಅಧಿಕೃತ ಸಂಸ್ಥೆಯು ಎಲ್ಲರ ಹಿತಕ್ಕಾಗಿ ಹಿಂದಿ ಭಾಷೆಯಲ್ಲೂ ಮುದ್ರಿಸಿ ಎಂದ್ದದ್ದಕ್ಕೆ ಹರಿಯಾಯ್ದ ಹೋರಾಟಗಾರರು ಮತ್ತು ರಾಜಕಾರಣಿಗಳು, ಸರ್ಕಾರದ ಮಾನ್ಯತೆಯನ್ನೇ ಪಡೆಯದ ಖಾಸಗೀ ಧಾರ್ಮಿಕ ಸಂಸ್ಥೆಯು ಆರಂಭದಲ್ಲಿ ಮಾಂಸಾಹಾರದಿಂದ ಆರಂಭವಾಗಿ ಇಂದು ಬಹಳಷ್ಟು ಉತ್ತನ್ನಗಳ ಮೇಲೆ ಹಲಾಲ್ ಮುದ್ರಿಸಬೇಕು ಎಂದು ಆಗ್ರಹ ಮಾಡುತ್ತಿರುವುದರ ವಿರುದ್ದವೇಕೆ ಹೋರಾಟ ಮಾಡುವುದಿಲ್ಲ?

halal4ಮುಸಲ್ಮಾನರ ಕುರಾನ್ ಮತ್ತು ಹದೀಸ್ ಗಳಲ್ಲಿ ಹೇಳಿರುವಂತೆ ಮತ್ತು ಅನುಮೋದಿಸಲಾಗಿರುವುದನ್ನು ಹಲಾಲ್ ಎಂದೂ ಮತ್ತು ಅದರಲ್ಲಿ ನಿಷೇಧಕ್ಕೊಳಪಟ್ಟಿರುವಂಥವನ್ನು ಹರಾಮ್ ಎಂದೂ ಕರೆಯಲಾಗುತ್ತದೆ. ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಅದನ್ನು ಯಾರು ಮತ್ತು ಹೇಗೆ ಕತ್ತರಿಸಬೇಕೆಂಬ ನಿಯಮವಿದ್ದು ಪ್ರಾಣಿಗಳನ್ನು ವಧಿಸುವ ಮುನ್ನ ಮುಸಲ್ಮಾನ್ ಮೌಲ್ವಿಗಳು ಬಂದು ಪ್ರಾರ್ಥನೆ ಸಲ್ಲಿಸಿಪ್ರಾಣಿಗಳ ಮೇಲೆ ಪವಿತ್ರ ನೀರನ್ನು ಪ್ರೋಕ್ಷಿಸಿ, ಆ ಪ್ರಾಣಿಗಳ ಕುತ್ತಿಗೆಯನ್ನು ಸೀಳಿ, ಆ ಪ್ರಾಣಿಗಳು ವಿಲ ವಿಲ ಒದ್ದಾಡುತ್ತಾ ದೇಹದಲ್ಲಿದ್ದ ರಕ್ತವು ಸಂಪೂರ್ಣವಾಗಿ ಖಾಲಿಯಾದ ನಂತರ ಕತ್ತರಿಸಿದ ಮಾಂಸವನ್ನು ಸ್ವೀಕರಿಸಿದವರ ಪ್ರಾರ್ಥನೆಯನ್ನು ಮಾತ್ರವೇ, ಭಗವಂತನಿಗೆ ಸಂಪ್ರೀತವಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಹಿಂದೂಗಳು ಏಕ್ ಮಾರ್ ದೋ ತುಕುಡಾ ಎಂಬಂತೆ ಪ್ರಾಣಿಗಳಿಗೆ ಹೆಚ್ಚು ನೋವಾಗದಂತೆ ಒಂದೇ ಏಟಿಗೆ ಕತ್ತರಿಸಿದ ಮಾಂಸ ಹರಾಮ್ ಎನಿಸಿಕೊಂಡಿದ್ದು ಅದು ತಿನ್ನಲು ಯೋಗ್ಯವಲ್ಲ ಎಂಬುದು ಅವರ ನಂಬಿಕೆಯಾಗಿದೆ

ಇಷ್ಟೇ ಅಲ್ಲದೇ ಹಲಾಲ್ ಹೋಟೆಲ್ಲುಗಳಲ್ಲಿ ಬಳಸುವ ಮಾಂಸ ಮತ್ತು ಅಲ್ಲಿ ತಯಾರಾಗುವ ಆಹಾರಗಳ ಮೇಲೆ ಮುಸಲ್ಮಾನರುಗಳ ಎಂಜಿಲು ಇರುತ್ತದೆ ಎಂಬುದು ಗೊತ್ತಿದ್ದರೂ, ನಮ್ಮ ದೇಶ ಭಾರತ ಜಾತ್ಯಾತೀತ ದೇಶ. ಹಾಗಾಗಿ ಸಂವಿಧಾನಾತ್ಮಕವಾಗಿ ಎಲ್ಲರೊಂದಿಗೆ ಅನುಸರಿಸಿಕೊಂಡು ಹೋಗಬೇಕು ಮತ್ತು ಈ ರೀತಿಯಾಗಿ ಆಹಾರ ಪದ್ದತಿಯಲ್ಲಿ ಬೇಧಭಾವ ಕಲ್ಪಿಸುತ್ತಾ ಕೋಮು ಸೌಹಾರ್ಧ ಹಾಳುಮಾಡಬಾರದು ಎಂದು ಎಂದು ಭಾಷಣ ಬಿಗಿಯುವವರೇ ಈಗ ಭಾಷೆ ಭಾಷೆಗಳ ಮುಖಾಂತರ ಈ ದೇಶವನ್ನು ಮತ್ತೆ ವಿಭಜನೆ ಮಾಡಲು ಮುಂದಾಗಿರುವುದು ನಿಜಕ್ಕೂ ದೇಶದ ಅಖಂಡತೆ ಮಾರಕವಾಗಿದೆ.

halal certificate ಎಂಬುದು ಮುಸಲ್ಮಾನರಿಗೆ ಅವಶ್ಯಕವಿರಬಹುದು ಆದರೆ ಹಲಾಲ್ ಅನ್ನು ಮುಸಲ್ಮಾನೇತರ ಮೇಲೂ ಬಲವಂತವಾಗಿ ಅವರಿಗೇ ತಿಳಿಯದಂತೆ ಹೇರಲಾಗುತ್ತಿರುವುದು ಕಳವಳಕಾರಿಯಾಗಿದೆ. ಇದು ಕೇವಲ ಪ್ರಾಣಿಗಳನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸುವ ವಿಧಾನವಾಗಿದ್ದಲ್ಲಿ ಹೆಚ್ಚಿನ ತಕರಾರು ಇರುತ್ತಿರಲಿಲ್ಲ. ಒಂದು ಧರ್ಮದ ಆಚರಣೆಯ ನೆಪದಲ್ಲಿ ಇಡೀ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಹುನ್ನಾರ ಸದ್ದಿಲ್ಲದೇ ನಡೆಯುತ್ತಿದೆ. ಹಿಂದೂಗಳಲ್ಲಿ ಮಾಂಸದ ವ್ಯಾಪಾರವನ್ನು ಮಾಡುವವರು ಬಹುತೇಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು ಈಗ ಅವರು ಕತ್ತರಿಸಿದ ಮಾಂಸ ಹರಾಮ್ ಎಂದಾದಾಗ ಅವರು ತಮ್ಮ ವ್ಯಾಪಾರವನ್ನು ವೃದ್ಧಿಸುವ ಸಲುವಾಗಿ ಪರೋಕ್ಷವಾಗಿ ಮಾಂಸ ಕತ್ತರಿಸುವ ಮೊದಲು ಮುಸ್ಲಿಂ ಮೌಲ್ವಿಗಳನ್ನು ಕರೆಸಿ ಅವರಿಂದ ಪವಿತ್ರ ನೀರನ್ನು ಪ್ರೋಕ್ಷಿಸಿ ಅವರ ಪದ್ದತಿಯ ಮೂಲಕವೇ ಮಾಂಸ ಕತ್ತರಿಸ ಬೇಕಾದ ಅನಿವಾರ್ಯ ಸಂಧರ್ಭ ಒದಗಿಬಂದಿದೆ. ಈ ರೀತಿಯ ಕ್ರಮ ಈ ಅಂಗಡಿಯಲ್ಲಿ ಜಾರಿ ಇದೆ ಎಂದು ತಿಳಿದುವುದಕ್ಕಾಗಿಯೇ ಹಲಾಲ್ ಪ್ರಮಾಣ ಪತ್ರವನ್ನೂ ಸಹಾ ಅಂತಹ ಅಂಗಡಿಗಳಲ್ಲಿ ಪ್ರದರ್ಶನ ಮಾಡುತ್ತಾ, ಇಂತಹ ಪ್ರಮಾಣ ಪತ್ರವನ್ನು ಪಡೆಯಲು ಪ್ರತೀವರ್ಷವೂ ಹಲಾಲ್ ಬೋರ್ಡಿಗೆ ಇಂತಿಷ್ಟು ವಂತಿಕೆ ನೀಡಬೇಕೆಂಬ ನಿಯವೂ ಇದೆ. ಹಿಂದೂಗಳು ಕ್ರಮೇಣ ಈ ಪದ್ದತಿಯಿಂದ ಬೇಸರಿಕೊಂಡು ಇಷ್ಟೆಲ್ಲಾ ಉಸಾಬರಿ ತನಗೇಕೆ ಎಂದು ಮಾಂಸ ಮಾರುವುದನ್ನೇ ಅನಿವಾರ್ಯವಾಗಿ ಬಿಟ್ಟು ಬಿಟ್ಟಲ್ಲಿ ಆ ಪ್ರದೇಶದಲ್ಲಿ ಮಾಂಸಾಹಾರದ ಮಾರುಕಟ್ಟೆ ಸಂಪೂರ್ಣ ಮುಸಲ್ಮಾನರ ಕೈ ಪಾಲಾಗಿ ಹಿಂದೂಗಳು ನಿರುದ್ಯೋಗಿಗಳಾಗುತ್ತಾರೆ.

ದೇವಸ್ಥಾನಗಳಲ್ಲಿ ಮಂಗಳಾರತಿ ತಟ್ಟೆಗೆ ಭಕ್ತಿಯಿಂದ ಯಥಾ ಶಕ್ತಿ ದಕ್ಷಿಣೆ ಹಾಕುವುದನ್ನು ಅತ್ಯಂತ ಕಠು ಶಬ್ಧಗಳಲ್ಲಿ ವಿರೋಧಿಸುತ್ತಾ ಸಮಾಜದಲ್ಲಿ ಒಡಕನ್ನು ಉಂಟು ಮಾಡುವ ಬುದ್ದಿ ಜೀವಿಗಳಿಗೆ ಹಲಾಲ್ ರೂಪದಲ್ಲಿ ಮುಸ್ಲಿಂ ಮೌಲ್ವಿಗಳು ಬಿಸ್ಲಿಲ್ಲಾ ಎಂದು ನೀರು ಪ್ರೋಕ್ಷಿಸುತ್ತಾ ಮತ್ತು ಕೇವಲ ಒಂದು ಪ್ರಮಾಣ ಪತ್ರ ನೀಡುವ ಹಲಾಲ್ ಬೋರ್ಡ್ ನಡೆಸುತ್ತಿರುವ ಹಗಲು ದರೋಡೆ ಕಣ್ಣಿಗೆ ಕಾಣಿಸದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ,

Rule is Rule even for fool ಎಂಬ ಆಂಗ್ಲ ಮಾತಿನಂತೆ ಹಿಂದಿ ಹೇರಿಕೆಯ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡುವ/ ರಸ್ತೆಗಿಳಿದು ಹಿಂದಿ ಬೋರ್ಡುಗಳ ಮೇಲೆ ಮಸಿ ಬಳಿಯುವವರು ಅದೇ ರೀತಿ ಹಲಾಲ್ ವಿರುದ್ಧವೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದಾಗ ಮಾತ್ರವೇ ಅವರದ್ದು ನೈಜ ಹೋರಾಟ ಎನಿಸಿಕೊಳ್ಳುತ್ತದೆ ಅಲ್ಲವೇ? ಇಲ್ಲದೇ ಹೋದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿ ಈ ಹೋರಾಟಗಳ ಹಿಂದೆ ಅಧಿಕಾರ, ಸ್ವಹಿತಾಸಕ್ತಿ ಅಲ್ಲದೇ ಮತ್ತೇನೋ ಮರ್ಮ ಇದೆ ಎಂದೇ ಜನರು ಭಾವಿಸುತ್ತಾರೆ.. ನಮ್ಮ ಅಸ್ಮಿತೆ ಮತ್ತು ಅಸ್ಥಿತ್ವಕ್ಕೆ ಭಾಷೆ ಹೇಗೆ ಮುಖ್ಯವೋ ಧರ್ಮವೂ ಸಹಾ ಆಷ್ಟೇ ಮುಖ್ಯವಲ್ಲವೇ?

ಧರ್ಮೋ ರಕ್ಷತಿ ರಕ್ಷಿತಃ

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s