ಎಲ್ಲರಿಗೂ ತಿಳಿದಿರುವಂತೆ ಶಿವಪಾರ್ವತಿಯರ ಎರಡನೆಯ ಮಗ ಮುರುಗ ಅರ್ಥಾತ್ ಸುಬ್ರಹ್ಮಣ್ಯ ಸ್ವಾಮಿ ತಮಿಳುನಾಡಿನ ಬಹುತೇಕರ ಆರಾದ್ಯ ದೈವವಾಗಿದ್ದಾನೆ. ಹಾಗಾಗಿ ತಮಿಳು ನಾಡಿನಲ್ಲಿ ಸಾವಿರಾರು ವೇಲ್ ವೆಟ್ರಿ ಮುರುಗನ್ ದೇವಾಲಯಗಳು ಇದ್ದರೂ, ಅರುಪದೈ ವೀಡು ಎಂದೂ ಕರೆಯಲ್ಪಡುವ ಆರು ಪ್ರಮುಖ ಮುರುಗನ್‌ನ ದೇವಾಯಗಳು ಇದ್ದು ಅವುಗಳೆಂದರೆ, ತಿರುಪ್ಪರಂ ಕುಂಡ್ರಂ, ತಿರುಚೆಂದೂರ್, ಪಳನಿ, ಸ್ವಾಮಿಮಲೈ, ತಿರುತ್ತಣಿ ಮತ್ತು ಪಜಮುದಿರ್ಚೋಲೈ. ಈ ಪವಿತ್ರ ದೇವಾಲಯಗಳಲ್ಲಿ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುವುದಲ್ಲದೇ, ಈ ಸಂಧರ್ಭದಲ್ಲಿ ಅಲ್ಲಿನ ಬಹುತೇಕ ದೇವಾಲಯಗಳಲ್ಲಿ ನಡೆಯುವ ಕಾರ್ತೀಕ ದೀಪೋತ್ಸವವು ಬಹಳ ವಿಶೇಷವಾಗಿರುತ್ತವೆ.
ಕಾರ್ತೀಕ ಮಾಸದಲ್ಲಿ ಹಗಲು ಕಡಿಮೆ ಮತ್ತು ಕತ್ತಲು ಹೆಚ್ಚು ಹಾಗಾಗಿ, ದೀಪ ಬೆಳಗುವ ಮೂಲಕ ಕತ್ತಲನ್ನು ಕಳೆಯಬೇಕು ಎನ್ನುವ ಚಿಂತನೆಯಲ್ಲಿಡಿಯಲ್ಲಿ ಮೂಡಿ ಬಂದದ್ದೇ ಈ ಕಾರ್ತಿಕ ದೀಪೋತ್ಸವವಾಗಿದ್ದು, ಕತ್ತಲು ಸ್ಥಿತಿ ಮತ್ತು ಕತ್ತಲನ್ನು ಹೋಗಲಾಡಿಸುವುದು ಲಯ ಎಂಬ ನಂಬಿಕೆಯಾಗಿದ್ದು, ಸ್ಥಿತಿ ಮತ್ತು ಲಯಗಳ ಕಾರಣೀಭೂತರಾದ ವಿಷ್ಣು ಮತ್ತು ಶಿವ ಇಬ್ಬರೂ ಬೇರೆಯಲ್ಲಾ. ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ, ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಃಶ್ಚ ಹೃದಯಂ ಶಿವಃ ಯಥಾ ಶಿವಮಯೋ ವಿಷ್ಣುಃ ಏವಂ ವಿಷ್ಣುಮಯಃ ಶಿವಃ ಎನ್ನುವಂತೆ ಶಿವ ಮತ್ತು ವಿಷ್ಣು ಇಬ್ಬರೂ ಒಂದೇ ಎನ್ನುವ ಸಂದೇಶವನ್ನು ಸಾರುವ ಮಾಸವೇ ಕಾರ್ತಿಕ ಮಾಸವಾಗಿದ್ದು, ಇಂತಹ ಪವಿತ್ರ ಸಂಧರ್ಭದಲ್ಲಿ ಶಿವ ಮತ್ತು ವಿಷ್ಣು ಭಕ್ತರಿಬ್ಬರೂ ಒಂದುಗೂಡಿ ದೇಗುಲಗಳಲ್ಲಿ ಮತ್ತು ತಮ್ಮ ತಮ್ಮ ಮನೆಗಳ ಮುಂದೆ ದೀಪವನ್ನು ಬೆಳಗುವ ಮೂಲಕ ಆ ದೀಪದ ಬೆಳಕಿನಲ್ಲೇ ತನ್ಮಯತೆಯನ್ನು ಕಂಡು ಕೊಳ್ಳುತ್ತಾರೆ.
ಮಧುರೈ ಬಳಿ ಇರುವ ತಿರುಪ್ಪರಂ ಕುಡ್ರಂ ಬೆಟ್ಟವು ಹಿಂದೂ ಪುರಾಣದ ಪ್ರಕಾರ, ಸುಬ್ರಹ್ಮಣ್ಯನು ಇಂದ್ರನ ಮಗಳಾದ ದೇವಸೇನೆಯನ್ನು ವಿವಾಹವಾದ ಸ್ಥಳ ಎಂದಿರುವ ಕಾರಣ ಇಂದು ಪ್ರವಿತ್ರ ಸ್ಥಳವಾಗಿದ್ದು ಬೆಟ್ಟದ ತಟದಲ್ಲಿ ಮುರುಗನ ದೇವಸ್ಥಾನವಿದ್ದರೆ, ಬೆಟ್ಟದ ಮೇಲೆ ಕಾಶೀ ವಿಶ್ವನಾಥನ ದೇವಸ್ಥಾನವಿದ್ದು ಅದರ ಜೊತೆಯಲ್ಲಿಯೇ ಜೈನ ಶಿಲಾಶಾಸನಗಳು, ಪಾಂಡ್ಯ ಕಾಲೀನ ಕೆತ್ತನೆಗಳು ಮತ್ತು ಪ್ರಾಚೀನ ಗುಹಾಮಂದಿರಗಳಿದ್ದು ಈ ಬೆಟ್ಟವು ಸಂಪೂರ್ಣವಾಗಿ ಹಿಂದೂ ಸಂಸ್ಕೃತಿಗೆ ಸೇರಿದ ಪವಿತ್ರ ಪ್ರದೇಶವಾಗಿದೆ. ಈ ಪಾರಂಪರಿಕ ಬೆಟ್ಟದ ಮೇಲೆ 14ನೇ ಶತಮಾನದ ಮದುರೈ ಸುಲ್ತಾನ ಆಳ್ವಿಕೆಯ ಕಾಲದ ಸಿಕಂದರ್ ಶಾ ಎಂಬ ವ್ಯಕ್ತಿಯ ದರ್ಗಾ ಸಹಾ ಅದೇ ಬೆಟ್ಟದ ಒಂದು ಬದಿಯಲ್ಲಿರುವ ಕಾರಣ ಶತ ಶತಮಾನಗಳಿಂದಲೂ ಈ ಪ್ರದೇಶ ವಿವಾದಕ್ಕೆ ಕಾರಣವಾಗಿದೆ. ಈ ಬೆಟ್ಟದ ಮೇಲಿನ ಹಕ್ಕಿಗಾಗಿ ಹಿಂದೂ ಮತ್ತು ಮುಸಲ್ಮಾನರಲ್ಲಿ ಸದಾಕಾಲವೂ ತಿಕ್ಕಾಟ ನಡೆದು, 1920 ರಲ್ಲೇ ನ್ಯಾಯಾಲಯದ ಮೇಟ್ಟಿಲೇರಿ ಅನೇಕ ವಾದ ವಿವಾದಗಳು ನಡೆದು, 1931 ರ ಪ್ರಿವಿ ಕೌನ್ಸಿಲ್ ತೀರ್ಪು ಮತ್ತು 1935 ರ ನ್ಯಾಯಾಲಯದ ಆದೇಶದ ಪ್ರಕಾರ, ಇಡೀ ಬೆಟ್ಟವು ಅರುಲ್ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದೆ ಎಂದು ಆದೇಶಿಸಿ, ಹಜರತ್ ಸುಲ್ತಾನ್ ಸಿಕಂದರ್ ಬಾದ್‌ಶಾ ದರ್ಗಾದ (ಮಸೀದಿ) ನಿರ್ದಿಷ್ಟ ಸ್ಥಳವು ಅದರ ಧ್ವಜಸ್ತಂಭ ಮತ್ತು ಮೆಟ್ಟಿಲುಗಳನ್ನು ಹೊಂದಿದ್ದು, ಜೊತೆಗೆ ನೆಲ್ಲಿಥೊಪ್ಪು ಎಂದು ಕರೆಯಲ್ಪಡುವ 33-ಸೆಂಟ್ ಪ್ರದೇಶಮಾತ್ರ ಮಹಮ್ಮದೀಯ ಸಮುದಾಯದ ಆಸ್ತಿಯೆಂದು ಸೀಮಿತಗೊಳಿಸಲಾಗಿದೆ.
ಹಾಗೆ ನೋಡಿದರೆ, ಸುಬ್ರಮಣ್ಯ ಸ್ವಾಮಿ, ಕಾಶಿ ವಿಶ್ವನಾಥ ಮತ್ತು ಸಿಕ್ಕಂದರ್ ಬಾದುಷಾ ದರ್ಗಾವನ್ನು ಒಳಗೊಂಡಿದ್ದ ಈ ಭೂಭಾಗದಲ್ಲಿ ಕಳೆದ ಕೆಲವು ದಶಕಗಳಿಂದ ಯಾವುದೇ ರೀತಿಯ ವಿವಾದವಿಲ್ಲದೇ ತಮ್ಮ ತಮ್ಮ ಪಾಡಿಗೆ ಧಾರ್ಮಿಕ ವಿಧಿವಿಧಾನಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಆದರೆ 2025ರ ಫೆಬ್ರವರಿಯಲ್ಲಿ ಹಿಂದೂಗಳ ಪವಿತ್ರ ದೇವಾಲಯವಿರುವ ಬೆಟ್ಟದ ಮೇಲೆ ಕೆಲವು ಮುಸಲ್ಮಾನ ವ್ಯಕ್ತಿಗಳು ಮಾಂಸ ಸೇವಿಸುವ ಮೂಲಕ ದೇವಾಲಯದ ಪಾವಿತ್ರಕ್ಕೆ ಧಕ್ಕೆ ತಂದಿದ್ದಾರೆ ಎಂಬ ವಿಷಯದ ಕುರಿತಾಗಿ ಹಿಂದೂ ಮುನ್ನಣಿ ಸದಸ್ಯರು ಪ್ರತಿಭಟನೆ ನಡೆಸಿದಾಗ, ಅದಕ್ಕೆ ಪೂರಕವಾಗಿ ತಮಿಳುನಾಡಿನಾದ್ಯಂತ ಹಿಂದೂಗಳು ಬೆಂಬಲ ಸೂಚಿಸಿದ ನಂತರ ಈ ವಿವಾದವು ಮುನ್ನಡೆಗೆ ಬಂದ ತಕ್ಷಣವೇ 2026ರ ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯ ತಮಗೆ ಮುಳುವಾಗಬಹುದು ಎಂಬುದನ್ನು ಮನಗಂಡ ಡಿಎಂಕೆ ಸರ್ಕಾರವು ಈ ಬೆಟ್ಟದ ಕುರಿತಾಗಿ ಮುಸಲ್ಮಾನರ ಪರ ವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕಾನೂನಾತ್ಮಕವಾಗಿ ಸುಮಾರು ನೂರು ವರ್ಷಗಳ ಮುಂಚೆಯೇ ಈ ಭೂವಿವಾದ ಪರಿಸಲ್ಪಟ್ಟಿದ್ದರೂ, ಮುಸಲ್ಮಾನರ ಓಲೈಕೆಯಿಂದಾಗಿ ಈ ವಿವಾದ ಇಂದಿಗೂ ಸಹಾ ಬೂದಿ ಮುಚ್ಚಿದ ಕೆಂಡದಂತಿದ್ದು ಬೆಟ್ಟದ ಮೇಲೆ ಕಾರ್ತೀಕ ಮಾಸದಂದು ಕಾರ್ತಿಗೈ ದೀಪ ಬೆಳಗಿಸಲು ಬಹುಸಂಖ್ಯಾತರಾದ ಹಿಂದೂಗಳು ಮುಂದಾದಾಗ ಮುಸಲ್ಮಾನರ ಪರವಾಗಿ ತಮಿಳು ನಾಡಿನ ಸ್ಟಾಲಿನ್ ಆವರ ಡಿಎಂಕೆ ಸರ್ಕಾರಿ ಇದನ್ನು ವಿವಾದವನ್ನಾಗಿಸಿ ನ್ಯಾಯಾಲಯದ ಮೆಟ್ಟಿಲೇರಿ ಹಿಂದೂಗಳು ತಮ್ಮ ಧಾರ್ಮಿಕ ವಿಧಿವಿಧಾನ ನಡೆಸುವುದಕ್ಕೇ ಪದೇ ಪದೇ ನ್ಯಾಯಾಲಯ ಮತ್ತು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗಿರುವುದು ನಿಜಕ್ಕೂ ದುರ್ದೈವ ಸಂಗತಿಯಾಗಿದೆ.
ಹಿಂಸೆಗಳಿಗಿಂತಲೂ ಸತ್ಯ ಮತ್ತು ಪ್ರಾಮಾಣಿಕತೆಯನ್ನೇ ನಂಬಿರುವ ಹಿಂದೂಗಳು ಇದೇ ವಿಷಯಕ್ಕೆ ಕುರಿತಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಸರ್ಕಾರದ ವಾದಕ್ಕೆ ಪ್ರತಿವಾದಿಯಾಗಿ ಹೋರಾಟ ನಡೆಸಿದಾಗ, ಸುಧೀರ್ಘವಾದ ವಾದ ವಿವಾದವನ್ನು ಆಲಿಸಿದ ಮಧುರೈ ಬೆಂಚ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಕಾರ್ತೀಕ ದೀಪೋತ್ಸವವು ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿದ್ದು, ಆ ಬೆಟ್ಟದ ಮೇಲಿರುವ ದೀಪಸ್ಥಂಭದ ಮೇಲೆ ದೀಪ ಹಚ್ಚುವುದರಿಂದ ಯಾರ ಸಂವೇದನೆಗಳನ್ನೂ ನೋಯಿಸುವುದಿಲ್ಲವಾದ್ದರಿಂದ ಡಿಸೆಂಬರ್ 1, 2025ರಂದು ಅಲ್ಲಿನ ದೀಪತೂಣ್‌ನಲ್ಲಿ ದೀಪ ಹಚ್ಚಲು ಹಿಂದೂಗಳಿಗೆ ಅನುಮತಿ ನೀಡುವ ಆದೇಶವನ್ನು ನೀಡಿದರು. ಹೀಗೆ ಹಿಂದೂಗಳ ಪರ ಆದೇಶ ಬಂದು ತಮ್ಮ ವಾದಕ್ಕೆ ಸೋಲಾದದ್ದು ಸ್ಟಾಲಿನ್ ಅವರ ಡಿಎಂಕೆ ಸರ್ಕಾರಕ್ಕೆ ನುಂಗಲಾರದ ತುಪ್ಪದಂತಾಗಿತ್ತು.
ಸತ್ಯಕ್ಕೆ ಮತ್ತೊಮ್ಮೆ ಜಯವಾಗಿದ್ದಕ್ಕೆ ಸಂತೋಷಗೊಂಡ ಹಿಂದೂಗಳು ಆ ಪ್ರದೇಶದಲ್ಲಿ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಮುಂದಾದಾಗ, ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ವಿಪರೀತವಾಗಿ ಓಲೈಸುವ ತಮಿಳುನಾಡಿನ ಡಿಎಂಕೆ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಮನ್ನಣೆ ಕೊಡದೇ, ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು ಎಂಬ ನೆಪವೊಡ್ಡಿ ಆ ಇಡೀ ಬೆಟ್ಟದ ಭೂಭಾಗದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಲ್ಲದೇ ಅಲ್ಲಿಗೆ ಬಂದ ಭಕ್ತರನ್ನು ಬಲವಂತವಾಗಿ ತಡೆದು, ಪೋಲೀಸರ ಮೂಲಕ ಭಕ್ತರ ಮೇಲೆ ಲಾಠಿಚಾರ್ಜ್ ಸಹಾ ನಡೆಸುವ ಮೂಲಕ ಹಿಂದೂಗಳ ಮೇಲೆ ದೌರ್ಜನ್ಯ ಎಸಗುವ ಮೂಲಕ ಹಿಂದೂ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಜಗತ್ತಿಗೆ ಎತ್ತಿ ತೋರಿಸಿದೆ.
ಡಿಎಂಕೆ ಮತ್ತು ಇಂಡಿ ಒಕ್ಕೂಟದ ಮುಸಲ್ಮಾನರ ಓಲೈಕೆ ಇಷ್ಟಕ್ಕೇ ಸೀಮಿತವಾಗದೇ ಮಧುರೈನ ತಿರುಪರಂಕುಂಡ್ರಂ ಬೆಟ್ಟದ ಮೇಲೆ ಕಾರ್ತಿಗೈ ದೀಪ ಬೆಳಗಿಸುವ ಕುರಿತಾಗಿ ಹಿಂದೂಪರ ಆದೇಶ ನೀಡಿರುವುದು ವಿವಾದಾತ್ಮಕವಾಗಿದೆ ಎಂಬ ನೆಪವೊಡ್ಡಿ ಆ ಆದೇಶ ನೀರಿರುವ ಮದ್ರಾಸ್ ಹೈಕೋರ್ಟ್‌ನ ಮಧುರೈ ಬೆಂಚ್ ನ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಅವರ ತೀರ್ಪಿನ ವಿರುದ್ಧ ಲೋಕಸಭಾ ಅಧಿವೇಶನದ ನಡೆಯುತ್ತಿರುವ ಸಮಯದಲ್ಲೇ ನೂರಕ್ಕೂ ಹೆಚ್ಚಿನ ಸಾಂಸದರು ಸಹಿ ಹಾಕಿರುವ ಮಹಾಭಿಯೋಗವನ್ನು ಮಂಡಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವುದಲ್ಲದೇ ನ್ಯಾಯಾಲಯದ ನಿಂದನೆಯನ್ನು ಮಾಡಿರುವುದು ದೇಶದ ಶಾಂತಿ ಮತ್ತು ಸೌಹಾರ್ಧತೆಗೆ ಭಂಗವಾಗಿರುವುದಲ್ಲದೇ, ಡಿಎಂಕೆ ಮತ್ತು ಇಂಡಿ ಒಕ್ಕೂಟದ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿದ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ದ್ರೋಹ ಬಗೆದಿರುವುದು ಅಕ್ಷಮ್ಯ ಅಪರಾಧವಾಗಿದೆ.
ತಮಿಳುನಾಡಿನ ಡಿಎಂಕೆ ನೇತೃತ್ವದ ಸರಕಾರದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (ಎಚ್‌ಆರ್ &ಸಿಇ) ಸಚಿವರಾದ ಪಿಕೆ ಶೇಖರ್ ಬಾಬು ಅವರು ತಿರುಪ್ಪರಂ ಕುಂಡ್ರ ನಲ್ಲಿ ದೀಪ ಬೆಳಗುವುದರಿಂದ ಬೀದಿಯಲ್ಲಿ ರಕ್ತ ಹರಿಯಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅನಾದಿ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಹಿಂದೂಗಳ ಶ್ರದ್ದೆಯನ್ನು ಧಿಕ್ಕರಿಸಿರುವುದಲ್ಲದೇ, ಮತ್ತೊಂದು ಕೋಮಿನವರನ್ನು ಪ್ರಚೋದಿಸಿ ಬಲವಂತವಾಗಿ ಹಿಂದೂಗಳ ಮೇಲೆ ಧಾಳಿ ನಡೆಸುವ ಹುನ್ನಾರವಿದೆ ಎಂಬುದನ್ನು ಸಾಧಾರಣ ಜನರೂ ಅರ್ಥ ಮಾಡಿಕೊಳ್ಳಬಹುದಾಗಿದೆ.
ಈ ದೇಶದ ಅತಿ ದೊಡ್ಡ ವಿಪರ್ಯಾಸವೇನೆಂದರೆ ಹೋದ ಬಂದ ಕಡೆಯಲ್ಲೆಲ್ಲಾ ಕೆಂಪು ಬಣ್ಣದ ಖಾಲಿ ಪುಸ್ತಕವನ್ನೇ ಸಂವಿಧಾನದ ಪುಸ್ತಕ ಎಂದು ತೋರಿಸುತ್ತಾ, ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿಯುವ ಇಂಡಿ ಒಕ್ಕೂಟದ ನಾಯಕ ರಾಹುಲ್ ಗಾಂಧಿ, ಅವನ ತಂಗಿ ಪ್ರಿಯಾಂಕಾ ಮತ್ತು ಕರ್ನಾಟಕದ ಕೆಲವು ಸಾಂಸದರೂ ಸಹಾ ಈ ಮಹಾಭಿಯೋಗಕ್ಕೆ ಸಹಿ ಯಾಕುವ ಮೂಲಕ ಸಾಂವಿಧಾನಿಕವಾಗಿ ತೀರ್ಪನ್ನು ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಮುಂದಾಗಿರುವುದು ರಾಜಕೀಯ ಪ್ರೇರಿತ ದಾಳಿ ಮತ್ತು ನ್ಯಾಯಾಂಗವನ್ನೇ ಹತ್ತಿಕ್ಕುವ ಯತ್ನವಾಗಿರುವುದಲ್ಲದೇ, ಬಹು ಮುಖ್ಯವಾಗಿ ಹಿಂದೂ ಪರ ಹಕ್ಕುಗಳನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿಗಳ ವಿರುದ್ಧದ ನಡೆಯಾಗಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ.
ಹಿಂದೂಗಳ ಹಕ್ಕಿನ ಪರವಾಗಿ ತೀರ್ಪನ್ನು ನೀಡಿರುವ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿ ನಿಲುವಳಿಯನ್ನು ಮಂಡಿಸಲು ಮುಂದಾಗಿರುವುದನ್ನು ವಿರೋಧಿಸಿ ಐವತ್ತಕ್ಕೂ ಹೆಚ್ಚು ನಿವೃತ್ತ ನ್ಯಾಯಾಧೀಶರು ಇದೀಗ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಅವರ ಬೆಂಬಲಕ್ಕೆ ನಿಂತಿರುವುದಲ್ಲದೇ, ನ್ಯಾಯಾಂಗದ ವಿರುದ್ಧ ಡಿಎಂಕೆ ಮತ್ತು ಇಂಡಿ ಒಕ್ಕೂಟದ ನಡೆಯು ನ್ಯಾಯಾಂಗಕ್ಕೆ ಮಾಡುವ ಅವಮಾನವೂ ಮತ್ತು ಅಗೌರವವೂ ಆಗಿದ್ದು, ನ್ಯಾಯಾಂಗದ ಸಾಂಸ್ಥಿಕ ವ್ಯವಸ್ಥೆಯನ್ನೇ ತಿರುಚಲು ಮಾಡುವ ಯತ್ನವಾಗಿದೆ. ಇಂತಹ ರಾಜಕೀಯ ಬೆದರಿಕೆಗಳಿಗೆ ಈ ದೇಶವು ಎಂದಿಗೂ ಜಗ್ಗ ಬಾರದು ಎಂದು ಆಗ್ರಹಿಸಿದ್ದಾರೆ.
ತಮಿಳುನಾಡಿನಲ್ಲಿ ಸಾವಿರಾರು ವರ್ಷಗಳ ಹಿನ್ನಲೆ ಇರುವ ಹತ್ತಾರು ಹಿಂದೂ ದೇವಾಲಯಗಳು ಮತ್ತು ಸಾವಿರಾರು ಎಕರೆಯಷ್ಟು ಜಮೀನುಳ್ಳ ಇಡೀ ಇಡೀ ಹಳ್ಳಿಯನ್ನೇ ವಕ್ಫ್ ಮಂಡಲಿ ತನಗೆ ಸೇರಿದ್ದೆಂದು ಭೂ ಕಬಳಿಕೆ ಮಾಡಲು ಮುಂದಾದಾಗ ಅದಕ್ಕೆ ಚಕಾರವನ್ನೂ ಎತ್ತದ ಇದೇ ಡಿಎಂಕೆ, ಈಗ ಹಿಂದೂಗಳ ಪರವಾಗಿ ಕೇವಲ ಒಂದೇ ಒಂದು ಆದೇಶ ಬಂದಿದ್ದನ್ನೇ ವಿರೋಧಿಸಿ ಅನಗತ್ಯವಾಗಿ ಮಧ್ಯಪ್ರವೇಶಿಸಿರುವುದು ಸ್ಪಷ್ಟವಾಗಿ ಒಂದು ಸಮುದಾಯದ ಓಲೈಕೆಯೇ ಆಗಿದೆ. ಹಿಂದೂ ದೇವಾಲಯಗಳ ಆದಾಯದ ಮೇಲೆ ಕಣ್ಣಿಟ್ಟು ಹಿಂದೂ ದೇವಾಲಯಗಳನ್ನು ನಿಯಂತ್ರಿಸುವ ಇದೇ ಸರ್ಕಾರಗಳು ಅಲ್ಲಿನ ಕಾಣಿಕೆಯನ್ನು ಬೇರೆ ಯಾವುದೋ ಉದ್ದೇಶಕ್ಕೆ ಖರ್ಚು ಮಾಡುವುದಲ್ಲದೇ, ನಮ್ಮ ದೇವಾಲಯಗಳ ಸಂಸ್ಕೃತಿ, ಆಚರಣೆಗಳನ್ನು ನಿರ್ಬಂಧಿಸುವಂತಹ ದೌರ್ಜನ್ಯವನ್ನು ತಮಿಳುನಾಡಿನಲ್ಲಿ ಇದುವರಿಗೂ ಆಡಳಿತಕ್ಕೆ ಬಂದ ಎಲ್ಲಾ ಪಕ್ಷಗಳ ಸರ್ಕಾರಗಳು ಅನೂಚಾನವಾಗಿ ನಡೆಸಿಕೊಂಡು ಬರುತ್ತಿವೆ. ಈಗ ಹಿಂದೂ ಧಾರ್ಮಿಕ ನಂಬಿಕೆಗಳ ಪರವಾಗಿ ತೀರ್ಪು ನೀಡಿರುವ ನ್ಯಾಯಾಧೀಶರ ಪದಚ್ಯುತಿಗೆ ಯತ್ನಿಸುತ್ತಿದ್ದಾರೆ. ಮುಂದೆ ಅವರ ರಾಜಕೀಯ ಸಿದ್ಧಾಂತಗಳಿಗೆ ವಿರುದ್ಧವಾಗಿ ತೀರ್ಪು ನೀಡುವ ಪ್ರತಿಯೊಬ್ಬ ನ್ಯಾಯಾಧೀಶರನ್ನೂ ಪದಚ್ಯುತಿಗೊಳಿಸಲು ಹುನ್ನಾರ ನಡೆಸುವುದಿಲ್ಲಾ ಎಂಬುದನ್ನು ಹೇಗೆ ತಾನೇ ನಂಬಲು ಸಾಧ್ಯ?
ಸ್ವಾತ್ರಂತ್ರ್ಯ ಬಂದಾಗಲಿಂದಲೂ ಈ ದೇಶವನ್ನು ಆಳಿದ ಕಾಂಗ್ರೇಸ್ ಕೊಡುಗೆ ನಗಣ್ಯ ಎಂದು ಅರಿತ ಭಾರತೀಯರು ಕಾಂಗ್ರೇಸ್ ಮತ್ತು ಅದರ ಅಂಗಪಕ್ಷಗಳನ್ನು ದೂರವಿಟ್ಟ ತಕ್ಷಣ, ಕುಣಿಯಲಾರದವಳಿಗೆ ನೆಲ ಡೊಂಕು ಎನ್ನುವಂತೆ, ಇವಿಎಂ ಸರಿ ಇಲ್ಲಾ ಎಂದು ಹೇಳಿವರು ಈಗ ಓಟ್ ಚೋರಿ ಎನ್ನುತ್ತಿದ್ದಾರೆ. ಸರಿ ಮತದಾರ ಪಟ್ಟಿಯನ್ನು ಸರಿಪಡಿಸೋಣ ಅದಕ್ಕೆ ನಿಮ್ಮ ಬೆಂಬಲವಿರಲಿ ಎಂದರೆ ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬ್ರಿಟೀಷರು ಹೇಗೆ ಭಾರತವನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಒಡೆದರೋ ಹಾಗೆಯೇ ಈ ಡಿಎಂಕೆ ಮತ್ತು ಇಂಡಿ ಒಕ್ಕೂಟವು ಅಧಿಕಾರಕ್ಕಾಗಿ ದೇಶವನ್ನು ಮತ್ತೊಮ್ಮೆ ಛಿದ್ರ ಛಿದ್ರ ಮಾಡುತ್ತಿರುವುದು ಆಘಾತಕಾರಿಯಾಗಿದೆ.
ಮುಂಬರುವ ಎಲ್ಲಾ ಚುನಾವಣೆಗಳೂ ಸಹಾ ಬಹಳ ಪ್ರಾಮುಖ್ಯತೆ ಪಡೆದಿದ್ದು, ಧರ್ಮ ಉಳಿದರೆ ಮಾತ್ರಾ ದೇಶ ಉಳಿದೀತು ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಯಾರು ನಮ್ಮ ಧರ್ಮ ಮತ್ತು ದೇಶದ ಅಖಂಡತೆಯನ್ನು ಕಾಪಾಡುತ್ತಾರೋ ಆಂತಹವರನ್ನು ಮಾತ್ರವೇ ಆಯ್ಕೆಮಾಡಬೇಕಾಗಿದೆ. ನನ್ನ ಒಂದು ಓಟಿನಿಂದ ಬದಲಾವಣೆ ಆಗುತ್ತದೆಯೇ? ಎಂದು ಕೊಳ್ಳುವವರಿಗೆ ಇತ್ತೀಚೆಗಷ್ಟೇ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆ ವಡನಪ್ಪಿಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ತೋರಿಸಿ ಕೊಟ್ಟಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ವಡನಪ್ಪಿನಲ್ಲಿ ಎಲ್ಲಾ ಮುಸಲ್ಮಾನರೂ ಒಗ್ಗಟ್ಟಾಗಿ SDPI ಪಕ್ಷವನ್ನು ಬೆಂಬಲಿಸಿದ ಕಾರಣ ಅವರ ಅಭ್ಯರ್ಥಿ ನೌಫಲ್ ವಾಲಿಕಾಟ್ ಅವರು ಬಿಜೆಪಿ ಅಭ್ಯರ್ಥಿಯ ವಿರುದ್ದ ಕೇವಲ ಒಂದು ಮತದಿಂದ ಅಂತರದಿಂದ ಜಯಸಾಧಿಸುವ ಮೂಲಕ ಒಂದು ಮತಕ್ಕೂ ಎಷ್ಟು ಪ್ರಾಮುಖ್ಯತೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದ್ದಲ್ಲದೇ, ಹಿಂದೂಗಳಲ್ಲಿ ಒಗ್ಗಟ್ಟಿಲ್ಲಾ ಎಂಬು ಕಠು ಸತ್ಯವನ್ನು ಜಗಜ್ಜಾಹೀರಾತು ಮಾಡಿದೆ.
ಹಿಂದೂ ಉಳಿದರೆ ಮಾತ್ರವೇ ಹಿಂದೂಸ್ಥಾನ ಉಳಿದೀತು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಲೇ ಬೇಕು ಎಂಬುದನ್ನು ಮನಸ್ಸಿಲ್ಲಿ ಇಟ್ಟುಕೊಂಡು, ಹಿಂದುತ್ವಕ್ಕೆ ಜೀವ ಕೊಡುವುದು ಬೇಕಾಗಿಲ್ಲ. ಪ್ರತಿಯೊಬ್ಬ ಹಿಂದುವೂ ಹಿಂದುತ್ವಕ್ಕೆ ವೋಟ್ ಮಾಡಿದರೂ ಸಾಕು ಹಿಂದುತ್ವ ಅಜರಾಮರವಾಗುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ