ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳ ಧೋರಣೆಗಳಿಂದ ಬೇಸತ್ತು ರಾಜಕೀಯ ವಿಷಯಗಳ ಬಗ್ಗೆ ಲೇಖನವನ್ನು ಬರೆಯಬಾರದು ಎಂದು ತೀರ್ಮಾನಿಸಿದ್ದೆನಾದರೂ, ಕೆಲವೊಂದು ಘಟನೆಗಳನ್ನು ಪ್ರತಿಭಟಿಸಿ ಆ ಸುದ್ದಿಗಳನ್ನು ಭಾರತೀಯರಿಗೆ ತಲುಪಿಸದೇ ಹೋಗುವುದೇ ತಪ್ಪು ಎಂದು ಭಾವಿಸಿದ ಕಾರಣ, ಅನಿವಾರ್ಯವಾಗಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ಏಳನೇ ಶತಮಾನಕ್ಕಿಂತ ಮುನ್ನಾ ವಿವಿಧ ಪರಕೀಯರ ಧಾಳಿಗೆ ಒಳಗಾಗುವ ಮುನ್ನಾ, ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ಸರಿ ಸುಮಾರು 83 ಲಕ್ಷ ಚದರ ಕಿಲೋಮೀಟರ್ ವಿಸ್ತಾರವಾಗಿತ್ತು. ಇಂತಹ ಸುವರ್ಣ ಸಂಧರ್ಭದಲ್ಲಿ ಅಲ್ಲಿ ಸಂಪೂರ್ಣವಾಗಿ ಹಿಂದೂಗಳೇ ಇದ್ದದ್ದು ಗಮನಾರ್ಹವಾಗಿತ್ತು. ನಂತರದ ದಿನಗಳಲ್ಲಿ ವಿವಿಧ ಧರ್ಮಗಳ ಮತಾಂಧರುಗಳು ಭಾರತದ ಮೇಲೆ ಸತತವಾಗಿ ಧಾಳಿ ನಡೆಸಿ ಕೇವಲ ಭೌಗೋಳಿಕವಾಗಿಯಷ್ಟೇ ಭಾರತವನ್ನು ತುಂಡರಿಸದೇ, ಧಾರ್ಮಿಕವಾಗಿಯೂ ಹಿಂದೂಗಳನ್ನು ವಿವಿಧ ಆಮಿಷಗಳಿಂದಲೋ ಬಲವಂತವಾಗಿಯೋ ಮತಾಂತರಗೊಳಿಸಿದ ಇತಿಹಾಸ ಎಲ್ಲರಿಗೂ ತಿಳಿದೇ ಇದೆ.

19ನೇ ಶತಮಾನದಲ್ಲಿ ಬ್ರೀಟೀಷರ ವಿರುದ್ಧ ದೇಶದ ಸ್ವಾತ್ರಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದಾಗಲೂ ಯಾವುದೇ ರೀತಿಯ ಧರ್ಮಾಧಾರಿತವಾಗಿರದೇ, ಸರ್ವಧರ್ಮ ಸಮನ್ವಯದಿಂದ ಆರಂಭವಾದ ಸ್ವಾತ್ರಂತ್ಯ್ರ ಚಳುವಳಿ ನಂತರದ ದಿನಗಳಲ್ಲಿ ಕೆಲವು ಸ್ವಾರ್ಥ ರಾಜಕಾರಣಿಗಳ ಅಧಿಕಾರ ದಾಹದಿಂದಾಗಿ 1947ರ ಆಗಸ್ಟ್ 14ರಂದು ಪೂರ್ವ ಮತ್ತು ಪಶ್ಚಿಮ ಪಾಕೀಸ್ಥಾನ ಎಂಬ ಎರಡು ಭಾಗಗಳಾಗಿ ಸ್ವಾತ್ರಂತ್ಯ್ರ ಪಡೆದರೆ, ಅಗಸ್ಟ್ 15ರಂದು ಕೇವಲ 33 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ಭಾರತ ದೇಶ ಸ್ವಾತ್ರಂತ್ಯ ಪಡೆಯಿತು. ಹೀಗೆ ದೇಶ ಧರ್ಮಾಧಾರಿತವಾಗಿ ಇಬ್ಬಾಗವಾದಾಗ, ಪಾಕೀಸ್ತಾನದಿಂದ ಹಿಂದೂಗಳನ್ನು ಬಲವಂತವಾಗಿ ಹೊರದಬ್ಬಿದರೆ, ಭಾರತದ ಮುಸಲ್ಮಾನರು ಮಾನಸಿಕವಾಗಿ ಪಾಕೀಸ್ಥಾನದ ಪರವಾಗಿದ್ದರೂ, ಭಾರತವನ್ನು ಬಿಟ್ಟು ಹೋಗಬೇಕಾದರೆ, ನನ್ನ ಹೆಣವನ್ನು ದಾಟಿಕೊಂಡು ಹೋಗಿ ಎಂದು ಮಹಾತ್ಮ ಗಾಂಧಿಯವರು ಹೇಳಿದ ಕಾರಣ ಬಲವಂತವಾಗಿ ಇಲ್ಲೇ ಉಳಿದವರು ರಾಜತಾಂತ್ರಿಕವಾಗಿ ಭಾರತೀಯರಾದರೆ, ಧಾರ್ಮಿಕವಾಗಿ ಮುಸಲ್ಮಾನರಾಗಿ, ಭಾವನಾತ್ಮಕವಾಗಿ ಪಾಕೀಸ್ಥಾನಿಗಳಾಗಿ ಉಳಿದು ಹೋದ ಕಾರಣ ಸ್ವಾತ್ರಂತ್ಯ ಬಂದಾಗಲಿಂದಲೂ ನಡೆಯುತ್ತಿರುವ ಬಹುತೇಕ ಕೋಮು ವೈಶಮ್ಯಕ್ಕೆ ಕಾರಣೀಭೂತವಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

nasir5ಇದರ ಮುಂದುವರೆದ ಭಾಗವಾಗಿ ಪೆ. 27 2024ರಂದು ಕರ್ನಾಟಕ ರಾಜ್ಯದಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೇಸ್ ಪಕ್ಷದ ಮೂವರು ಮತ್ತು ಬಿಜೆಪಿಯ ಒಬ್ಬರು ಅಭ್ಯರ್ಥಿಗಳು ವಿಜಯಿ ಎಂದು ಫಲಿತಾಂಶ ಘೋಷಿಸಿದ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರ ಬೆಂಬಲಿಗರು, ವಿಧಾನ ಸೌಧದಲ್ಲಿಯೇ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದೇ ತಡಾ, ಕಾಂಗ್ರೇಸ್ ಪಕ್ಷದಿಂದ ರಾಜ್ಯಸಭೆಗೆ ಎರಡನೇ ಬಾರಿ ಆಯ್ಕೆಯಾದ ನಾಸಿರ್ ಹುಸೇನ್ ಅವರ ಬೆಂಬಲಿಗರು ಜಿಂದಾಬಾದ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಭಾರತದ ವಿರೋಧಿ ಪಾಕೀಸ್ಥಾನದ ಪರದ ತಮ್ಮ ಮನಸ್ಥಿತಿಯನ್ನು ಹೊರಹಾಕಿರುವುದು ದೇಶದ್ರೋಹದ ಅಕ್ಷ್ಮ್ಯ ಅಪರಾದಹ್ವಾಗಿದೆ.

ಸ್ವಾತ್ರಂತ್ರ ಬಂದಾಗಲಿಂದಲೂ ಭಾರತೀಯರಿಗೆ ಮತಾಂಧರಿಂದ ಭಾರತದ ವಿರುಧ ಪಾಕೀಸ್ಥಾನ ಕ್ರಿಕೆಟ್ ಅಥವಾ ಯಾವುದೇ ಆಟಗಳಲ್ಲಿ ಗೆದ್ದಾಗ, ಇಲ್ಲವೇ ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮಸೀದಿಯ ಮುಂದೆ ಹಾದು ಹೋಗುವಾಗ ಇಂತಹ ಘೋಷಣೆಗಳು ಎಲ್ಲೆಂದರಲ್ಲಿ ಕೇಳುತ್ತಲೇ ಇದೆಯಾದರೂ, ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನ ಸೌಧದಲ್ಲಿ ಪಾಕಿಸ್ತಾನದ ಪರ ಜೈಕಾರ ಮೊಳಗಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ವಿಧಾನ ಸೌಧದ ಒಳಗೇ ಸಾರ್ವಜನಿಕರು ಮತ್ತು ಮಾಧ್ಯಮಗಳ ಮುಂದೇಯೇ ಈ ರೀತಿಯಾದ ಧಾಷ್ಟತನ ತೋರಿರುವುದಕ್ಕಂತಲೂ ದೊಡ್ಡ ದುರ್ಭಾಗ್ಯ ಈದೇಶಕ್ಕೆ ಇನ್ನೇನೇನಿದೆ? ನೆಹರು ಮತ್ತು ಜಿನ್ನಾರ ಅಧಿಕಾರದ ತೆವಲಿಗಾಗಿ ಭಾರತವನ್ನು ತುಂಡರಿದ ನಂತರ, ಅದೇ ನೆಹರು ವಂಶದ ಕುಡಿ ಭಾರತ್ ಜೋಡೋ ಎಂದು ಊರೂರು ಅಲೆಯುತ್ತಿರುವ ಸಂದರ್ಭದಲ್ಲಿಯೇ ಮುಸಲ್ಮಾನರು ನಮ್ಮ ಬ್ರದರ್ಸ್ಫ್ ಎಂದು ಅಬ್ಬಿರಿದು ಬೊಬ್ಬಿರಿದಿದ್ದ ಅದೇ ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಅಧ್ಯಕ್ಷರ ತಮ್ಮ, ತೆರಿಗೆ ಹಂಚಿಕೆಯ ತಾರತಮ್ಯದ ವಿಚಾರದಲ್ಲಿ ದಕ್ಷಿಣ ಭಾರತವನ್ನು ದೇಶದಿಂದ ವಿಭಜನೆ ಮಾಡಬೇಕಾಗುತ್ತದೆ ಎಂಬ ಸುದ್ದಿಯಿನ್ನೂ ಹಸಿರಾಗಿರುವಾಗಲೇ ಕಾಂಗ್ರೇಸ್ ಕಾರ್ಯಕರ್ತರು ವಿಧಾನ ಸೌಧದಲ್ಲೇ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿರುವುದನ್ನು ಗಮನಿಸಿದರೆ, ಯಥಾರಾಜಾ ತಥಾ ಪ್ರಜಾ ಎನ್ನುವಂತೆ ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷರ ಬೆಂಬಲವೇ ತಮ್ಮ ಪರವಾಗಿರುವಾಗ ತಾವೇಕೆ ಹೆದರಬೇಕು? ಎಂಬ ಧೋರಣೆ ಇರುವುದು ಸ್ಪಷ್ಟವಾಗುತ್ತದೆ.

nasir1ಆರ್ಥಿಕವಾಗಿ ದೀವಾಳಿಯಾಗಿ ಹೋದ ಪಾಕೀಸ್ಥಾನದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಎಂದು ಹೇಳುವಂತಹ ಜನರೇ ಇಲ್ಲದಿರುವಾಗ, ನಾಸಿರ್ ಹುಸೇನ್ ಅವರ ಬೆಂಬಲಿಗರು ಈ ರೀತಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಸರಿಯಾದ ಉತ್ತರವನ್ನು ನೀಡುವುದು ಬಿಟ್ಟು ಅವರ ಮೇಲೆ ಏಕಾ ಏಕೀ ನೀನು ಯಾರು? ಏ ಹೋಗೋ ಹೋಗೋ, ಹೋಗಲೇ… ನಿನೊಬ್ಬ ಹುಚ್ಚಾ ಎಂದು ನಾಸಿರ್ ಹುಸೇನ್ ಎಗರಾಡಿರುವುದನ್ನು ನೆನ್ನೆ ಸಂಜೆ ಬಹುತೇಕ ಎಲ್ಲಾ ಮಾಧ್ಯಮಗಳೂ ಬಿತ್ತರಿಸಿದ ನಂತರ ಎಚ್ಚೆತ್ತ ನಾಸಿರ್ ಹುಸೇನ್, ಆ ಪ್ರಕರಣ ಕುರಿತಂತೆ ಕ್ಷಮೆಯಾಚಿಸುವುದನ್ನು ಬಿಟ್ಟು ಕೆಲವು ವಿರೋಧಿಗಳು ಅಲ್ಲಿನ ಘೋಷಣೆಗಳನ್ನು ತಿರುಚಿದ್ದಾರೆ. ಅಲ್ಲಿ ಅವರು ನಾಸಿರ್ ಖಾನ್ ಜಿಂದಾಬಾದ್ ನಾಸಿರ್ ಸಾಹೇಬ್ ಜಿಂದಾಬಾದ್, ಕಾಂಗ್ರೇಸ್ ಪಾರ್ಟಿ ಜಿಂದಾಬಾದ್ ಎಂದು ಕೂಗುತ್ತಿದ್ದಷ್ಟೇ ತಮ್ಮ ಕಿವಿಗೆ ಬಿತ್ತೇ ಹೊರತು, ಪಾಕೀಸ್ಥಾನ್ ಜಿಂದಾಬಾದ್ ಎಂದು ಕೂಗಿದ ಸುದ್ದಿ ನನ್ನ ಕಿವಿಗೆ ಬೀಳಲಿಲ್ಲ. ಹಾಗೊಮ್ಮೆ ಹಾಗೆ ಕೂಗಿದ್ದಲ್ಲಿ ಪೋಲೀಸರು ನಿಸ್ಪಕ್ಷಪಾತ ತನಿಖೆ ನಡೆಸಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ತಿಪ್ಪೇ ಸಾರಿಸಿದ್ದಾರೆ.

nasir4ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಸರ್ಕಾರ ಈ ಪರಿಯಾಗಿ ಅಧಿಕಾರಕ್ಕೆ ಬರಲು ಮುಸಲ್ಮಾನರ ಅಭೂತಪೂರ್ವ ಬೆಂಬಲವೇ ಕಾರಣ, ಹಾಗಾಗಿ ಇದು ನಿಮ್ಮದೇ ಸರ್ಕಾರ ಎಂದು ರಾಜ್ಯದ ಗೃಹಮಂತ್ರಿಗಳಾದ ಜಿ ಪರಮೇಶ್ವರ್ ಹೇಳಿದರೆ, ಸಿದ್ದರಾಮಯ್ಯನವರು ನಿಮ್ಮಿಂದಲೇ ಅಧಿಕಾರಕ್ಕೆ ಬಂದಿರುವ ಕಾರಣ ನಿಮ್ಮ ಋಣ ತೀರಿಸಲು 10,000 ಕೋಟಿಗಳ ಅನುದಾನವನ್ನು ನೀಡುವುದಾಗಿ ಘೋಷಿಸಿದ್ದಲ್ಲದೇ, ಈ ಬಾರಿಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರಿಗೆ ಭರಪೂರ ಅನುದಾನವನ್ನು ಕರುಣಿಸಿದ್ದಾರೆ ಕುರಿಯನ್ನು ದೇವರಿಗೆ ಹರಕೆ ಕೊಡುವ ಮುನ್ನಾ ಅದಕ್ಕೆ ಚೆನ್ನಾಗಿ ಮೇವು ತಿನ್ನಿಸುವಂತೆ, ಅಧಿಕಾರಕ್ಕೆ ಬರುವ ಮುನ್ನಾ ವಿವಿಧ ಭಾಗ್ಯಗಳನ್ನು ಘೋಷಿಸಿ ಹಿಂದೂಗಳ ಮತವನ್ನು ಪಡೆದು ಈಗ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಯೋಜನೆಗಳಿಗೇ ಒತ್ತು ಕೊಡುವ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೆ ತಂದಿರುವುದು ಎದ್ದು ಕಾಣುತ್ತಿದೆ.

ಇಷ್ಟೇ ಅಲ್ಲದೇ, ನ್ಯಾಯಾಲಯದಲ್ಲಿ ಉಡುಪಿಯ ಕಾಲೇಜಿನ ಹಿಜಾಬ್ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ, ಏಕಾಏಕಿ ಇನ್ನು ಮುಂದೆ ಹಿಜಾಬ್ ನಿಷೇಧವನ್ನು ತೆಗೆದು ಹಾಕಿದ್ದೇವೆ ಎಂದು ಘೋಷಿಸಿ ನಂತರ ಮರುದಿನವೇ ನ್ಯಾಯಾಂಗ ನಿಂದನೆ ಪ್ರಕರಣದಿಂದ ಪಾರಾಗಲು ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ ಎಂದು ಸಿದ್ದರಾಮಯ್ಯನವರು ತಿಪ್ಪೇಸಾರಿಸಿದರೂ, ಅವರ ಅಲ್ಪಸಂಖ್ಯಾತರ ಹಿತರಕ್ಷಣೆಯ ಮನಸ್ಥಿತಿ ಜಗಜ್ಜಾಹೀರಾಗಿದೆ.

ಅದೇಕೋ ಏನೋ ರಾಷ್ಟ್ರೀಯತೆಯ ವಿಚಾರ ಬಂದಾಗಲೆಲ್ಲಾ ಕಾಂಗ್ರೇಸ್ ಪಕ್ಷ ದೇಶದ ಪರ ನಿಲ್ಲುವುದನ್ನು ಬಿಟ್ಟು ದೇಶ ವಿರೋಧಿಗಳತ್ತ ನಿರಂತರವಾಗಿ ವಾಲುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಘೋಷಣೆ ಕೂಗಿದ ಕಲವೇ ಸೆಕೆಂಡುಗಳಲ್ಲಿಯೇ ಅಲ್ಲಿದ್ದ ಪತ್ರಕರ್ತರು ಪಾಕ್ ಪರ ಘೋಷಣೆ ಕೂಗಿದ್ದು ತಪ್ಪಲ್ಲವೇ? ಎಂದು ನಾಸಿ ಹುಸೇನ್ ಅವರನ್ನು ವಿಚಾರಿಸಿದ ವಿಡೀಯೋ ಎಲ್ಲಾ ವಾಹಿನಿಗಳಲ್ಲಿಯೂ ಬಿತ್ತರ ಗೊಂಡರೂ ಯಥಾ ಪ್ರಕಾರ ಸರ್ಕಾರದ ಎಲ್ಲಾ ನಡೆಗಳನ್ನೂ ಸಮರ್ಥಿಸಿಕೊಳ್ಳುವ ಅಪ್ರಬುದ್ಧ ಮಂತ್ರಿ ಪ್ರಿಯಾಂಕ್ ಖರ್ಗೆ (ಸ್ವಂತ ಸಾಮರ್ಥ್ಯದಿಂದ ಪಿಯೂಸಿ ಪಾಸಗದೇ ಹೋದರೂ ಅಪ್ಪನಿಂದಾಗಿ ಮಂತ್ರಿಯಾದವರು) ಅಂತಹ ಘಟನೆ ನಡದೇ ಇಲ್ಲಾ, ಇದು ಸೋತ ಬಿಜೆಪಿಯವರ ಕುತಂತ್ರ ಎಂದು ದೇಶದ್ರೋಹಿಗಳ ಪರ ವಹಿಸಿಕೊಂಡಿರುವುದು ಮತ್ತು ನೆನ್ನೆ ಡಿ.ಕೆ. ಶಿವಕುಮಾರ್ ಸಹಾ ಅದೇ ರೀತಿಯ ಹೇಳಿಕೆ ಕೊಟ್ಟಿರುವುದನ್ನು ನೋಡಿದರೆ, ಖಂಡಿತವಾಗಿಯೂ ಕಾಂಗ್ರೇಸ್ಸ್ಸಿಗೆ ಅಲ್ಪಸಂಖ್ಯಾತರ ತುಷ್ಟೀಕರಣದ ಹೊರತಾಗಿ ರಾಷ್ಟ್ರೀಯತೆಯ ಭಾವನೆಯೇ ಇಲ್ಲಾ ಎನ್ನುವುದು ಸುಸ್ಪಷ್ಟವಾಗಿ ಗೋಚರಿಸುತ್ತಿದೆ

ಇದಕ್ಕೆಲ್ಲಾ ಪುಷ್ಟಿಕೊಡುವಂತೆ ಪ್ರಸಕ್ತ ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದ 9 ತಿಂಗಳುಗಳಲ್ಲಿ ಆದ ಈ ಪ್ರಕರಣಗಳೇ ಜ್ವಲಂತ ಸಾಕ್ಷಿಯಾಗಿದೆ

  • ಹಿಜಾಬ್ ನಿಷೇಧವನ್ನು ಹಿಂಪಡೆಯುವುದಾಗಿ ಗಿ ಘೋಷಿಸುವುದು
  • ಕಾಂಗ್ರೇಸ್ ಪಕ್ಷದ ಏಕೈಕ ಸಂಸದರೇ ದೇಶ ವಿಭಜನೆಯ ಬಗ್ಗೆ ಮಾತನಾಡುವುದು
  • ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ಹೇರುವುದು
  • ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ನಾಡಗೀತೆ ಖಡ್ಡಾಯವಲ್ಲಾ ಎಂದು ತೀರ್ಮಾನಿಸುವುದು
  • ಹಿಂದೂಗಳ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಳಸುವುದು
  • ಸಂವಿಧಾನದ ದಿನದಂದು ಭಾಷಣ ಮಾಡಲು ಪಾಕಿಸ್ತಾನ ಲೇಖಕಿಯನ್ನು ಆಹ್ವಾನಿಸುವುದು,
  • ವಿಧಾನಸೌದದಲ್ಲೇ ಪಾಕ್ ಪರ ಘೋಷಣೆ ಕೂಗಿದರೂ ಅದನ್ನು ಒಕ್ಕೊರಲಿನಿಂದ ಖಂಡಿಸದೇ, ಅದನ್ನು ಸಮರ್ಥನೆ ಮಾಡುವುದು.

ಕೇವಲ ಬಿಟ್ಟಿ ಭಾಗ್ಯಗಳಿಗೆ ಆಸೆ ಬಿದ್ದು ಹಿಂದೂಗಳು ಇಂತಹ ಮನಸ್ಥಿತಿಯ ಸರ್ಕಾರಗಳನ್ನು ಆರಿಸಿ ತಂದಲ್ಲಿ, 2047ರ ಒಳಗೆ ಇಡೀ ಭಾರತವನ್ನು ಮುಸಲ್ನಾನ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಹವಣಿಸುತ್ತಿರುವವರ ಆಸೆ ಅದಕ್ಕಿಂತಲೂ ಮುಂಚೆಯೇ ಈಡೇರುತ್ತದೆ ಎಂಬುದನ್ನು ಗಮನದಲ್ಲಿಟ್ಟು ಕೊಳ್ಳದೇ ಹೋದಲ್ಲಿ ಕೋಟ್ಯಾಂತರ ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸನಾತನ ಧರ್ಮವನ್ನು ಹಾಳುಗೆಡವಿದ ಅಪಕೀರ್ತಿಯನ್ನು ನಾವುಗಳೇ ಹೊರಬೇಕಾಗುತ್ತದೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಚ್ಚರಿಕೆಯಿಂದ ನಮ್ಮೆಲ್ಲರ ಮತವನ್ನು ಚಲಾಯಿಸಲೇ ಬೇಕಾಗಿರುವುದು ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?

ಧರ್ಮೋ ರಕ್ಷತಿ ರಕ್ಷಿತಃ

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment