ನಮ್ಮ ದೇಶಗಳ ಮೇಲೇ ಕಳೆದ ಹತ್ತು- ಹನ್ನೆರಡು ಶತಮಾನಗಳಿಂದ ಪದೇ ಪದೇ ಶತ್ರುಗಳಿಂದ ಧಾಳಿ ನಡೆದು ಅನೇಕ ಬಲವಂತದ ಮತಾಂತಗಳು ನಡೆದರೂ ನಮ್ಮ ಸನಾತದ ಧರ್ಮ ಇಂದಿಗೂ ಶಕ್ತಿಶಾಲಿ ಆಗಿರುವುದಕ್ಕೆ ನಮ್ಮ ಮಠ ಮಂದಿರಗಳ ಕೊಡುಗೆ ಅಪಾರ ಎಂದರೂ ತಪ್ಪಾಗದು. ಮಠ ಮಂದಿರಗಳು ಭಕ್ತಾದಿಗಳಿಗೆ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜ್ಞಾನ ಒದಗಿಸುವಲ್ಲಿ ಸಫಲವಾಗಿರುವುದರಿಂದಲೇ ನಮ್ಮ ಧರ್ಮವನ್ನು ಇಂದಿಗೂ ಯಾರೂ ಸಹಾ ಅಲುಗಾಡಿಸಲು ಸಾಥ್ಯವಿಲ್ಲ.
ಒಂದು ಕಾಲಕ್ಕೆ ಕರ್ನಾಟಕದ ಭಾಗವಾಗಿದ್ದ, ಪ್ರಸ್ತುತ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಗೆ ಸೇರಿರುವ ತುಂಗಭದ್ರಾ ನದಿಯ ದಂಡೆಯಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯವರ ಬೃಂದಾವನ ಇರುವ ಶ್ರೀಮಠವೂ ಸಹಾ ಅಂತಹದ್ದೇ ಒಂದು ಮಠವಾಗಿದೆ. 1630ರ ಸುಮಾರಿನಲ್ಲಿ ಅಸದಿಲ್ಲೀಖಾನ್ ಈ ಪ್ರಾಂತ್ಯದ ನವಾಬನಾಗಿದ್ದ. ಈತನ ದಿವಾನ ವೆಂಕಣ್ಣ ಪಂಡಿತರು ರಾಯರ ಭಕ್ತನಾಗಿದ್ದರು. ಈ ಪ್ರದೇಶವು 1792ರ ವರೆಗೂ ಅದೇ ಮುಸಲ್ಮಾನ್ ಆಳರಸರ ವಶದಲ್ಲಿತ್ತು. ಮೊದಲನೆಯ ಮೈಸೂರು ಯುದ್ಧದ ನಂತರ ಅ ಪ್ರದೇಶ ಹೈದರಾಬಾದ್ ನಿಜಾಮರ ವಶಕ್ಕೆ ಬಂದಿತ್ತು.
ಮೈಸೂರಿನ ನಂಜನಗೂಡಿನ ಮೂಲದವರಾದ ಶ್ರೀ ರಾಘವೇಂದ್ರ ಸ್ವಾಮಿಗಳು, ತೀರ್ಥಾಟನೆಯ ಸಮಯದಲ್ಲಿ ಆದವಾನಿಗೂ ಭೇಟಿ ನೀಡಿದಾಗ ರಾಯರ ಪವಾಡವನ್ನು ಪರೀಕ್ಷಿಸುವ ಸಲುವಾಗಿ ಅವರನ್ನು ತಮ್ಮ ಅರಮನೆಗೆ ಪಾದಪೂಜೆಗೆ ಆಹ್ವಾನಿಸಿ ಅವರಿಗೆ ಗೋಮಾಂಸವಿದ್ದ ಹರಿವಾಣದ ಮೇಲೆ ಬಟ್ಟೆಯನ್ನು ಮುಚ್ಚಿ ಅರ್ಪಿಸಲು ಮುಂದಾದಾಗ ಅದನ್ನು ಅರಿತ ರಾಯರು, ತಮ್ಮ ತಪಶ್ಯಕ್ತಿಯ ನೀರನ್ನು ಚುಮುಗಿಸಿದಾಗ ಆ ಮಾಂಸವೆಲ್ಲವೂ ಫಲಪುಷ್ಪಗಳಾಗಿ ಪರಿವರ್ತನೆ ಆದದ್ದನ್ನು ಕಂಡ ನವಾಬ ರಯರ ತಪಃ ಶಕ್ತಿಗೆ ಮಾರು ಹೋಗಿ ಅವರನ್ನು ಕ್ಷಮೆಯಾಚಿಸಿ, ಅವರು ಕೇಳಿದ ಸ್ಥಳವನ್ನು ಜಹಗೀರು ಕೊಡುವುದಾಗಿ ವಚನ ವಿತ್ತ. ಆಗ ರಾಯರು ತುಂಗಾನದಿಯ ತಡದಲ್ಲಿದ್ದ ಮಂಜಾಲೆಯನ್ನು ದಾನರೂಪವಾಗಿ ಕೊಡುವಂತೆ ನವಾಬನನ್ನು ಕೇಳಿದರು. ಅಲ್ಲಿಯೇ ಇದ್ದ ವೆಂಕಣ್ಣಪಂಡಿತರು ಅಚ್ಚರಿಯಿಂದ ಬರೀ ಮರಳು ಮತ್ತು ಕಾಡಿನಿಂದ ಕೂಡಿದ ನಿರುಪಯುಕ್ತ ಪ್ರದೇಶದ ಬದಲು ಉತ್ತಮವಾದ ಫಲವತ್ತೆಯ ಭೂಮಿಯನ್ನು ಕೇಳ ಬಹುದಿತ್ತಲ್ಲವೇ ಗುರುಗಳೇ ಎಂದಾಗ, ನಸು ನಕ್ಕ ರಾಯರು ಮಂಚಾಲೆಯ ಪ್ರದೇಶದವು ಈ ಹಿಂದೆ ಹಿರಣ್ಯಕಷುಪುವಿನ ಮಗ ಪ್ರಹ್ಲಾದ ಯಜ್ಞಮಾಡಿದ ಪವಿತ್ರವಾದ ಸ್ಥಳವಾಗಿದೆ ಎಂದು ತಿಳಿಸಿದರಂತೆ.
ಸ್ಥಳೀಯರ ಆಡು ಭಾಷೆಯಲ್ಲಿ ಮಂಚಾಲಮ್ಮಾ ಎಂದು ಕರೆಯಲ್ಪಡುವ ಗ್ರಾಮದ ಅಧಿದೇವತೆ ಮಂಚಾಲಾಂಬಿಕೆ (ಭವಾನಿಯ ಮತ್ತೂಂದು ಹೆಸರು) ನೆಲಸಿದ್ದ ಕಾರಣದಿಂದಲೇ, ಅ ಗ್ರಾಮವನ್ನು ಮಂಚಾಲೆ ಎಂದು ಕರೆಯುತ್ತಿದ್ದು ನಂತರ ಮಂತ್ರಾಲಯ ಎಂದಾಯಿತು ಎನ್ನಲಾಗಿದೆ. ಈ ಪ್ರದೇಶ ಹಿಂದೆ ಹಿರಣ್ಯಕಶಿಪುವಿನ ರಾಜ್ಯವಾಗಿತ್ತೆಂದೂ ಇಲ್ಲಿರುವ ಮಂಚಾಲಾಂಬಿಕೆ ಆತನ ಕುಲದೇವತೆಯಾಗಿದ್ದಳೆಂದೂ ಪ್ರಹ್ಲಾದ ಇಲ್ಲಿ ತನ್ನ ಕುಲದೇವತೆಯನ್ನು ಪೂಜಿಸುತ್ತ ಯಜ್ಞ ನಡೆಸಿದನೆಂದೂ ಸಹಾ ನಂಬಲಾಗುತ್ತದೆ. ದ್ವಾಪರಯುಗದಲ್ಲಿ ಪಾಂಡವರು ಅಶ್ವಮೇಧಯಾಗ ಮಾಡುವಾಗ ಚೈತ್ರಯಾತ್ರೆ ಸಮಯದಲ್ಲಿ ಅರ್ಜುನನಿಗೂ ಅನುಸಾಲ್ವನಿಗೂ ಇದೇ ಸ್ಥಳದಲ್ಲಿ ಯುದ್ಧ ನಡೆಯಿತೆಂದೂ ಆಗ ಅನುಸಾಲ್ವನ ರಥ ಪ್ರಹ್ಲಾದ ಯಜ್ಞ ಮಾಡಿದ ಸ್ಥಳದಲ್ಲಿದ್ದುದರಿಂದ ಈತನನ್ನು ಸೋಲಿಸುವುದು ಅರ್ಜುನನಿಗೆ ಕಷ್ಟವಾಗಿ ಕೃಷ್ಣನ ಸೂಚನೆಯಂತೆ ಅರ್ಜುನ ರಥವನ್ನು ಹಿಂದಕ್ಕೆ ಸರಿಸಿದಾಗ ಅನಸಾಲ್ವನ ರಥ ಮುಂದೆ ಬಂದು ಈತ ಸೋತುಹೋದನೆಂದೂ ಹೇಳಲಾಗಿದೆ. ಈ ಕಾರಣದಿಂದ ಇದು ವಿಜಯದ ಸ್ಥಾನವೆಂದು ಪ್ರಸಿದ್ದವಾಗಿದೆ.
ಇಂತಹ ಪುಣ್ಯಕ್ಷೇತ್ರ ಕ್ಷೇತ್ರದಲ್ಲಿ ಕ್ರಿ.ಶ. 1671 ಶ್ರಾವಣ ಬಹುಳ ಬಿದಿಗೆ ಗುರುವಾರದಂದು ಗುರುಸಾರ್ವಭೌಮರಾದ ಶ್ರೀ ರಾಘವೇಂದ್ರಸ್ವಾಮಿಗಳು ಜೀವಂತವಾಗಿ ಬೃಂದಾವನಸ್ಥರಾದ ನಂತರ, ಹಿಂದೂಗಳಿಗೆ ಅದೊಂದು ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಪ್ರತಿನಿತ್ಯವೂ ಸಾವಿರಾರು ಜನರು ಶ್ರೀಕ್ಷೇತ್ರಕ್ಕೆ ಬಂದು ರಾಯರ ದರ್ಶವನ್ನು ಪಡೆದು ತಮ್ಮ ಅಭೀಷ್ಟೆಯನ್ನು ನೆರವೇರಿಸಿಕೊಳ್ಳುತ್ತಾರೆ. ರಾಯರ ಬೃಂದಾವನದ ಎಡಗಡೆ ವಾದೀಂದ್ರರ ಬೃಂದಾವನದ್ದರೆ, ಮಠದ ಆವರಣದಲ್ಲಿ ಸುಧರ್ಮೇಂದ್ರ ತೀರ್ಥಸ್ವಾಮಿಗದಂಥ್ಳ ಮತ್ತು ಸುವೃತೀಂದ್ರ ತೀರ್ಥಸ್ವಾಮಿಗಳವರ ಬೃಂದಾವನಗಳೂ ಇವೆ. ರಾಘವೇಂದ್ರಸ್ವಾಮಿಗಳ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ. ಈ ಗ್ರಾಮ ರಾಯರ ನೆಲಸುವಿಕೆಯಿಂದ ಪುಣ್ಯಕ್ಷೇತ್ರ ಎನಿಸಿದೆ.
ಪ್ರಸ್ತುತ ಮಂತ್ರಾಲಯದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಸ್ವಾಮೀಜಿಗಳಾಗಿದ್ದು ಬಹಳ ಜನಾನುರಾಗಿಗಳಾಗಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಮಂತ್ರಾಲಯದಲ್ಲಿ 21-04-2023ರ ಬೆಳಿಗ್ಗೆ 01:15 ನಿಮಿಷಕ್ಕೆ ಇದ್ದಕ್ಕಿಂದ್ದಂತೆಯೇ ಸುರಿದ ಅಕಾಲಿಕ ಮಳೆಯಿಂದ ಮಹಾದ್ವಾರದ ಮುಂಭಾಗದಲ್ಲಿ ಶ್ರೀಗುರುರಾಯರ ಸೇವೆ ಮಾಡಲು ಬಂದಿದ್ದಂತಹ ಭಕ್ತರು ಮಳೆಯ ನೀರಿನಲ್ಲಿ ತೊಪ್ಪೆಯಾದದ್ದನ್ನು ಕಂಡ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಕೂಡಲೇ ಅದಕ್ಕೆ ಸ್ಪಂದಿಸಿ, ದೇವಾಲಯದ ಬಾಗಿಲನ್ನು ತೆಗೆಸಿ ದೇವಾಲಯದ ಪ್ರಾಕಾರದ ಒಳಗಡೆ ಭಕ್ತರನ್ನು ಕರೆಸಿಕೊಂಡು ಮಳೆಯಿಂದ ಭಕ್ತಾದಿಗಳು ನೆನೆಯುವುದನ್ನು ತಪ್ಪಿಸಿದದ್ದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ. ಇಂತಹ ಗುರುಗಳನ್ನು ಪಡೆದ ಶ್ರೀಮಠವೇ ಧನ್ಯ ಮತ್ತು ಇಂತಹ ಗುರುಗಳು ಎಲ್ಲಾ ಮಠದ ಭಕ್ತಾದಿಗಳಿಗೂ ಸಿಗುವಂತಾಗಲಿ ಎಂದೇ ಎಲ್ಲಾ ಭಕ್ತಾದಿಗಳು ನೆನಪಿಸಿಕೊಂಡರು.
ಈ ರೀತಿ ಭಕ್ತಾದಿಗಳ ಆಸೆಗಳಿಗೆ ಶ್ರೀಗಳು ಈ ಹಿಂದೆಯೂ ಸ್ಪಂದಿಸಿದ್ದಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಮಂತ್ರಾಲಯದ ಶ್ರೀಮಠದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿದ್ದ ಸಣ್ಣ ಹುಡುಗನೊಬ್ಬ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಬಳಿ ಪಾನಿಪುರಿ ತಿನ್ನುವ ಬಯಕೆಯನ್ನು ವ್ಯಕ್ತಪಡಿಸಿದ ಕೂಡಲೇ, ಸ್ವಾಮಿಗಳು ಏಪ್ರಿಲ್ 10 2019 ರಂದು ತಮ್ಮ ಮಠದ ಪಾಠಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪಾನಿಪುರಿಯನ್ನು ಬಡಿಸುವ ವ್ಯವಸ್ಥೆಯನ್ನು ಖುದ್ದಾಗಿ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗೆ ವಿದ್ಯಾಪೀಠದಲ್ಲಿರುವ ನೂರಾರು ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರನ್ನೂ ಸ್ವಾಮೀಜಿಗಳು ಬಹಳ ಆಸ್ಥೆಯಿಂದ ನೋಡಿಕೊಳ್ಳುವುದಲ್ಲದೇ, ಅವರ ಅಗತ್ಯಗಳನ್ನು ಮಾತ್ರವಲ್ಲದೆ ಶ್ರೀಮಠಕ್ಕೆ ಬರುವ ಭಕ್ತಾದಿಗಳ ಅಗತ್ಯತೆಗಳು ಮತ್ತು ವಿಶೇಷ ಇಷ್ಟಗಳನ್ನು ಸಹ ನೋಡುತ್ತಾರೆ. ಇಂತಹ ಸ್ವಾಮಿಗಳನ್ನು ಪಡೆದ ಭಕ್ತಾದಿಗಳೇ ಧನ್ಯರು ಎಂದು ಹಾಡಿ ಹೊಗಳಿದ್ದರು.
ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿರುವ ಮಂತ್ರಾಯಲದ ಸ್ವಾಮಿಗಳ ಶ್ರೀ ಮಠದಲ್ಲಿ 22.04.2023 ರಂದು ಕೆಲ ಮುಸ್ಲಿಮರು ರಂಜಾನ್ ಆಚರಣೆ ಮಾಡಿದ್ದಾರೆ ಎಂಬ ಸುದ್ದಿ ಹಿಂದೂ ಆಸ್ತಿಕ ಮಹಾಶಯರಿಗೆ ನಿಜಕ್ಕೂ ಆಘಾತಕಾರಿಯಾಗಿದ್ದಂತೂ ಸುಳ್ಳಲ್ಲ. ಹೌದು ನಿಜ ದೇಶದಲ್ಲಿ ಕೋಮು ಸೌಹಾರ್ಧತೆ ಇರಬೇಕು. ಮುಸ್ಲಿಮರಿಗೆ ರಾಯರ ಬಗ್ಗೆ ಶ್ರದ್ಧಾ ಭಕ್ತಿಗಳು ಇದ್ದಲ್ಲಿ ಭಕ್ತಿಯಿಂದ ಗೌರವಪೂರ್ಣವಾಗಿ ರಾಯರ ದರ್ಶನ ಪಡೆದಿದ್ದಲ್ಲಿ ಯಾವುದೇ ಆಕ್ಷೇಪಣೆ ಇರುವುದಿಲ್ಲ. ಆದರೆ, ವಿಗ್ರಹಾರಾಧನೆಯನ್ನು ವಿರೋಧಿಸುವ, ಮತ್ತು ಅಲ್ಲಾಹು ಒಬ್ಬನೇ ದೇವರು ಉಳಿದವರೆಲ್ಲರೂ ಕಾಫೀರರು ಎಂದು ಪ್ರತೀ ದಿನವೂ ಐದು ಬಾರಿ ಕೂಗೀ ಹೂಗಿ ಹೇಳುವವರನ್ನು ಹಿಂದೂಗಳ ಪವಿತ್ರ ಶ್ರೀ ಕ್ಷೇತ್ರದಲ್ಲಿ ರಂಜಾನ್ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ ಮತ್ತು ಅಕ್ಷಮ್ಯ ಅಪರಾಧವಾಗಿದೆ.
ಹೇಗೆ ಒಂದೇ ಕೈಯ್ಯಲ್ಲಿ ಚಪ್ಪಾಳೆ ತಟ್ಟಲು ಆಗುವುದಿಲ್ಲವೋ ಅದೇ ರೀತಿಯಲ್ಲಿ ಕೋಮು ಸೌಹಾರ್ಧತೆ ಎನ್ನುವುದು ಒಂದೇ ಧರ್ಮದಿಂದ ಆಗುವುದಿಲ್ಲ ಅಲ್ಲವೇ? ತಮ್ಮ ಮಸೀದಿ ಮತ್ತು ದರ್ಗಾಗಳಲ್ಲಿ ಹಿಂದೂ ಹಬ್ಬಗಳ ಆಚರಣೆಯನ್ನು ಬಿಡಿ, ನಮ್ಮ ಪವಿತ್ರ ಗಣೇಶ ವಿಸರ್ಜನೆ, ರಾಮನವಮಿಯ ಉತ್ಸವ ಮತ್ತು ದುರ್ಗಾದೇವಿಯ ವಿಸರ್ಜನೆಗಳು ತಮ್ಮ ಮಸೀದಿಯ ಮುಂದೆ ಹೋದಾಗಲೆಲ್ಲಾ ಮಸೀದಿಯಿಂದ ಕಲ್ಲು ತೂರಾಟ ಮಾಡುವುದು, ಅಗ್ಗಾಗೇ ಹಿಂದೂ ದೇವಾಲಯಗಳಲ್ಲಿ ಮೂರ್ತಿ ಭಂಗ ಮಾಡುವುದು, ದೇವರ ಹುಂಡಿಯಲ್ಲಿ ಕಾಂಡೋಮ್ ಹಾಕುವಂತಹ ಮನಸ್ಥಿಯವರಿಂದ ಯಾವುದೇ ರೀತಿಯ ಸೌಹಾರ್ಧತೆ ಬಾರದಿರುವಾಗ ಕೇವಲ ಹಿಂದೂಗಳೇ ಎಲ್ಲಾ ಸಮಯದಲ್ಲೂ ಏಕೆ ಬಾಗಬೇಕು? ಲವ್ ಜಿಹಾದ್ ಹೆಸರಿನಲ್ಲಿ ಈಗಾಗಲೇ ಸಾವಿರಾರು ಹಿಂದೂ ಹೆಣ್ಣುಮಕ್ಕಳನ್ನು ಅಕ್ರಮವಾಗಿ ಮತಾಂತರಗೊಳಿಸಿ ಅವರಿಗ ಹತ್ತಾರು ಮಕ್ಕಳನ್ನು ಕರುಣಿಸಿ ಅವರನ್ನು ಬೀದಿಗೆ ತಂದಿರುವಂತಹ ವಿಷಯವೇನೂ ಈಗ ಗುಟ್ಟಾಗಿ ಉಳಿದಿಲ್ಲ. ಭಾವೈಕ್ಯತೆಯ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ಉಡುಪಿಯ ಮಠದಲ್ಲೂ ಪೇಜಾವರ ಶ್ರೀಗಳು ಮುಸ್ಲಿಮ್ಮರಿಗೆ ಶ್ರೀಮಠದ ವತಿಯಿಂದ ರಂಜಾನ್ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದಾಗಲೂ ಇದೇ ರೀತಿ ಹಿಂದೂಗಳು ಒಗ್ಗಾಟ್ಟಾಗಿ ಅದನ್ನು ಖಂಡಿಸಿದ್ದರು. ಈ ರೀತಿಯಲ್ಲಿ ಹಿಂದೂಗಳು ಹೆಜ್ಜೆ ಹೆಜ್ಜೆಗೂ ಸಹಿಷ್ಣುತೆಯನ್ನು ತೋರಿಸುತ್ತಿದ್ದರೂ ಅದೇ ಉಡುಪಿಯಲ್ಲಿ ಉಡುಪಿನ ಹೆಸರಿನಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಕಿತಾಪತಿ ತೆಗೆದು ಕರ್ನಾಟಕದ ಮಾನ ವಿಶ್ವಾದ್ಯಂತ ಹರಾಜಾಗುವಂತೆ ಮಾಡಿದ್ದ ವಿಷಯ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ.
ಸೌಹಾರ್ದತೆ ಎಂದರೆ ನಮ್ಮ ನಂಬಿಕೆಗಳ ವಿರುದ್ಧವಾಗಿ ಮತ್ತೊಂದು ಧರ್ಮದ ಆಚರಣೆಗಳನ್ನು ನಮ್ಮ ಶ್ರದ್ದೇಯ ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಎಂದು ಯಾವ ಧರ್ಮಗ್ರಂಥದಲ್ಲಿ ಬರೆದಿದೆ? ಮತ್ತು ತಮ್ಮ ಮೂಗಿನ ನೇರಕ್ಕೆ ಈ ರೀತಿ ಅಪಸವ್ಯಗಳನ್ನು ನಡೆಸುವ ಅಧಿಕಾರವನ್ನು ಯಾರು ಕೊಟ್ಟರು? ಕುಂಬಾರನಿಗೆ ವರ್ಷ. ದೊಣ್ಣೆಗೆ ಒಂದು ನಿಮಿಷ ಎನ್ನುವಂತೆ ಮೇಲೆ ತಿಳಿಸಿದ ಉದಾಹರಣೆಗಳಲ್ಲಿ ಗಳಿಸಿಕೊಂಡಿದ್ದಂತಹ ಒಳ್ಳೆಯ ಹೆಸರನ್ನು ಈ ರೀತಿಯ ಆಧರ್ಮೀಯ ಆಚರಣೆಯಿಂದಾಗಿ ಕಳೆದುಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಶ್ರೀ ಸುಬುಧೇಂದ್ರ ತೀರ್ಥರೇ ನಿಮ್ಮ ಮೇಲಿನ ನಮ್ಮ ನಂಬಿಕೆಯನ್ನು ಈ ರೀತಿಯಾಗಿ ಮಣ್ಣು ಮಾಡಿದ್ದನ್ನು ಹಿಂದೂ ಸಮಾಜ ಬಿಡಿ, ಬಹುಶಃ ಆ ರಾಯರು ಸಹಾ ಕ್ಷಮಿಸುವುದಿಲ್ಲ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ