ನಾಯಿಬಾಲ ಸದಾ ಕಾಲವೂ ಡೊಂಕೇ!!

ನಾಯಿ ಬಾಲಕ್ಕೆ ಎಷ್ಟೇ ದಬ್ಬೆ ಕಟ್ಟಿದರೂ, ಅದನ್ನು ನೆಟ್ಟಗೆ ಮಾಡುವುದಕ್ಕೆ ಆಗುವುದಿಲ್ಲಾ! ಎಂಬ ಮಾತಿದೆ ಆದರೂ  ಜಾತ್ಯಾತೀತತೆ ಎಂಬ ಹೆಸರಿನಲ್ಲಿ ಕೆಲವು ರಾಜಕಾರಣಿಗಳು ಕೆಲವು ವ್ಯಕ್ತಿಗಳನ್ನು ಅನಗತ್ಯವಾಗಿ ಅಟ್ಟದ ಮೇಲೆ ಕೂರಿಸಿದರೂ, ಸಿಂಹಾಸನದ ಮೇಲೆ ಕೂರಿಸಿದರೂ ನಾಯಿ ಹೊಲಸು ನೋಡಿ ಜಿಗಿಯಿತಂತೆ! ಎನ್ನುವಂತೆ ತಮ್ಮ ಮತಾಂಧ ಮೂಲಭೂತ ಆಷಾಡಭೂತಿ ತನದ ವ್ಯಕ್ತಿತ್ವವನ್ನು ಎಲ್ಲರ ಮುಂದೆ ಪ್ರದರ್ಶಿಸುವ ಮೂಲಕ ತಾವೂ ನಗೆಪಾಟಲಾಗುವುದಲ್ಲದೇ, ಅನಗತ್ಯವಾಗಿ ನಮ್ಮ ದೇಶ ಮತ್ತು ಸಂಸ್ಕೃತಿಯನ್ನು ಜಗತ್ತಿನ ಮುಂದೆ ಕೀಳರಿಮೆಯನ್ನುಂಟು ಮಾಡಲು ಪ್ರಯತ್ನಿಸುವುದು ನಿಜಕ್ಕೂ ಅಕ್ಷಮ್ಯ  ಅಪರಾಧವಾಗಿದೆ. ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ,  ದೇಶದ ಇತಿಹಾಸವನ್ನು ಅರಿಯದೆ ಅನಗತ್ಯವಾಗಿ  ಬಾಯಿ ಬಿಟ್ಟು ಬೂಕರ್ ಪ್ರಶಸ್ತಿ ಪುರಸ್ಕೃತೆ  ಬಾನು ಮುಷ್ತಾಕ್ ಬಣ್ಣ ಗೆಡೆಸಿಕೊಂಡಿದ್ದಾರೆ. 

2025 ಡಿಸೆಂಬರ್ 6 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ (ಬಿಎಲ್‌ಎಫ್) 14 ನೇ ಆವೃತ್ತಿಯಲ್ಲಿ ಆಶಯ ನುಡಿಗಳ ಜತೆಗೆ, ಬಾನು ಬಾನುವಾಗಿ, ಬಾನು ಬಂಡಾಯವಾಗಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ,  ಬಾನು ಮುಷ್ತಾಕ್ ಅವರು ಡಿಸೆಂಬರ್ 6 ಭಾರತವು ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಭಾತೃತ್ವವನ್ನು ಕಳೆದುಕೊಂಡ ದಿನವಾಗಿದ್ದು, ಇದು ಭಾರತೀಯರಿಗೆ ಕರಾಳ ದಿನವಾಗಿದೆ.  ದೇಶದ ಜನರಿಗೆ ಸಮಾನತೆ ಭ್ರಾತೃತ್ವವನ್ನು ಬೋಧಿಸಿದ್ದ ಅಂಬೇಡ್ಕರ್ ಅವರು ಪರಿನಿರ್ವಾಣವಾದದ್ದು ಇದೇ ದಿನ. ಇದೇ ದಿನ ಬಾಬ್ರಿ ಮಸೀದಿಯೂ ಧ್ವಂಸವಾಯಿತು. ಅಲ್ಲಿ ಧ್ವಂಸವಾಗಿದ್ದು ಮಸೀದಿಯಲ್ಲ. ಬದಲಿಗೆ ದೇಶದ ಜನರ ಭ್ರಾತೃತ್ವ ಭಾವನೆ. ಇವೆರಡೂ ನಮ್ಮ ಪ್ರಜಾ ಪ್ರಭುತ್ವಕ್ಕೆ ಆದ ನಷ್ಟ ಎಂದು ಹೇಳಿದ್ದಾರೆ.

ಹಾಗೆಯೇ ತಮ್ಮ ಮಾತನ್ನು ಮಂದುವರೆಸುತ್ತಾ, ಕೆಲವೊಮ್ಮೆ ನಾವು ಕಳೆದುಕೊಂಡದ್ದು ಏನು ಮತ್ತು ಮುಂದೇನು ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಇತಿಹಾಸವನ್ನು ತಿರುಗಿ ನೋಡಲೇಬೇಕಾಗುತ್ತದೆ. ಬಾಬ್ರಿ ಮಸೀದಿ ಧ್ವಂಸ ದಿನದಂದು ಭಾರತವು ತನ್ನ ಭಾತೃತ್ವವನ್ನು ಕಳೆದುಕೊಂಡಿತು. ಇತಿಹಾಸಕ್ಕೆ ಅದು ಉಂಟುಮಾಡಿದ ವಿನಾಶ ಅಥವಾ ನೋವು ಜನರಲ್ಲಿ ನಾವು ಯಾವ ನೈತಿಕ ಮೌಲ್ಯಗಳನ್ನು ನಿರ್ಮಿಸಬೇಕು ಎಂಬುದರ ಬಗ್ಗೆ ಯೋಚಿಸುವಂತೆ ಮಾಡಿದೆ ಮತ್ತು ಅದು ಅತ್ಯಗತ್ಯವೂ ಆಗಿದೆ. ಅಂಬೇಡ್ಕರ್ ಅವರು ಸಹೋದರತ್ವವಿಲ್ಲದೆ ಸಮಾನತೆ ಇಲ್ಲ ಎಂದು ಹೇಳಿದ್ದರು. ಇತಿಹಾಸದಲ್ಲಿನ ಹಲವಾರು ಘಟನೆಗಳು ಸಹೋದರತ್ವದ ಅನುಪಸ್ಥಿತಿಯಲ್ಲಿ, ಪ್ರಜಾಪ್ರಭುತ್ವದ ಮೂಲವು ಕಣ್ಮರೆಯಾಗುತ್ತದೆ ಎಂದು ಸಾಬೀತುಪಡಿಸುತ್ತವೆ. ಈ ನಿಟ್ಟಿನಲ್ಲಿ ನಾವು ಸಾಮೂಹಿಕ ಪ್ರಜ್ಞೆಗೆ ನಾವು ಮಾನವೀಯತೆ, ಬಹುತ್ವ, ಸಮಾನತೆ ಮತ್ತು ಸಹೋದರತ್ವದ ಹಾದಿಯಲ್ಲಿ ನಡೆಯಬೇಕು ಎಂಬ ಸಂದೇಶವನ್ನು ಈ ದಿನ ರವಾನಿಸುತ್ತಿದೆ ಎಂದು ತಿಳಿಸಿದ್ದಾರೆ.

ಹೌದು ನಿಜ. ಬಾನು ಮುಷ್ತಾಕ್ ಅವರು ಹೇಳಿದಂತೆ ನಾವು ಕಳೆದುಕೊಂಡದ್ದು ಏನು ಮತ್ತು ಮುಂದೇನು ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಇತಿಹಾಸವನ್ನು ತಿರುಗಿ ನೋಡಲೇ ಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯದ ತಂಡ ನಡೆಸಿದ ಉತ್ಕತನದಲ್ಲಿಯೂ ಕಂಡು ಬಂದತೆ ಅಯೋಧ್ಯೆ ಹಿಂದೂಗಳ ಆರಾಧ್ಯದೈವ ಪ್ರಭು ಶ್ರೀರಾಮನ  ಜನ್ಮ ಸ್ಥಳವಾಗಿದ್ದು ಕುರುಹಾಗಿ ಅಲ್ಲೊಂದು ಭವ್ಯವಾದ ದೇವಾಲಯವಿತ್ತು. ಆದರೆ,  ಕ್ರಿ.ಶ. 1528–29 ರಲ್ಲಿ  ಭಾರತದ ಮೇಲೆ ದಂಡೆತ್ತಿ ಬಂದ ಮೊಘಲ್ ಚಕ್ರವರ್ತಿ ಬಾಬರ್‌ನ ಸೇನಾಧಿಪತಿಯಾಗಿದ್ದ ಮೀರ್ ಬಾಕಿ ಆ ದೇವಾಲಯದ ಮೇಲ್ಚಾವಣೆಯನ್ನು ಮಾತ್ರಾ ಧ್ವಂಸ ಮಾಡಿ ಅದರ ಮೇಲೆ ಮುಸಲ್ಮಾನರ ವಾಸ್ತು ಶಿಲ್ಪದಂತೆ ಮಿನಾರ್ ಗಳನ್ನು ಕಟ್ಟಿಸಿ ಅದಕ್ಕೆ ಬಾಬರ್ ಮಸೀದಿ (ಬಾಬರೀ ಮಸೀದಿ) ಎಂದು ಹೆಸರಿಟ್ಟಿದ್ದನ್ನೂ ಆ ಭಾಷಣದಲ್ಲಿ ತಿಳಿಸಬೇಕಿತ್ತಲ್ಲವೇ? ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಬಾನು ಮುಷ್ತಾಕ್ ಅವರ ವಂಶದವರೇ ನಾಶ ಮಾಡಿದಾಗ ಹಿಂದೂ ಭ್ರಾತೃತ್ವ ನಾಶವಾಗಲಿಲ್ಲವೇ?

ರಾಮ ಮಂದಿರವನ್ನು ಮರಳಿ ಹಿಂಪಡೆಯಲೂ ಹಿಂದೂಗಳು ಸುಮಾರು 500 ವರ್ಷಗಳ ಕಾಲ ಪದೇ ಪದೇ ಹೋರಾಟ ನಡೆಸಿ ಲಕ್ಷಾಂತರ ಅಮಾಯಕರ ಜನರ ಬಲಿಯಾದಾಗ, ಭ್ರಾತೃತ್ವ ನೆನಪಾಗಲಿಲ್ಲವೇ? ಅಷ್ಟು ವರ್ಷಗಳ ಸುದೀರ್ಘವಾದ ತ್ಯಾಗ ಬಲಿದಾನಗಳ ಹೋರಾಟದ ನಡುವೆಯೂ ನಮ್ಮ ಶ್ರದ್ಧಾ ಕೇಂದ್ರ ನಮಗೆ ಸಿಗದೇ ಹೋದಾಗ ಮತ್ತು  ಸ್ವಾತಂತ್ರ ಬಂದ ನಂತರ ಆಡಳಿತಕ್ಕೆ ಬಂದ ಪಕ್ಷ ಮುಸಲ್ಮಾನರ ಓಲೈಕೆಗಾಗಿ ಮತ್ತೆ  ದೇವಾಲಯವ ಬಾಗಿಲಿಗೆ ಬೀಗ ಹಾಕಿಸಿದ್ದರ ವಿರೋಧವಾಗಿ ನ್ಯಾಯಾಲಯ ಮೆಟ್ಟಿಲ್ಲನ್ನು ಹತ್ತಿದರೂ ಯಾವುದೇ ಪ್ರಯೋಜನವಾಗದೇ ಹೋದಾಗ,  ನ್ಯೂಟನ್‌ನ ಚಲನೆಯ ಮೂರನೇ ನಿಯಮವಾದ,  ಪ್ರತಿಯೊಂದು ಕ್ರಿಯೆಗೂ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬಂತೆ ಕೆಲವು ಉದ್ರಿಕ್ತ ಗುಂಪೊಂದು 1992ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ದಾಸ್ಯದ ಸಂಕೇತವಾಗಿದ್ದ ಆ ಬಾಬರಿ ಮಸೀದಿಯನ್ನು  ಕುಟ್ಟಿ ಪುಡಿ ಮಾಡಿದರು.

ಅಂಬೇಡ್ಕರ್ ತತ್ವ ಮತ್ತು ಸಂವಿಧಾನದ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುವ ಭಾನು ಮುಷ್ತಾಕ್ ಅವರಿಗೆ ಮೊಘಲರು ನಮ್ಮ ದೇಶದ ಮೇಲೆ ದಾಳಿ ಮಾಡುವ ಮುನ್ನಾ ನಮ್ಮ ದೇಶದಲ್ಲಿ ಮುಸಲ್ಮಾನರು ಇದ್ದರೇ? ಮತ್ತು ದೇವಾಲಯದಲ್ಲಿದ್ದ ಸಂಪತ್ತನ್ನು ದೋಚುವ ಸಲುವಾಗಿ ಮೊಘಲರು ನಮ್ಮ ಶ್ರದ್ಧೇಯ ಕೇಂದ್ರಗಳಾದ ಅಯೋಧ್ಯೆಯ ರಾಮ ಮಂದಿರ, ಕಾಶಿಯ ವಿಶ್ವನಾಥ ಮಂದಿರ ಮತ್ತು ಶ್ರೀ ಕೃಷ್ಣ ಜನ್ಮಸ್ಥಳವಾದ ಮಥುರಾ  ಅಷ್ಟೇ ಅಲ್ಲದೇ ಸುಮಾರು ನಲವತ್ತು ಸಾವಿರ ಇತರೇ ಮಂದಿರ ಮಠ ಮಾನ್ಯಗಳನ್ನು ಛಿದ್ರ ಛಿದ್ರವಾಗಿ ಒಡೆದು ಹಾಕಿದಾಗ ಭ್ರಾತೃತ್ವ ಹಾಳಾಗಲಿಲ್ಲ. ಆದರೆ  ಒಂದು ಬಾಬರಿ ಮಸೀದಿಯನ್ನು ಕೆಡವಿದಾಗ ಭ್ರಾತೃತ್ವ ಹಾಳಾಗುತ್ತದೆ. ವಾರೆ ವಾಹ್ ಅದ್ಭುತವಾಗಿ ಅವರ ಈ ಆಲಾಪ.

ಭಾನು ಮುಷ್ತಾಕ್ ಅವರ ಬಂಧು ಬಾಂಧವರು ಫೆಬ್ರವರಿ 27, 2002ರಂದು ಅಯೋಧ್ಯೆಯಲ್ಲಿ ಶಾಂತ ರೀತಿಯಲ್ಲಿ ಕರಸೇವೆಯನ್ನು ಮಾಡಿಕೊಂಡು ಹಣ ಕೊಟ್ಟು ಟಿಕೇಟ್ ಪಡೆದು ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುಜರಾತಿಗೆ ಹಿಂದಿರುಗುತ್ತಿದ್ದ ಹಿಂದೂ ಕರಸೇವಕರಿದ್ದ S-6 ಕೋಚ್‌ ಗೆ  ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದ ಬಳಿ ಹೊರಗಿನಿಂದ ಚಿಲುಕ ಹಾಕಿ ಅದರ ಮೇಲೆ ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಸುರಿದು ಹೆಂಗಸರು, ಮಕ್ಕಳು ಸೇರಿದಂತೆ ನೂರಾರು ಜನರು ಸಜೀವವಾಗಿ  ಸುಟ್ಟು ಕೊಂದು ಹಾಕಿದಾಗ ಭ್ರಾತೃತ್ವ ಹಾಳಾಗಲಿಲ್ಲ   ಮತ್ತು ಅದಕ್ಕೆ ಪ್ರಚಾರವೂ ಸಿಗಲಿಲ್ಲ ಆದರೆ ಅದಕ್ಕೆ ಪ್ರತೀಕಾರವಾಗಿ ಹಿಂದೂಗಳು ನಡೆಸಿದ ಪ್ರತಿಭಟನೆಗೆ ಮಾತ್ರಾ  ಎಲ್ಲಿಲ್ಲದ ಮಾನ್ಯತೆ ವಾರೆ ವಾಹ್!!  ಹೇಗಿದೆ ನೋಡಿ ಅವರ ಪ್ರಲಾಪ

ಸರಸ್ವತಿ ಸನ್ಮಾನ್ ಪುರಸ್ಕೃತರೂ ಮತ್ತು  ಇತ್ತೀಚೆಗಷ್ಟೇ  ಅಗಲಿದ ನಾಡಿನ ಹೆಸರಾಂತ ಸಾಹಿತಿಗಳಾದ ಶ್ರೀ ಎಸ್. ಎಲ್ ಭೈರಪ್ಪನವರು ತಮ್ಮ ಪ್ರಸಿದ್ಧ  ಕಾದಂಬರಿ ಆವರಣ ಬರೆಯುವ ಮುನ್ನಾ, ಮುಸಲ್ಮಾನರ ಪದ್ಧತಿಗಳು,  ಅವರ ಜೀವನಶೈಲಿ ಮತ್ತು ಸಂಸ್ಕೃತಿಯ ಕುರಿತು ಆಳವಾದ ಸಂಶೋಧನೆ ನಡೆಸುವ ಸಲುವಾಗಿ  ಹಾಸನದಲ್ಲಿರುವ ಇದೇ ಬಾನು ಮುಷ್ತಾಕ್ ಅವರ ಮನೆಗೆ ಅಕೆಯ ಅನುಮತಿಯ ಮೇರೆಗೆ ಸುಮಾರು ಒಂದು ವಾರ ತಂಗಬಹುದೇ? ಎಂದು ಕೇಳಿದಾಗ,  ಇಬ್ಬರು ಹೆಣ್ಣು ಮಕ್ಕಳಿರುವ ಮನೆಯಲ್ಲಿ ಭೈರಪ್ಪನವರನ್ನು ಹೇಗಪ್ಪಾ  ಇರಿಸಿಕೊಳ್ಳುವುದು? ಎಂಬ ಜಿಜ್ಞಾಸೆ ಮೂಡಿತ್ತು ಎಂದು  ಇತ್ತೀಚೆಗೆ ಭಾನು ಮುಷ್ತಾಕ್ ಹೇಳಿಕೊಂಡಿದ್ದಾರೆ. ಭ್ರಾತೃತ್ವದ ಮೇಲೆ ಅಷ್ಟು ನಂಬಿಕೆ ಇರುವ ಭಾನು ಮುಷ್ತಾಕ್ ಅವರು 60+ ವಯಸ್ಸಿನ ಭೈರಪ್ಪನವರನ್ನು ತಮ್ಮ ಸಹೋದರನಂತೆ ಕಂಡಿದ್ದರೆ, ಸಜಹವಾಗಿ  ಅವರ ಹೆಣ್ಣು ಮಕ್ಕಳಿಗೆ ಭೈರಪ್ಪನವರು ಮಾವನಾಗುತ್ತಿದ್ದರು. ಮುಸಲ್ಮಾನರಲ್ಲಿ ತಂದೆಯ ನಂತರ ಜವಾಬ್ಧಾರಿಯುತ ಸ್ಥಾನವನ್ನು ಸೋದರಮಾವನಿಗೆ ಕೊಡುವಂತಹ ಪದ್ದತಿ ಇರುವಾಗ, ಭೈರಪ್ಪನವರಿಂದ ಅವರ ಹೆಣ್ಣು ಮಕ್ಕಳಿಗೆ ತೊಂದರೆಗಿಂತಲೂ ರಕ್ಷಣೆ ದೊರಕುತ್ತಿತ್ತು ಎಂಬ ಭಾವನೆ ಏಕೆ ಮೂಡಲಿಲ್ಲ? ಎನ್ನುವುದೇ ಭ್ರಾತೃತ್ವದ ಬಗ್ಗೆ ಆಕೆಗಿರುವ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಇನ್ನು ಅಂಬೇಡ್ಕರ್ ಅವರು ಸಹೋದರತ್ವವಿಲ್ಲದೆ ಸಮಾನತೆ ಇಲ್ಲ ಎಂದು ಹೇಳಿದ್ದಾರೆ ಎಂದಿರುರುವ ಭಾನು ಆವರಿಗೆ ಅದೇ ಅಂಬೇಡ್ಕರ್ ಅವರು ಧರ್ಮಾಧಾರಿತವಾಗಿ ಈ ದೇಶ ಮೂರು ಭಾಗವಾದಾಗ, ಈ ದೇಶದಲ್ಲಿರುವ ಎಲ್ಲಾ ಮುಸಲ್ಮಾನರನ್ನು ಪಾಕೀಸ್ಥಾನಕ್ಕೆ ಕಳುಹಿಸಿಕೊಡದೇ ಹೋದಲ್ಲಿ, ನಮ್ಮ ದೇಶದ ಶಾಂತಿ ಮತ್ತು ಸೌಹಾರ್ಧತೆಗೆ ಭಂಗವಾಗುತ್ತದೆ ಎಂದು ಹೇಳಿರುವುದನ್ನೂ ಸಹಾ ನೆನಪಿಸಿ ಕೊಳ್ಳ ಬೇಕಲ್ಲವೇ?? ಇನ್ನು ಮಾತು ಎತ್ತಿದದರೆ ಅಂಬೇಡ್ಕರ್ ಸಂವಿಧಾನ ಎಂದು ಹೇಳುವ ಇವರದ್ದೇ ಬಾಂಧವರು, ಅದೇ ಸಂವಿಧಾನ ಬದ್ಧ ಕಾನೂನುಗಳಿಗೆ ತಲೆ ಬಾಗದೇ ನಮಗೆ ನಮ್ಮ ಷರಿಯಾ ಕಾನೂನೇ ದೊಡ್ಡದು ಎಂದು ಹೇಳುವಾಗ ಭ್ರಾತೃತ್ವ ನೆನಪಾಗುವುದಿಲ್ಲವೇ? ಮುಸ್ಲಿಂ ಹೆಣ್ಣು ಮಕ್ಕಳಿಗೆ ತ್ರಿವಳಿ ತಲಾಖ್ ನಿಂದಾಗಿ ತೊಂದರೆ ಆಗುತ್ತಿದ್ದದ್ದನ್ನು ಮನಗಂಡು ಪ್ರಸ್ತುತ ಮೋದಿ ಸರ್ಕಾರ ಸಂವಿಧಾನ ಬದ್ಧವಾಗಿಯೇ ತ್ರಿವಳಿ ತಲಾಖ್ ಸುಧಾರಣಾ ಕಾನೂನು ತಂದಾಗ ಇದೇ ಮತಾಂಧ ಮೂಲಭೂತವಾದಿ ಮನಸ್ಥಿತಿಯ ಭಾನು ಮುಷ್ತಾಕ್ ಅದರ ವಿರುದ್ಧ ಹೋರಾಟ ನಡೆಸಿದಾಗ, ಆಕೆಗೆ ಭ್ರಾತೃತ್ವ ನೆನಪಾಗಲಿಲ್ಲವೇ?

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ  ಹಿಡಿದ ಎನ್ನುವಂತೆ ಆಕೆಯ ಅನುವಾದದ ಲೇಖನಕ್ಕೆ ಬೂಕರ್ ಪ್ರಶಸ್ತಿ ಬಂದರೂ ಆಕೆಯಲ್ಲಿರುವ ಮೂಲಭೂತವಾದಿತನ ಕೊಂಚವೂ ಬದಲಾಗದೇ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇನ್ನೊಬ್ಬರತ್ತ ಒಂದು ಬೆರಳು ತೋರುವ ಮುನ್ನಾ ಉಳಿದ ನಾಲ್ಕು ಬೆರಳುಗಳು ನಮ್ಮತ್ತವೇ ಇರುತ್ತದೆ ಎಂಬುದರ ಅರಿವಿದ್ದರೂ, ತಮ್ಮ ಹಿಂದಿನವರು ಮಾಡಿದ ತಪ್ಪುಗಳ ಬಗ್ಗೆ ಚೆನ್ನಾಗಿ ಅರಿವಿದ್ದರೂ, ಯಾರನ್ನೋ ಓಲೈಸುವ ಸಲುವಾಗಿಯೋ  ಇಲ್ಲವೇ ಮತ್ತಾವುದೋ ಪ್ರಶಸ್ತಿಯ ಆಸೆಗಾಗಿಯೋ, ತಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದ್ದರೂ (ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲಾ! ಆದರೇ ಭಯೋತ್ಪಾದಕರೆಲ್ಲರೂ ಮುಸಲ್ನಾನರೇ!) ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು  ಅನಾವಶ್ಯಕವಾಗಿ ಹಿಂದೂಗಳಿಗೆ ಭ್ರಾತೃತ್ವದ  ಪಾಠ ಹೇಳುವುದು ಎಷ್ಟು ಸರಿ? ಇನ್ನು  ಅಧಿಕಾರದ ಆಸೆಗಾಗಿ ಮತ್ತು  ಆ ಸಮುದಾಯದ  ಓಟಿನ ಆಸೆಗಾಗಿ ಇಂತಹವರನ್ನು ಇಂದ್ರ ಚಂದ್ರ ದೇವೇಂದ್ರ ಎಂದು ಹೊಗಳಿ ಅಟ್ಟಕ್ಕೇರಿಸಿದರೂ (ದಸರಾ ಉದ್ಭಾಟನೆ ಮಾಡಿಸಿದರೆ)  ನಾಯಿ ಬಾಲ ಸದಾ ಕಾಲವೂ ಡೊಂಕು ಎನ್ನುವಂತೆ ಹಿಂದೂಗಳಿಗೆ ಚಟ್ಟ ಕಟ್ಟುವುದಂತೂ ಗ್ಯಾರಂಟಿ (ಇದು ಈ ಸರ್ಕಾರದ 7-8ನೆಯದ್ದೋ ಗ್ಯಾರಂಟಿ ಇರಬಹುದು) ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment