ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಏನು ಹೇಳಿದರೂ ಜನಾ ಕೇಳ್ತಾರೆ ಅಥವಾ ಕೇಳಲೇ ಬೇಕು ಎನ್ನುವ ಅಲಿಖಿತ ನಿಯಮವಾಗಿದೆ.   ನದಿ ದಾಟಿದ ಮೇಲೆ ಅಂಬಿಗನ ಹಂಗೇಕೇ? ಎನ್ನುವಂತೆ ಹೇಗೂ ಒಮ್ಮೆ ಜನರಿಂದ ಅಯ್ಕೆ ಆದ ನಂತರ ಮುಂದಿನ ಐದು ವರ್ಷಗಳ ಕಾಲ ಅವರು ಅಡಿದ್ದೇ ಮಾತು, ಆಡಿದ್ದೇ ಆಟ ಎನ್ನುವಂತಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ, ಅದಕ್ಕೆ ತಾಜಾ ಉದಾಹರಣೆಯೇ, ನಾನು ಮಠದ ಹುಡುಗ, ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು ಎಂದು  ರಾಜ್ಯದ ಅಲ್ಪಸಂಖ್ಯಾತ ಮತ್ತು ವಕ್ಷ್ ಖಾತೆಯ ಸಚಿವ ಜಮೀರ್ ಅಹ್ಮದ್ ಖಾನ್  ಮತ್ತೊಬ್ಬ ಸ್ವಘೋಷಿತ ಮಹಾನ್ ಮುಸ್ಲಿಂ ನಾಯಕ ಸಿ.ಎಂ. ಇಬ್ರಾಹಿಂ ತಾನೂ ಸಹಾ ಲಿಂಗಾಯಿತರ ಮಠದಲ್ಲೇ ಬೆಳೆದವನು ಎಂದು ಹೇಳುವ ಮೂಲಕ ಹಿಂದೂಗಳ ಕೆವಿ ಮೇಲೆ ಹೂವು ಇಡುವಂತಹ ಮಾತುಗಳನ್ನು  ಪದೇ ಪದೇ ಆಡುತ್ತಿರುವುದು ಮತ್ತು ಲಕ್ಷಾಂತರ ವರ್ಷದ ಇತಿಹಾಸ ಇರುವ ಈ ಹಿಂದೂಸ್ಥಾನದ ಭೂಮಿ ವಕ್ಫ್ ಸಂಸ್ಥೆಗೆ ಸೇರಿದ್ದು ಎನ್ನುವುದಾಗಿದೆ.

zameer_Kummyಕುಣಿಗಲ್ ಮೂಲದ  National Travels ವ್ಯವಹಾರದ ಜಮೀರ್  SSLC ಓದುವಷ್ಟರಲ್ಲೇ ತಲೆಗೆ ಓದು ಹತ್ತದೇ ಹೋದಾಗ, ತಮ್ಮ ಕುಟುಂಬದ ಟ್ರಾನ್ಸ್ ಪೂರ್ಟ್ ವ್ಯವಹಾರಕ್ಕೆ ಧುಮುಕಿದ ಜಮೀರ್,  ಅದು ಹೇಗೋ ತಮ್ಮ ಕುಲಬಾಂಧವರ ನೆರವಿನಿಂದ ಮುಂಬೈ ಮತ್ತು ದುಬೈ ಸಂಪರ್ಕ ಬೆಳೆಸಿದ ಜಮೀರ್ ನೋಡ ನೋಡುತ್ತಿದ್ದಂತೆಯೇ ಮಿರಮಿರನೇ ಮಿಂಚುವ ಹತ್ತಾರು ಐಶಾರಾಮಿ ಬಸ್ಸುಗಳನ್ನು ಖರೀದಿಸಿ ತಮ್ಮ ನ್ಯಾಷಿನಲ್ ಟ್ರಾವೆಲ್ಸ್ ಅನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ಕಲಾಸೀಪಾಳ್ಯ ಮತ್ತು ಮೆಜೆಸ್ಟಿಕ್ ಟ್ರಾವರರ್ಸ್ ಗಳಲ್ಲಿ ಕೊಂಚ ಭಿನ್ನವಾಗಿಯೇ ಗುರುತಿಸಿಕೊಂಡರು. ಟ್ರಾವೆಲ್ಸ್ ಕಂಪನಿಯವರು ಹೇಳುವ ಪ್ರಕಾರ ಸರಿಯಾದ ಮಾರ್ಗದಲ್ಲಿ ವ್ಯವಹಾರ ನಡೆಸಿ ಇಷ್ಟು ಕಡಿಮೆ ಸಮಯದಲ್ಲಿ ಈ ಪರಿಯಾಗಿ ಬೆಳೆಯುವುದು ಅಸಾಧ್ಯ. ಇವೆಲ್ಲದರ ನಡುವೆ ಜನತಾದಳದ ಕುಮಾರಸ್ವಾಮಿಯ  ಬೇಕೂ ಬೇಡಗಳೆಲ್ಲವನ್ನೂ ತನ್ನ ಮೇಖ್ರಿ ಸರ್ಕಲ್ ಬಳಿ ಇದ್ದ ಗೆಸ್ಟ್ ಹೌಸಿನಲ್ಲಿ  ಪೂರೈಸುವ ಮೂಲಕ  ಅತೀ ವೇಗದಲ್ಲಿಯೇ ಕುಮಾರಸ್ವಾಮಿಯ ಆಪ್ತವಲಯದಲ್ಲಿ ಗುರುತಿಸಿಕೊಂಡ 2005ರಲ್ಲಿ ಚಾಮರಾಜಪೇಟೆಯಲ ಉಪಚುನಾವಣೆಯಲ್ಲಿ  ಜೆಡಿಎಸ್ ಪಕ್ಷದಿಂದ ಆರ್‌.ವಿ. ದೇವರಾಜ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಜಮೀರ್ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಆರಂಭವಾದ ರಿಸಾರ್ಟ್ ರಾಜಕಾರಣಗಳಲ್ಲಿ ಸ್ವತಃ ತಾನೇ ತನ್ನ ಕಂಪನಿಯ ಬಸ್ಸಿನ ಚಾಲಕನಾಗಿ ಶಾಸಕರನ್ನು ರಿಸಾರ್ಟ್ ಗಳಿಗೆ ಕರೆದೊಯ್ಯುವ, ರಾಜಭವನ/ವಿಧಾನ ಸೌಧಕ್ಕೆ ಕರೆತರುವುದನ್ನು ಚೆನ್ನಾಗಿ ನಿಭಾಯಿಸಿದ ಕಾರಣ, ಜೆಡಿಎಸ್- ಬಿಜೆಪಿಯ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಹಜ್ ಮತ್ತು ವಕ್ಫ್ ಸಚಿವರಾಗಿಯೂ ಬಿಡುತ್ತಾರೆ.

siddu_zamirಸಿದ್ದರಾಮಯ್ಯನವರ ಸರ್ಕಾರದ ಸಮಯದಲ್ಲಿ, ಅಚ್ಚರಿ ಎನ್ನುವಂತೆ ಕುಮಾರಸ್ವಾಮಿಯ ಪಟಾಲಂನ ಮಾಗಡಿ ಬಾಲಕೃಷ್ಣ, ಚಲುವರಾಯಸ್ವಾಮಿಯೂ ಸೇರಿದಂತೆ ಇತರ 6 ಶಾಸಕರೊಂದಿಗೆ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್ ಪಕ್ಷದಲ್ಲಿ ಬಂಡಾಯದ ಬಾವುಟವನ್ನು ಹಾರಿಸಿ ಮುಂದೆ ಸಿದ್ದರಾಮಯ್ಯನವರ ಬೇಕು ಬೇಡಗಳನ್ನೂ ಸಮರ್ಥವಾಗಿ ನಿಭಾಯಿಸಿ ಅವರ ಅತ್ಯಾಪ್ತ ವಲಯದಲ್ಲಿ ಒಬ್ಬರಾಗಿದ್ದಲ್ಲದೇ  25 ಮಾರ್ಚ್ 2018 ರಿಂದ ಅಧಿಕೃತವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರಿ, 2022ರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಸುಳ್ಳು ಆರೋಪ ಮಾಡುತ್ತಾ, ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುವ ಮೂಲಕ ಮತ್ತೆ ಅಭೂತಪೂರ್ವವಾಗಿ ಚಾಮರಾಜ ಪೇಟೆಯ ಶಾಸಕರಾಗಿ ಮತ್ತೊಮ್ಮೆ ರಾಜ್ಯದ ಅಲ್ಪಸಂಖ್ಯಾತ ಮತ್ತು ವಕ್ಷ್ ಖಾತೆಯ ಸಚಿವರಾಗಿರುವುದು ಈ ರಾಜ್ಯದ ದುರ್ದೈವವೇ ಸರಿ.

ದೇಶಾದ್ಯಂತ ಲ್ಯಾಂಡ್ ಜಿಹಾದ್ ಮಾದರಿಯಲ್ಲಿ  ಕಂಡ ಕಂಡವರ ಜಮೀನನ್ನು ವಕ್ಫ್ ಹೆಸರಿನಲ್ಲಿ ಅತಿಕ್ರಮಣ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ವಕ್ಫ್ ಮಂಡಲಿಯ  ಈ ಹಿಂದಿನ ಕಾನೂನುಗಳನ್ನು ತಿದ್ದು ಪಡಿ ಮಾಡುವ ಮೂಲಕ ವಕ್ಫ್ ದುರಾಡಳಿತಕ್ಕೆ ಬ್ರೇಕ್ ಹಾಕುವ ಸಲುವಾಗಿ  ಜಗದಂಬಿಕಾ ಪಾಲ್ ನೇತೃತ್ವದಲ್ಲಿ ಜಂಟಿ ಸಂಸತ್ತಿನ ಮಂಡಳಿ ರಚಿಸಿ ವಕ್ಫ್ ಸಾಧಕ ಬಾಧಕಗಳ ಪಟ್ಟಿಯನ್ನು ಮಾಡಿ ಈ ಚಳಿಗಾಲದ ಅಧಿವೇಶನದಲ್ಲಿ ಸೂಕ್ತವಾದ ಕಾನೂನನ್ನು ತರಲು ಸಿದ್ಧವಾಗುವುದಕ್ಕೆ ಮುನ್ನವೇ ಸಿದ್ದರಾಮಯ್ಯನವರ ಮೌಕಿಕ ಅದೇಶದ ರೂಪದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಪ್ರವಾಸ ಮಾಡಿದ ಜವೀರ್  ಕಾನೂನು ಬಾಹಿರವಾಗಿ ವಕ್ಫ್ ಅದಾಲತ್ ನಡೆಸಿ ನೂರಾರು ವರ್ಷಗಳಿಂದಲೂ ವಂಶಪಾರಂಪರ್ಯವಾಗಿ ಅನುಭವಿಸುತ್ತಿದ್ದ  ಲಕ್ಷಾಂತರ ರೈತರ ಕೃಷಿ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನೋಟೀಸ್ ನೀಡಿರುವುದಲ್ಲದೇ, ಅನೇಕ ಕಡೆಯಲ್ಲಿ ರೈತರ ಪಹಣಿಯ ಕಾಲಂ 11ರಲ್ಲಿ ವಕ್ಫ್ ಆಸ್ತಿ  ಎಂದು ನಮೂದಿಸುವ ಮೂಲಕ ಬಲವಂತವಾಗಿ ಹಿಂದೂಗಳ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರ  ವಿರುದ್ಧ ರಾಜ್ಯಾದ್ಯಂತ ಸ್ಪಲ್ಪ ಮಟ್ಟಿಗೆ ಜನಾಕ್ರೋಷ ಎದ್ದಿದೆ.

ಕಾಂಗ್ರೇಸ್ ಮುಸ್ಲಿಂ ಒಲೈಕೆ ಇಷ್ಟಕ್ಕೇ ನಿಲ್ಲದೇ,  ಹಿಂದೂಸ್ಥಾನದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೇವೆ ಎಂಬುದನ್ನೇ ಮರೆತು, ಸಂವಿಧಾನದ ವಿರುದ್ಧವಾಗಿ ಮುಸಲ್ಮಾನರಿಗೆ ಧರ್ಮಾಧಾರಿತವಾಗಿ ಮೀಸಲಾತಿ, ಸರ್ಕಾರಿ ಟೆಂಡರ್ ಗಳಲ್ಲಿಯೂ 4% ಮೀಸಲಾತಿಯನ್ನು ಸದ್ದಿಲ್ಲದೇ ಕೊಡಲು ಮುಂದಾಗಿದ್ದಲ್ಲದೇ, 1995 ರಲ್ಲಿ ಕೇಂದ್ರದಲ್ಲಿ ಕಾಂಗ್ರೇಸ್ಸಿನ ನರಸಿಂಹ ರಾವ್ ಸರ್ಕಾರ ಮುಸ್ಲಿಮ್ಮರ ವಕ್ಫ್ ಮಂಡಲಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನೂ ನಾಚಿಸುವಂತೆ ಮತ್ತೊಂದು ಹೆಜ್ಜೆ ಮುಂದುವರೆದು, ಮುಸ್ಲಿಮ್ಮರ ಮದುವೆಯ ನೋಂದಾವಣಿಯನ್ನು ವಕ್ಫ್ ಮಂಡಳಿಗೆ ನೀಡಿರುವ ಆಘಾತಕಾರಿ ವಿಷಯವೂ ಹೊರ ಬಂದಿದೆ.

zameerಇಷ್ಟೆಲ್ಲ ಅಪಸವ್ಯಗಳ ಮಧ್ಯೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯ ಪರವಾಗಿ ಮುಸಲ್ಮಾನರ ಮತಗಳನ್ನು ಕ್ರೋಢಿಕರಿಸುವ ಸಲುವಾಗಿ ಎಂದಿನಂತೆ ಹಲ್ಲು ಕಚ್ಚಿ ಮಾಡಿದ ಭಾಷಣದಲ್ಲಿ ಜಮೀರ್ ತನ್ನ ಹರುಕು ಬಾಯಿಯಿಂದ ಕುಮಾರ್ ಸ್ವಾಮಿಯ ಕಪ್ಪು ಬಣ್ಣದ ಬಗ್ಗೆ  ಆಡಿಕೊಂಡಿದ್ದಲ್ಲದೇ, ಏ ಕುಮಾರಸ್ವಾಮೀ ನಿನ್ನ ಮತ್ತು ನಿನ್ನ ಕುಟುಂಬದ  ಬೆಲೆ ಎಷ್ಟು ಎಂದು ಹೇಳು, ಮುಸಲ್ಮಾನರಿಂದ ಒಂದು ರೂಪಾಯಿ ಎರಡು ರೂಪಾಯಿ ಚಂದಾ ಎತ್ತಿ ಖರೀಧಿಸುತ್ತೇವೆ ಎಂಬ ಉದ್ಧಟನದ ಮಾತುಗಳನ್ನು ಆಡುವ ಮೂಲಕ ಮುಸಲ್ಮಾನರನ್ನು ಒಗ್ಗೂಡಿಸಿದರೆ, ನಿಶ್ಚಿತವಾಗಿಯೂ ರಾಜ್ಯದ ಒಕ್ಕಲಿಗರ ಭಾವನೆಗಳಿಗೆ ಧಕ್ಕೆ ತಂದಿದ್ದು, ಅದರ ಪರಿಣಾಮ ಉಪಚುನಾವಣೆಯಲ್ಲಿ ಬೀರಿದೆ ಎಂದು  ಚನ್ನಪಟ್ಟಣದ ಕಾಂಗ್ರೇಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ ಸ್ವತಃ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಎಂದಿನಂತೆ ಹೇಳುವುದಲ್ಲವನ್ನೂ ಹೇಳಿ, ತನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ಅದಕ್ಕೆ ಕ್ಷಮೆ ಕೇಳುತ್ತೇನೆ ಎನ್ನುವ ಸವಕಲು ಮಾತುಗಳನ್ನೇ ಆಡಿರುವ ಜಮೀರ್, ಅದಕ್ಕಿಂತಲೂ ಮತ್ತೊಂದು ಹೆಜ್ಜೆ ಮುಂದು ಹೋಗಿ, ಮಂಗಳೂರಿನ ಸಭೆಯೊಂದರಲ್ಲಿ ನಾನು ಮಠದ ಹುಡುಗ. ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳೇ ಕಾರಣ ಎಂದು ತನ್ನ ರಾಜಕೀಯ ತೆವಲಿಗಾಗಿ ಎಂದೋ ಅಗಲಿರುವ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳನ್ನು ಎಳೆ ತಂದಿರುವುದರ ವಿರುದ್ದ ಒಕ್ಕಲಿಗರಾಗಲೀ ರಾಜ್ಯದ ಜನತೆಯಾಗಲೀ ಅಕ್ಷೇಪ ವ್ಯಕ್ತ ಪಡಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

WhatsApp Image 2024-11-18 at 02.00.23ಇನ್ನು ಮೂರು ಕೊಟ್ಟರೆ ಸಿದ್ದರಾಮಯ್ಯನ ಕಡೆ, ಆರು ಕೊಟ್ಟರೆ ದೇವೇಗೌಡರ ಪರವಾಗಿರುವ ಜನರಿಂದ ನೇರವಾಗಿ ಆಯ್ಕೆಯಾಗುವುದು ಬಿಡಿ, ಒಂದು ಗುಜರಿ ಸೈಕಲ್ ಶಾಪ್ ಕೂಡಾ ನಡೆಸಲೂ ಯೋಗ್ಯತೆ ಇಲ್ಲದ,  ಹೊಟ್ಟೆಗೆ ಹಿಟ್ಟಿಲ್ಲದೇ ಕೇರಳದ ಕಡೆಯಿಂದ ಕರ್ನಾಟಕಕ್ಕೆ ವಲಸೆ ಬಂದಿರುವ  ಮುಸ್ಲಿಂ ಮತಾಂಧ ನಾಯಕ ಸಿ.ಎಂ ಇಬ್ರಾಹಿಂ  ತನ್ನ ರಾಜಕೀಯ ತೆವಲಿಗಾಗಿ ಕೆಲವೊಂದು ವಚನಗಳನ್ನು ಮತ್ತು ಸಂಸ್ಕೃತ ಶ್ಕೋಕಗಳನ್ನು ಬಾಯಿ ಪಾಠ ಮಾಡಿ, ಹೋದ ಬಂದ ಕಡೆಯಲೆಲ್ಲಾ ಅದೇ ವಚನಗಳು ಮತ್ತು ಶ್ಲೋಕಗಳನ್ನು ಹೇಳುತ್ತಾ ತಾನೊಬ್ಬ ಜಾತ್ಯಾತೀತ ಎಂದು ಬಿಂಬಿಸಿಕೊಳ್ಳುವ ಇಬ್ರಾಹಿಂ, ಅವರ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಮಂತ್ರಾಲಯದ ಜಾಗ ನವಾಬರು ಕೊಟ್ಟಿದ್ದು  ಇತ್ತೀಚಿನ ಹೇಳಿಕೆಗ ಸಹಾ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ. 

ibrahimಅಚಾನಕ್ಕಾಗಿ ಅದೃಷ್ಟದಿಂದಾಗಿ ದೇವೇಗೌಡರು ದೇಶದ ಪ್ರಧಾನಿಗಳಾದಾಗ,  ಅವರಿಗೆ  ಹಿಂದಿ ಬಾರದೇ ಇದ್ದದ್ದರ ಫಲವಾಗಿಯೇ ಅವರ ಬಲಗೈ ಭಂಟನಾಗಿ ಕೇಂದ್ರದಲ್ಲಿ ನಾಗರೀಕ ವಿಮಾನ ಖಾತೆಯ ಸಚಿವನಾಗಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಆರಂಭವಾಗ ಬೇಕಿದ್ದ  ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು  ಸದ್ದಿಲ್ಲದೇ ಕೇರಳಕ್ಕೆ ಸ್ಥಳಾಂತರಿಸಲು ಹುನ್ನಾರ ಹಾಕಿದ್ದಂತಹ ರಾಜ್ಯ ದ್ರೋಹಿ, ಅತ್ತ ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲ್ಪಟ್ಟು, ಇತ್ತ ಕಾಂಗ್ರೇಸ್ಸಿಗೂ ಬೇಡವಾಗಿರುವ ಮತ್ತು  ಈ ಮೊದಲೇ ತಿಳಿಸಿದಂತೆ, ಸ್ವಂತ ಬಲದಿಂದ ರಾಜಕೀಯ ಮಾಡಲಾಗದ ಇದೇ ಸಿ.ಎಂ. ಇಬ್ರಾಹಿಂ, ಮೂಲಕ ತಾನಿನ್ನೂ ಬದುಕಿದ್ದೇನೆ  ಎಂಬುದನ್ನು ತೋರಿಸಿಕೊಳ್ಳುವ ಸಲುವಾಗಿ  ಮಂತ್ರಾಲಯದ  ಮಠದ ಜಾಗದ ಕುರಿತಾದ ಹೇಳಿಕೆಯ ವಿರುದ್ಧ ಹಿಂದುಗಳು ಬಿಡಿ ಸ್ವತಃ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದವರೇ ಖಂಡಿಸದೇ  ಇರುವುದು  ಆಘಾತಕಾರಿಯಾದ ವಿಷಯವಾಗಿದೆ.

640px-Sindh_700ad12-13ನೇ ಶತಮಾನಕ್ಕೂ ಮುಂಚೆ ಈ ದೇಶದಲ್ಲಿ ಮುಸಲ್ಮಾನರೇ ಇರಲಿಲ್ಲ ಎಂಬುದು ನಿರ್ವಿವಾದವಾಗಿದ್ದು, ನಂತರದ ದಿನಗಳಲ್ಲಿ ಬಲವಂತವಾಗಿ ನಮ್ಮ ದೇಶದ ಮೇಲೆ ಧಾಳಿ ನಡೆಸಿ, ಇಲ್ಲಿನ ದೇವಾಲಯಗಳನ್ನು ಕೆಡವಿ  ಅಲ್ಲಿದ್ದ ಆಸ್ತಿಗಳನ್ನೆಲ್ಲಾ ಲೂಟಿ ಮಾಡಿದ್ದಲ್ಲದೇ,  ಅದನ್ನು ತಡೆದವರ ಮೇಲೆ ದೌರ್ಜನ್ಯದಿಂದಾಗಿಯೋ, ಆಮಿಷ ಒಡ್ಡಿಯೋ  ಇಲ್ಲಿನ ಹಿಂದೂಗಳನ್ನೇ ಮತಾಂತರ ಮಾಡುವ ಮೂಲಕ ಈ ದೇಶದಲ್ಲಿ ಮುಸ್ಲಿಂ ಸಂತತಿಗೆ ಕಾರಣೀಭೂತವಾಗಿರುವುದು ಈಗ ಇತಿಹಾಸ. ಇಷ್ಟೆಲ್ಲಾ ಇತಿಹಾಸಗಳು ಕಣ್ಮುಂದೆ ಇದ್ದರೂ, ಯಾವುದೇ ಅಧಿಕೃತವಾದ ಧಾಖಲೆಗಳು ಇಲ್ಲದೇ ಹೋದರೂ, ಲಕ್ಷಾಂತರ ವರ್ಷಗಳ ಇತಿಹಾಸವಿರುವ ಸನಾತನ ಧರ್ಮದ ನಮ್ಮ ದೇಶದ ಅಸ್ತಿಗಳೆಲ್ಲವೂ ಮುಸಲ್ಮಾನರ ವಕ್ಫ್ ಆಸ್ತಿ ಎಂದು ಕಬಳಿಸಲು ಮುಂದಾಗಿರುವವರ ವಿರುದ್ಧ  ಹಿಂದೂಗಳೇ ಜಾಗೃತರಾಗದೇ ಹೋಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

nalandaದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ನಳಂದ ವಿಶ್ವವಿದ್ಯಾಲಯದ ಮೇಲೆ ಧಾಳಿ ಮಾಡಿ ಹಾಳುಗೆಡವಿದ್ದು ತುರ್ಕಿಯ ಇಸ್ಲಾಮಿಕ್ ಮತಾಂಧ ಭಕ್ತಿಯಾರ್ ಖಿಲ್ಜಿಯ ಕೆಲವೇ ಕೆಲವು ಬೆರಳೆಣಿಕೆಯ ಸೈನಿಕರು. ಆ ಮತಾಂಧ ಸೈನಿಕರು ಅಲ್ಲಿ ವಿದ್ಯಾರ್ಥಿಗಳ ಮೇಲೆ ಧಾಳಿ ನಡೆಸುತ್ತಿದ್ದಾಗ ಧ್ಯಾನದಲ್ಲಿ ಮಗ್ನರಾಗಿದ್ದ ಅನೇಕರು  ಅರೇ ಧಾಳಿ ಆಗುತ್ತಿದ್ದದ್ದು  ಬೇರೆಯವರ ಮೇಲಷ್ಟೇ, ನನ್ನ ಮೇಲಲ್ಲಾ ಎನ್ನುವ ಉದಾಸೀನತೆಯೇ ನಳಂದ  ವಿಶ್ವವಿದ್ಯಾಲಯ ಸುಮಾರು ಆರು ತಿಂಗಳು ಕಾಲ ಉರಿದು ಹೋಗಲು ಕಾರಣವಾಯಿತು.

WhatsApp Image 2024-11-18 at 04.44.44ಬ್ರಿಟೀಷ್ ಲೆಫ್ಟಿನೆಂಟ್-ಕರ್ನಲ್ ಕ್ಲೈವ್ ನವಾಬ್ ಸಿರಾಜ್-ಉದ್-ದೌಲಾ ನನ್ನು  ಮೋಸದಿಂದ ಸೋಲಿಸಿ 2 ಜನವರಿ 1757 ರಂದು, ಕಲ್ಕತ್ತಾವನ್ನು ವಶಪಡಿಸಿಕೊಂಡು, ಕಲ್ಕತ್ತಾದಲ್ಲಿ ತನ್ನ ವಿಜಯಯಾತ್ರೆಯನ್ನು ನಡೆಸಿದಾಗ ಅವನ ಬಳಿ ಇದ್ದ ಸೈನ್ಯದ ಸಂಖ್ಯೆ ಕೇವಲ 300 ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.  ಇತಿಹಾಸಕಾರರು ಹೇಳಿರುವಂತೆ  ಅಂದು ಕ್ಲೈವ್ ತನ್ನ ಸೈನ್ಯದೊಡನೆ ಕಲ್ಕಾತ್ತಾದ ನಗರದಲ್ಲಿ ವಿಜಯಯಾತ್ರೆಯನ್ನು ನಡೆಸುವಾಗ, ಅಲ್ಲಿನ ಹಿಂದುಗಳು ಒಗ್ಗಟ್ಟಾಗಿ ಕೈಗೆ ಸಿಕ್ಕ ಕಲ್ಲುಗಳನ್ನು ಎಸೆದಿದ್ದರೂ, ಬ್ರಿಟೀಷ್ ಸೈನ್ಯ ದಿಕ್ಕಾಪಾಲಾಗಿ ಓಡಿ ಹೋಗಿರುತ್ತಿತ್ತು. ಆದರೆ, ಅಂದು ಬಹುತೇಕ ಕಲ್ಕತ್ತಾದ ಜನರು ಇದು ತಮಗೆ ಸಂಬಂಧ ಪಟ್ಟಿಲ್ಲಾ ಎಂದು ತಮ್ಮ ತಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿದ್ದದ್ದನ್ನು ಕಂಡು  ಸ್ವತಃ ಕ್ಲೈವ್ ಅಶ್ಚರ್ಯ ಪಟ್ಟಿದ್ದನಂತೆ.

ಈ ಎಲ್ಲಾ ಇತಿಹಾಸಗಳು ಕಣ್ಣ ಮುಂದೆಯೇ ಇದ್ದರೂ, ತಮ್ಮ ರಾಜಕೀಯದ ತೆವಲಿಗಾಗಿ ಕೊಡುವ ಕೆಲವರು ಜೊಡುವ  ಬಿಟ್ಟಿ ಭಾಗ್ಯಗಳ ಆಸೆಗಳಿಗೆ ಮೈಮರೆತಲ್ಲಿ ಲಕ್ಷಾಂತರ ವರ್ಷ ಇತಿಹಾಸ ಇರುವ, ಒಂದು ಕಾಲದಲ್ಲಿ ಇಡೀ ವಿಶ್ವಕ್ಕೇ ಗುರುವಾಗಿದ್ದ ಈ ಹಿಂದೂಸ್ಥಾನ ಮತ್ತು ಸನಾತನ ಸಂಸ್ಕೃತಿಯೂ ಸದ್ದಿಲ್ಲದೇ ಮತಾಂಧರ ಕೈ ವಶವಾಗಿ ಸಹಾ ಗ್ರೀಕ್ ಸಂಸ್ಕೃತಿಯಂತೆ ನಮ್ಮ ಕಣ್ಣ ಮುಂದೇಯೇ ಅವಸಾನವಾಗುವುದರಲ್ಲಿ ಸಂದೇಹವೇ ಇಲ್ಲಾ. ಇದು ಯಾರ ವಿರುದ್ಧದ ಪಿತೂರಿಯಾಗಿರದೇ, ಕೇವಲ ಹಿಂದೂಗಳನ್ನು ಎಚ್ಚರಿಸುವ  ಕರೆ ಗಂಟೆಯಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಛಲವಿದೆ. ಹಿಂದೂ ಧರ್ಮ ಉಳಿದಲ್ಲಿ ಮಾತ್ರವೇ, ಈ ದೇಶ ಉಳಿದೀತು  ಎಂಬುದಷ್ಟೇ ನಿತ್ಯ ಸತ್ಯ ಎನ್ನುವುದನ್ನು ತಿಳಿಯ ಪಡಿಸುವ ಆಶಯವಾಗಿದೆ ಎನ್ನುವುದನ್ನು  ಒಪ್ಪುವುದಾದರೆ, ಈ ಸೂಕ್ಷ್ಮ ವಿಷಯವನ್ನು ಕೋಟ್ಯಾಂತರ ಹಿಂದೂಗಳಿಗೆ ತಲುಪಿಸುವ ಜವಾಬ್ಧಾರಿ ಎಲ್ಲರ ಮೇಲಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a comment