ಮಹಿಳಾ ಕುಸ್ತಿ ಪಟುಗಳ ಪ್ರತಿಭಟನೆಯ ವಾಸ್ತವ ಸಂಗತಿ

wr_protest22023ರ ಜನವರಿಯಲ್ಲಿ, ಭಾರತದ ಪರ ಮಹಿಳಾ ಕುಸ್ತಿಪಟುಗಳಾದ ಮತ್ತು ಓಲಂಪಿಕ್ ಪದಕ ವಿಜೇತರಾದ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಅಂಶು ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಸುಮಾರು ಮೂವತ್ತು ಭಾರತೀಯ ಕುಸ್ತಿಪಟುಗಳು, ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಬಿಜೆಪಿ ಸಾಂಸದರಾದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅದರ ತರಬೇತುದಾರರ ವಿರುದ್ಧ ಮಹಿಳಾ ಲೈಂಗಿಕ ಕಿರುಕುಳವನ್ನು ಆರೋಪಿಸಿ ಧರಣಿ ನಡೆಸಿದ್ದಲ್ಲದೇ ಈ ಕೂಡಲೇ ಕುಸ್ತಿ ಫೆಡರೇಶನ್ ಅನ್ನು ವಿಸರ್ಜಿಸಲು ಒತ್ತಾಯಿಸಿದರು. ಸರ್ಕಾರ ಈ ಕುರಿತಾಗಿ ತನಿಖೆಗಾಗಿ ಮೇಲುಸ್ತುವಾರಿ ಸಮಿತಿಯನ್ನು ರಚಿಸುವ ಭರವಸೆಯಿಂದಾಗಿ ಜನವರಿ 2023 ರಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

brij_bhushan_singhಆದರೆ ಮತ್ತೆ ಏಪ್ರಿಲ್ 23, 2023 ರಲ್ಲಿ ನವದೆಹಲಿಯ ಜಂತರ್ ಮಂತರ್‌ನಲ್ಲಿ, ಆದೇ ಕುಸ್ತಿ ಪಟುಗಳು, ಸರ್ಕಾರ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಆರೋಪಿಸುತ್ತಾ, ಸರ್ಕಾರ ನೇಮಿಸಿದ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದರು. ಸುಮಾರು 2012 ರಿಂದಲೂ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಕುಸ್ತಿಪಟುಗಳು ಆರೋಪಿಸಿದ ಮಹಿಳಾ ಕುಸ್ತಿಪಟುಗಳು, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನು ಪುನರಾರಂಭಿಸಿದರು. ಕೇವಲ ಭಾರತವಷ್ಟೇ ಅಲ್ಲದೇ, ಭಾರತದ ಹೊರಗೆಯೂ ಕೂಡ ಕಿರುಕುಳದ ಘಟನೆಗಳು ನಡೆದಿದ್ದು, ಬ್ರಿಜ್ ಭೂಷಣ್ ವಿರುದ್ಧ ಏಳು ಕುಸ್ತಿಪಟುಗಳು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದರೂ, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸದೇ ಹೋದಾಗ, ದೂರುದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 25 ಏಪ್ರಿಲ್ 2023 ರಂದು, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ, ಅರ್ಜಿಯಲ್ಲಿನ ಆರೋಪಗಳು ಗಂಭೀರವಾಗಿರುವ ಕಾರಣ, ಎಫ್‌ಐಆರ್ ದಾಖಲಿಸಲು ಸೂಚಿಸಲಾಯಿತು. ಕುಸ್ತಿಪಟುಗಳ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಆರೋಪಿಯು ಆಡಳಿತ ಪಕ್ಷದವರಾಗಿರುವುದರಿಂದ ಎಫ್‌ಐಆರ್ ದಾಖಲಿಸಿರಲಿಲ್ಲವಾದ್ದರಿಂದ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದೂ ಸಹಾ ಒತ್ತಾಯಿಸಿದರು.

wr_protest1ಆರಂಭದಲ್ಲಿ, ಕುಸ್ತಿಪಟುಗಳ ಪ್ರತಿಭಟನೆಗೆ ಕುರಿತಾಗಿ ಬಹುತೇಕರು ಸಹಾನುಭೂತಿ ವ್ಯಕ್ತವಾದರೂ, ನಂತರ ದಿನಗಳಲ್ಲಿ ಆ ಹೋರಾಟ ಪಡೆದ ರೀತಿ ಮತ್ತು ಅದನ್ನು ಬೆಂಬಲಿಸುವವರನ್ನು ನೋಡಿದಾಗ ಮತ್ತು ಬ್ರಿಜ್ ಭೂಷಣ್ ಸಿಂಗ್ ಅವರಿಂದ 1000ಕ್ಕೂ ಅಧಿಕ ಹುಡುಗಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಗಂಭೀರವಾದ ಆರೋಪ ಮಾಡಿದರೂ, ಆ ರೀತಿ ಕಿರುಕುಳಕ್ಕೆ ಒಳಗಾದ ಒಬ್ಬರ ಹೆಸರನ್ನೂ ಸಹಾ ಬಹಿರಂಗ ಬಿಡಿ, ದೂರಿನಲ್ಲೂ ಸಹಾ ನಮೂದಿಸದೇ ಹೋದಾಗ, ಎಲ್ಲರ ಸಹಾನುಭೂತಿಯು ಅನುಮಾನಕ್ಕೆ ತಿರುಗಿದ್ದಂತೂ ಸುಳ್ಳಲ್ಲ.

ಆರಂಭದಲ್ಲಿ ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಮಹಿಳಾ ಫಿಸಿಯೋಗೆ ಕಿರುಕುಳ ನೀಡಿದ್ದಾರೆ ಎಂದು ಸಮಿತಿಯ ಮುಂದೆ ಹೇಳಿಕೊಂಡರಾದರೂ, ಆ ಮಹಿಳಾ ಫಿಸಿಯೋ ಕಿರುಕುಳವನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಂತರ 2015 ರಲ್ಲಿ ಟರ್ಕಿ ಭೇಟಿಯ ಸಮಯದಲ್ಲಿ ತನಗೆ ಮತ್ತು ಸಾಕ್ಷಿ ಮಲಿಕ್ ಗೆ ಕಿರುಕುಳ ನೀಡಿದ್ದರು ಎಂದು ವಿನೇಶ್ ಫೋಗಟ್ ಆರೋಪಿಸಿದರು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ, ಆ ತಂಡದೊಂದಿಗೆ ಬ್ರಿಜ್ ಭೂಷಣ್ ಸಿಂಗ್ ಅವರು ಟರ್ಕಿಗೆ ಹೋಗಿರಲಿಲ್ಲ ಎಂಬ ಸಂಗತಿ ಬಹಿರಂಗವಾದಾಗ, ಅದೇ ವಿನೇಶ್ ಫೋಗಟ್ ನಾನು ನಿಖರವಾದ ದಿನಾಂಕವನ್ನು ಮರೆತಿದ್ದೇನೆ ಎಂದು ಹೇಳಿ ಜಾರಿಕೊಂಡಿದ್ದಲ್ಲದೇ, ಆ ಘಟನೆ ನಡೆದದ್ದು 2016 ರಲ್ಲಿ ಮಂಗೋಲಿಯಾ ಪ್ರವಾಸದ ಸಮಯದಲ್ಲಿ ಎಂದು ಹೇಳಿದರು. ಅದರ ಕುರಿತಾಗಿ ಸಮಿತಿಯು ಮತ್ತೊಮ್ಮೆ ತನಿಖೆ ನಡೆಸಿದಾಗಲೂ, ಬ್ರಿಜ್ ಭೂಷಣ್ ಸಿಂಗ್ ಅವರು ಮಂಗೋಲಿಯಾ ಪ್ರವಾಸದ ಸಮಯದಲ್ಲಿಯೂ ತಂಡದೊಂದಿಗೆ ಇರಲಿಲ್ಲ ಎಂಬುದು ತಿಳಿದು ಬಂದಿತು. ಆದಾದ ನಂತರ, ಅನೇಕ ಅಪ್ರಾಪ್ತ ವಯಸ್ಕರು ಸೇರಿದಂತೆ ಸಾವಿರಾರು ಹುಡುಗಿಯರು ಕಿರುಕುಳಕ್ಕೆ ಒಳಗಾಗಿದ್ದರು ಎಂಬ ಆರೋಪದ ಕುರಿತಾಗಿ, ಆ ಸಮಿತಿಯು ಹಾಗೆ ಕಿರುಕುಳಕ್ಕೆ ಒಳಗಾದ ಕೆಲವರ ಹೆಸರನ್ನು ತಿಳಿಸಿದರೆ ಅವರನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದಾಗ ಅದೇ ಕುಸ್ತಿಪಟುಗಳು ನಮಗೆ ಆ ಹುಡುಗಿಯರ ಹೆಸರುಗಳು ತಿಳಿದಿಲ್ಲ. ಆದರೆ ಆಘಟನೆಗಳು ಮಾತ್ರಾ ಸಂಭವಿಸಿದೆ ಎಂದು ವಾದಿಸಿದ್ದಲ್ಲದೇ, ಆರೋಪಿಯು ಬಿಜೆಪಿ ಸಂಸದ ಎಂಬ ಕಾರಣಕ್ಕೆ ಸರ್ಕಾರ ಅವರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೀದಿಗೆ ಬಂದರು.

wr_protest3ಕುತೂಹಲಕಾರಿಯಾದ ಅಂಶವೆಂದರೆ, ಈ ರೀತಿಯಾಗಿ ಆರೋಪ ಮಾಡುತಿರುವವರು ಯಾಗೂ ಸಹಾ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಿರಲಿಲ್ಲ ಮತ್ತು ಅವರು ತಿಳಿಸಿರುವ 1000 ಸಂತ್ರಸ್ತರಲ್ಲಿ ಯಾರೂ ತಮ್ಮ ಹಕ್ಕುಗಳನ್ನು ದೃಢೀಕರಿಸಲು ಬಂದಿಲರಲಿಲ್ಲ. ಯಾವಾಗ ತಮ್ಮ ಈ ಹೋರಾಟಕ್ಕೆ ಯಾರೂ ಮನ್ನಣೆ ಕೊಡುತ್ತಿಲ್ಲಾ ಎಂಬುದನ್ನು ಅರಿತ ಕೂಡಲೇ, ಆ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಬೆಂಬಲಿಸುವಂತೆ ವಿರೋಧ ಪಕ್ಷದ ರಾಜಕೀಯ ನಾಯಕರುಗಳನ್ನು ಕೋರಿಕೊಂಡರು. ಇದು ಪೂರ್ವಾ ನಿಶ್ಚಿತವೋ ಎನ್ನುವ ಅನುಮಾನ ಮೂಡುವಂತೆ, ಆ ರೀತಿಯ ಆಹ್ವಾನ ಬಂದ ತಕ್ಷಣವೇ, ಪಪ್ಪು ಯಾದವ್, ಪ್ರಿಯಾಂಕಾ ಗಾಂಧಿ, ಸತ್ಯಪಾಲ್ ಮಲಿಕ್, ಸ್ವರಾ ಭಾಸ್ಕರ್, ರಾಕೇಶ್ ಟಿಕಾಯತ್, ಪ್ರಕಾಶ್ ರಾಜ್, ಕೇಜ್ರಿವಾಲ್ ಮುಂತಾದ ತುಕ್ಡೇ ಗ್ಯಾಂಗ್ ಪಾತ್ರಧಾರಿಗಳು ಅಲ್ಲಿಗೆ ಧಾವಿಸಿ, “ಮೋದಿ ತೇರಿ ಕಬರ್ ಖುದೇಗಿ” ಎಂಬ ಘೋಷಣೆಗಳನ್ನು ಬಳಸುವ ಮೂಲಕ ಇದು ಕೇಂದ್ರ ಸರ್ಕಾರದ ಟೂಲ್ ಕಿಟ್ ಪರವಾದ ಮತ್ತೊಂದು ಭಾಗ ಎಂಬುದನ್ನು ಸ್ಪಷ್ಟ ಪಡಿಸಿದಂತಾಯಿತು.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ ನಂತರ. FIR ದಾಖಲಾದರೂ, ಆ ಕುಸ್ತಿಪಟುಗಳು ನಾವು ದೆಹಲಿ ಪೊಲೀಸರನ್ನು ನಂಬುವುದಿಲ್ಲ ಎಂಬ ವರಾತ ತೆಗೆದಾಗ, ಸ್ವತಃ ಮುಖ್ಯನ್ಯಾಯಾಧೀಷರೇ, ಇದನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿದಾಗ ಪರಿಸ್ಥಿತಿ ಸ್ವಲ್ಪ ತಹಬದಿಗೆ ಬಂದಿದೆ.

ಈಗ ವಾಸ್ತವ ಸಂಗತಿಯನ್ನು ಗಮನಿಸೋಣ.

  • ಅವರು ದೆಹಲಿ ಪೊಲೀಸರ ತನಿಖೆಯನ್ನು ಒಪ್ಪುವುದಿಲ್ಲ.
  •  ಅವರು ಮೇರಿ ಕೋಮ್ ನೇತೃತ್ವ ವಹಿಸಿದ್ದ ಸಮಿತಿಯ ವರದಿಯನ್ನು ಒಪ್ಪಲು ಸಿದ್ಧರಿಲ್ಲ.
  •  ಅವರು ನ್ಯಾಯಾಲಯದ ವಿಚಾರಣೆಗಳನ್ನು ಬಯಸುವುದಿಲ್ಲ.
  •  ಅವರು ಮೌಕಿಕವಾಗಿ ಆರೋಪಿಸುತ್ತಾರೆಯೇ ಹೊರತು ಯಾವುದೇ ಪುರಾವೆಗಳೊಂದಿಗೆ ಸ್ವತಃ ಎಫ್ಐಆರ್ ದಾಖಲಿಸಲು ಬಯಸುವುದಿಲ್ಲ.
  •  ಅವರು ಕಿರುಕುಳಕ್ಕೊಳಗಾದ ಯಾವುದೇ ಒಬ್ಬ ಹುಡುಗಿಯನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ.

ಇವೆಲ್ಲವನ್ನೂ ಗಮನಿಸಿದಾಗ ಜನರಲ್ಲಿ ಮೂಡುತ್ತಿರುವ ಅನುಮಾನಗಳೆಂದರೆ,

  • ಮಾಧ್ಯಮಗಳ ಮುಂದೆ ವಿನೇಶ್-ಸಾಕ್ಷಿ ಅವರ ಮೌಖಿಕ ಹೇಳಿಕೆಯ ಆದ್ಜಾರದ ಮೇಲೆ ಯಾವುದೇ ನ್ಯಾಯಾಲಯದ ತನಿಖೆ ಮತ್ತು ವಿಚಾರಣೆಗಳಿಲ್ಲದೇ, ಬ್ರಿಜ್ ಭೂಷಣ್ ಸಿಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
  • ಭಜರಂಗ್ ಪುನಿಯಾ ಅವರ ಪತ್ನಿ ಸಂಗೀತಾ ಫೋಗಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಮೋದಿಯವರನ್ನು ಹತ್ತಿಕ್ಕುತ್ತೇವೆ ಎಂದು ಬೆದರಿಕೆ ಹಾಕುವ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿರುವುದಲ್ಲದೇ, ಜಾಟ್ ಪ್ರಾಬಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
  • ಬಹಳ ಸೂಕ್ಷ್ಮವಾಗಿ ಈ ಪ್ರತಿಭಟನೆಯನ್ನು ಗಮನಿಸಿದರೆ, ಇದರ ನೇತೃತ್ವವನ್ನು ಬಜರಂಗ್ ಪುನಿಯಾ ಮತ್ತು ಸಂಗೀತಾ ಫೋಗಟ್ ದಂಪತಿಗಳ ಜೊತೆ ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ವಹಿಸಿದ್ದರೆ, ಅವರ ಸಂಬಂಧಿಗಳೇ ಆದ ಮತ್ತೊಬ್ಬ ಕುಸ್ತಿ ಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್ ಈ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ.
  • ಬಬಿತಾ ಫೋಗಟ್ ಅವರರಂತೂ ತಮ್ಮ ಟ್ವೀಟ್‌ಗಳ ಮೂಲಕ ಈ ಪ್ರತಿಭಟನೆಯನ್ನು ರಾಜಕೀಕರಣಗೊಳಿಸುವುದನ್ನು ಬಹಿರಂಗವಾಗಿ ವಿರೋಧಿಸಿದ್ದಲ್ಲದೇ, ಪ್ರತಿಭಟನೆಯ ಪರ ವಹಿಸಿದ ಪ್ರಿಯಾಂಕಾ ವಾದ್ರಾಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ.
  • ಈ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಇದುವರೆವಿಗೂ ಯಾವುದೇ ರಾಷ್ಟ್ರೀಯ ಪ್ರಂದ್ಯಾವಳಿಗಳಲ್ಲಿ ಭಾಗವಹಿಸದೇ ನೇರವಾಗಿ, ಏಷ್ಯನ್ ಕ್ರೀಡಾಕೂಟ, ಒಲಿಂಪಿಕ್ಸ್ ಮತ್ತು ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಬ್ರಿಜ್ ಭೂಷಣ್ ಅವರು ಬಂದ ನಂತರ ಆಯ್ಕೆಯ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆಯನ್ನು ತಂದು, ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳ ಪದಕ ವಿಜೇತರುಗಳೂ ಸಹಾ ಅರ್ಹತಾ ಸುತ್ತಿನಲ್ಲಿ ಸ್ಥಳೀಯರೊಂದಿಗೆ ಸೆಣಸಟವಾಡಿದ ನಂತರವೇ ಆಯ್ಕೆಯಾಗುವ ಪದ್ದತಿಯನ್ನು ರೂಢಿಗೆ ತಂದಿದ್ದಾರೆ. ಕ್ರಿಕೆಟ್ ನಲ್ಲಿ ಈ ಹಿಂದೆ ಇದ್ದ ಮುಂಬೈ ಲಾಬಿಯಂತೆ, ಕುಸ್ತಿಯಲ್ಲೂ ಹರಿಯಾಣದ ಲಾಬಿ ಪ್ರಬಲವಾಗಿದ್ದು ಅಕಸ್ಮಾತ್ ಆಯ್ಕೆಯ ಸಮಯದಲ್ಲಿ ಪದಕ ವಿಜೇತರಿಗಿಂತಲೂ ಸ್ಥಳೀಯರು ಪ್ರಭವಶಾಲಿಗಳಾಗಿ ಕಂಡು ಬಂದಲ್ಲಿ ಇವರು ಅನರ್ಹರಾಗುತ್ತಾರೆ ಎಂಬ ಆತಂಕದಿಂದಲೇ ಈ ರೀತಿಯ ನಾಟಕವನ್ನು ಆಡುತ್ತಿದ್ದಾರೆ ಎಂದರೂ ತಪ್ಪಾಗದು.
  •  ಇನ್ನು ವಿನೇಶ್ ಫೋಗಟ್ ಅವರೇ, ಸ್ವತಃ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದೆ ನೇರವಾಗಿ ಒಲಿಂಪಿಕ್ಸ್‌ಗೆ ಹೋಗಲು ಬಯಸುವುದಾಗಿ ಕ್ಯಾಮರಾದಲ್ಲಿ ಮುಂದೆ ಹೇಳಿರುವುದು ಇದಕ್ಕೆ ಪುಷ್ಟಿ ಕೊಡುವಂತಿದೆ.
  • wr_protest5ಈಗ ಇದ್ದಕ್ಕಿದ್ದಂತೆಯೇ ದೆಹಲಿಯ ಮುಖ್ಯಮಂತ್ರಿ ಕೇಜ್ರೀವಾಲ್ ಸಹಾ ಪ್ರತಿಭಟನಾಕಾರರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವುದು ಮತ್ತು ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ನವಜೋತ್ ಸಿಂಗ್ ಸಿದ್ದು ಸಹಾ ಪ್ರತಿಭಟನೆಯ ಜಾಗಕ್ಕೆ ಬಂದಿರುವುದನ್ನು ಗಮನಿಸಿದರೆ, ಇದು ಮತ್ತೊಂದು ಶಾಹೀನ್ ಬಾಗ್ ಅಥವಾ ರೈತ ಪ್ರತಿಭಟನಾ ಶೈಲಿಯ ಟೂಲ್‌ಕಿಟ್ ಆಗಿರುವ ಸಂಭನೀಯತೆಯೇ ಹೆಚ್ಚಾಗಿದೆ.

wr_protest4ದಿನೇ ದಿನೇ ಈ ಪ್ರಕರಣ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈಗ ವಿನೇಶ್ ಫೋಗಟ್ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಆವರು ಯಾವುದೇ ಕ್ರಮ ಕೈಗೊಳ್ಳದೇ, ವಿಚಾರಣಾ ಸಮಿತಿಯನ್ನು ರಚಿಸುವ ಮೂಲಕ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಇಡೀ ಪ್ರಕರಣವನ್ನು ಜಟಿಲಗೊಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ ನಾನು ರಾಜೀನಾಮೆ ನೀಡಿದರೆ ನಾನು ಆರೋಪಗಳನ್ನು ಒಪ್ಪಿಕೊಂಡಂತೆ ತೋರುತ್ತದೆ. ಹಾಗಾಗಿ ನನ್ನ ಪಕ್ಷ ಬಯಸಿದ್ದಲ್ಲಿ ನಾನು ರಾಕೀನಾಮೆ ಕೊಡಲು ಸಿದ್ದ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಪ್ರಕರಣ ಈಗ ನ್ಯಾಯಾಯಯದಲ್ಲಿ ಇರುವ ಕಾರಣ ಬಿಜೆಪಿ ಪಕ್ಷವೂ ಸಹಾ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿ ಯಾರೇ ಏನೇ ಹೇಳಿಕೊಂಡರೂ ನಮಗೆ ನ್ಯಾಯ ಮಾತ್ರ ಬೇಕು ಎಂದು ಹೇಳುತ್ತಿರುವ ವಿನೇಶ್ ಫೋಗಟ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಕುಸ್ತಿ ಸಂಘಕ್ಕೆ ರಾಜೀನಾಮೆ ನೀಡದಲ್ಲಿ ಎಲ್ಲವೂ ಹೇಗೆ ಸರಿಹೋಗುತ್ತದೆ? ಎಂಬುದನ್ನು ಮಾತ್ರ ತಿಳಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.

ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯವಾಗಿ ಬಹುತೇಕ ಎಲ್ಲಾ ಹೋರಾಟಗಾರರೂ ಹೇಳುವುದೇನೆಂದರೆ, ನಮಗೆ ಈ ದೇಶದ ಕಾನೂನು ಮತ್ತು ನ್ಯಾಯಾಲಯದ ಮತ್ತು ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಮೇಲೆ ಸಂಪೂರ್ಣವಾಗಿ ನಂಬಿಕೆ ಇದೆ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.

ನಿಜ ಹೇಳಬೇಕೆಂದರೆ ಹಾಗೆ ಅಭಿವ್ಯಕ್ತಿ ಸ್ವಾತ್ರಂತ್ರ್ಯ ಎನ್ನುವವರಿಗೆ ಅದರ ಅರ್ಥವೇ ತಿಳಿಯದೇ ಇರುವುದು ಸ್ಪಷ್ಟವಾಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ನಮಗೆ ಬೇಕಾದುದನ್ನು ಹೇಳುವ, ನಮಗೆ ಬೇಕಾದುದನ್ನು ಮಾಡುವ ಮತ್ತು ನಮಗೆ ಬೇಕಾದುದನ್ನು ರಚಿಸುವ ಹಕ್ಕಾಗಿದ್ದು, ಆ ರೀತಿಯಾಗಿ ವ್ಯಕ್ತಪಡಿಸುವ ಕ್ರಿಯೆಗಾಗಿ ಈ ದೇಶದ ಕಾನೂನಿನಿಂದ ಯಾವುದೇ ರೀತಿಯ ಆಕ್ಷೇಪಣೆಗೆ ಒಳಗಾಗುವ ಭಯವಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಪೂರ್ವಾಗ್ರಹ ಪೀಡಿತರಾಗಿ ಒಂದು ವ್ಯಕ್ತಿ, ಒಂದು ಸಮುದಾಯ, ಒಂದು ಪಕ್ಷವನ್ನು ವಾಚಾಮಗೋಚರವಾಗಿ ನಿಂದಿಸಿಯೋ, ಇಲ್ಲವೇ ಹಲ್ಲೆ ನಡೆಸಿ ಅದನ್ನು ಆಬಿವ್ಯಕ್ತಿ ಸ್ವಾತ್ರಂತ್ರ್ಯ ಅಡಿಯಲ್ಲಿ ತಪ್ಪಿಸಿಕೊಳ್ಳಲಾಗದು. ಅದೇ ರೀತಿಯಾಗಿ ಯಾರ ಮೇಲೆ ಆರೋಪವನ್ನು ಮಾಡಿದರೂ ಅದಕ್ಕೆ ಸೂಕ್ತವಾದ ದಾಖಲೆಗಳೊಂದಿಗೆ ಕಾನೂನಾತ್ಮಕವಾಗಿ ದೂರು ಸಲ್ಲಿಸಿ ನ್ಯಾಯಾಲಯದಲ್ಲಿ ಸೂಕ್ತವಾದ ತನಿಖೆ ನಡೆಸಿ, ಆ ಆರೋಪಗಳೆಲ್ಲವೂ ಸಾಭೀತಾದಲ್ಲಿ ಮಾತ್ರವೇ ಆತ ಅಪರಾಧಿಯಾಗಿ ಶಿಕ್ಷೆಗೆ ಒಳಪಡುತ್ತಾರೆಯೇ ಹೊರತು, ಎಲ್ಲೋ, ಯಾರೋ, ಯಾರದ್ದೋ ಕುಮ್ಮಕ್ಕಿನಿಂದ, ಯಾವುದೋ ಪ್ರಲೋಭನೆಗೆ ಒಳಗಾಗಿಯೋ, ಇಲ್ಲವೇ ಸ್ವಾರ್ಥಕ್ಕಾಗಿಯೋ, ಇಲ್ಲವೇ, ವಯಕ್ತಿಕ ದ್ವೇಷದಿಂದಾಗಿಯೋ ಯಾವುದೋ ಮಾಧ್ಯಮಗಳ ಕ್ಯಾಮೆರಾ ಮುಂದೆ ಮೌಖಿಕವಾಗಿ ಮಾಡುವ ಆರೋಪಗಳಿಂದ ಅಪರಾಧ ಸಾಭೀತಾಗುವುದಿಲ್ಲ.

ಅಂಬೇಡ್ಕರ್ ಸಂವಿಧಾನದ ಗುರಾಣಿ ಹಿಡಿಯುವವರು, ಈ ದೇಶದ ಕಾನೂನನ್ನು ನಂಬುತ್ತೇನೆ ಎನ್ನುವವರು, ತನಿಖೆ, ವಾದಗಳೆಲ್ಲವೂ ನಡೆಯುವವರೆಗೂ ತಾಳ್ಮೆಯಿಂದ ಇರುವ ಸೌಜನ್ಯವನ್ನೂ ಅರಿಯಬೇಕು. ಈ ದೇಶದ ಕಾನೂನು ಪ್ರಕ್ರಿಯೆಗಳಿಗೆ ಅದರದ್ದೇ ಆದ ನೀತಿ ನಿಯಮಗಳು ಇದ್ದು. ಅದರ ಚೌಕಟ್ಟಿನ ಆಡಿಯಲ್ಲೇ ತನಿಖೆ ನಡೆದು ತೀರ್ಪು ಪ್ರಕಟವಾದಾಗ ಅದು ನಿಮ್ಮ ಪರ ಅಥವಾ ವಿರೋಧ ಬಂದಾಗಲೂ ಸಮಚಿತ್ರದಿಂದ ಆಲಿಸಿ, ಅದರ ವಿರೋಧವಾಗಿದ್ದಲ್ಲಿ, ಮೇಲಿನ ನ್ಯಾಯಾಲಯಗಳಲ್ಲಿ ಮರು ವಿಚಾರಣೆಗೆ ಕೋರಬಹುದೇ ವಿನಾಃ ಅನಗತ್ಯವಾಗಿ ಬೀದಿಗಿಳಿದು ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ಹಾಳು ಮಾಡುವುದಾಗಲೀ, ಈ ದೇಶದ ಜನಪ್ರತಿನಿಧಿಗಳನ್ನು ಸಾರ್ವಜನಿಕವಾಗಿ ನಿಂದಿಸಿ ದೇಶದ ಮಾನವನ್ನು ಹರಾಜು ಹಾಕುವ ಹಕ್ಕು ಯಾರಿಗೂ ಇಲ್ಲ.

ಈ ದೇಶದಲ್ಲಿ ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲಾ. ಹಾಗಾಗಿ ಎಲ್ಲರೂ ಕಾನೂನಿಗೆ ತಲೆ ಬಾಗಲೇ ಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

ಇದು ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ.

2 thoughts on “ಮಹಿಳಾ ಕುಸ್ತಿ ಪಟುಗಳ ಪ್ರತಿಭಟನೆಯ ವಾಸ್ತವ ಸಂಗತಿ

  1. ಭಜರಂಗ ದಳ ನಿಷೇದ ಮಾಡಲು ಹೊರಟಿರುವ ಕಾಂಗ್ರೆಸ್ ವಿಷಯದ ಬಗ್ಗೆ ಬರೆಯಿರಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s