ನಮ್ಮ ದೇಶದಲ್ಲಿ ಎರಡು ಸುಳ್ಳುಗಳು ಬಹಳ ಪ್ರಚಲಿತದಲ್ಲಿದೆ. ಒಂದು ದೇಶ ಹಾಳಾಗಿದ್ದೇ ಬ್ರಾಹ್ಮಣರಿಂದ ಎನ್ನುವುದಾದರೇ, ಮತ್ತೊಂದು ಮುಸಲ್ಮಾನರು ಈ ದೇಶದ ಅಲ್ಪಸಂಖ್ಯಾತರರು. ನೈಜವಾದ ಇತಿಹಾಸದ ಅರಿವಿರುವವರಿಗೆ ಇವರೆಡೂ ತದ್ವಿರುದ್ಧ ಎಂಬುದರ ಅರಿವಾಗುತ್ತದೆ. 10-12ನೇ ಶತಮಾನದ ವರೆಗೂ ನಿರಂತರವಾಗಿ ಅಖಂಡ ಭಾರತದ ಮೇಲೆ ಧಾಳಿನಡೆಸಿದ ಮುಸಲ್ಮಾನರು ಅಂತಿಮವಾಗಿ 13ನೇ ಶತಮಾನದ ಹೊತ್ತಿಗೆ ಭಾರತದ ಬಹುತೇಕ ಭಾಗಗಳನ್ನು ಅಕ್ರಮಣ ಮಾಡಿಕೊಂಡ ಪರಿಣಾಮವಾಗಿಯೇ ಭಾರತ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಗಳು ಹಾಳಾಗಿದ್ದಲ್ಲದೇ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿ ಹೋದರು.
ಇನ್ನು ಎಲ್ಲರಿಗೂ ತಿಳಿದಿರುವಂತೆ ಚ್ಬ್ರಾಹ್ಮಣ ತಂದೆ ತಾಯಿಯರ ಹೊಟ್ಟೆಯಲ್ಲಿ ಹುಟ್ಟಿದಾಕ್ಷಣ ಆತ ಬ್ರಾಹ್ಮಣ ಎನಿಸಿಕೊಳ್ಳುವುದಿಲ್ಲ. ಆ ಬಾಲಕನಿಗೆ ಸೂಕ್ತ ಸಮಯದಲ್ಲಿ ಬ್ರಹ್ಮೋಪದೇಶ ನಡೆದು ಯಜ್ಞೋಪವೀತ ಧರಿಸಿ ತಂದೆಯಿಂದ ಗಾಯತ್ರಿ ಮಂತ್ರ ಉಪದೇಶವಾದ ನಂತರ ಪ್ರತಿನಿತ್ಯವೂ ತಪ್ಪದೇ ಗಾಯತ್ರೀ ಅನುಷ್ಠಾನ ಮಾಡಿದಾಗಲೇ ಆತ ನಿಜವಾದ ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ. ಹಾಗಾಗಿಯೇ ಬ್ರಾಹ್ಮಣರನ್ನು ದ್ವಿಜ ಎನ್ನುತ್ತಾರೆ. ಹಾಗೆ ಒಬ್ಬ ಬ್ರಾಹ್ಮಣನ ಧರಿಸುವ ಜನಿವಾರದ ತೂಕ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಪ್ರಸಂಗವೇ ತಕ್ಕ ಉದಾಹರಣೆ ಆಗಬಲ್ಲದು. ಅದೊಂದು ರಾಜ್ಯದಲ್ಲಿದ್ದ ಬ್ರಾಹ್ಮಣ ಕವಿಯೊಬ್ಬ ಶ್ರೇಷ್ಠವಾದ ಕಾವ್ಯವನ್ನು ರಚಿಸಿ ಅದನ್ನು ತನ್ನ ರಾಜನಿಗೆ ಸಮರ್ಪಣೆ ಮಾಡಿದ. ದುರಾದೃಷ್ಟವಷಾತ್ ಆ ರಾಜನಿಗೆ ಕಾವ್ಯ, ಕವಿತೆ, ಕಥೆಗಳ ಬಗ್ಗೆ ನಿರಾಸಕ್ತಿಯಿದ್ದ ಹೊಂದಿದ್ದ ಕಾರಣ ಆ ಕವಿಯನ್ನು ವಿನಾಕಾರಣ ಅವಹೇಳನ ಮಾಡಿದ್ದಲ್ಲದೇ, ಮಾತಿನ ಭರದಲ್ಲಿ, ಈ ನಿನ್ನ ಕೃತಿಗೆ ನಿನ್ನೆತ್ತರದಷ್ಟು ಚಿನ್ನದ ನಾಣ್ಯ ಕೊಡಬೇಕೇ? ಎಂದು ವ್ಯಂಗ್ಯವಾಡಿದರೂ ಕೋಪಗೊಳ್ಳದ ಆ ಬ್ರಾಹ್ಮಣ ಕವಿ ಅಷ್ಟೆಲ್ಲಾ ಬೇಡಾ ಪ್ರಭು. ಕೆಲ ಸಮಯದ ಹಿಂದಷ್ಟೇ ಬದಲಾಯಿಸಿದ ನನ್ನ ಹಳೆಯ ಜನಿವಾರದ ತೂಕದಷ್ಟು ಬಂಗಾರವನ್ನು ಕೊಟ್ಟರೆ ಸಾಕು ಎಂದಾಗ, ಅರೇ! ಕೇವಲ ಒಂದು ಜನಿವಾರದ ತೂಕವೇ? ಎಂದು ತುಚ್ಛವಾಗಿ ನೋಡಿದ ಆ ರಾಜ, ತನ್ನ ಮಂತ್ರಿಯನ್ನು ಕರೆದು, ಈ ಬಡ ಬ್ರಾಹ್ಮಣನಿಗೆ ಒಂದೆರಡು ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿ ಎಂದು ಆಜ್ಞಾಪಿಸುತ್ತಾರೆ.
ರಾಜನ ಆಜ್ಞೆಯನ್ನು ಕೇಳಿದ ಆ ಕವಿಗಳು ಅರೇ ಪ್ರಭೂ ನನಗೆ ಆಷ್ಟೆಲ್ಲಾ ಬೇಡ, ಕೇವಲ ನನ್ನ ಯಜ್ಞೋಪವೀತ ತೂಗುವಷ್ಟು ಕೊಟ್ಟರೆ ಸಾಕು ಎಂದು ಮತ್ತೊಮ್ಮೆ ಕೇಳಿಕೊಂಡಾಗ, ತುಸು ಕೋಪಗೊಂಡ ರಾಜ, ಸರಿ ಸರಿ ನಿನ್ನಾಸೆಯಯಂತೆಯೇ ನಡೆಯಲಿ ಎಂದು ತಕ್ಕಡಿಯೊಂದನ್ನು ತರಿಸಿ ಅದರ ಒಂದು ತಟ್ಟೆಯಲ್ಲಿ ಆ ಬ್ರಾಹ್ಮಣನ ಹಳೇ ಜನಿವಾರವನ್ನಿಟ್ಟು ಮತ್ತೊಂದು ತಟ್ಟೆಯಲ್ಲಿ ಎರಡು ಬಂಗಾರದ ನಾಣ್ಯವನ್ನಿಟ್ಟರೂ, ತಕ್ಕಡಿ ಒಂದಿಷ್ಟೂ ಅಲುಗದೇ ಹೋದದ್ದನ್ನು ಗಮನಿಸಿ ಆಶ್ಚರ್ಯ ಚಕಿತರಾಗಿ ಒಂದೊಂದೇ ನಾಣ್ಯಗಳನ್ನು ಹಾಕುತ್ತಲೇ ಹೋಗಿ ಕಡೆಗೆ ತನ್ನ ಖಜಾನೆಯಲ್ಲಿದ್ದ ಅಷ್ಟೂ ನಾಣ್ಯಗಳನ್ನು ಹಾಕಿದರೂ ಸಹ ತಕ್ಕಡಿ ಅಲಗಾಡದೇ ಹೋದಾಗ, ತನ್ನ ರಾಜ್ಯದ ಸಂಪತ್ತನ್ನೆಲ್ಲ ತಂದು ಸುರಿದರೂ ಆ ತಕ್ಕಡಿ ಸರಿದೂಗದೇ ಹೋದಾಗ ದಿಗ್ಭ್ರಮೆಗೊಳಗಾಗುತ್ತಾನೆ. ಆಗ ಆ ಬ್ರಾಹ್ಮಣ ಕವಿಗಳು ಬಹಳ ಶಾಂತಚಿತ್ತದಿಂದ ಹೇ ರಾಜಾ, ಪ್ರತೀ ದಿನವೂ ಇದೇ ಜನಿವಾರದ ಬ್ರಹ್ಮ ಗಂಟುಗಳನ್ನು ಹಿಡಿದು ಗಾಯತ್ರಿ ಮಂತ್ರ ಜಪಿಸಿರುವ ಕಾರಣ ಅದರ ತೂಕಕ್ಕೆ ಬೆಲೆ ಕಟ್ಟಲಾಗದು. ಹಾಗಾಗಿ ಎಂದಿಗೂ ಬ್ರಾಹ್ಮಣರ ಜುಟ್ಟು ಮತ್ತು ಜನಿವಾರವನ್ನು ತಿರಸ್ಕಾರ ಭಾವದಿಂದ ನೋಡಬೇಡಿ. ಬ್ರಾಹ್ಮಣರ ಬಳಿ ಆರ್ಥಿಕ ಸಂಪತ್ತಿಲ್ಲದೇ ಬಡವರಾಗಿರ ಬಹುದು. ಆದರೇ ತಪಃ ಶಕ್ತಿಯಿಂದ ನಾವೆಂದೂ ಬಡವರಲ್ಲ. ಬದಲಾಗಿ ನಾವು ಬೌದ್ಧಿಕವಾಗಿ ಶ್ರೀಮಂತರು. ಹಾಗಾಗಿ ನಿನ್ನ ಒಂದು ಬಿಡಿಕಾಸು ನನಗೆ ಬೇಕಿಲ್ಲ ಎಂದು ಹೇಳುತ್ತಾ ಸ್ವಾಭಿಮಾನಿಯಾಗಿ ಆಲ್ಲಿಂದ ಹೊರಟು ಹೋಗುತ್ತಾರೆ.
ಇಡೀ ದೇಶದ ಅಭಿವೃದ್ಧಿಗೆ ಬ್ರಾಹ್ಮಣರು ಅವಿಚ್ಛಿನ್ನ ಕೊಡುಗೆಯನ್ನು ನೀಡಿದ್ದರೂ, ಮುಸಲ್ಮಾನರ ನಿರಂತರ ಆಕ್ರಮಣ ಮತ್ತು ಒಡೆದು ಆಳುವ ಬ್ರಿಟೀಷರ ಕುಟಿಲತೆಯಿಂದಾಗಿ, ಬ್ರಾಹ್ಮಣರಿಂದಾಗಿ ಭಾರತ ಹಾಳಾಯಿತು ಎಂಬ ಕಾಗಕ್ಕಾ ಗುಬ್ಬಕ್ಕ ಕಥೆಯನ್ನು ಹರಿಬಿಟ್ಟ ನಂತವಂತೂ, ಈ ದೇಶದಲ್ಲಿ ಬ್ರಾಹ್ಮಣರನ್ನು ಹೀನಾಮಾನವಾಗಿ ಬೈಯ್ದರೇ ಸಾಕು, ದಿಢೀರ್ ಎಂದು ಪ್ರ(ಕು)ಖ್ಯಾತಿ ಆಗುವಂತಹ ಕೆಟ್ಟ ಸಂಪ್ರದಾಯವೊಂದು ಹುಟ್ಟುಕೊಂಡಿದ್ದು ಅದಕ್ಕೆ ಪೂರಕವೆಂಬಂತೆ ಜಾತ್ಯಾತೀತರು ಎಂಬ ಸೋಗಲಾಡಿಗಳಿಗೆ ಪ್ರತಿನಿತ್ಯವೂ ಬ್ರಾಹ್ಮಣರನ್ನು ಒಂದಲ್ಲಾ ಒಂದು ರೀತಿಯಲ್ಲಿ ಅವಹೇಳನ ಮಾಡದೇ ಹೋದಲ್ಲಿ ಉಂಡದ್ದು ಅರಗದಂತಾಗಿರುವುದು ವಿಷಾಧನೀಯವಾಗಿದೆ.
ಆಫ್ಫಾನಿಸ್ಥಾನದ ಮೂಲಕ ಕಾಶ್ಮೀರವನ್ನು ಪ್ರವೇಶಿಸಿದ ಅರಬ್ ಮೂಲದ ಮುಸ್ಲಿಂ ಮೂಲಭೂತವಾದಿಗಳು ಅರ್ಥಾತ್ ಮತಾಂಧರುಗಳು ಕಾಶ್ಮೀರದಲ್ಲಿದ್ದ ಹಿಂದೂಗಳು ಅದರಲ್ಲೂ ಪಂಡಿತರ ಮೇಲೆ ಸತತವಾಗಿ ಧಾಳಿ ನಡೆಸಿ ಕಾಶ್ಮೀರವನ್ನು ತಮ್ಮ ಕೈವಶ ಮಾಡಿಕೊಂಡಿದ್ದಲ್ಲದೇ, ಇಂದಿಗೂ ಕಾಶ್ಮೀರದ ಸಮಸ್ಯೆ ಕಗ್ಗಂಟಾಗಿಯೇ ಉಳಿಸಿರುವುದು ವಿಪರ್ಯಾಸವಾಗಿದೆ. ಮತಾಂಧ ನಿರಂಕುಶಾಧಿಕಾರಿ ಮತ್ತು ಕ್ರೂರತೆಗೆ ಹೆಸರಾಗಿದ್ದ ಸುಲ್ತಾನ್ ಸಿಕಂದರ್ (1389- 1413) ಕಾಲದಲ್ಲಿ ಕಾಶ್ಮೀರದ ಕಣಿವೆಯ ಪಂಡಿತರು ಮತ್ತು ಹಿಂದೂ ದೇವಾಲಯಗಳ ಮೇಲೆ ಧಾಳಿ ನಡಿಸಿ, ಹಾಳುಗೆಡವಿದ್ದಲ್ಲದೇ, ಕಾಶ್ಮೀರೀ ಪಂಡಿತರನ್ನು ಒಂದೆಡೆಗೆ ಸೇರಿಸಿ ಅವರಿಗೆ 3 ಆಯ್ಕೆಗಳನ್ನು ನೀಡಿದರು.
- ಪ್ರಾಣ ರಕ್ಷಣೆಗಾಗಿ ಕಾಶ್ಮೀರದ ಕಣಿವಿಯಿಂದ ಸ್ವಯಂ ಗಡಿ ಪಾರಾಗುವುದು
- ತಾವು ಧರಿಸಿದ್ದ ಜನಿವಾರ ಕಿತ್ತು ಹಾಕಿ ಇಸ್ಲಾಂಗೆ ಮತಾಂತರ ಹೊಂದುವುದು
- ಇಸ್ಲಾಮಿಗೆ ಮತಾಂತರವಾಗದವರು ಮುಸ್ಲಿಮ್ಮರ ಮಾರಣ ಹೋಮಕ್ಕೆ ಬಲಿಯಾಗುವುದು.
ತಮ್ಮ ಆತ್ಮ ರಕ್ಷಣೆಗಾಗಿ ಕೆಲವೇ ಕೆಲವು ಕಾಶ್ಮೀರಿಗಳು ಕಣಿವೆಯನ್ನು ಬಿಟ್ಟು ಇತರೇ ಪ್ರದೇಶಗಳತ್ತ ವಲಸೆ ಹೋದರೆ, ಹೆಚ್ಚಿನವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ವಿರೋಧ ವ್ಯಕ್ತಪಡಿಸಿದಾಗ ಅವರನ್ನು ಬರ್ಬರವಾಗಿ ಹತ್ಯೆಮಾಡಲಾಯಿತು. ಹಾಗೆ ಹತರಾದ ಕಾಶ್ಮೀರೀ ಪಂಡಿತರ ಜನಿವಾರಗಳ ತೂಕವೇ ಸುಮಾರು ಏಳು ಮಾಂಡ್ಗಳು (ಸುಮಾರು 900 ಪೌಂಡ್) ತೂಕವಿತ್ತಂತೆ. ಹೀಗೆ ಲಕ್ಷಾಂತರ ಕಾಶ್ಮೀರೀ ಪಂಡಿತರನ್ನು ಕೊಂದು ಹಾಕಿದ ಶ್ರೀನಗರದ ನಗರದ ರೈನವರಿಯ ಸುತ್ತಮುತ್ತಲಿನ ಪ್ರದೇಶವನ್ನು ಅಂದಿನಿಂದ ಇಂದಿನವರೆಗೂ ಬಟ್ಟಾ ಮಜಾರ್ (ಭಟ್ಟರ ಸಮಾಧಿ ಪ್ರಾಂಗಣ) ಎಂದು ಕರೆಯಲಾಗುತ್ತದೆ.
ಅದೇ ರೀತಿಯಲ್ಲೇ ತಮಿಳು ನಾಡಿನಲ್ಲಿಯೂ ಕೆಲವು ಹಿಂದೂ ವಿರೋಧಿ ವಿಛಿದ್ರಕಾರಿ ವ್ಯಕ್ತಿಗಳು ಸತತವಾಗಿ ಬ್ರಾಹ್ಮಣರ ಜುಟ್ಟು ಮತ್ತು ಜನಿವಾರಕ್ಕೆ ಕೈಹಾಕಿದ್ದನ್ನು ಕೇಳಿದ್ದೇವೆ, ಕುವೆಂಪು ಅವರೇ ಹೇಳಿದಹಾಗೆ ಕರ್ನಾಟಕವೆಂದರೆ, ಸರ್ವಜನಾಂಗದ ಶಾಂತಿಯ ತೋಟ ಎಂದೇ ನಂಬಿದ್ದ ನಮಗೆ ನೆನ್ನೆಯ ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ.
ತಮ್ಮ ಅಧಿಕಾರದ ತೆವಲಿಗಾಗಿ ಮತ್ತು ದೇಶ ವಿರೋಧಿ ಮನಸ್ಥಿತಿಯ ರಾಹುಲ್ ಗಾಂಧಿಯನ್ನು ಮೆಚ್ಚಿಸುವ ಸಲುವಾಗಿ ಏಸಿ ಕಛೇರಿಗಳಲ್ಲೇ ಕುಳಿತು ನೂರಾರು ಕೋಟಿ ಖರ್ಚು ಮಾಡಿ ಜಾತಿ ಸಮೀಕ್ಷೆ ನಡೆಸಿ, ಹಿಂದೂಗಳನ್ನು ಜಾತಿ, ಉಪಜಾತಿ, ಪಂಗಡ, ಒಳ ಪಂಗಡ, ಎಡಗೈ ಬಲಗೈ ಎಂದು ವಿಭಜಿಸಿ ನೂರಾರು ಜಾತಿಗಳ ಆಗರವಾದ ಮುಸಲ್ಮಾನರನ್ನು ಮಾತ್ರಾ ಒಂದು ಎಂದು ತೋರಿಸಿ ಅವರನ್ನೇ ಈ ರಾಜ್ಯದ ಬಹುಸಂಖ್ಯಾತರು ಎಂಬುದನ್ನು ಸಿದ್ದರಾಮಯ್ಯನವರ ಈ ಸರ್ಕಾರದ ಓಲೈಕೆ ಈಗ ಜಗಜ್ಜಾಹೀರಾತಾಗಿದ್ದು ಜನ ಥೂ, ಛೀ! ಎಂದು ಉಗಿಯತೊಡಗಿದ್ದಾರೆ.
ಜಾತಿ ಸಮೀಕ್ಷೆಯಬ ಬಗ್ಗೆ ಈ ರೀತಿಯ ಜನಾಕ್ರೋಶ ಇನ್ನೂ ಹಚ್ಚ ಹಸಿರಾಗಿರುವಾಗಲೇ ಯಥಾ ರಾಜಾ ತಥಾ ಪ್ರಜಾ ಎಂಬಂತೆ ಅದೇ ಸಿದ್ದರಾಮಯ್ಯನವರನ್ನು ಮೆಚ್ಚಿಸಲೋ ಇಲ್ಲವೇ ತಾವು ಜಾತ್ಯಾತೀತರೆಂದು ತೋರಿಸಿಕೊಳ್ಳುವ ಹಪಾ ಹಪಿ ಎನ್ನುವಂತೆ, 25ರ ಏಪ್ರಿಲ್ 16 & 17ರಂದು ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರಿನ ಕೆಲವರಿಗೆ ಬ್ರಾಹ್ಮಣರ ಬುದ್ದಿವಂತಿಕೆಗೆ ಅವರು ಧರಿಸುವ ಜನಿವಾರ ಮೂಲ ಎಂದು ನಂಬಿಯೋ, ಇಲ್ಲವೇ ಜನಿವಾರದೊಳಗೆ, ಬ್ಲೂಟೂತ್ ವ್ಯವಸ್ಥೆ ಮಾಡಿಕೊಂಡೋ ಇಲ್ಲವೇ, ಜನಿವಾರದೊಳಗೆ ಕಾಪೀ ಮಾಡುವ ಸಲುವಾಗಿ ಚೀಟಿ(ಬಿಟ್)ಗಳನ್ನು ಅಡಗಿಸಿಟ್ಟುಕೊಂಡು ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಾರೆ ಎಂಬ ಅಪನಂಬಿಕೆಯೋ ಕಾಣಿ, ಚೆನ್ನಾಗಿ ಪರೀಕ್ಷೆ ಬರೆಯುವ ಧಾವಂತದಲ್ಲಿದ್ದ ಕೆಲವು ಬ್ರಾಹ್ಮಣ ವಿಧ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿ ಇಲ್ಲವೇ ಕತ್ತರಿ ಕಸದ ಬುಟ್ಟಿಕೆ ಹಾಕುವಂತಹ ಅಕ್ಷಮ್ಯ ಅಪರಾಧವಾಗಿದೆ.
ಏಪ್ರಿಲ್ 16 ರಂದು ಶಿವಮೊಗ್ಗದ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಕೇಂದ್ರಕ್ಕೆ ಪ್ರವೇಶಿಸುವಾಗ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಅಲ್ಲಿನ ಭದ್ರತಾ ಸಿಬ್ಬಂದಿಗಳು ಬಲವಂತವಾಗಿ ಹೊರತೆಗೆಸಿರುವುದಾಗಿ ಆ ವಿದ್ಯಾರ್ಥಿಗಳ ಕೆಲ ಪೋಷಕರು ಆರೋಪಿಸಿದ್ದಾರೆ. ಇದರ ವಿರುದ್ಧ ಅಖಿಲ ಭಾರತ ಬ್ರಾಹ್ಮಣ ಸಭಾ ಮತ್ತು ವಿವಿಧ ಬ್ರಾಹ್ಮಣ ಸಂಘಗಳು ಪ್ರತಿಭಟನೆ ನಡೆಸಿದ್ದು, ಅಪರೂಪ ಎನ್ನುವಂತೆ ಕಾಂಗ್ರೇಸ್ ಪಕ್ಷದ ಶಿವಮೊಗ್ಗದ ಮಾಜೀ ಶಾಸಕ ಕೆ.ಬಿ. ಪ್ರಸನ್ನಕುಮಾರರೇ ಈ ಬ್ರಾಹ್ಮಣ ಸಮುದಾಯದ ನಿಯೋಗದ ನೇತೃತ್ವವನ್ನು ವಹಿಸಿಕೊಂಡು ಗುರುವಾರ ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಮೂವರು ವಿದ್ಯಾರ್ಥಿಗಳಿಗೆ ಅವರು ಧರಿಸಿದ್ದ ಜನಿವಾರ ತೆಗೆಯುವಂತೆ ಸೂಚಿಸಿದಾಗ, ತೀರ್ಥಹಳ್ಳಿಯ ಬ್ರಾಹ್ಮಣ ವಿದ್ಯಾರ್ಥಿ ಅಭಿಜ್ಞಾ ತಾನು ಧರಿಸಿದ್ದ ಜನಿವಾರ ಮತ್ತು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಶಿ ದಾರವನ್ನು ತೆಗೆದು ಹಾಗಿದರೆ, ಮತ್ತೊಬ್ಬ ವಿನಮ್ರ ವಿದ್ಯಾರ್ಥಿ ಭಧ್ರತಾ ಸಿಬ್ಬಂಧಿಗಳ ಒತ್ತಾಯಕ್ಕೆ ಮಣಿಸಿ ಜನಿವಾರವನ್ನು ತೆಗೆದು ಪರೀಕ್ಷಾ ಸಭಾಂಗಣಕ್ಕೆ ಪ್ರವೇಶಿಸಿದರೆ, ಒಬ್ಬ ವಿದ್ಯಾರ್ಥಿಮಾತ್ರಾ ಇದರ ವಿರುದ್ಧ ಪ್ರತಿಭಟನೆ ನಡೆಸಿದಾಗ, ಅತನ ಪ್ರತಿಭಟನೆಗೆ ಮಣಿದ ಅದೇ ಭದ್ರತಾ ಸಿಬ್ಬಂಧಿ, ಆ ಹುಡುಗನಿಗೆ ಜನಿವಾರವನ್ನು ಧರಿಸಿಯೇ ಪರೀಕ್ಷಾ ಸಭಾಂಗಣಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುವ ಮೂಲಕ ಇಬ್ಬಂಧಿ ಧೋರಣೆ ತೋರಿಸಿರುವುದು ಅಚ್ಚರಿಯ ಸಂಗತಿಯಾಗಿದೆ.
ಇದೇ ರೀತಿಯ ಪ್ರಸಂಗ ಬೀದರ್ನ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿನಲ್ಲಿ ಗುರುವಾರ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಯೊಂದಿಗೂ ಆಗಿದ್ದು, ಅಲ್ಲಿನ ಭಧ್ರತಾ ಸಿಬ್ಬಂಧಿಗಳು ಆತ ಜನಿವಾರ ತೆಗೆಯಲು ಒಪ್ಪದ ಕಾರಣ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಿದ ಪರಿಣಾಮ ಆತ ಗಣಿತ ಪರೀಕ್ಷೆ ಬರೆಯಲು ಆಸಾಧ್ಯವಾಗಿದೆ. ಚೆನ್ನಾಗಿ ಸಿಇಟಿ ಬರೆದು ದೊಡ್ಡ ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದ ತನ್ನ ಮಗ, ಜನಿವಾರ ತೆಗೆಯದೇ ಹೋದದ್ದಕ್ಕಾಗಿ ಪರೀಕ್ಷೆಯನ್ನೇ ಬರೆಯಲು ಅವಕಾಶ ಕೊಡದೇ, ಆತನ ಭವಿಷ್ಯದೊಂದಿಗೆ ಅಲ್ಲಿನ ಪರೀಕ್ಷಾ ಸಿಬ್ಬಂದಿ ಚೆಲ್ಲಾಟವಾಡಿದ್ದಾರೆ. ಹಾಗಾತಿ ನನ್ನ ಮಗನನ್ನು ಪರೀಕ್ಷೆ ಪ್ರಾಧಿಕಾರವೇ ಎಂಜಿನಿಯರಿಂಗ್ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಬಾಲಕನ ತಾಯಿ ನೀತಾ ಕುಲಕರ್ಣಿ ಅವರು ಕೇಳಿರುವುದು ಸೂಕ್ತ ಎನಿಸುತ್ತದೆ.
ಈ ವಿಚಾರವಾಗಿ ಆ ಹುಡುಗನನ್ನು ಪತ್ರಕರ್ತರು ಸಂದರ್ಶನ ಮಾಡಿದಾಗ, ತಾನು ಧರಿಸಿದ್ದ ಜನಿವಾರವನ್ನು ತೆಗೆಯಲು ನಿರಾಕರಿಸಿದ್ದಕ್ಕಾಗಿ ತನಗೆ ಗಣಿತದ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲಿಲ್ಲ ಎಂದು ಸುಚಿವೃತ ಕುಲಕರ್ಣಿ ಆರೋಪಿಸಿದ್ದು, ನಮ್ಮ ಬ್ರಾಹ್ಮಣ ಸಂಪ್ರದಾಯದಲ್ಲಿ ಜನಿವಾರಕ್ಕೆ ಬಹಳ ಮಹತ್ವ ಇರುವ ಕಾರಣ ತಾನು ಜನಿವಾರ ತೆಗೆಯಲಾಗದು ಎಂದು ಪದೇ ಪದೇ ವಿನಂತಿಸಿಕೊಂಡರೂ, ಜನಿವಾರ ತೆಗೆದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳುವ ಮೂಲಕ, ತನ್ನನ್ನು ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಿದರು ಎಂದು ಸುಚಿವೃತ ಕುಲಕರ್ಣಿ ಹೇಳಿದ್ದಾನೆ.
ಈ ಹಿಂದೆ ಜನಿವಾರವನ್ನು ಕೇವಲ ಬ್ರಾಹ್ಮರಷ್ಟೇ ಅಲ್ಲದೇ ಸಕಲ ಹಿಂದೂಗಳು ಧರಿಸುತ್ತಿದ್ದು ನಂತರದ ದಿನಗಳಲ್ಲಿ ಜನಿವಾರ ಧರಿಸಿದಾಗ ಆಚರಿಸ ಬೇಕಾಗಿದ್ದ ರೀತಿ ರಿವಾಜುಗಳನ್ನು ಮಾಡಲಾಗದೇ ಪ್ರಸ್ತುತ ಕೇವಲ ಬ್ರಾಹ್ಮಣರಷ್ಟೇ ಧರಿಸುತ್ತಿದ್ದಾರೆ, ಈ ರೀತಿಯಾಗಿ ಜನಿವಾರ ಧರಿಸುವುದು ಹಿಂದೂಗಳ ನಿಜವಾದ ಸಂಸ್ಕೃತಿಯ ಸಂಕೇತವಾಗಿದ್ದು ಅಂತಹದನ್ನು ವಿದ್ಯಾರ್ಥಿಯ ಪರೀಕ್ಷಾ ಯೋಗ್ಯತೆಗೆ ಸಂಬಂಧ ಕಲ್ಪಿಸಿ ಈ ಆಚಾರದ ಅವಮಾನಮಾಡುತ್ತಾ, ವಿದ್ಯಾರ್ಥಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಲು ಮುಂದಾಗಿರುವುದು ನಿಜಕ್ಕೂ ಕಳವಳಕಾರಿಯಾದ ವಿಷಯವಾಗಿದೆ.
ನಿಜವಾಗಿಯೂ ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡುವುದನ್ನು ತಡೆಗಟ್ಟ ಬೇಕು ಎಂದಾದಲ್ಲಿ ಈ ರೀತಿಯ ಸಂಸ್ಕೃತಿಯ ಅಪಚಾರ ಮಾಡುವ ಬದಲು ಜ್ಯಾಮರ್ ಗಳನ್ನು ಮತ್ತು ಸಿಸಿ ಟಿವಿಗಳನ್ನು ಅಳವಡಿಸುವ ಮೂಲಕ ಎಲ್ಲವನ್ನೂ ತಡೆಗಟ್ಟಬಹುದಾಗಿದೆ. ಆದರೆ ಹೋದ ಬಂದ ಕಡೆಯಲ್ಲೆಲ್ಲಾ ಬ್ರಾಹ್ಮಣರನ್ನು ಅವಹೇಳ ಮಾಡುವುದರಿಂದ ಮತ್ತೊಂದು ಕೋಮು ಮತ್ತು ಕೆಲವು ಜಾತಿಯ ಮತಗಳನ್ನು ಗಳಿಸಬಹುದು ಮತ್ತು ತಮ್ಮ ನಾಯಕಮಣಿಗಳನ್ನು ಓಲೈಸಬಹುದು ಎಂಬ ಮನಸ್ಥಿತಿಯವರೇ ಅಡಳಿತದಲ್ಲಿರುವಾಗ, ಇದಕ್ಕಿಂತಲೂ ಹೆಚ್ಚಿನದ್ದನ್ನೇನೂ ನಿರೀಕ್ಷಿಸಲು ಆಗಲಾಗದು ಅಲ್ವೇ?
ಅರೇ ಇದು ಯಾರೋ ಕೆಲ ಭಧ್ರತಾ ಸಿಬ್ಬಂಧಿಗಳು ಮಾಡಿರುವ ತಪ್ಪಾಗಿದ್ದು ಇದಕ್ಕೆ ಸರ್ಕಾರವನ್ನು ದೂರುವುದು ಸರಿಯಲ್ಲಾ, ಅವರೇನೂ ಈ ಪ್ರಕರಣಕ್ಕೆ ಕುಮ್ಮಕ್ಕು ಕೊಟ್ಟಿರುವುದಿಲ್ಲಾ ಮತ್ತು ಆ ರೀತಿಯ ನಿಯಮಗಳನ್ನೇನೂ ರೂಪಿಸಿರುವುದಿಲ್ಲಾ ಎಂದು ವಾದ ಮಾಡುವವರು ಜಾತಿ ಮತ್ತು ಉಪಜಾತಿಗಳ ಹೆಸರಿನಲ್ಲಿ ಹಿಂದೂಗಳನ್ನು ಒಡೆಯಲು ಸಲುವಾಗಿಯೇ ದೇಶಾದ್ಯಂತ ಜಾತಿ ಸಮೀಕ್ಷೆ ಮಾಡಬೇಕು ಎಂದು ಸಂವಿಧಾನದ ಪುಸ್ತಕ ಹಿಡಿದು ಹಾರಾಡುತ್ತಿರುವವರ ಮತ್ತು ಹತ್ತು ವರ್ಷಗಳ ಹಿಂದೆ ನಡೆಸಿದ ಜಾತಿ ಸಮೀಕ್ಷೆಯನ್ನು ಇಂದು ಕರ್ನಾಟಕದಲ್ಲಿ ಜಾರಿಮಾಡುವ ಮೂಲಕ ಭವಿಷ್ಯದಲ್ಲಿ ದೇಶಾದ್ಯಂತ ಭಟ್ಟ ಮಜಾರ್ ಪ್ರಸಂಗಗಳು ಹೆಚ್ಚು ಹೆಚ್ಚಾಗಿ ನಡೆಯುವ ಮೂಲಕ ಹಿಂದೂಸ್ಥಾನದಲ್ಲಿ ಹಿಂದೂಗಳನ್ನೇ ನಿರ್ನಾಮ ಮಾಡಲು ನಿಜವಾದ ಅಲ್ಪಸಂಖ್ಯಾತರಾದ ಬ್ರಾಹ್ಮಣರ ಜುಟ್ಟು ಮತ್ತು ಜನಿವಾರಕ್ಕೆ ಕೈ ಹಾಕಿರುವುದು ಸ್ಪಷ್ಟವಾಗುತ್ತಿದೆ. ಬಟೇಂಗೋ ತೋ ಕಟೇಂಗೇ, ಏಕ್ ಹೈ ತೋ ಸೇಫ್ ಹೈ ಎನ್ನುವುದು ಎಷ್ಟು ಪ್ರಸ್ತುತವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ
ಮನದ ತುಂಬೆಲ್ಲ ತೀವ್ರವಾದ ಆಕ್ರೋಶ, ಹತಾಶೆ ವೇದನೆ ಮತ್ತು ದುರಂತ ಭಾವ ಆವರಿಸಿದೆ! ಇದು ಕೇವಲ ಸಂಸ್ಕಾರ ಹೀನ ಸರ್ಕಾರದ ವಿರುದ್ಧವಷ್ಟೇ ಅಲ್ಲ; ನಮ್ಮ ಹಿಂದೂ ಸಮುದಾಯದ ಮೇಲೆ ಕೂಡ… ತಕ್ಷಣವೇ ಪ್ರಬಲ ಪ್ರತಿಭಟನೆ ಸಂಘಟಿಸದ ಸಂಘಗಳ ಮೇಲೂ ಹೌದು. ಕೇವಲ ಪತ್ರ, ಪತ್ರಿಕಾ ಹೇಳಿಕೆ, ಟ್ವಿಟ್ಟರ್ ಸಂದೇಶಗಳಿಂದ ಸಾತ್ವಿಕ ಅಸಮಾಧಾನ ತೋರಿ ಇನ್ನಷ್ಟು ನಿರ್ವೀರ್ಯ ಮನೋಭಾವ ತೋರಿದ್ದಾರೆ. ರಾಮ ಪರಶುರಾಮನಾಗುವ ಕಾಲ ಬಂದಿದೆ!
LikeLiked by 1 person
ಸರಿಯಾಗಿ ಹೇಳಿದ್ರೀ
LikeLike