ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

Violence, Violence, Violence, I don’t like it, I Avoid… . but Violence likes me, I can’t Avoid.  ಎನ್ನುವ KGF-2 ಸಿನಿಮಾದ ನಾಯಕ  ರಾಖೀ ಬಾಯ್ (ಯಶ್)  ಅವರ ಈ ಜನಪ್ರಿಯ ಸಂಭಾಷಣೆಯನ್ನು ಕೇಳದ ಕನ್ನಡಿಗನೇ ಇಲ್ಲಾ ಎಂದರೂ ತಪ್ಪಾಗದು ಅದೇ ರೀತಿಯಲ್ಲೇ ವಿವಾದ, ವಿವಾದ, ವಿವಾದ, ಯಾವುದೇ ರೀತಿಯ ವಿವಾದಕ್ಕೆ ಸಿಕ್ಕಿಕೊಳ್ಳಲು ನಾನು ಇಷ್ಟಪಡುವುದಿಲ್ಲಾ. ಆದರೆ ವಿವಾದವೇ ನನ್ನನ್ನು ಇಷ್ಟಪಡುತ್ತದೆ. ಹಾಗಾಗಿ ಅದನ್ನು ನಾನು ತಪ್ಪಿಸಲು ಸಾಧ್ಯವಿಲ್ಲ. ಎನ್ನುವುದನ್ನು ಕಾಂಗ್ರೇಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ಈ ದೇಶದ ಚಿರಯೌವನಿಗ ರಾಹುಲ್ ಗಾಂಧಿಗೆ ಅನ್ವಯಿಸುತ್ತದೆ ಎಂದರೂ ತಪ್ಪಾಗದು. ಆತ ಅಧಿಕೃತವಾಗಿ ಸಕ್ರೀಯ ರಾಜಕಾರಣಿ ಆದ ನಂತರ ದೇಶ ವಿದೇಶಗಳಲ್ಲಾಗಲೀ ಅಥವಾ ಸಂಸತ್, ಪತ್ರಿಕಾ ಗೋಷ್ಟಿಯಲ್ಲಾಗಲೀ ಎಲ್ಲೇ ಮಾತನಾಡಿದರೂ ಒಂದಲ್ಲಾ ಒಂದು ಸಮಸ್ಯೆಗೆ ಕಾರಣೀಭೂತರಾಗುವ ಕಾರಣದಿಂದಲೇ ಆತ ಇಂದು ಮುಂದು ಮತ್ತು ಎಂದೆದೂ ವಿರೋಧ ಪಕ್ಷದಕ್ಕೇ ಇರಬೇಕಾದ ಕರ್ಮ ಎಂದರೂ ತಪ್ಪಾಗದು.

ಪ್ರತೀ ಭಾರಿ ಲೋಕಸಭಾ ಅಧಿವೇಶನ ಅಥವಾ ಚುನಾವಣಾ ಸಮಯದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳನ್ನು ದೇಶ ಮುಂದಿಟ್ಟು  ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ  ಈ ರೀತಿಯ ಎಲ್ಲಾ ಸಮಸ್ಯೆಗಳಿಗೂ ಬಿಜೆಪಿ ಮತ್ತು ಮೋದಿಯೇ ಕಾರಣ, ಹಾಗಾಗಿ ಮೋದಿಯವರು  ಈ ಕೂಡಲೇ ರಾಜೀನಾಮೆ ಕೊಡಬೇಕು ಎಂದು  ಸ್ವಘೋಷಿತ ಯುವರಾಜ, ಅಬ್ಬರಿಸಿ ಬೊಬ್ಬಿರಿಯುವ ವಿಷಯ ಎಲ್ಲರಿಗೂ ತಿಳಿದೇ ಇದೆ. ತಾನು ಮಾತನಾಡಿದರೆ ಇಡೀ ಸಂಸತ್ತು ಅದುರುತ್ತದೆ.  ನನ್ನ ಕಣ್ಣಿಗೆ ಕಣ್ಣಿಟ್ಟು ಮೋದಿಯವರು ಮಾತನಾಡಲಾರರು ಹಾಗಾಗಿಯೇ ನನಗೆ ಸಂಸತ್ತಿನಲ್ಲಿ ಮಾತನಾಡಲು  ಅವಕಾಶವೇ ಸಿಗುವುದಿಲ್ಲ. ನಾನು ಮಾತನಾಡಿದರೆ ಆಟಂ ಬಾಂಬ್  ಸಿಡಿದು ಬಿಡುತ್ತದೆ ಎಂದು ಜಂಬ ಕೊಚ್ಚಿದ ಉತ್ತರಕುಮಾರನಂತೆ  ಹಾರಾಡುವ ರಾಗಾ ನ ವಿಷಯಗಳೆಲ್ಲವೂ ಅಣು ಬಾಂಬ್ ಬಿಡಿ ಒಂದು ಲಕ್ಷ್ಮೀ ಪಟಾಕಿಯಷ್ಟೂ ಸಿಡಿಯದೇ ಠುಸ್ ಪಟಾಕಿಯಾಗುವ ಕಾರಣಕ್ಕೇ  ಇಡೀ ದೇಶವೇ ಆತನನ್ನು ಪಪ್ಪೂ ಎಂದು ಕರೆಯುವುದರಲ್ಲಿ ತಪ್ಪಿಲ್ಲಾ ಎಂದೆನಿಸುತ್ತದೆ.

ದುರಾದೃಷ್ಟವಷಾತ್ ಆತ ಮಾಡುವ ಅರೋಪಗಳೆಲ್ಲವೂ ಎಷ್ಟು ಬಾಲಿಷವಾಗಿರುತ್ತದೆ ಮತ್ತು  ಆತ ಹೇಳಿದ್ದಕ್ಕೆ ಯಾವುದೇ ಪುರಾವೆ ಕೊಡದೇ ನ್ಯಾಯಾಲಯದಲ್ಲಿ ಬಾರಿ ಬಾರಿ ತಪ್ಪೊಪ್ಪಿಗೆಯ ಮುಚ್ಚಳಿಕೆ ಬರೆದುಕೊಟ್ಟಿದ್ದನ್ನು, ಸಾವರ್ಕರ್ ಅವರ ವಿರುದ್ಧ ಆಡಿದ ಮಾತುಗಳು, ಚೌಕೀದಾರ್ ಚೋರ್ ಹೈ ಎಂದು ಮೋದಿಯವರನ್ನು ಹೋದ ಬಂದ ಕಡೆಯಲ್ಲೆಲ್ಲಾ ಅಣಕಿಸಿದ್ದು, ಇತ್ತೀಚೆಗಷ್ಟೇ, ಸುಪ್ರೀಂ ಕೋರ್ಟ್  ಚೀನಾ ಭಾರತದ 2,000 ಕಿ.ಮೀ ಭೂಮಿಯನ್ನು ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತು? ನಿಜವಾದ ಭಾರತೀಯ ಈ ರೀತಿಯಾದ ಅಪ್ರಬುದ್ಧ ಹೇಳಿಕೆಗಳನ್ನು ನೀಡಲಾರ ಎಂದು ರಾಹುಲ್ ಗಾಂಧಿಯನ್ನು  ತರಾಟೆಗೆ ತೆಗೆದುಕೊಂಡಿದ್ದನ್ನು  ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ

ಪೆಗಾಸಿಸ್ ಮೂಲಕ ತನ್ನ ಮೋಬೈಲ್ ನಲ್ಲಿರುವ ಮಾಹಿತಿಯನ್ನು ಮೋದಿ ಸರ್ಕಾರ ಕದಿಯುತ್ತಿದೆ ಎಂದು ಹೇಳಿ ತನಿಖೆಗೆ ತನ್ನ ಮೋಬೈಲ್ ಕೊಡದೇ ತಪ್ಪಿಸಿಕೊಂಡಿದ್ದ, ನಂತರ ರಫೇಲ್ ಮೂಲಕ ಅಂಬಾನಿಗೆ ಸಾವಿರಾರು ಕೋಟಿಗಳನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್ ರಫೇಲ್ ಖರೀಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲಾ ಎಂದು ನಂತರ ಸುಮ್ಮನಾಗ ಬೇಕಾಯಿತು. ಆನಂತರ EVM ಮೂಲಕ ಬಿಜೆಪಿ ಗೆಲ್ಲುತ್ತಿದೆ ಎಂದು ಮಾಡಿದ ಆಪಾದನೆಗೆ ಚುನಾವಣಾ ಆಯೋಗ ಯಾವ ಪಕ್ಷ ಬೇಕಾದರೂ ಬಂದು EVM Hack ಮಾಡಿ ತೋರಿಸಿ ಎಂದು ಹಾಕಿದ ಸವಾಲನ್ನು ಸ್ವೀಕರಿಸದೇ ಅಂಡು ಸುಟ್ಟ ಬೆಕ್ಕಿನಂತೆ ಭಾರತಾದ್ಯಂತ ತನ್ನ ಭಾರತ್ ಜೋ(ತೋ)ಡೋ ಯಾತ್ರೆಯನ್ನು ಮಾಡಿ, ಇನ್ನಾವುದೇ ರೀತಿಯಲ್ಲೂ ಮೋದಿಯವರನ್ನು ಸೋಲಿಸಲಾಗದು ಎಂದು ತಿಳಿದ ನಂತರ ಈಗ ಓಟ್ ಚೋರಿಯ ಮೂಲಕ ಚುನಾವಣಾ ಆಯೋಗ ಬಿಜೆಪಿಯ ಗೆಲುವಿಗೆ ಸಹಕರಿಸುತ್ತಿದೆ ಎಂದು ಬೆಂಗಳೂರಿನ ಮಹದೇವಪುರ ವಿಧಾನ ಸಭೆಯ ಮತದಾರರ ಪಟ್ಟಿಯ ಲೋಪ ದೋಷಗಳನ್ನು ತೋರಿಸಿದಾಗ ಚುನಾವಣಾ ಅಯೋಗ ಕೇಳಿದ ಲಿಖಿತ ದೂರಿಗೆ ಸಹಿ ಹಾಕದೇ ಓಡಿ ಹೋದ ನಂತರ ಆತ ಮಾಡಿದ ಆಪಾದನೆಗಳೆಲ್ಲವೂ ಸುಳ್ಳು ಎಂದು ಚುನಾವಣಾ ಆಯೋಗ ಮತ್ತು ಅರವಿಂದ ಲಿಂಬಾವಳಿ ಅಲ್ಲದೇ ಕೆಲವು ಟಿವಿ ಚಾನೆಲ್ಲುಗಳು ತೋರಿಸಿದರೂ ರಾಗಾ  ಒಪ್ಪಿಕೊಳ್ಳದೇ ದೆಹಲಿಯಲ್ಲಿ ರ್ಯಾಲಿ ಮಾಡಿ ಜನರಿಂದ ಥೂ! ಛೀ! ಎನಿಸಿಕೊಂಡಿರುವ ವಿಷಯವೇ ದೇಶಾದ್ಯಂತ ಸುದ್ದಿಯಾಗಿದೆ.

ಹೀಗೆ ಬಾರಿ ಬಾರಿ  ಅಣ್ಣ ರಾಹುಲನಿಗೆ ಭಾರೀ ಮುಖ ಭಂಗ ಆಗುತ್ತಿದ್ದರೂ,  ಅಜ್ಜಿಯಂತೆ ಮೂಗಿದೆ ಎನ್ನುವ ಏಕೈಕ ಅರ್ಹತೆಯಿಂದ ಇತ್ತೀಚೆಗಷ್ಟೇ ಮುಸ್ಲಿಂ ಬಾಹುಳ್ಯದ ವೈನಾಡಿನಲ್ಲಿ ಕ್ರಿಶ್ಚಿಯನ್ ಸಾಂಸದೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕ ಗಾಂಧಿ ವಾದ್ರ, ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತಂತೆ ಮಾತನಾಡಿದಾಗ, ಅದಕ್ಕೆ ಪ್ರತಿಯಾಗಿ ಎಳೆ ಎಳೆಯಾಗಿ ಆಕೆ ಮುತ್ತಾತ, ಅಜ್ಜಿ ಮತ್ತು ಅಪ್ಪನಿಂದಾಗಿ ಈ ದೇಶಕ್ಕೆ ಆದ ನಷ್ಟಗಳನ್ನು ಬಿಡಿಸಿಟ್ಟಾಗ, ಹಳೆಯದ್ದಲ್ಲಾ ಈಗೇಕೆ ಎಂಬ ವರಾತ ತೆಗೆದದ್ದಕ್ಕೆ  ಬಿಜೆಪಿ ಸಿಡುಲು ಗುಂಡಿಗೆಯ ಸಾಂಸದ ನಿಶಿಕಾಂತ್ ದುಬೆ ಇತಿಹಾಸ ತಿಳಿಯಲಾರದವರು, ಇತಿಹಾಸ ನಿರ್ಮಿಸಲಾರರು ಎಂಬ ತಪರಾಕಿಗೆ ಬೆಚ್ಚಿ ಬಿದ್ದು ಸುಮ್ಮನಾಗಿದ್ದ ಪ್ರಿಯಾಂಕ ವೋಟ್ ಚೋರಿಯ ವಿಷಯದಲ್ಲಿ ಅಣ್ಣನಿಗೆ ಸಮರ್ಥನೆ ಮಾಡುವ ಭರದಲ್ಲಿ ಬಿಹಾರದ ಮತದಾರರ ಪಟ್ಟಿಯಲ್ಲಿ 124 ವರ್ಷ ಎಂದು ನಮೂದಾದ ಮಿಂಟಾ ದೇವಿ ಎಂಬ ಮಹಿಳೆಯ ಫೋಟೋ ಇರುವ ಟೀ-ಶರ್ಟ್‌ನ್ನು ಧರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ.  ಟೀ-ಶರ್ಟ್‌ ಮೇಲೆ ನನ್ನ ಫೋಟೋ ಹಾಕಲು ಅಧಿಕಾರ ನಿಮಗೆ ಅಧಿಕಾರ ಕೊಟ್ಟವರು ಯಾರು?  ಎಂಬ ಪ್ರಶ್ನೆಯನ್ನು ಕೇಳುತ್ತಾ ರೌದ್ರಾವತಾರ ತಾಳಿರುವ  ಮಿಂಟಾ ದೇವಿಗೆ ಉತ್ತರ ಕೊಡಲು  ಕಕ್ಕಾಬಿಕ್ಕಿಯಾಗಿರುವ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದ್ದು. ವಾರೆ ವಾಹ್! ಕಿತಾಪತಿಯಲ್ಲಿ ಅಣ್ಣನನ್ನೂ ಮೀರಿಸಿದ ತಂಗಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ,

ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿರೋಧಿಸಿ ದೆಹಲಿಯ ಸಂಸತ್ ಭವನದ  ಮತ್ತು ಚುನಾವಣಾ ಆಯೋಗದ  ಕಛೇರಿಯ ಎದುರು ಇಂಡಿ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬಾರಿ ಉತ್ಸಾಹದಿಂದ ಪ್ರಿಯಾಂಕ ಗಾಂಧಿ ಮತ್ತು ಅವರ ಸಹಚರರು ಮತದಾರರ ಪಟ್ಟಿಯಲ್ಲಿ 124 ವರ್ಷ ಎಂದು ನಮೂದಾದ ಮಿಂಟಾ ದೇವಿ ಎಂಬ ಮಹಿಳೆಯ ಫೋಟೋ ಇರುವ ಟೀ-ಶರ್ಟ್‌ನ್ನು ಧರಿಸಿದ್ದ ವೀಡಿಯೋ ಸುದ್ದಿ ಮಾಧ್ಯಮದ ಮೂಲಕ ದೇಶಾದ್ಯಂತ ಪ್ರಸಾರವಾಗುತ್ತಿದ್ದಂತೆಯೇ  ಅದನ್ನು ನೋಡಿದ ಜನರು ಆ ವಿಷಯವನ್ನು  ಮಿಂಟಾ ದೇವಿಗೆ ತಿಳಿಸುತ್ತಿದ್ದಂತೆಯೇ ನನ್ನ  ಅನುಮತಿ ಪಡೆಯದೇ ನನ್ನ ಫೋಟೋವನ್ನು ನಿಮ್ಮ ಟೀ-ಶರ್ಟ್‌ ಮೇಲೆ ಅಚ್ಚು ಹಾಕಿಸಲು ನಿಮಗೆ ಯಾರು ಅಧಿಕಾರ ಕೊಟ್ಟರು?” ಎಂದು ಪ್ರಿಯಾಂಕಾ ಗಾಂಧಿ ಅವರನ್ನು ಪ್ರಶ್ನಿಸಿದ್ದಲ್ಲದೇ ಕಾಂಗ್ರೇಸ್ ಪಕ್ಷದ ಅಧಿನಾಯಕಿಯ ಈ ರೀತಿಯ ಕುಕೃತ್ಯಕ್ಕೆ  ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೆಹಲಿ, ಬೆಂಗಳೂರು ಮತ್ತು ಮಹಾರಾಷ್ಟ್ರದಲ್ಲಿ ಮತದಾರ ಪಟ್ಟಿಯನ್ನು ಚುನಾವಣಾ ಇಲಾಖೆ ಸರಿಯಾಗಿ ಮಾಡಿಲ್ಲಾ ಎಂದು ಆರೋಪಿಸುವ ಅಣ್ಣಾ ತಂಗಿ, ಅದೇ ಬಿಹಾರದಲ್ಲಿ ಚುನಾವಣಾ ಆಯೋಗ ಮಾಡುತ್ತಿರುವ ಕ್ಷಿಪ್ರ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ತನ್ನ ಇಂಡಿಯಾ ಮೈತ್ರಿಕೂಟದೊಂದಿಗೆ  ಪ್ರತಿಭಟನೆ ಮಾಡುವ ಮೂಲಕ ಎಡಬಿಡಂಗಿತನ ತೋರುತ್ತಿರುವುದು ನಿಜಕ್ಕೂ ಅಚ್ಚರಿ ಮತ್ತು ಅನುಮಾನಾಸ್ಪದವಾಗಿದೆ.

ಬಿಹಾರದ ಮತದಾರರ ಪಟ್ಟಿಯಲ್ಲಿ ಮಿಂಟಾದೇವಿ ಎಂಬುವವರ ವಯಸ್ಸು 124 ವರ್ಷ ಎಂದು ಹೇಗಾಯಿತು? ಎಂಬುದಾಗಿ ಕುರಿತು ಪತ್ರಕರ್ತರು ಖುದ್ದಾಗಿ ಆ ಮಹಿಳೆಯನ್ನೇ ವಿಚಾರಿಸಿದಾಗ, ಮತದಾರರ ಪಟ್ಟಿಯಲ್ಲಿ ನನ್ನ ವಯಸ್ಸು 124 ವರ್ಷ ಎಂದು ನಮೂದಾಗಿರುವ ಬಗ್ಗೆ ನನಗೆ 2-4 ದಿನಗಳ ಹಿಂದೆ ತಿಳಿಯಿತು. ಮತದಾರರ ಪಟ್ಟಿಯಲ್ಲಿ ಏನೋ ವ್ಯತ್ಯಾಸ ಆಗಿದೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಆಡಳಿತದಿಂದ ಇದುವರೆಗೂ ಯಾವ ಕರೆಯೂ ಬಂದಿಲ್ಲ. ಆದರೆ ಈ ವಿಷಯವನ್ನು ತಮ್ಮ ರಾಜಕೀಯಕ್ಕಾಗಿ ಪ್ರತಿಪಕ್ಷದವರು ಬಳಸಿಕೊಳ್ಳುತ್ತಿರುವುದನ್ನು ನಾನು ವಿರೋಧಿಸುತ್ತೇನೆ ಗುಡುಗಿದ್ದಾರೆ. ಹಾಗೆಯೇ ತಮ್ಮ ಮಾತನ್ನು ಮುಂದುವರೆಸುತ್ತಾ, ನನ್ನ ವಯಸ್ಸಿನ ಬಗ್ಗೆ ಕಾಂಗ್ರೆಸ್‌ ನಾಯಕರು  ಏಕಿಷ್ಟು ತಲೆ ಕೆಡಿಸಿಕೊಂಡಿದ್ದಾರೆ? ಎಂಬುದೇ ಅರ್ಥವಾಗುತ್ತಿಲ್ಲ.

ಆಧಾರ್ ಕಾರ್ಡ್‌ನಲ್ಲಿ  ನಮೂದಿಸಿರುವಂತೆ ನನ್ನ ಜನ್ಮ ದಿನಾಂಕವು  15-07-1990 ಆಗಿದ್ದು ಅದರ ಪ್ರಕಾರ  ನನಗೀಗ 35 ವರ್ಷ. ಆದರೆ Online ಮೂಲಕ ನನ್ನ ವಿವರಗಳನ್ನು ಗಣಕಯಂತ್ರದಲ್ಲಿ ದಾಖಲಿಸುವಾಗ ನಾನು ಹುಟ್ಟಿದ ವರ್ಷ 1990 ಎಂಬುದರ ಬದಲಾಗಿ ತಪ್ಪಾಗಿ 1900 ಎಂದು ನಮೂದಿಸಿರುವುದೇ ಇಷ್ಟೆಲ್ಲಾ ಅಪಸವ್ಯಗಳಿಗೆ ಕಾರಣವಾಗಿದ್ದು ಅದನ್ನು ಈ ಕೂಡಲೇ  ಸರಿಪಡಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದೇನೆ  ಮತ್ತು ಅದಕ್ಕೆ ಚುನಾವಣಾ ಆಯೋಗವೂ, ಈಗ ಬಿಡುಗಡೆ ಮಾಡಿರುವುದು  ಕೇವಲ ಕರುಡು ಪ್ರತಿಯಾಗಿದ್ದು ಮೂಲ ಪ್ರತಿಯಲ್ಲಿ ಅದನ್ನು ಸರಿಪಡಿಸುವುದಾಗಿ ಒಪ್ಪಿಕೊಂಡಿರುವಾಗ ಈ ಕಾಂಗ್ರೆಸ್‌ ನಾಯಕರು ನನ್ನ ಅನುಮತಿ ಇಲ್ಲದೇ ನನ್ನ ಫೊಟೋವನ್ನು ಟೀ-ಶರ್ಟ್‌ ಮೇಲೆ ಅಚ್ಚು ಹಾಕಿಸಿಕೊಂಡು ಪ್ರತಿಭಟನೆ ಮಾಡುಸುತ್ತಿರುವುದು ನನ್ನ ಖಾಸಗೀ ತನಕ್ಕೆ ಮಾಡಿದ  ಅವಮಾನವಾಗಿದೆ ಎಂದು ಕಿಡಿಕಾರಿದ್ದಾರೆ.

ಅವರ ವಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ  ನನ್ನ ಹೆಸರನ್ನು ಬಳಸಿಕೊಳ್ಳುವುದು ನನಗೆ ಸುತಾರಾಂ ಇಷ್ಟವಿಲ್ಲ. ನನಗೂ  ಮತ್ತು ದೇಶದ ಯಾವುದೇ ವಿಪಕ್ಷ ನಾಯಕರಿಗೂ ಯಾವ ಸಂಬಂಧವೂ ಇಲ್ಲ. ಪ್ರಿಯಾಂಕಾ ಗಾಂಧಿ ಆಗಲಿ ಅಥವಾ ಇತರೇ ಕಾಂಗ್ರೆಸ್‌ ನಾಯಕರಾಗಲಿ ನನಗೆ ಗೊತ್ತಿಲ್ಲದೇ ಇರುವಾಗ, ಅವರುಗಳು ದೆಹಲಿಯಲ್ಲಿ  ನನ್ನ ಫೋಟೋ ಇರುವ ಟೀ-ಶರ್ಟ್‌ ಧರಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಮಿಂಟಾ ದೇವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದನ್ನು ದೇಶಾದ್ಯಂತ ಬಹುತೇಕರು ಸಮರ್ಥನೆ ಮಾಡಿದ್ದಾರೆ.

ಇನ್ನು ಮಾತೆತ್ತಿದರೆ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು, ಮೋದಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವಾಗಿದೆ. ತಾವೇ ಸಂವಿಧಾನದ ರಕ್ಷಕರು ಎಂದು ಕೂಗಾಡುವುದಲ್ಲದೇ, ಮತಗಳ್ಳತನದಿಂದಾಗಿ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳುತ್ತಿದ್ದ ರಾಗನಿಗೆ ಅವನ ಅಮ್ಮ ಮದುವೆ ಆಗಿ ಸುಮಾರು 15 ವರ್ಷಗಳ ಕಾಲ ಭಾರತೀಯ ಪೌರತ್ವವನ್ನೇ ಪಡೆಯದಿದ್ದರೂ ಅಕೆಯ ಹೆಸರು 1980ರಲ್ಲೇ ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ನಂತರ ತೆಗೆದು ಹಾಕಿದ್ದು ಮತ್ತೆ 1983ರಲ್ಲಿ ಆಕೆ ಭಾರತೀಯ ಪೌರತ್ವ ಪಡೆಯುವ ಮುನ್ನವೇ ಮರು ಸೇರ್ಪಡೆಯಾಗಿದ್ದ ವಿಷಯವನ್ನು ಬಿಜೆಪಿಯ ಯುವ ಸಾಂಸದ ಅನುರಾಗ್ ಠಾಕೂರ್ ದಾಖಲೆಯ ಸಮೇತ ಬಿಚ್ಚಿಟ್ಟಿದ್ದಲ್ಲದೇ, 1971ರ ಚುನಾವಣೆಯಲ್ಲಿ ರಾಗಾನ ಅಜ್ಜಿ ಇಂದಿರಾ ಗಾಂಧಿ ಸರ್ಕಾರೀ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ರಾಜ ನಾರಾಯಣ್ ವಿರುದ್ಧ ರಾಯ್ ಬರೇಲಿಯಲ್ಲಿ ಗೆದ್ದಿದ್ದರ ವಿರುದ್ಧ ಅಲಹಾಬಾದ್ ಹೈಕೋರ್ಟ್ ತಪ್ಪಿತಸ್ಥೆ ಎಂದು ಆಕೆಯ ಸಾಂಸದೆಯ ಸ್ಥಾನದಿಂದ ವಜಾ ಮಾಡಿದ್ದನ್ನೂ ಸಹಾ ಈಗ ಭಾರತೀಯರ ಮತ್ತೆ ನೆನೆಪಿಗೆ ತಂದಿದ್ದಾರೆ

ಅದರ ಜೊತೆಗೆ ರಾಯ್ ಬರೇಲಿ, ವೈನಾಡ್ ಅಲ್ಲದೇ ಇಂಡೀ ನಾಯಕರು ಗೆದ್ದ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಲೋಪ ದೋಷಗಳನ್ನೆಲ್ಲಾ ದಾಖಲೆ ಸಮೇತ ತೆರೆದಿಟ್ಟು ಇಂತಹ ತಪ್ಪುಗಳನ್ನು ಸರಿ ಪಡಿಸಲೆಂದೇ ಬಿಹಾರದಲ್ಲಿ ಕ್ಷಿಪ್ರವಾಗಿ ಮತದಾರರ ಪಟ್ಟಿಯ ಪರಿಷ್ಕರರಣೆ ಮಾಡಿ ಮುಗಿಸಿದ್ದು ಮುಂದೆ ಚುನಾವಣೆ ಇರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲೂ ಇದೇ ಪ್ರಕ್ರಿಯೆ ಯನ್ನು ಚುನಾವಣಾ ಆಯೋಗ ಮಾಡುತ್ತಿರುವುದನ್ನು ಬಲವಾಗಿ ಸಮರ್ಥನೆ ಮಾಡಿರುವುದು ಈಗ ರಾಗ ಮತ್ತವನ ತಂಡಕ್ಕೆ ನುಂಗಲಾರದ ತುತ್ತಾಗಿದ್ದು, ಅಕ್ರಮ ಬಾಂಗ್ಲಾ ನುಸುಳು ಕೋರರ ನಕಲಿ ಮತಗಳ ಮೂಲಕ ಗೆಲ್ಲುತ್ತಿದ್ದದ್ದನ್ನು ಈಗ ತಮ್ಮ ಅವಿವೇಕತನದಿಂದ ತಮ್ಮ ಕೈಯ್ಯಾರೇ ತಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆಲ್ಲಾ ಎಂದು ಕೈ ಕೈ ಹಿಸುಕಿ ಕೊಳ್ಳುವಂತಾಗಿದೆ

ಈ ದೇಶಕ್ಕೆ ಸ್ವಾತ್ರಂತ್ರ್ಯ ಬಂದಿರೋದು ನಮ್ಮ ವಂಶದಿಂದಲೇ, ನಮ್ಮ ಮುತ್ತಾತ, ಅಜ್ಜಿ, ಅಪ್ಪಾ ಈ ದೇಶದ ಪ್ರಧಾನಿಗಳಾಗಿ ಸುಮಾರು 60 ವರ್ಷಗಳ ಕಾಲ ಈ ದೇಶವನ್ನು ಅಳಿದ್ದಾರೆ. ಹಾಗಾಗಿ ಈ ಪ್ರಜಾಪ್ರಭುತ್ವದಲ್ಲೂ ನಾವುಗಳೇ ವಂಶಪಾರಂಪರ್ಯವಾಗಿ ಈ ದೇಶವನ್ನಾಳಬೇಕು ಎಂಬ ಕೆಟ್ಟ ಮನಸ್ಥಿತಿಯನ್ನು ಹೊಂದಿರುವ ಅಣ್ಣಾ ತಂಗಿ ತಾವು ಯಾರ ಮೇಲೆ ಯಾವ ರೀತಿಯಲ್ಲಾದರೂ ಕೆಟ್ಟ ಕೆಟ್ಟದಾಗಿ ಮಾತನಾಡಬಹುದು ಆದರೆ ತಮ್ಮ ವಿರುದ್ಧ ಯಾರೂ ಮಾತನಾಡಬಾರದು ಎನ್ನುವ ಸರ್ವಾಧಿಕಾರಿ ಧೋರಣೆಯ ವ್ಯಕ್ತಿತ್ವ ಉಳ್ಳವರು ಎನ್ನುವುದಕ್ಕೆ ಕರ್ನಾಟಕದ ಸಚಿವ ಕೆ. ಎನ್. ರಾಜಣ್ಣ ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕದಲ್ಲಿ ನಮ್ಮದೇ ಕಾಂಗ್ರೇಸ್ ಸರ್ಕಾರ ಇದ್ದ ಕಾರಣ, ನಾವುಗಳು ಪರಿಷ್ಕೃತ ಮತತಾರರ ಪಟ್ಟಿಯನ್ನು ಅಂದೇ ಗಮನಿಸಿದ್ದರೆ ಈ ರೀತಿಯ ಅಪಸವ್ಯಗಳು ನಡೆಯುತ್ತಿರಲಿಲ್ಲ ಎಂದು ಹೇಳಿದ್ದನ್ನೇ ನೆಪ ಮಾಡಿಕೊಂಡು ಆತನನ್ನು ಮಂತ್ರಿಗಿರಿಯಿಂದ ವಜಾ ಮಾಡುವುದಾದರೇ, ಯಾವುದೇ ರೀತಿಯ ತಪ್ಪನ್ಣೇ ಮಾಡದ ತಮಗೆ ಪರಿಚಯವೇ ಇರದ ಮಿಂಟಾ ದೇವಿಯವರ ಫೋಟೋ ಇರುವ ಟೀ ಷರ್ಟ್ ಧರಿಸಿ ಅಕೆಯನ್ನು ಸಾರ್ವಜನಿಕವಾಗಿ ಬಹಿರಂಗವಾಗಿ ಅವಮಾನಿಸಿದ ಈ ಅಣ್ಣಾ ತಂಗಿಗೆ ಯಾವ ಶಿಕ್ಷೆ ಆಗಬೇಕು? ಎಂಬುದನ್ನು 140ಕೋಟಿಗೂ ಅಧಿಕ ಭಾರತೀಯರೇ ನಿರ್ಧರಿಸಬೇಕು

ಮೋದಿ ಸರ್ಕಾರದ ವಿರುದ್ಧ ಯಾವ ರೀತಿಯ ಆರೋಪಗಳನ್ನು ಮಾಡಿದರೂ, ಇಂದಿನ ಆಧುನಿಕ  ಯುಗದಲ್ಲಿ ಕ್ಷಣ ಮಾತ್ರದಲ್ಲಿ ಅವೆಲ್ಲವನ್ನೂ ಸುಳ್ಳಾಗಿಸಿ ತಮಗೆ ತೀವ್ರವಾದ ಮುಖಭಂಗ ಆಗುತ್ತಿರುವುದನ್ನು  ಅಣ್ಣಾ ತಂಗಿ ಸಹಿಸಿಕೊಳ್ಳಲಾಗದೇ ಹತಾಷರಾಗಿ ಹೋಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.  ರಾಹುಲ್ – ಸೋನಿಯಾ ಅವರ  National Herald ಕೇಸು ಮತ್ತು ರಾಹುಲ್ ಗಾಂಧಿಯ ಭಾರತ ಮತ್ತು ಬ್ರಿಟನ್ ದೇಶದ ಪೌರತ್ವ ಮತ್ತು  ಪ್ರಿಯಾಂಕ ಗಾಂಧಿ ವಾದ್ರಾಳ ಪತಿ ರಾಬರ್ಟ್ ವಾದ್ರಾ ಅವರ ಡಿ.ಎಲ್.ಎಫ್ ಭೂಮಿಯ ಕುರಿತಾದ  ತನಿಖೆಗಳು ಬಹುತೇಕ ಮುಗಿದಿದ್ದು, ಅಂತಿಮ ತೀರ್ಪು ಹೊರಬರಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದ್ದು ದೀಪ ಆರುವ ಮುನ್ನಾ ಜೋರಾಗಿ ಉರಿಯುವಂತೆ ಅಣ್ಣಾ ತಂಗಿಯರು ಆಡುತ್ತಿದ್ದಾರೆ  ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

 ,

Leave a comment