ಸಾಹಿತ್ಯರತ್ನ ಚಿ. ಉದಯಶಂಕರ್

ಡಾ. ರಾಜ್ ಅವರ ಸಹಭಾವಚಿತ್ರ “ಜೀವನ ಚೈತ್ರ”ದ ಅಭಿನಯದಲ್ಲಿ ತಮ್ಮ ಅಮೋಘ ಕಾರ್ಯಗಳಿಂದ ನಿರ್ಮಾಪಕರಾಗಿ, ಸಂಭಾಷಣಕಾರರಾಗಿ, ಸಂಗೀತ ನಿರ್ದೇಶಕರಾಗಿ ನಟನಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಅಜ್ಞಾತವಾಗಿ ಮಹತ್ವದ ಪಾತ್ರ ನಿರ್ವಹಿಸಿದ ಚಿ. ಉದಯಶಂಕರ್ ಅವರ ಕುರಿತು ತಿಳಿಯಲು ಈ ಮಹಾನ್ ಕನ್ನಡಿಗರ ಬಗ್ಗೆ ನಾವು ಓದಿರಬಹುದು. … Read More ಸಾಹಿತ್ಯರತ್ನ ಚಿ. ಉದಯಶಂಕರ್

ಗುರುದತ್

ನಮ್ಮ ಕರ್ನಾಟಕದ ಪಡುಕೋಣೆ ಎಂಬ ಊರಿನ ಹೆಸರು ಕ್ರೀಡಾಜಗತ್ತಿನಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸಾಕಷ್ಟು ಚಿರಪರಿತವಾಗಿದೆ. ತಂದೆ ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೇಂಡ್ ಬ್ಯಾಂಡ್ಮಿಂಟನ್ ಛಾಂಪಿಯನ್ ಆಗುವ ಮೂಲಕ ಚಿರಪರಿಚಿತರಾದರೆ ಅವರ ಮಗಳು ದೀಪಿಕ ಪಡುಕೋಣೆ ಕಳೆದ ಎಂಟು ಹತ್ತು ವರ್ಷಗಳಿಂದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಅದರೆ 1940ರಲ್ಲೇ ಪಡುಕೋಣೆ ಹೆಸರನ್ನು ದೇಶಾದ್ಯಂತ ಪಸರಿಸಿದ ಹೆಸರಾಂತ ಚಿತ್ರಕಾರ, ನಟ, ನೃತ್ಯ ಸಂಯೋಜಕ,ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಅಪ್ಪಟ ಕನ್ನಡಿಗ ಗುರುದತ್ ಶಿವಶಂಕರ್ ಪಡುಕೋಣೆ. ಎಲ್ಲರ ಪ್ರೀತಿಯ ಗುರುದತ್ ಅವರ… Read More ಗುರುದತ್

ಕೆಚ್ಚೆದೆಯ ಹಾಕಿ ಪಟು ಎಂ. ಪಿ. ಗಣೇಶ್

ಯಾವುದೇ ಒಂದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪುದು ಎಷ್ಟು ಕಷ್ಟ ಎಂದು ಕ್ರೀಡಾಪಟು ಆಗಿದ್ದವರಿಗೆ ತಿಳಿಯುತ್ತದೆ ಇಲ್ಲವೇ ಕ್ರೀಡಾಸಕ್ತರಿಗೆ ತಿಳಿದಿರುತ್ತದೆ. ಇಲ್ಲೊಬ್ಬರು ಎರಡೆರಡು ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಮತ್ತೊಂದು ಕ್ರೀಡೆಯ ಆಡಳಿತಾಧಿಕಾರಿಯಾಗಿ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದ ವೀರ ಸೇನಾನಿ, ಕೆಚ್ಚೆದೆಯ ಆಟಗಾರ, ಛಲವಂತ ನಾಯಕ, ಅತ್ಯುತ್ತಮ ತರಭೇತಿದಾರ ಮತ್ತು ಸಮರ್ಥ ಕ್ರೀಡಾ ಆಡಳಿತಗಾರರಾಗಿದ್ದ ಹಾಕಿ ಆಟಗಾರ ಶ್ರೀ ಎಂ ಪಿ ಗಣೇಶ್ ಆವರ ಬಗ್ಗೆ ತಿಳಿದುಕೊಳ್ಳೋಣ. ಕೊಡಗು ಜಿಲ್ಲೆಯ ಮಡಿಕೇರಿಯ ಸುಂಟಿಕೊಪ್ಪದ ಬಳಿಯ ಅಂದಗೋವೆ… Read More ಕೆಚ್ಚೆದೆಯ ಹಾಕಿ ಪಟು ಎಂ. ಪಿ. ಗಣೇಶ್

ಎಂ.ವಿ. ಸುಬ್ಬಯ್ಯ ನಾಯ್ಡು

ಸ್ವಾತಂತ್ಯ್ರ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಹಲವಾರು ಜನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರೆ ಇಲ್ಲೊಬ್ಬ ಮಹಾಶಯರು ರಂಗಭೂಮಿಯ ಮುಖಾಂತರ ಏಕೀಕರಣಕ್ಕೆ ಪ್ರಯತ್ನಿಸಿದ, ಕರ್ನಾಟಕದ ಹಲವಾರು ಪ್ರಪ್ರಥಮಗಳ ನಾಯಕ, ನಟ, ನಿರ್ದೇಶಕ, ನಿರ್ಮಾಪಕ, ಪೈಲ್ವಾನ್, ರಂಗಭೂಮಿ ಮತ್ತು ಚಲನಚಿತ್ರರಂಗ ಎರಡರಲ್ಲೂ ಸೈ ಎನಿಸಿಕೊಂಡವರು, ಹೀಗೆ ಹೇಳುತ್ತಾ ಹೋದರೆ ಹೇಳುತ್ತಲೇ ಹೋಗ ಬೇಕಾಗುವಂತಹ ವ್ಯಕ್ತಿತ್ವ ಹೊಂದಿದ್ದ ಅಭಿಜಾತ ಕಲಾವಿದರರಾಗಿದ್ದ ಶ್ರೀ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕುರಿತಾಗಿ ತಿಳಿದುಕೊಳ್ಳೋಣ. 1896 ರಲ್ಲಿ ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಸುಬ್ಬಯ್ಯನವರ ಜನನವಾಗುತ್ತದೆ.… Read More ಎಂ.ವಿ. ಸುಬ್ಬಯ್ಯ ನಾಯ್ಡು

ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ಸಾಮಾನ್ಯವಾಗಿ ಯಾವುದೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಲೀ, ಅಥವಾ ಸುಗಮ ಸಂಗೀತ ಅಥವಾ ರಸಸಂಜೆ/ಆರ್ಕೆಸ್ಟ್ರಾಗಳಲ್ಲಿ ಆಯಾಯಾ ಗಾಯಕ/ಗಾಯಕಿಕರು ತಮ್ಮ ಇಷ್ಟ ಪಟ್ಟ ಲೇಖಕರ ಹಾಡುಗಳನ್ನು ಹಾಡುವುದು ಸಹಜ. ಆದರೆ ಬಹುತೇಕ ಸುಗಮ ಸಂಗೀತಗಾರರು ಒಬ್ಬ ಗಾಯಕರ ಹಾಡನ್ನು ತಮ್ಮ ಪ್ರತೀ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆಂದರೆ ಆ ಕವಿಯ ಕವನಗಳು ಹೇಗಿರುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಅದು ಜೋಗದ ಸಿರಿಯಾಗಿರಬಹುದು, ಕುರಿಗಳು ಸಾರ್ ಕುರಿಗಳು ಅಥವಾ ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಇರಬಹುದು. ಹೇ ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಇವತ್ತಿನ… Read More ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ನಾ. ಡಿಸೋಜ

ನಾ. ಡಿಸೋಜಾ. ಆವರ ಮಾತೃಭಾಷೆ ಕೊಂಕಣಿ ಆದರೂ ಅಪ್ಪಟ ಕನ್ನಡಿಗ, ಆಚರಿಸುವುದು ಕ್ರೈಸ್ತ ಧರ್ಮವಾದರೂ ಅಪ್ಪಟ ಭಾರತೀಯ. ಕೇವಲ ಕವಿಯಲ್ಲದೇ, ಅಪ್ಪಟ ಪರಿಸರವಾದಿಯಾದ ನಾ. ಡಿಸೋಜಾವರು ಭಾನುವಾರ 2025ರ ಜನವರಿ 5ರ ರಾತ್ರಿ ನಿಧನರಾಗಿರುವುದು ಬಹಳ ದುಃಖಕರವಾದ ವಿಷಯವಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ತಿಳಿಯೋಣ ಬನ್ನಿ.… Read More ನಾ. ಡಿಸೋಜ

ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಕನ್ನಡ ಸುಗಮ ಸಂಗೀತದ ಪ್ರವರ್ತಕರಾಗಿ ಕನ್ನಡದ ಬಹುತೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿದ್ದ ಶ್ರೀ ಪಿ ಕಾಳಿಂಗರಾಯರ ಕುರಿತು ಹಿಂದಿನ ಮಾಲಿಕೆಯಲ್ಲಿ ಪರಿಚಯ ಮಾಡಿಕೊಂಡ ಮೇಲೆ ನಾವಿಂದು ಅವರ ಉತ್ತರಾಧಿಕಾರಿಗಳ ಪರಿಚಯ ಮಾಡಿಕೊಳ್ಳಲೇ ಬೇಕಲ್ಲವೆ? ತಮ್ಮ ಅದ್ಭುತ ಗಾಯನ ಮತ್ತು ರಾಗ ಸಂಯೋಜನೆಗಳಿಂದ ಸುಗಮ ಸಂಗೀತ ಕ್ಷೇತ್ರದ ಅನುಭಿಷಕ್ತ `ದೊರೆಯಾಗಿ ಮೆರೆದವರು, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರೂ ಮತ್ತು ಕವನಗಳನ್ನು ರಚಿಸಬಲ್ಲ ಸಾಮರ್ಥ್ಯ ಹೊಂದಿದ್ದಂತಹ ಶ್ರೀ ಮೈಸೂರು ಅನಂತಸ್ವಾಮಿಗಳ ಬಗ್ಗೆ ನಾವಿಂದು ಅರಿತುಕೊಳ್ಳೋಣ.… Read More ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್

ಮನುಷ್ಯರಿಗೆ ಸುಖಃ ಇಲ್ಲವೇ ದುಃಖದ ಸಂದರ್ಭದಲ್ಲಿ ಎಲ್ಲಿಯಾದರೂ ಯಾರಾದರೂ ಸ್ರುಶ್ರಾವ್ಯವಾದ ಸಂಗೀತ ಕೇಳಿದೊಡನೆಯೇ ಅವರ ಮನಸ್ಸು ಹಗುರವಾಗುವುದು. ಅದು ಶಾಸ್ತ್ರೀಯ ಸಂಗೀತವಿರಬಹುದೂ, ಚಿತ್ರಗೀತೆಗಳಾಗಿರಬಹುದು, ಜನಪದ ಗೀತೆಗಳಿರಬಹುದು ಇಲ್ಲವೇ ಭಾವ ಗೀತೆಗಳಿರಬಹುದು ಈ ರೀತಿಯಾಗಿ ಎಲ್ಲಾ ಸಂಗೀತದ ಪ್ರಾಕಾರಗಳಲ್ಲಿಯೂ ಸಿದ್ಧಹಸ್ತರಾಗಿದ್ದ ಸುಮಾರು ಮೂರು ದಶಕಗಳ ಕಾಲ ಕರ್ನಾಟಕದ ಸಂಗೀತ ಪ್ರಿಯರನ್ನು ರಂಜಿಸಿದ ಪಿ ಕಾಳಿಂಗರಾವ್ ಎಲ್ಲರ ಪ್ರೀತಿಯ ಕಾಳಿಂಗ ರಾಯರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಉಡುಪಿ ಜಿಲ್ಲೆಯ ಆರೂರಿನ ನಾರಾಯಣರಾವ್‌ (ಪಾಂಡೇಶ್ವರ ಪುಟ್ಟಯ್ಯ) ಮತ್ತು ನಾಗರತ್ನಮ್ಮ ದಂಪತಿಗಳಿಗೆ 31-8-1914ರಲ್ಲಿ… Read More ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್

ಜಾನಪದ ಜಂಗಮ ಎಸ್. ಕೆ. ಕರೀಂ ಖಾನ್

1962ರಲ್ಲಿ ಸ್ವರ್ಣಗೌರಿ ಎಂಬ ಪೌರಾಣಿಕ ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತದೆ. ಆ ಚಿತ್ರದ ಅಷ್ಟೂ ಹಾಡುಗಳು ಮತ್ತು ಸಂಭಾಷಣೆ ಜನರ ಮನಸ್ಸೂರೆಗೊಂಡು ಚಲನಚಿತ್ರವೂ ಅತ್ಯಂತ ಯಶಸ್ವಿಯಾಗಿ, ದಿನಬೆಳಗಾಗುವುದರೊಳಗೆ ಆ ಚಿತ್ರದ ಸಾಹಿತಿ ಕರ್ನಾಟಕಾದ್ಯಂತ ಮನೆ ಮಾತಾಗುತ್ತಾರೆ. ಮುಂದೆ ಆ ಹಾಡುಗಳ ರಚನೆಗಾಗಿ ರಾಷ್ಟ್ರಪ್ರಶಸ್ತಿಯೂ ದೊರಕುತ್ತದೆ. ಒಬ್ಬ ಸಹೃದಯ ಕವಿ, ಸ್ವಾಭಿಮಾನಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧೀವಾದಿ,ಜಾನಪದ ತಜ್ಞ, ಸುಶ್ರಾವ್ಯ ಹಾಡುಗಾರ, ಸರ್ವ ಧರ್ಮ ಸಹಿಷ್ಣುಗಾಳಾಗಿದ್ದ ಶ್ರೀ ಎಸ್. ಕೆ. ಕರೀಂ ಖಾನ್ ಆವರ ಬಗ್ಗೆ ತಿಳಿದುಕೊಳ್ಳೋಣ. ಅಫ್ಘಾನಿಸ್ಥಾನದ ಕಾಬೂಲ್‌ನ… Read More ಜಾನಪದ ಜಂಗಮ ಎಸ್. ಕೆ. ಕರೀಂ ಖಾನ್