ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

2023 ಇನ್ನೇನು ಮುಗಿಯುತ್ತಾ ಬಂದಿದ್ದು 2024 ಆರಂಭವಾಗುತ್ತಿದ್ದಂತೆಯೇ ದೇಶಾದ್ಯಂತ ಚುನಾವಣಾ ಭರಾಟೆ ಆರಂಭವಾಗಲಿ. ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಅಧಿಕಾರ ಬಿಡಿ ಅಧಿಕೃತವಾದ ವಿರೋಧ ಪಕ್ಷದ ಸ್ಥಾನಮಾನವನ್ನೂ ಪಡೆಯಲು ಸಾಧ್ಯವಾಗದಿರುವ ಕಾಂಗ್ರೇಸ್ ಪಕ್ಷ, ಅಮಾಯಕ ಭಾರತೀಯರ ದಿಕ್ಕು ತಪ್ಪಿಸುವ ಸಲುವಾಗಿ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (I.N.D.I.A) ಎಂಬ 28 ಪಕ್ಷಗಳ ಒಕ್ಕೂಟವನ್ನು ರಚಿಸಿಕೊಂಡರೂ ತಮ್ಮ ಆಂತರಿಕ ಕಚ್ಚಾಟಗಳಿಂದು ಇನ್ನೂ ಒಂದಾಗದೇ, ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ಮುಗ್ಗರಿಸಿದ ನಂತರ ದೇಶಾದ್ಯಂತ ಇರುವ ಮೋದಿ ಅಲೆಯ ಎದುರು ಮತ್ತೊಮ್ಮೆ ಮುಗ್ಗರಿಸುವ ಎಲ್ಲಾ ಲಕ್ಷಣಗಳನ್ನು ಗಮನಿಸಿ ಶತಾಯ ಗತಾಯ ಅಧಿಕಾರಕ್ಕೆ ಬರಲು ಮಾಡುತ್ತಿರುವ ನಾನಾ ತಂತ್ರಗಳು ಅವರಿಗೇ ತಿರುಗುಬಾಣವಾಗುತ್ತಿದ್ದು, ಈಗ ಅದರ ಮತ್ತೊಂದು ಆಯಾಮವಾಗಿ 2024 ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎದುರಿಸಲು ಆರ್ಥಿಕವಾಗಿ ಶಕ್ತವಿಲ್ಲದ ಕಾರಣ, Donate For Desh ದೇಶಕ್ಕಾಗಿ ದೇಣಿಗೆ ನೀಡಿ! ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸುವ ಮೂಲಕ ದೇಶದ ಜನರಿಗೆ ಮತ್ತೊಮ್ಮೆ ಮಂಕು ಬೂದಿ ಎರಚಲು ಸಿದ್ಧವಾಗುತ್ತಿದೆ.

ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ದೇಣಿಗೆ ಪಡೆಯುತ್ತಿರುವುದು ಇದೇ ಮೊದಲೇನಲ್ಲ ಮತ್ತು ತಪ್ಪೂ ಸಹಾ ಅಲ್ಲಾ. ಕಳೆದ ಐದು ವರ್ಷಗಳಲ್ಲಿ ಆಡಳಿತ ಬಿಜಿಪಿ ಸುಮಾರು 5 ಸಾವಿರ ಕೋಟಿಗಳಷ್ಟು ಮತ್ತು ಕಾಂಗ್ರೇಸ್ ಒಂದು ಸಾವಿರ ಕೋಟಿಗಳಷ್ಟು ದೇಣಿಗೆಯನ್ನು ಚುನಾವಣಾ ಬಾಂಡ್‌ಗಳ ಮೂಲಕ ಅಧಿಕೃತವಾಗಿಯೇ ಪಡೆದಿರುವುದು RTI ಮೂಲಕ ತಿಳಿದು ಬಂದಿದೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪರವಾಗಿ ಭಿಕ್ಷೆಯನ್ನು ನೇರವಾಗಿ ಕೇಳುತ್ತಿದ್ದರೆ ಅವರ ಸಮರ್ಥಕರು ಮತ್ತು ಅವರ ಸಿದ್ದಾಂತವನ್ನು ಒಪ್ಪುವವರು ದೇಣಿಗೆಯನ್ನು ಕೊಡುತ್ತಿದ್ದರೋ ಏನೋ? ಆದರೆ ಲಜ್ಜೆಗೆಟ್ಟ ಕಾಂಗ್ರೇಸ್ಸಿಗರು ತಮ್ಮ ತೆವೆಲಿಗೆ ಇಡೀ ದೇಶವನ್ನೇ ಆವಮಾನ ಮಾಡುತ್ತಿರುವುದನ್ನು ಯಾರು ಸಹಿಸುವುದಿಲ್ಲಾ!!

ಈ ದೇಶದ ಚಿಕ್ಕವಯಸ್ಸಿನ ಮಕ್ಕಳನ್ನು ಕೇಳಿದರೂ ಸಹಾ ಈ ದೇಶವನ್ನು ಗುಡಿಸಿ ಗುಂಡಾಂತರ ಮಾಡಿದ್ದು ಕಾಂಗ್ರೇಸ್ ಎಂದು ಹೇಳುತ್ತಾರೆ. ರಾಜೀವ್ ಗಾಂಧಿಯವರು ಬದುಕಿದ್ದಾಗಲೇ, ಉತ್ತರ ಭಾರತದ ಹಿಂದಿ ಪ್ರಸಾರ ಮಾಡುವ ಆಕಾಶವಾಣಿಯೊಂದರ ಮಕ್ಕಳ ನೇರ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನಿರೂಪಕಿ ಎಲ್ಲಿ ನಿನಗೆ ಗೊತ್ತಿರುವ ಒಂದು ಶೋರ್ ಹೇಳು ನೋಡೋಣ ಎಂದು ಪುಟ್ಟ ಹುಡುಗಿಯನ್ನು ಕೇಳಿದಾಗ, ಆ ಪುಟ್ಟ ಕಂದಮ್ಮ ಒಂದು ಕ್ಷಣವೂ ತಡಾ ಮಾಡದೇ, ಗಲಿ ಗಲೀಮೇ ಶೋರ್ ಹೇ!! ರಾಜೀವ್ ಗಾಂಧಿ ಚೋರ್ ಹೈ! ಎಂದು ಹೇಳಿದ್ದು ಇಡ್ ದೇಶಾದ್ಯಂತ ಪ್ರಸಾರವಾಗಿ ಆ ಕಾರ್ಯಕ್ರಮದ ನಿರೂಪಕಿ ಕೆಲಸ ಕಳೆದುಕೊಂಡರೂ, ಏನೂ ಅರಿಯದ ಆ ಮುಗ್ಧ ಹುಡುಗಿ ಹೇಳಿದ ಮಾತನ್ನು ಯಾರೂ ಅಲ್ಲಗಳಿಯಲಿಲ್ಲ, ಇಂದಿಗೂ ಸಹಾ ಪ್ರಪಂಚದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟದಲ್ಲಿ ಸೋನಿಯಾಗಾಂಧಿಯವರ ಹೆಸರಿದೆ. ಅದೂ ಅಲ್ಲದೇ, ಕಳೆದ ವಾರವಷ್ಟೇ, ಒರಿಸ್ಸಾದ ಕಾಂಗ್ರೇಸ್ ಪಕ್ಷದ ರಾಜ್ಯಸಭಾ ಸದಸ್ಯರ ಮನೆಯಲ್ಲಿ 400+ ಕೋಟಿ ಹಣ ಅದೂ ನಗದು ರೂಪದಲ್ಲಿ ದೊರೆತಿದ್ದರೆ, ಕರ್ನಾಟಕದ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಯೂ ಇದೇ ರೀತಿಯ ಕೇಸಿನಲ್ಲಿ ತಿಹಾರ್ ಜೈಲಿನಲ್ಲಿ ಮುದ್ದೇ ಮುರಿದು ಈಗ ಬೇಲ್ ಮೇಲೆ ಇರುವ ವಿಷಯ ಇಡೀ ದೇಶಕ್ಕೇ ಗೊತ್ತಿದ್ದರೂ, ಈಗ ಚುನಾವಣೆ ಎದುರಿಸಲು ಹಣ ಇಲ್ಲಾ ಎಂದು ಕಾಂಗ್ರೇಸ್ ಪಕ್ಷ Donate for Desh ಎಂಬ Crowd Funding ಅಭಿಯಾನವನ್ನು ಆರಂಭಿಸಿರುವುದು ಹಾಸ್ಯಾಸ್ಪದ ಎನಿಸುತ್ತದೆ ಅಲ್ವೇ?

ದೇಶದ ಹೆಸರಿನಲ್ಲಿ ಮತ್ತು ದೇಶದ ಪರವಾಗಿ ಹಣ ಸಂಗ್ರಹ ಮಾಡಲು ಯಾವುದೇ ಪಕ್ಷದ ಆಳ್ವಿಕೆ ಇರುವ ಕೇಂದ್ರ ಸರ್ಕಾರಕ್ಕೆ ಮಾತ್ರಾ ಅಧಿಕಾರವಿದ್ದು, ತಮ್ಮ ಪಕ್ಷ ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚಿಸುವ ಸಲುವಾಗಿ ದೇಶದ ಯಾವುದೇ ರಾಜಕೀಯ ಪಕ್ಷಕ್ಕೂ ಅಧಿಕಾರ ಇಲ್ಲ ಎನ್ನುವುದೇ ನನ್ನ ವಯಕ್ತಿಯ ಅಭಿಪ್ರಾಯವಾಗಿದೆ. ಒಂದು ಪಕ್ಷ ದೇಶದ ಹೆಸರಿನಲ್ಲಿ ಯಾವುದೇ ಪಕ್ಷ ಈ ದೇಶದ ಪ್ರಜೆಗಳಿಂದ ಹಣವನ್ನು ಪಡೆದಲ್ಲಿ ಅದು ನೇರವಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹೋಗಬೇಕು ಎನ್ನುವುದೇ ನಿಜವಾದ ನಿಯಮವಾಗಿದೆ. ಹಾಗಾಗಿ ಇಲ್ಲಿ Congress ಪಕ್ಷ Donate For Desh ಎಂದು ಕೇಳುವ ಮೂಲಕ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಬದಲು ನೇರವಾಗಿ Donate For Party ಇಲ್ಲವೇ Donate For Congress Party ಎಂದು ಕೇಳಬಹುದಾಗಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅಂತಹ ಪ್ರಜೆಗಳನ್ನು ಓಲೈಸಿಕೊಳ್ಳಲು ಇದೇ ಕಾಂಗ್ರೇಸ್ ಪಕ್ಷ ಈಗಾಗಲೇ ನಾನಾ ವಿಧದ ಬಿಟ್ಟಿ ಭಾಗ್ಯಗಳ ಆಮಿಷವನ್ನು ನೀಡುವ ಮೂಲಕ ದೇಶ/ರಾಜ್ಯದ ಅರ್ಥಿಕ ಪರಿಸ್ಥಿತಿಯನ್ನು ಹಾಳು ಗೆಡುತ್ತಿರುವುದಲ್ಲದೇ, ಒಂದು ರೀತಿಯಲ್ಲಿ ಅಧಿಕೃತವಾಗಿಯೇ ಪ್ರಜೆಗಳಿಂದ ಮತವನ್ನು ಖರೀಧಿಸುವ ಹೀನ ಸ್ಥಿತಿಗೆ ಈಗಾಗಲೇ ತಲುಪಿಸಿದ್ದರೂ, ಈಗ ಚುನಾವಣೆಯಲ್ಲಿ ಪ್ರಜೆಗಳಿಗೆ ಹಂಚಲು ನಮ್ಮ ಬಳಿ ಹಣ ಇಲ್ಲ ಹಾಗಾಗಿ ದಯವಿಟ್ಟು ಪ್ರಜೆಗಳಿಂದ ಮತವನ್ನು ಖರೀಧಿಸಲು ಹಣ ನೀಡಿ ಎಂದು ಕೇಳುವ ಮೂಲಕ ಪ್ರಜೆಗಳನ್ನು ನೇರವಾಗಿ ಅವಮಾನಿಸಿದಂತೆ ಆಗುತ್ತದೆ ಎನ್ನುವುದೇ ಎಲ್ಲರ ಆಭಿಪ್ರಾಯವಾಗಿದೆ. ಪ್ರತೀ ಬಾರಿಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದಾಗ, ಕಾಂಗ್ರೇಸ್ ತನ್ನ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಬಳಿ ಹಿಂದುರುಗಿಸಲಾಗದ, ಲಕ್ಷ ಲಕ್ಷ ಹಣವನ್ನು ಪಡೆದು ಒಂದು ರೀತಿಯಲ್ಲಿ ಟಿಕೆಟ್ ಮಾರಿಕೊಳ್ಳುವಾಗಲೂ ಮತ್ತೇ ತನ್ನ ಬಳಿ ಹಣ ಇಲ್ಲಾ! ಎಂದು Donate for Desh ಎಂಬ Crowd Fundingಗೆ ಮುಂದಾಗಿರುವುದು ಪ್ರಜೆಗಳಿಗೆ ಮತ್ತು ಪ್ರಜಾ ಪ್ರಭುತ್ವಕ್ಕೆ ಅವಮಾನ ಎಸಗಿದಂತಾಗುತ್ತದೆ.

ಇನ್ನು ಕಾಂಗ್ರೇಸ್ ಪಕ್ಷದ ಅಧಿನಾಯಕ ಮತ್ತು ತನ್ನನ್ನು ತಾನು ಭಾವಿ ಪ್ರಧಾನಿ ಎಂದು ಬಿಂಬಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಪ್ರತೀಬಾರಿ ವಿದೇಶಗಳಿಗೆ ಹೋದಾಗಲೆಲ್ಲಾ ತನ್ನ ಅಪ್ರಬುದ್ಧತೆಯಿಂದ ದೇಶದ ಮರ್ಯಾದೆಯನ್ನು ಹಾಳು ಮಾಡುತ್ತಿರುವುದಲ್ಲದೇ, ಹೋದ ಬಂದ ಕಡೆಯಲ್ಲೆಲ್ಲಾ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದ ಅಂಚಿನಲ್ಲಿದೆ ಎಂದು ಹೇಳುವ ಮೂಲಕ ಇಡೀ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಅವಮಾನ ಮಾಡುವಂತಹವರ ಪಕ್ಷ ಈಗ ಮತ್ತೆ ಅದೇ ಪ್ರಜೆಗಳಿಂದಲೇ, ಅದೇ ಪ್ರಜೆಗಳಿಗೆ ಹಂಚಲೆಂದು ಹಣ ಪಡೆಯಲು ಮುಂದಾಗುವ ಮೂಲಕ ದೇಶ ವಿದೇಶಗಳಲ್ಲಿ ಮಾನ ಮರ್ಯಾದೆ ಹಾಳು ಮಾಡುತ್ತಿರುವುದು ನಿಜಕ್ಕೂ ಬೇಸರ ಮತ್ತು ಅವಮಾನಕರ ಎನಿಸುತ್ತಿದೆ. ಕಾಂಗ್ರೇಸ್ ಪಕ್ಶ ತಮ್ಮದು 138 ವರ್ಷಗಳಷ್ಟು ಅತ್ಯಂತ ಹಳೆಯ ರಾಜಕೀಯ ಪಕ್ಷ ಎಂದು ಪದೇ ಪದೇ ಹೇಳಿಕೊಳ್ಳುತ್ತಿರುವುದೂ ಸಹಾ ಪ್ರಜೆಗಳಿಗೆ ಮಂಕು ಬೂದಿ ಎರಚುತ್ತಿದೆಯಲ್ಲದೇ ಅದನ್ನೇ ಮುಂದಿಟ್ಟುಕೊಂಡು 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಕನಿಷ್ಠ ರೂ 138 ಇಲ್ಲವೇ ಅದರ ಹತ್ತು ಪಟ್ಟು ರೂ 1,380, ಇಲ್ಲವೇ ಅದರ ಹತ್ತು ಪಟ್ಟು ರೂ 13,800 ಹಣವನ್ನು ಸಂಗ್ರಹಿಸಲು ಮುಂದಾಗಿದೆ.

ನಿಜ ಹೇಳ ಬೇಕೆಂದರೆ, 1885ರಲ್ಲಿ ಅಂದಿನ ಬ್ರಿಟಿಷ್ ಇಂಡಿಯನ್ ಸಿವಿಲ್ ಸರ್ವಿಸ್ (ICS) ನಿವೃತ್ತ ಅಧಿಕಾರಿ ಅಲನ್ ಆಕ್ಟೇವಿಯನ್ ಹ್ಯೂಮ್ ಅವರು ಭಾರತೀಯರಲ್ಲಿ ನಾಗರಿಕ ಮತ್ತು ರಾಜಕೀಯ ಸಂವಾದಕ್ಕೆ ವೇದಿಕೆಯನ್ನು ರೂಪಿಸುವ ಸಲುವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದರೇ ಹೊರತು ಅವರ ದೃಷ್ಟಿಯಲ್ಲಿ ಅದೆಂದೂ ರಾಜಕೀಯ ಪಕ್ಷವಾಗಿರಲಿಲ್ಲ. ನಂತರ ದಿನಗಳಲ್ಲಿ ಅದೇ ಕಾಂಗ್ರೇಸ್ ಬ್ರಿಟೀಷರ ವಿರುದ್ಧ ಸ್ವಾತ್ರಂತ್ರ್ಯ ಹೋರಾಟದ ಚಳುವಳಿಯ ರೂಪ ಪಡೆದು, 1920ರ ನಂತರ, ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಅಹಿಂಸಾತ್ಮಕ ಹೋರಾಟದ ರೂಪವನ್ನು ಪಡೆದು ನಂತರ ಸ್ವಾತ್ರಂತ್ರ್ಯ ಪಡೆದ ನಂತರ ಇದೇ ಕಾಂಗ್ರೇಸ್ಸನ್ನು ವಿಸರ್ಜನೆ ಮಾಡಬೇಕೆಂಬುದೇ ಗಾಂಧಿಯವರ ಅಭಿಪ್ರಾಯವಾಗಿತ್ತು.

ದುರಾದೃಷ್ಟವಷಾತ್ ಭಾರತದ ಮೊದಲನೇ ಪ್ರಧಾನಿ ನೆಹರು ಅವರು ಕಾಂಗ್ರೇಸ್ ರಾಜಕೀಯ ಚಳುವಳಿಯನ್ನು ವಿಸರ್ಜಿಸಲು ಇಚ್ಚಿಸದೇ ಅದನ್ನೇ ರಾಜಕೀಯ ಪಕ್ಷವನ್ನಾಗಿಸಿಕೊಳ್ಳುವ ಮೂಲಕ ಈ ದೇಶಕ್ಕೆ ಸ್ವಾತ್ರಂತ್ಯ ತಂದು ಕೊಟ್ಟಿದ್ದು ತಾವೂ ಮತ್ತು ಮಹಾತ್ಮ ಗಾಂಧಿ ಎಂದು ಪರೋಕ್ಷವಾಗಿ ಬಿಂಬಿಸಿಕೊಳ್ಳುವ ಮೂಲಕ ಈ ದೇಶದ ಬಹುತೇಕ ಅನಕ್ಷರಸ್ಥರಿಗೆ ತಪ್ಪು ಕಲ್ಪನೆ ಮೂಡಿಸುವುದರಲ್ಲಿ ಸಫಲರಾದರು. ನೆಹರು ಅವರ ನಿಧನದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಈ ದೇಶದ ಅತ್ಯಂತ ದಕ್ಷ ಮತ್ತು ಸಮರ್ಥ ಪ್ರಧಾನಿ ಎನಿಸಿಕೊಂಡರೂ, ರಷ್ಯಾದ ತಾಷ್ಕೆಂಟಿನಲ್ಲಿ ಅನುಮಾನಾಸ್ಪದವಾಗಿ ಮರಣ ಹೊಂದಿದ ನಂತರ ನೆಹರು ಮಗಳು ಇಂದಿರಾಗಾಂಧಿಯವರ ಪಕ್ಷವನ್ನು ಸರ್ವಾಧಿಕಾರಿ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದನ್ನು ಪ್ರತಿಭಟಿಸಿ, 12 ನವೆಂಬರ್ 1969 ರಂದು, ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿದ ಪರಿಣಾಮ, . ಅಂತಿಮವಾಗಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಿ ಸ್ವಾತ್ರಂತ್ರ್ಯ ಚಳುವಳಿಯ ಅಂಗವಾಗಿದ್ದ ಕಾಂಗ್ರೇಸ್ ಈ ದೇಶದಲ್ಲಿ ಶಾಶ್ವತವಾಗಿ ಮುಚ್ಚಿಹೋಗಿ, ಸಂಸ್ಥಾ ಕಾಂಗ್ರೇಸ್ ಮತ್ತು ಇಂದಿರಾ ಕಾಂಗ್ರೇಸ್ ಎಂಬ ಎರಡು ರಾಜಕೀಯ ಪಕ್ಷಗಳ ಆರಂಭವಾಗಿ, ಇಂದಿರಾ ಗಾಂಧಿಯವರ ನಿಧನದ ನಂತರ ರಾಜೀವ್ ಗಾಂಧಿಯವರು ಆ ಪಕ್ಷವನ್ನು ಮುಂದುವರೆಸಿಕೊಂಡು ನಂತರ ಅವರ ಅಕಾಲಿಕ ನಿಧನವಾದ ಏಳು ವರ್ಷಗಳ ನಂತರ 1998ರಲ್ಲಿ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿಯವರು ಅಧಿಕಾರ ವಹಿಸಿಕೊಂಡ ನಂತರ ಈಗಿರುವ ಸೋನಿಯಾ ಕಾಂಗ್ರೇಸ್ಸಿಗೆ ಕೇವಲ 25 ವರ್ಷಗಳಷ್ಟೇ ಆಗಿದೆಯೇ ಹೊರತು 138 ವರ್ಷದಷ್ಟು ಹಳೆಯ ಪಕ್ಷ, ಈ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಕ್ಷ ಎನ್ನುವುದು ಶುದ್ಧ ಸುಳ್ಳಲ್ಲವೇ?

ಇನ್ನೂ ಸರಳವಾಗಿ ಹೇಳಬೇಕೆಂದರೆ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯು ನಮ್ಮ ಕುಟುಂಬದ ಮನೆ ದೇವರಾಗಿದ್ದು, ನಮ್ಮ ಕುಟುಂಬದ ಪ್ರತಿಯೊಂದು ಪೀಳಿಗೆಯಲ್ಲೂ ಮಕ್ಕಳಿಗೆ ಶ್ರೀಕಂಠ ಎಂಬ ಹೆಸರು ಇಡುವುದು ಸಂಪ್ರದಾಯ. ಹಾಗಾಗಿ ನಮ್ಮ ಹಿರಿಯ ತಾತನವರ ಹೆಸರು ಶ್ರೀಕಂಠಯ್ಯ, ನನ್ನ ಹೆಸರು ಶ್ರೀಕಂಠ, ನಮ್ಮ ಮುಂದಿನ ಪೀಳಿಗೆಯ ನನ್ನ ಅಣ್ಣನ ಮಗನ ಹೆಸರೂ ಸಹಾ ಶ್ರೀಕಂಠ ಎಂಬುದಾಗಿದೆ. ಸರ್ಕಾರಿ ಧಾಖಲೆಗಳ ಪ್ರಕಾರ ನಮ್ಮ ಅಣ್ಣನ ವಯಸ್ಸು 26 ವರ್ಷಗಳದ್ದರೆ, ಅದೇ ಕಾಂಗ್ರೇಸ್ ಪಕ್ಷದ ಪ್ರಕಾರ, ನನ್ನ ಅಣ್ಣನ ಮಗನ ವಯಸ್ಸು ನನ್ನ ಮತ್ತು ನನ್ನ ತಾತನ ವಯಸ್ಸು ಸೇರಿಸಿ 100+ ಎಂದು ಹೇಳಿದರೆ ಒಪ್ಪಿಕೊಳ್ಳಲು ಸಾಧ್ಯವೇ?

ಅಂದು ಬ್ರಿಟೀಷರು ನಮ್ಮ ನಮ್ಮಲ್ಲೇ ಒಡಕು ತಂದು ಸುಮಾರು 300+ ವರ್ಷಗಳ ಕಾಲ ನಮ್ಮದೇಶವನ್ನು ತಮ್ಮ ವಸಾಹತುಶಾಯಿಯನ್ನಾಗಿಸಿಕೊಂಡು ಈ ದೇಶವನ್ನು ಲೂಟಿ ಹೊಡೆದುಕೊಂಡು ಹೋದರೆ, ನಂತರ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸಹಾ ಲೂಟಿಯನ್ನೇ ಮುಂದುವರೆಸಿಕೊಂಡು ಹೋಗುವ ಮೂಲಕ ಈ ದೇಶವನ್ನು ಬಡ ರಾಷ್ಟ್ರವನ್ನಾಗಿಟ್ಟಿದ್ದಾಗ, ಪ್ರಸ್ತುತ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಸುಮಾರು 4 ಟ್ರಿಲಿಯನ್ ಹೊಂದಿರುವ ವಿಶ್ವದ ಐದನೇ ಸಿರಿವಂತ ರಾಷ್ಟವಾಗಿದ್ದು ಇನ್ನು ಎರಡ್ಮೂರು ವರ್ಷಗಳಲ್ಲಿ 5 ಟ್ರಿಲಿಯನ್ ಹೊಂದುವ ಮೂಲಕ ವಿಶ್ವದ ಮೊದಲ ಮೂರು ರಾಷ್ಟ್ರಗಳಲ್ಲಿ ಒಂದಾಗುವತ್ತಾ ಧಾಪುಗಾಲು ಹಾಕುವಂತಹ ಸ್ಥಿತಿಯಲ್ಲಿರುವ ಈ ಆಧುನಿಕ ಮತ್ತು ಸಾಮಾಜಿಕ ಜಾಲತಾಣಗಳ ಕ್ರಾಂತಿಯುಗದಲ್ಲಿ ಕಾಂಗ್ರೇಸ್ ಪಕ್ಷದ ಈ ರೀತಿಯ ಹಸೀ ಸುಳ್ಳುಗಳ ಮೂಲಕ ನಂಬಿಸಲು ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಪ್ರಜೆಗಳಿಗೆ ಮಾಡುತ್ತಿರುವ ಅವಮಾನವಲ್ಲದೇ ಮತ್ತೇನು ಅಲ್ಲಾ ಅಲ್ವೇ? ಹಾಗಾಗಿ ಕಾಂಗ್ರೇಸ್ಸಿನ ಈ ಎಲ್ಲಾ ಅಪಸವ್ಯಗಳ ನಡುವೆ ಸಕಲ ಭಾರತೀಯರನ್ನು ಕಾಡುತ್ತಿರುವ ಕಟ್ಟ ಪಡೆಯ ಪ್ರಶ್ನೇ ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

2 thoughts on “ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?

  1. ಪಕ್ಷಕ್ಕಾಗಿ ದೇಣಿಗೆ ಸಂಗ್ರಹಣೆ ಮಾಡಲು ಅವಕಾಶವಿದೆ, ಆದರೆ ದೇಶದ ಹೆಸರಿನಲ್ಲಿ, ದೇಶಕ್ಕಾಗಿ ಎಂದು ಹೇಳಿ ದೇಣಿಗೆ ಸಂಗ್ರಹಿಸುವುದು ಹಾಗೂ ಅದನ್ನು ಇತರ ಉದ್ದೇಶಕ್ಕೆ ಬಳಸುವುದು ಅಪರಾಧವೂ ಆಗಬಲ್ಲದು ಎಂಬ ಸಾಮಾನ್ಯ ಜ್ಞಾನ ವೂ ಇವರಿಗಿಲ್ಲದೇ
    ಹೋಯಿತೇ ??
    ಜನರನ್ನು ಎಚ್ಚರಿಸುವ ನಿಮ್ಮ ಲೇಖನ ಸಕಾಲಿಕವಾಗಿದೆ.

    Liked by 1 person

Leave a comment