ಏಕದಂತ ಮಿತ್ರ ವೃಂದ ಕನ್ನಡ ರಾಜ್ಯೋತ್ಸವ

ಅಲ್ಲಿ ಹಾರ ತುರಾಯಿಗಳಿರಲಿಲ್ಲ. ಬಾಜಾ ಭಜಂತ್ರಿಯ ಅಬ್ಬರವಿರಲಿಲ್ಲ. ಹೇಳಿಕೊಳ್ಳುದಕ್ಕೆ ದೊಡ್ಡವರಾರು ಇರರಲಿಲ್ಲ. ಅಲ್ಲಿದ್ದ ಬಹುತೇಕರು ಸಣ್ಣ ವಯಸ್ಸಿನ ಮಕ್ಕಳೇ. ಇನ್ನೂ ಹೇಳಬೇಕೆಂದರೆ  ಅಲ್ಲಿದ್ದವರ ಹೆಚ್ಚಿನ ಮಾತೃಭಾಷೆ ಕನ್ನಡವೇ ಆಗಿರಲಿಲ್ಲ. ಆದರೂ ಅವರೆಲ್ಲರೂ ಸುಲಲಿತವಾಗಿ ಕನ್ನಡ ಮಾತನಾಡುವ ಮೂಲಕ  ಕನ್ನಡಿಗರೇ ಆಗಿದ್ದರು  ಮತ್ತು  ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಠಿ ಬದ್ದರಾಗಿದ್ದರು. ಹೌದು. ನೆನ್ನೆ ಬೆಳಿಗ್ಗೆ  ಬೆಂಗಳೂರಿನ ತಿಂಡ್ಲುವಿನ ವಿಶ್ವೇಶ್ವರಯ್ಯ ಬಡಾವಣೆಯ ಏಕದಂತ ಮಿತ್ರ ವೃಂದದ ಸಣ್ಣ ವಯಸ್ಸಿನ ಮಕ್ಕಳು ತಮ್ಮ ಪೋಷಕರೊಡಗೂಡಿ ಕರುನಾಡ ಹೆಮ್ಮೆಯ ಹಬ್ಬ  ಕರ್ನಾಟಕ… Read More ಏಕದಂತ ಮಿತ್ರ ವೃಂದ ಕನ್ನಡ ರಾಜ್ಯೋತ್ಸವ

ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡದ ಮೇರು ನಟ ಬಾಲಕೃಷ್ಣ ಅವರ ಜೊತೆ ಜೊತೆಯಲ್ಲಿಯೇ ಗುಬ್ಬಿ ನಾಟಕದ ಕಂಪನಿಯಲ್ಲಿದ್ದು ನಂತರ ರಾಧಾ ರಮಣ ಚಿತ್ರದ ಮೂಲಕವೇ ಒಟ್ಟೊಟ್ಟಿಗೆ ಚಿತ್ರರಂಗ ಪ್ರವೇಶಿಸಿ ಮುಂದೆ ದಿಗ್ಗಜರಾಗಿ ಬೆಳೆದ ಮಹಾನ್ ನಟ, ಚಿತ್ರಸಾಹಿತಿ, ಸಂಭಾಷಣೆಕಾರ, ಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ, ಕನ್ನಡ ಚಿತ್ರರಂಗದ ರಾಜರ್ಷಿ, ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹ ಎಂದರೂ ತಪ್ಪಾಗಲಾರದ ಶ್ರೀ ಗಣಪತಿ ವೆಂಕಟರಮಣ ಅಯ್ಯರ್ ಅರ್ಥಾತ್ ಜಿ.ವಿ.ಐಯ್ಯರ್ ಅವರ ಸಾಧನೆಗಳನ್ನು ಮೆಲುಕು ಹಾಕೋಣ. 1917ರ ಸೆಪ್ಟೆಂಬರ್ 3ರಂದು ನಂಜನಗೂಡಿನ… Read More ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡಾಭಿಮಾನಿ ಬಾಲಕೃಷ್ಣ

ಅಭಿನಯ ಎಲ್ಲರೂ ಮಾಡುವುದಕ್ಕಾಗುವುದಿಲ್ಲ. ಪ್ರತಿಯೊಂದು ಪಾತ್ರದಲ್ಲೂ ಅಭಿನಯಿಸಬೇಕಾದರೆ, ಆ ನಟನಿಗೆ ಆ ಪಾತ್ರದ ಸಂಫೂರ್ಣ ಪರಿಚಯವಿರಬೇಕು. ಆತ ತನ್ನ ಸಹನಟನ ಸರಿ ಸಮಾನಾಗಿ ಸೇರಿಗೆ ಸವ್ವಾ ಸೇರು ಎನ್ನುವಂತೆ ಕೇವಲ ಸಂಭಾಷಣೆಯಲ್ಲದೇ ಆಂಗೀಕವಾಗಿಯೂ ಅಭಿನಯಿಸ ಬೇಕಾಗುತ್ತದೆ. ಹಾಗೆ ಆಭಿನಯಿಸಲು ಪಾತ್ರದಲ್ಲಿ ತನ್ಮಯತೆ ಮತ್ತು ನಿರ್ದೇಶಕರು ಹೇಳಿಕೊಟ್ಟದ್ದನ್ನು ಅರ್ಥೈಸಿಕೊಂಡು ಅವರು ಹೇಳಿದ ರೀತಿಯಲ್ಲಿಯೇ ನಟಿಸಿ ತೋರಿಸ ಬೇಕಾಗುತ್ತದೆ. ಈ ರೀತಿಯಾಗಿ ಮಾಡಲು ಕಣ್ಣು ಕಿವಿ ಮತ್ತು ನಾಲಿಗೆ ಚುರುಕಾಗಿರ ಬೇಕು. ಆದರೆ ಕನ್ನಡ ಚಲನ ಚಿತ್ರ ಕಂಡ ಒಬ್ಬ… Read More ಕನ್ನಡಾಭಿಮಾನಿ ಬಾಲಕೃಷ್ಣ

ಶ್ರೀ ಗಳಗನಾಥರು

ಅದು ಹದಿನೆಂಟನೇಯ ಶತಮಾನದ ಅಂತ್ಯದ ಕಾಲ. ಎಲ್ಲೆಡೆಯಲ್ಲಿಯೂ ಸ್ವಾತಂತ್ರ್ಯೋತ್ಸವದ ಕಿಚ್ಚು ಹರಡಿತ್ತು. ಆಗ ಉತ್ತರ ಕರ್ನಾಟಕದಲ್ಲಿ ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ ಮತ್ತು  ಹರಿ ನಾರಾಯಣ ಆಪ್ಟೆಯವರ ಕರಮಣೂಕ ಪತ್ರಿಕೆಗಳದ್ದೇ ಭರಾಟೆ. ಕನ್ನಡಿಗರಿಗೆ ಕನ್ನಡ ಪತ್ರಿಕೆಗಳು ಸಿಗದ ಕಾರಣ ಕನ್ನಡಿಗರು ಸಹಾ ಮರಾಠಿ ಪತ್ರಿಕೆಗಳ ಮೂಲಕವೇ ಸುದ್ಧಿಗಳನ್ನು ತಿಳಿಯಬೇಕಾಗಿತ್ತು. ಆಗಷ್ಟೇ ಶಿಕ್ಷಕರ ತರಭೇತಿ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ತರುಣನಿಗೆ ಅರೇ ಈ ಎಲ್ಲಾ ಸಾಹಿತ್ಯಗಳೂ ಕನ್ನಡದಲ್ಲಿಯೇ ಓದುವಂತಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸಿ ಆ ಎಲ್ಲಾ ಸಾಹಿತ್ಯಗಳನ್ನೂ… Read More ಶ್ರೀ ಗಳಗನಾಥರು

64ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀಗಂಧ ಕನ್ನಡ ಸಂಘದ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮತ್ತು ಸಡಗರಗಳಿಂದ ಅಧ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವನ್ನು  ಸ್ಥಳೀಯ ಮುಖಂಡರುಗಳಾದ ಶ್ರೀಯುತ ತಿಂಡ್ಲು ಬಸವರಾಜ್ ಅವರ ಸಮ್ಮುಖದಲ್ಲಿ ಶ್ರೀ ಹರಿಯವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ತಿಂಡ್ಲುವಿನ ಬಸವೇಶ್ವರ ಪ್ರತಿಮೆಯ ಆವರಣದಲ್ಲಿ  ಆರೋಹಣ ಮಾಡುವುದರ ಮೂಲಕ ಉಧ್ಘಾಟಿಸಲಾಯಿತು. ನಂತರ ಎಲ್ಲರ ಒಕ್ಕೊರಲಿನ ಕಂಠಗಳಿಂದ  ಸುಂದವಾಗಿ ಮೂಡಿಬಂದ ನಾಡ ಗೀತೆ ಜೈ ಭಾರತ ಜನನಿಯ ತನುಜಾತೆ ಎಲ್ಲರ ಗಮನ ಸೆಳೆಯಿತು. … Read More 64ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಶ್ರೀ ಆಲೂರು ವೆಂಕಟರಾಯರು

ವಕೀಲರಾಗಿ, ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ಪ್ರಕಾಶಕರಾಗಿ, ಅನೇಕ ಸಂಘ ಸಂಸ್ಥೆಗಳ ಸಂಸ್ಕಾಪಕರಾಗಿ, ಸಂಘಟಿಕರಾಗಿ, ಸಂಶೋಧಕರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ ಒಟ್ಟಿನಲ್ಲಿ *ಆಡು ಮುಟ್ಟದ ಸೊಪ್ಪಿಲ್ಲ ಆಲೂರು ವೆಂಟರಾಯರು* ಮಾಡದ ಕೆಲಸವಿಲ್ಲ ಎಂಬಂತೆ ಕರ್ನಾಟಕದ ಏಕೀಕರಣಕ್ಕೆ ಅಹಿರ್ನಿಶಿಯಾಗಿ ದುಡಿದ ಕನ್ನಡದ ಕುಲಪುರೋಹಿತರ ಜಯಂತಿಯಂದು ಅವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಸರಿ… Read More ಶ್ರೀ ಆಲೂರು ವೆಂಕಟರಾಯರು

ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ

ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು. ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್|| ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ… Read More ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ

ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ, ಹೆಡತಲೆ

ನಂಜನಗೂಡಿನಿಂದ ಚಾಮರಾಜ ನಗರದ ಕಡೆ ಸುಮಾರು 10 ಕಿಮೀ ನಷ್ಟು ದೂರ ಕ್ರಮಿಸಿದರೆ ಬದನವಾಳು ಎಂಬ ಗ್ರಾಮಕ್ಕೆ ತಲುಪಿ ಅಲ್ಲಿಂದ ಬಲಕ್ಕೆ ತಿರುಗಿದಲ್ಲಿ ದೊಡ್ಡದಾದ ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ ಸಂತಾನ ವೇಣುಗೋಪಾಲಸ್ವಾಮಿ ದೇವಾಲಯ, ಹೆಮ್ಮರಗಾಲ ಎಂಬ ಕಮಾನು ನಮ್ಮನ್ನು ಸ್ವಾಗತಿಸುತ್ತದೆ. ಆ ಕಮಾನನ್ನು ದಾಟಿ ಕೇವಲ 2.5 ಕಿಮೀ ದೂರ ಕ್ರಮಿಸಿದರೆ ಸಿಗುವುದೇ ಅತ್ಯಂತ ಪುರಾಣ ಪ್ರಸಿದ್ಧ ಹೆಡೆತಲೆ ಎಂಬ ಗ್ರಾಮದ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ. ದ್ವಾಪರಯುಗದಲ್ಲಿ ಕೌಂಡಿನ್ಯ ಋಷಿಗಳು ಈ ಪ್ರದೇಶದಲ್ಲಿ ತಮ್ಮ… Read More ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ, ಹೆಡತಲೆ

ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ, ಸಂತಾನ ವೇಣುಗೋಪಾಲಸ್ವಾಮಿ, ಹೆಮ್ಮರಗಾಲ

ನಂಜನಗೂಡು ಮತ್ತು ಚಾಮರಾಜ ನಗರದ ಮಧ್ಯೆ ಇರುವ ಬದವನವಾಳು ಗ್ರಾಮದಿಂದ ಕೇವಲ 5 ಕಿಮೀ ದೂರದಲ್ಲಿರುವ ಪುರಾಣ ಪ್ರಸಿದ್ಧವಾದ ಹೆಮ್ಮರಗಾಲದ ಸ್ಥಳ ಪುರಾಣ ಮತ್ತು ಅಲ್ಲಿನ ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ವೈಶಿಷ್ಟ್ಯತೆಗಳು ಮತ್ತು ಸ್ವಾಮಿಯ ಪವಾಡಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ, ಸಂತಾನ ವೇಣುಗೋಪಾಲಸ್ವಾಮಿ, ಹೆಮ್ಮರಗಾಲ