ಕಳೆದ ಎರಡು ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಬಿಜೆಪಿಯೇ ಬಹುಮತ ಪಡೆದಿದ್ದ ಕಾರಣ, ಈ ಬಾರಿ ತಮ್ಮ ಸಾಂಪ್ರದಾಯಕ ಮತದಾರರನ್ನು ಮತ್ತಷ್ಟು ಉತ್ತೇಜಿಸುವ ಮತ್ತು ಆ ಮೂಲಕ ವಿರೋಧ ಪಕ್ಷದ ಎದೆಯನ್ನು ಡವ ಡವ ಎನ್ನುಸುವಂತೆ ಮಾಡಿ ಮತ್ತಷ್ಟು ಸ್ಥಾನಗಳನ್ನು ಗಳಿಸುವ ಅತಿಯಾದ ಹುಮ್ಮಸ್ಸಿನಿಂದ ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆಯನ್ನು ಹೊರಹಾಕಿದ್ದಲ್ಲದೇ, ಅದುವರೆವಿಗೂ ಸಂಘ ಪರಿವಾರ್ ಎನ್ನುತ್ತಿದ್ದವರು, ಸಂಘವನ್ನು ಇಚ್ಚಿಸದವರೂ ಸಹಾ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿ ಎನ್ನುವ ಕಾರಣಕ್ಕಾಗಿ ಈ ಬಾರಿ ಮೋದಿ ಪರಿವಾರ್ ಎಂಬ ಬ್ರಾಂಡ್ ಸಹಾ ಹುಟ್ಟಿಹಾಕ್ಕಿದ್ದಲ್ಲದೇ, ಸ್ವತಃ ಪ್ರಧಾನಿ ಮೋದಿಯವರೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚುನಾವಣೆಗಳು ನಡೆಯುತ್ತಿದ್ದ ಸಂಧರ್ಭದಲ್ಲಿ ಪ್ರತೀದಿನವೂ ಮೂರ್ನಾಲ್ಕು ಸಾರ್ವಜನಿಕ ಸಭೆ, ರ್ಯಾಲಿ ಮತ್ತು ರೋಡ್ ಶೋಗಳಲ್ಲಿ ಭಾಗವಹಿಸುವ ಮೂಲಕ ನಿಸ್ಸಂದೇಹವಾಗಿ ಈ ಬಾರಿ ಯಾವುದೇ ಆಡೆ ತಡೆಯಿಲ್ಲದೇ ನಿರಾಯಾಸವಾಗಿ ಮೂರನೇ ಬಾರಿ ಮೋದಿಯವರೇ ಪ್ರಧಾನಿಗಳಾಗುತ್ತಾರೆ ಎಂಬ ವಾತಾವರಣವನ್ನು ನಿರ್ಮಿಸಲಾಗಿತ್ತು
ಇದಕ್ಕೆ ಪೂರಕವಾಗಿ ಎಲ್ಲಾ ಮಾಧ್ಯಮಗಳೂ, ಸಂಖ್ಯಾಶಾಸ್ತ್ರಜ್ಞರು, ರಾಜಕೀಯ ಜ್ಯೋತಿಷ್ಯಗಳು ಬಿಡಿ ಖುದ್ದಾಗಿ ವಿರೋಧ ಪಕ್ಷದ ಶಾಸಕ ಮತ್ತು ಸಾಂಸರೇ, ನಮ್ಮ ಹೋರಾಟ ಏನಿದ್ದರೂ 2029 ಕ್ಕೆ ಸಿದ್ಧಗೊಳಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಬಹುತೇಕ ಸೋಲನ್ನು ಒಪ್ಪಿಕೊಂಡಿದ್ದರು. ಕಳೆದ ನಾಲ್ಕು ದಶಕಗಳಿಂದಲೂ ಆಂಧ್ರ ಹೈದರಾಬಾದ್ ಚಾರ್ ಮಿನಾರ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಓವೈಸಿ ಕುಟುಂಬಕ್ಕೂ ಸಹಾ ಈ ಬಾರಿ ಬೆವರು ಸುರಿಸುವಂತಾಗಿ ಗಲ್ಲಿ ಗಲ್ಲಿಯನ್ನು ಸುತ್ತುವಂತಾಗಿತ್ತು. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾರತದ ಮುಸ್ಲಿಮ್ಮರು ಇದ್ದಕ್ಕಿದ್ದಂತೆಯೇ ಜಾಗೃತರಾದರು. ಈಗಾಗಲೇ CAA & NRC ಜೊತೆಗೆ ಕೃಷಿ ಬಿಲ್ ಜಾರಿಗೆ ತರಲು ಮುಂದಾದಾಗ, ದೇಶಾದ್ಯಂತ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದ ಮುಸ್ಲಿಮ್ಮರಿಗೆ ಕಾಂಗ್ರೇಸ್ ಪಕ್ಷದವರು ಈ ಬಾರಿ ಬಿಜೆಪಿ 400 ಸಂಖ್ಯೆ ದಾಟಿದರೆ, ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಖಂಡಿತ. ಅದೇ ರೀತಿ ಸಂವಿಧಾನವನ್ನು ಬದಲಿಸಿ ಈಗಿರುವ ಮೀಸಲಾತಿಯನ್ನು ರದ್ದು ಮಾಡಿಬಿಟ್ಟಲ್ಲಿ, ಈ ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಉಳಿಯುವುದೇ ಕಷ್ಟ ಎಂಬ ಹಸೀ ಸುಳ್ಳನ್ನು ಹರಡಿದ್ದಲ್ಲದೇ, ಅಮಾಯಕ ಮುಸ್ಲಿಮ್ ಮಹಿಳೆಯರಿಗೆ ಕಾಂಗ್ರೇಸ್ ಆಡಳಿತಕ್ಕೆ ಬಂದಲ್ಲಿ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವ ಗ್ಯಾರಂಟಿ ಕಾರ್ಡಗಳನ್ನು ಹಂಚಿದ್ದೇ ತಡಾ, ಮಸೀದಿಗಳಲ್ಲಿ ಮುಲ್ಲಾಗಳೂ ಸಹಾ ರಹಸ್ಯವಾಗಿ ಈ ಬಾರೀ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಲೇ ಬೇಕೆಂದು ಕರೆ ನೀಡಿದಲ್ಲದೇ, ಅನೇಕ ಕಡೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ ಪರಿಣಾಮ, 10 ವರ್ಷಗಳ ನಂತರ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬರುವಂತಾಗಿದೆ.
ಈ ಬಾರಿ ಮುಸಲ್ಮಾನರ ಒಗ್ಗಟ್ಟು ಹೇಗಿತ್ತು? ಎಂಬುದಕ್ಕೆ ಕೆಲವೊಂದು ಉದಾರಣೆಗಳನ್ನು ನೋಡೋಣ. ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದು ಅಲ್ಲಿ ಮುಸ್ಲಿಂ ಆಭ್ಯರ್ಥಿ ಇಲ್ಲದೇ ಹೋದಗ, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಣದಲ್ಲಿ ಇರುವ ಕಾಂಗ್ರೇಸ್ ಅಭ್ಯರ್ಥಿಯು ಹಿಂದೂ ಆದರೂ ಅವನಿಗೇ ಮತವನ್ನು ಹಾಕಿ ಕಾಂಗ್ರೇಸ್ ಇಲ್ಲವೇ ಬಿಜೆಪಿ ವಿರೋಧಿ ಪಕ್ಷವನ್ನೇ ಬೆಂಬಲಿಸುವುದು ಮುಸ್ಲಿಮ್ಮರ ವಾಡಿಕೆ. ಹಾಗಾಗಿಯೇ ಕಳೆದ ಬಾರಿ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿಯೂ ಮುಸಲ್ಮಾನರು ಅಂದು ದುರ್ಬಲವಾಗಿದ್ದ ಜನತಾದಳವನ್ನು ತ್ಯಜಿಸಿ ಒಗ್ಗಟ್ಟಾಗಿ ಕಾಂಗ್ರೇಸ್ ಬೆಂಬಲಿಸಿದ ಪರಿಣಾಮ 136 ಸೀಟುಗಳನ್ನು ಗಳಿಸುವಂತಾಗಿತ್ತು. ಈ ಬಾರಿಯೂ ಅದೇ ಪದ್ದತಿಯನ್ನು ದೇಶಾದ್ಯಂತ ಮುಂದುವರೆಸಿದ ಪರಿಣಾಮ ಇಂಡಿ ಒಕ್ಕೂಟ ಈ ಪರಿಯಾಗಿ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮೂರನೇ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರವನ್ನು ಪಡೆಯುವುದನ್ನು ತಪ್ಪಿಸಲಾಯಿತು.
ಬೆಂಗಳೂರಿನ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದರೆ, ಕಾಂಗ್ರೇಸ್ಸಿನಿಂದ ಮಾಜೀ ರಾಜ್ಯಸಭಾ ಸದಸ್ಯರಾದ ಪ್ರೊ. ರಾಜೀವ್ ಗೌಡ ಅವರು ಸ್ಪರ್ಧಿಸಿದ್ದು ಅಂತಿಮವಾಗಿ ಶೋಭಾ ಅವರು ಸುಮರು 2.4 ಲಕ್ಷ ಮತಗಳ ಅಂತರದಿಂದ ಗೆದ್ದರಾದರೂ ವಿಧಾನಸಭಾವಾರು ಅವರು ಗಳಿಸಿರುವ ಮತವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮುಸಲ್ಮಾನರ ಒಗ್ಗಟ್ಟಿನ ಅರಿವಾಗುತ್ತದೆ. ಬೆಂಗಳೂರು ಉತ್ತರ ಲೋಕಸಭೆಯಲ್ಲಿ ಬಿಜೆಪಿಯ ಕ್ಷೇತ್ರವಾರು ಮತಗಳ ಗಳಿಕೆ, ಕೆಆರ್ ಪುರಂ: 24,600 ಮತಗಳ ಮುನ್ನಡೆ ,ಬ್ಯಾಟರಾಯನಪುರ: 35,121 ಮತಗಳ ಮುನ್ನಡೆ, ಯಶವಂತಪುರ: 1,22,000 ಮತಗಳ ಮುನ್ನಡೆ, ದಾಸರಹಳ್ಳಿ: 70,000 ಮತಗಳ ಮುನ್ನಡೆ, ಮಹಾಲಕ್ಷ್ಮಿ ಲೇಔಟ್ : 56,000 ಮತಗಳ ಮುನ್ನಡೆ, ಮಲ್ಲೇಶ್ವರಂ: 48,000 ಮತಗಳ ಮುನ್ನಡೆಯನ್ನು ಗಳಿಸಿದರೆ, ಅದೇ, ಹೆಬ್ಬಾಳದಲ್ಲಿ 8,000 ಮತಗಳು ಮತ್ತು ಪುಲಿಕೇಶಿನಗರದಲ್ಲಿ 87,000 ಮತಗಳ ಹಿನ್ನಡೆಯನ್ನು ಗಳಿಸಿದೆ. ಹೆಬ್ಬಾಳ ಮತ್ತು ಪುಲಿಕೇಶಿ ನಗರದಲ್ಲಿ ಮುಸಲ್ಮಾನ ಮತದಾರರು ಸಾರಾಸಗಟಾಗಿ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಮತ ಚಲಾಯಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬರುವ ಚನ್ನಪಟ್ಟಣದ ಮತದಾನವಂತೂ ಶತ್ರುಗಳ ಶತ್ರು ನಮ್ಮ ಮಿತ್ರ ಎನ್ನುವ ಗಾದೆಯಂತೆ, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಸಾರಾಸಗಟಾಗಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿರುವುದು ಅಘಾತಕಾರಿಯಾಗಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ Dr ಸಿಎನ್ ಮಂಜುನಾಥ್ ಆವರು ವೈದ್ಯಕೀಯ ವೃತ್ತಿಯಲ್ಲಿದ್ದಾಗ ಚಿಕಿತ್ಸೆ ನೀಡುವ ಸಂಧರ್ಭದಲ್ಲಿ ರೋಗಿಗಳ ಜಾತಿ ಧರ್ಮ ಮತವನ್ನು ನೋಡದೇ, ಎಲ್ಲ ಧರ್ಮದ ಎಲ್ಲಾ ಜಾತಿಯ ಬಡವರಿಗೂ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಜಾರಿಗೆ ತಂದಾಗ ಅದರ ಸದುಪಯೋಗವನ್ನು ಬಹುಮಟ್ಟಿಗೆ ಪಡೆದುಕೊಂಡಿದ್ದೇ ಮುಸಲ್ಮಾನರು ಎಂಬುದು ಈಗ ಗುಟ್ಟಾಗೇನೂ ಉಳಿಯದೇ ಹೋದರೂ, ಚನ್ನಪಟ್ಟಣದ ಮುಸ್ಲಿಂ ಬಾಹುಳ್ಯದ ಮತಗಟ್ಟೆಗಳಲ್ಲಿ ಮಂಜುನಾಥ್ ಅವರಿಗೆ ಒಂದೂ ಸಹಾ ಹಾಕದಿರುವುದು ಅಚ್ಚರಿಯನ್ನು ಮೂಡಿಸುತ್ತದೆ.
ಅದೇ ರೀತಿ ಮಹಾರಾಷ್ಟ್ರದ ಧುಲೆ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಮಾಲೆಗಾಂವ್ ಸೆಂಟ್ರಲ್ ಹೇಳಿ ಕೇಳಿ ಮುಸ್ಲಿಂ ಸಮುದಾಯವೇ ಹೆಚ್ಚಾಗಿರುವ ಪ್ರದೇಶವಾಗಿದ್ದು ಕೋಮಗಲಭೆಗಳಿಗೆ ಅತ್ಯಂತ ಹೆಚ್ಚಿನ ಪ್ರಚೋದನೆ ನೀಡುವ ಕುಖ್ಯಾತಿಯನ್ನು ಹೊಂದಿದ್ದು ಇಲ್ಲಿನ ಮಸಲ್ಮಾನರು ಸತತವಾಗಿ ಹೇಗೆ ಕಾಂಗ್ರೆಸ್ ಗೆಲುವಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಜ್ವಲಂತ ಉದಾರಣೆಯಾಗಿದೆ. ಧುಲೆ ಲೋಕಸಭಾ ಕ್ಷೇತ್ರದಲ್ಲಿ ದುಲೆ ಗ್ರಾಮಾಂತರಮ್ ಸಿನ್ಖೇಡ, ಮಾಲೇಗಾಂವ್ ಹೊರವಲಯ, ಬಾಗ್ಲಾನ್, ಧುಲೆ ನಗರ ಪ್ರದೇಶ ಮತ್ತು ಮಾಲೆಗಾಂವ್ ಕೇಂದ್ರ ಹೀಗೆ ಐದು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೊದಲ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿ 1,89,272 ಮತಗಳ ಮುನ್ನಡೆಯನ್ನು ಗಳಿಸಿದ್ದರೆ, ಮಾಲೆಗಾಂವ್ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ 4542 ಮತಗಳು ಲಭಿಸಿ, ಕಾಂಗ್ರೇಸ್ ಪಕ್ಷ 198859 ಮತಗಳನ್ನು ಗಳಿಸುವ ಮೂಲಕ 3841 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದೆ. ಅಂದರೆ ಕೇವಲ ಒಂದು ವಿಧಾನ ಸಭಾ ಕ್ಷೇತ್ರದ ಬಹುಸಂಖ್ಯಾತ ಮುಸಲ್ಮಾನ ಮತದಾರರು ಒಗ್ಗಟ್ಟಾಗಿ ಒಂದು ಪಕ್ಷ/ಅಭ್ಯರ್ಥಿಯ ಪರವಾಗಿ ಮತ ಹೇಗೆ ಇಡೀ ಲೋಕಸಭಾ ಫಲಿತಾಂಶವನ್ನು ಬದಲಿಸ ಬಲ್ಲರು? ಎನ್ನುವುದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಮತ್ತೊಂದಿಲ್ಲಾ ಎನಿಸುತ್ತದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲಲ ಕಾಂಗ್ರೇಸ್ ನಡುವೆ ಸೀಟು ಹಂಚಿಕೆಯ ವಿಷಯದಲ್ಲಿ ಹೊಂದಾಣಿಕೆಯಾಗದ ಪರಿಣಾಮ ಆ ಎರಡೂ ಪಕ್ಷಗಳು ಇಂಡಿ ಒಕ್ಕೂಟದ ಭಾಗವಾಗಿದ್ದರೂ, ಅಲ್ಲಿ ಕಾಂಗ್ರೇಸ್ ಮತ್ತು ತೃಣಮೂಲ ಕಾಂಗ್ರೇಸ್ ಪರಸ್ಪರ ವಿರುದ್ಧವಾಗಿ ಸ್ವರ್ಧಿಸಿದ್ದವು. ಅಲ್ಲಿನ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಮತ್ತು ಲೋಕಸಭೆಯಲ್ಲಿ ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದ ಅಧೀರ್ ರಂಜನ್ ಚೌದರಿ ನಿಸ್ಸಂದೇಹವಾಗಿಯೂ ಒಬ್ಬ ಅಪ್ರತಿಮ ಸಾಂಸದ ಎಂಬುದನ್ನು ಪಕ್ಷಾತೀತವಾಗಿ ಒಪ್ಪಿಕೊಳ್ಳುತ್ತಾರೆ ಹಾಗಾಗಿಯೇ ಅವರು 1999 ರಿಂದ 5 ಬಾರಿ ಬಹ್ರಂಪುರದಿಂದ ಐದು ಬಾರಿ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದರು.
ಆ ಕ್ಷೇತ್ರದಲ್ಲಿ ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ಕಾರಣ, ಪ್ರತೀವರ್ಷವೂ ರಂಜಾನ್ ಸಮಯದಲ್ಲಿ ತಮ್ಮ ಕ್ಷೇತ್ರದ ಮುಸಲ್ಮಾನರಿಗೆ ಭರ್ಜರಿಯಾದ ಇಫ್ತಾರ್ ಕೂಟವನ್ನು ಏರ್ಪಡಿಸುತ್ತಿದ್ದದ್ದಲ್ಲದೇ, ಆಗ್ಗಿಂದ್ದಾಗಿ ಅವರಂತೆಯೇ ತಲೇ ಮೇಲೇ ಬಿಳಿ ಬಣ್ಣದ ತೂತು ಟೋಪಿ ಧರಿಸಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರನ್ನು ಸಂತೃಷ್ಟಗೊಳಿಸುತ್ತಿದ್ದರು. ಹಾಗಾಗಿ ಖಂಡಿತವಾಗಿಯೂ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ತಾನೊಂದು ಬಯಸಿದರೆ, ತನ್ನ ಕ್ಷೇತ್ರದ ಮುಸ್ಲಿಂ ಮತದಾರರೇ ಮತ್ತೊಂದು ಬಯಸುತ್ತಾರೆ ಎಂಬುದನ್ನು ಅರಿಯಲಾರದೇ, ಈ ಬಾರಿ ಅವರು ಗುಜರಾತ್ ಮೂಲದ ಭಾರತವನ್ನು ಪ್ರತಿನಿಧಿಸಿದ್ದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ, ಟಿಎಂಸಿ ಅಭ್ಯರ್ಥಿ ಕ್ರಿಕೆಟಿಗ ಯೂಸುಫ್ ಪಠಾಣ್ ಎದುರು ಸುಮಾರು 85000 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.
ನಿಜ ಹೇಳಬೇಕೆಂದರೆ, 25 ವರ್ಷಗಳಿಂದ ಅಲ್ಲಿನ ಮುಸ್ಲಿಂ ಸಮುದಾಯದ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದ ಮತ್ತು ಅವರಿಗಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದ ಅದೀರ್ ರಂಜನ್ ಅವರನ್ನು ಅಲ್ಲಿನ ಮುಸಲ್ಮಾನ ಮತದಾರ ಯಾವುದೇ ಮುಲಾಜಿಲ್ಲದೆ ಕಿಕ್ ಔಟ್ ಮಾಡಿ ಹೊರ ರಾಜ್ಯದ ಯೂಸುಫ್ ಪಠಾಣ್ ಅವರನ್ನು ಗೆಲ್ಲಿಸಿದ್ದು ಅತ ಕ್ರಿಕೆಟಿಗ ಎಂಬುದಕ್ಕಾಗಿ ಅಲ್ಲಾ. ಆತ ಕೇವಲ ಮುಸಲ್ಮಾನ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಗೆಲ್ಲಿಸಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಇದೇ ರೀತಿ 2009ರಲ್ಲಿ ಹೈದರಾಬಾದ್ ಮೂಲದ ಭಾರತ ಕ್ರಿಕೆಟ್ ತಂಡದ ಮಾಜೀ ನಾಯಕ ಮತ್ತು ಕಳ್ಳಾಟವಾಡಿದಕ್ಕಾಗಿ ಕ್ರಿಕೆಟ್ಟಿನಿಂದ ಶಾಶ್ವತವಾಗಿ ಬಹಿಷ್ಕಾರ ಹಾಕಲ್ಪಟ್ಟಿದ್ದ ಮಹಮ್ಮದ್ ಅಜರುದ್ದೀನ್ ನನ್ನು ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಸಾಂಸದರಾಗಿ ಆಯ್ಕೆ ಮಾಡಿಕಳುಹಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಅಚ್ಚರಿಯ ವಿಷಯವೇನೆಂದರೆ, ಆ ಕ್ಷೇತ್ರದಲ್ಲಿ ಸ್ಪರ್ಥಿಸಿದ್ದ 11 ಹಿಂದೂ ಅಭ್ಯರ್ಥಿಗಳ ಪಡೆದುಕೊಂಡ ಮತಗಳ ಸಂಖ್ಯೆ 5 ಲಕ್ಷವಾಗಿದ್ದು, ಹಿಂದೂ ಸ್ವಲ್ಪ ವಿವೇಚನೆಯಿಂದ ಮುಸಲ್ಮಾನರಂತೆ ಒಗ್ಗಟ್ಟಾಗಿ ಮತಚಲಾಯಿಸಿದ್ದಲ್ಲ ಅಧೀರ್ ರಂಜನ್ ನಂತಹ ಒಬ್ಬ ಅನುಭವಿಗಳು ಸಾಂಸದರಾರುವ ಮೂಲಕ ಲೋಕಸಭೆಗೆ ಒಂದು ಗಂಭೀರತೆ ಬರುತ್ತಿತ್ತು.
ಭಾರತದಲ್ಲಿನ ಮುಸಲ್ಮಾನರು ಉಳಿದವರಂತೆ ಯೋಚನೆ ಮಾಡಿ ಯಾವುದೇ ಕೆಲಸ ಮಾಡುವುದಕ್ಕೆ ಮಸೀದಿಯಲ್ಲಿರುವ ಅವರ ಮುಲ್ಲಾಗಳೇ ಅಡ್ಡಗಾಲಾಗಿದ್ದಾರೆ. ಅದು ಮತದಾನವೇ ಆಗಿರಲೀ, ಇಲ್ಲವೇ ಕೋಮ ದಳ್ಳುರಿಯಾಗಿರಲೀ, ಇಲ್ಲವೇ ಹೊಡೆದಾಟ ಬಡಿದಾಟವೇ ಆಗಿರಲೀ, ಭಯೋತ್ಪಾದನ ಚಟುವಟಿಕೆಯಾಗಿರಲೀ, ಅವರ ಧಾರ್ಮಿಕ ಗುರುಗಳು ಒಂದು ಕರೆ ನೀಡಿದರೆ ಸಾಕು ಹಿಂದೂ ಮುಂದೂ ನೋಡದೇ, ಯಾವುದರ ಪೂರ್ವಾಪರ ಯೋಚಿಸದೇ, ಧಾರ್ಮಿಕ ಮತಾಂದತೆಯಲ್ಲಿ ಮುನ್ನುಗ್ಗುವುದು ನಿಜಕ್ಕೂ ದೇಶದ ಆಂತರಿಕ ಭದ್ರತೆ ಮತ್ತು ಕೋಮು ಸೌಹಾರ್ಧತೆಗೆ ಮಾರಕವಾಗಿದೆ. ಮತದಾನ ಎಂಬುದು ರಹಸ್ಯವಾಗಿದುದ್ದು ಅದನ್ನು ಪ್ರತಿಯೊಬ್ಬರು ತಮ್ಮ ವಿವೇಚನೆ ಬಳಸಿ ಮಾಡಬೇಕು ಎಂಬುದಾಗಿ ನಮ್ಮ ಸಂವಿಧಾನ ಹೇಳುತ್ತದಾದರೂ, ಪದೇ ಪದೇ ತಮ್ಮ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಸಂವಿಧಾನದ ಗುರಾಣಿ ಹಿಡಿದು ಸಮರ್ಥನೆ ಮಾಡಿಕೊಳ್ಳುವವರು, ಮತದಾನ ಮಾಡುವಾಗ ವಿವೇಚನಾ ರಹಿತವಾಗಿ ಯಾರದ್ದೋ ಸೈದ್ಧಾಂತಿಕ ವಿರೋಧಾಭಾಸಕ್ಕೆ ಗಾಳವಾಗುತ್ತಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.
1947ರಲ್ಲಿ ಧರ್ಮಧಾರಿತವಾಗಿ ನಮ್ಮ ದೇಶ ಇಬ್ಬಾಗವಾದಾಗ, ಈ ದೇಶದಲ್ಲೇ ಇರುವುದಾಗಿ ಒಪ್ಪಿಕೊಂಡರೂ ಇನ್ನೂ ಈ ದೇಶವನ್ನು ಅಪ್ಪಿಕೊಳ್ಳದೇ, ಧರ್ಮಾಧಾರಿತವಾಗಿ ಈ ದೇಶವನ್ನು ತುಂಡು ತುಂಡುಗಳಾಗಿ ವಿಭಜಿಸುವ ಇಲ್ಲವೇ ಸಾರಾಸಗಟಾಗಿ ಇಡೀ ದೇಶವನ್ನೇ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಮತ್ತು ರಾಜಕೀಯವಾಗಿಯೂ ಪ್ರಭಲರಾಗುವ ಸಲುವಾಗಿ ಭಯೋತ್ಪಾದನೆ, ಲವ್ ಜೀಹಾದ್, ಬಲವಂತದ ಮತಾಂತರ, ಹಲಾಲ್ ಮುಂತಾದ ಹುನ್ನಾರಗಳಲ್ಲಿ ಮುಂದಾಗಿರುವ ಮುಸಲ್ಮಾನರನ್ನು ದೂಷಿಸುವ ಮುನ್ನಾ, ತಮ್ಮ ರಾಜಕೀಯ ತೆವಲಿಗಾಗಿ ಅಂತಹವರನ್ನು ಒಲೈಸಲು ಮುಂದಾಗುವ ನಮ್ಮ ರಾಜಕಾರಣಿಗಳ ಮನಸ್ಥಿತಿ ಮೊದಲು ಬದಲಾಗಬೇಕು. ಹಿಂದೂಗಳಲ್ಲಿ ಒಗ್ಗಟ್ಟಿಲ್ಲದೇ, ಆಂತರಿಕ ಕಿತ್ತಾಟಗಳಿಂದಾಗಿಯೇ ನೂರಾರು ವರ್ಷಗಳ ಕಾಲ ಬ್ರಿಟೀಷರ ದಾಸ್ಯಕ್ಕೆ ಒಳಗಾದರೂ ಇನ್ನೂ ಸಹಾ ಬುದ್ದಿ ಕಲಿಯದೇ ಹೋಗಿರುವುದು ನಿಜಕ್ಕೂ ಆಘಾತದ ಸಂಗತಿಯಾಗಿದ್ದು, ಹಿಂದೂ ಧರ್ಮ ಉಳಿದಲ್ಲಿ ಮಾತ್ರವೇ ಈ ದೇಶ ಉಳಿದೀತು ಎಂಬುದು ಅವರಿಗೆ ಅರ್ಥವಾಗುವಷ್ಟರಲ್ಲಿ, ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲವಾದ್ದರಿಂದ, ಈ ಚುನಾವಣಾ ಫಲಿತಾಂಶದಿಂದಲಾದರೂ ಹಿಂದೂಗಳು ಪಾಠ ಕಲಿತು ಒಗ್ಗಟ್ಟಾಗುತ್ತಾರೆ ಎಂಬ ಆಶಾ ಭಾವನೆಯಿಂದ ಮುನ್ನಡೆಯೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ