ಸಾವಯವ ಸಂತೆ ವಿದ್ಯಾರಣ್ಯಪುರ

ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸ್ವದೇಶೀ ಜಾಗರಣ ಮಂಚ್ ನೇತೃತ್ವದಲ್ಲಿ ನೆಡೆಯುತ್ತಿರುವ ಸಾವಯವ ಸಂತೆ ನಿಮ್ಮೆಲ್ಲರ ಸಹಕಾರದಿಂದ ಇಂದೂ ಕೂಡಾ ಅಭೂತಪೂರ್ವ ಯಶಸ್ವಿಯಾಗಿ ನಡೆಯಿತು ಎಂದು ತಿಳಿಸಲು ಹರ್ಷಿಸುತ್ತೇವೆ. ಇಂದು ಬೆಳಿಗ್ಗೆ ನಿಗಧಿತ ಸಮಯವಾದ 8.00 ಗಂಟೆಗೆ ಆರಂಭವಾಗುತ್ತದೆ ಎಂದು ತಿಳಿಸಿದ್ದರೂ ಹಲವಾರು ಜನ 7:30 ಕ್ಕೆಲ್ಲಾ ಆಗಮಿಸಿ ಕಾರ್ಯಕ್ರಮದ ಆಯೋಜಕರಿಗೆ ಇನ್ನೂ ಯಾಕೆ ಶುರುಮಾಡಿಲ್ಲ ಎಂದು ಪ್ರಶ್ನಿಸುತ್ತಿದ್ದದ್ದು ನಿಜಕ್ಕೂ ಅದ್ಭುತವಾಗಿತ್ತು. ಇನ್ನೂ ಕೆಲವು ಸಾರ್ವಜನಿಕರು ರೈತರಿಗೆ ಅವರ ತರಕಾರಿ ಮತ್ತು… Read More  ಸಾವಯವ ಸಂತೆ ವಿದ್ಯಾರಣ್ಯಪುರ

ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ಫೆಬ್ರವರಿ 4 ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಎಂಬ ಮಹಾಮಾರಿ ಬಾರದಂತೆ ತಡೆಗಟ್ಟಲು ಅಥವಾ ಅದರಿಂದ ಗುಣವಾಗಲು ಆನುಸರಿಸಬೇಕಾದ ಉತ್ತಮ ಜೀವನ ಶೈಲಿ ಇದೋ ನಿಮಗಾಗಿ… Read More ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ರಾಮ ರಾವಣ -2

ನಾವೆಲ್ಲಾ ಓದಿದಂತೆ‌ ಇಲ್ಲವೇ ಕೇಳಿ ತಿಳಿದಂತೆ ರಾಮ‌ ಒಳ್ಳೆಯವನು‌ ಮತ್ತು ರಾವಣ ಕೆಟ್ಟವನು ಅದ ಕಾರಣ ರಾವಣ ‌ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸ‌ಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು ಎಂದು ನಮ್ಮ ಮನಃಪಠದಲ್ಲಿ ಅಚ್ಚೊತ್ತಿದೆ. ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ‌ಹಾಗೂ‌‌ ಕೆಟ್ಟ ಗುಣಗಳಿದ್ದು ಅದು ಸಂದರ್ಭಕ್ಕನುಗುಣವಾಗಿ ‌ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ‌‌‌ ಮಾಡಿದಾಗ ಪ್ರೋತ್ಸಾಹಿಸಿ, ಕೆಟ್ಟ‌ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ. ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ… Read More ರಾಮ ರಾವಣ -2

ರಾಮ ರಾವಣ-1

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನೆನಿಸ‌ ಬಹುದಾದರೂ, ಆತಾ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು. ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌… Read More ರಾಮ ರಾವಣ-1

ದುಡ್ಡಿನ ಮಹತ್ವ

ಸುಮಾರು ಸಾವಿರದ ಒಂಬೈನೊರ ಎಂಬತ್ತಾರು, ಎಂಬತ್ತೇಳರ ಸಮಯ, ನಾನಿನ್ನೂ ಆಗಷ್ಟೇ ಕಾಲೇಜಿಗೆ ಸೇರಿದ್ದನಷ್ಟೆ. ಕಾಲೇಜಿಗೆ ಹೋಗುವ ಹುಡುಗನಾದರೂ ನೋಡಲು ಏಳು ಅಥವಾ ಎಂಟನೇ ತರಗತಿಯ ‌ವಿದ್ಯಾರ್ಥಿ ಅನ್ನುವ ಹಾಗೆ ಕಾಣುತ್ತಿದೆ. ಕುಳ್ಳಗೆ ಸಣ್ಣಗಿದ್ದ ನನ್ನನ್ನು ನನ್ನ ತಾಯಿ ವೈದ್ಯರ ಬಳಿ‌ ಕರೆದುಕೊಂಡು ಹೋಗಿ‌ ಡಾಕ್ಟ್ರೇ ನನ್ನ ‌ಮಗನಿಗೆ ಯಾವುದಾದರು ವಿಟಮಿನ್ ಟಾನಿಕ್‌ ಕೊಡಿ‌ ಸ್ವಲ್ಪ ಉದ್ದ ಮತ್ತು ಗಾತ್ರವಾಗಲಿ‌ ಎಂದು‌‌ ಕೋರಿದ್ದೂ ಉಂಟು. ಆದರೆ ನನ್ನ ತಂದೆ ‌ನಮ್ಮ ವಂಶದಲ್ಲಿ ಗಂಡುಮಕ್ಕಳೆಲ್ಲರೂ ಹದಿನೆಂಟರ ನಂತರವೇ ಬೆಳಯುವುದು ಎಂದು‌… Read More ದುಡ್ಡಿನ ಮಹತ್ವ

ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು.… Read More ಬುದ್ಧಿವಂತ ರೈತ

ಮೊಬೈಲ್ ಫೋನ್ ಅನಾಹುತ

ಎಂದಿನಂತೆಯೇ  ಇಂದು ಬೆಳ್ಳಂಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೈನಂದಿನ ವ್ಯಾಯಮವನ್ನು ಮುಗಿಸಿ ಮನೆಗೆ ಬಂದು ವಾಟ್ಸಾಪ್ ಸಂದೇಶಗಳನ್ನು ಓದುತ್ತಿದ್ದಾಗ,15 ವರ್ಷಗಳ ನನ್ನ ಮಗನಷ್ಟೇ ವಯಸ್ಸಿನ   ಪರಿಚಯಸ್ಠ ಬಾಲಕನ ಅಕಾಲಿಕ ಮರಣ ಸುದ್ದಿ ಓದಿ  ಕರಳು ಚುರುಕ್ ಎಂದಿತು. ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗ, ಹಾಡು, ಅಮೃತವಚನ, ಶ್ಲೋಕಗಳನ್ನು ನಿರ್ಗಳವಾಗಿ ಹೇಳುತ್ತಿದ್ದದ್ದು ಕಣ್ಣುಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿ, ಅಭ್ಯಾಸದ ಬಲದಂತೆ  ಭಗವಂತನು ಮೃತನ ಆತ್ಮಕ್ಕೆ  ಶಾಂತಿ ಕೊಡಲಿ ಹಾಗು ಮಗನನ್ನು ಕಳೆದು ಕೊಂಡ ಕುಟುಂಬವರ್ಗದವರಿಗೆ   ದುಖಃ  ಭರಿಸುವ ಶಕ್ತಿಯನ್ನು… Read More ಮೊಬೈಲ್ ಫೋನ್ ಅನಾಹುತ

ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಒಬ್ಬ ಆಸ್ತಿಕ ಮಹಾಶಯರು ಬೆಂಗಳೂರಿನಿಂದ ತಿರುಪತಿ ವೇಂಕಟರಮಣನನ್ನು   ದರ್ಶನ ಮಾಡಲು ನಿರ್ಧರಿಸಿದರು. ಆವತ್ತಿನ ಕಾಲದಲ್ಲಿ ಇಂದಿನಂತೆ ಮೋಟಾರು ವಾಹನಗಳು ಇನ್ನೂ ಹೆಚ್ಚಿನ ಪ್ರಚಲಿತವಿಲ್ಲದಿದ್ದ ಕಾರಣ, ಎತ್ತಿನ ಗಾಡಿಯಲ್ಲಿಯೇ ಹೋಗಲು ನಿರ್ಧರಿಸಿ ಸಕಲ ಸಿದ್ಢತೆಗಳೊಂದಿಗೆ ಒಳ್ಳೆಯ ಮಹೂರ್ತ ನೋಡಿ ಕುಟುಂಬ ಸಮೇತರಾಗಿ ಗಾಡಿಯಲ್ಲಿ ಹೊರಟೇ ಬಿಟ್ಟರು. ಬಹಳ ಅನುಷ್ಟಾಂತರಾದ ಶ್ರೀಯುತರು ಮಾರ್ಗದ ಬದಿಯಲ್ಲಿಯೇ ಇರುತ್ತಿದ್ದ ಅರವಟ್ಟಿಗೆಗಳಲ್ಲಿ ತಂಗಿ, ಅಲ್ಲಿಯೇ ಅಡುಗೆ ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದ್ದರು. ಸುಮಾರು ಹದಿನೈದು ಇಪ್ಪತ್ತು ದಿನಗಳ… Read More ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಏಷ್ಯನ್ ಕ್ರೀಡಾಕೂಟ

ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆಯ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ, ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ, ಪ್ರಪಂಚಾದ್ಯಂತ ಅತೀ ಹೆಚ್ಚು ಯುವಜನ ಶಕ್ತಿಯನ್ನು  ಹೊಂದಿರುವ ಸುಮಾರು ಒಂದು ಸಾವಿರ ಕ್ರೀಡಾಳುಗಳು ಭಾಗವಹಿಸಿರುವ  ಏಷ್ಯನ್ ಕ್ರೀಡಾ ಪದಕಗಳ ಪಟ್ಟಿಯಲ್ಲಿ ಸದ್ಯದ ಪರಿಸ್ಥಿತಿ ನೋಡಿ ನಿಜಕ್ಕೂ ಖೇದವೆನಿಸಿತು.  ಇತರೇ ಕ್ರೀಡೆಗಳನ್ನು ಬಿಡಿ. ನಮ್ಮದೇ ದೇಶದ  ಕ್ರೀಡೆಗಳಾದ ಹಾಕಿ ಮತ್ತು ಕಬ್ಬಡ್ದಿಯಲ್ಲೂ ಕೂಡಾ ಪದಕಗಳನ್ನು ಗೆಲ್ಲಲು ವಿಫಲರಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಮತ್ತು ದುಖಃಕರವೇ ಸರಿ. ಹಾಕಿಯಲ್ಲಂತೂ ದೇಶಿ ಆಟಗಾರ ಎದೆಗಾರಿಕೆ… Read More ಏಷ್ಯನ್ ಕ್ರೀಡಾಕೂಟ