ತಂಗರಸು ನಟರಾಜನ್

ಇತ್ತೀಚೆಗೆಷ್ಟೇ ಮುಗಿದ ಐಪಿಲ್ ಪಂದ್ಯಾವಳಿಯಲ್ಲಿ ಹೈದರಾಬಾದ್ ತಂಡದ ಪರ ತಮ್ಮ ಏಡಗೈ ವೇಗ ಮತ್ತು ಯಾರ್ಕರ್ ಬೋಲಿಂಗ್ ಮುಖಾಂತರ ಎಲ್ಲರ ಗಮನದ ಸೆಳೆದ ತಮಿಳುನಾಡು ಮೂಲದ ತಂಗರಸು ನಟರಾಜನ್ ಅರ್ಹತೆಯ  ತಮ್ಮ ಅರ್ಹತೆಯ ಮೇರೆಗೆ ಭಾರತಪರ ಟಿ20 ಪಂದ್ಯವನ್ನಾಡಲು ಆಯ್ಕೆಯಾಗುತ್ತಾರೆ. ಆದರೆ ಅದೃಷ್ಟದ ಮೇರೆಗೆ ಕಡೆಯ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.  ಅವರು ಆಡಿದ್ದು ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಬದಲಾಗಿ. ಇದರಲ್ಲೇನು ವಿಶೇಷ ಅಂತೀರಾ?… Read More ತಂಗರಸು ನಟರಾಜನ್

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ

ಫುಟ್ಬಾಲ್ ದಂತಕಥೆ, ಡೀಗೋ ಮರಡೋನಾ

ಅದು ಎಂಭತ್ತರ ದಶಕ. ಆಗ ತಾನೇ ದೂರದರ್ಶನದ ಕೇಂದ್ರ ಬೆಂಗಳೂರಿನಲ್ಲಿ ಆರಂಭವಾಗಿ ಉದ್ದ ಉದ್ದದ ದೊಡ್ಡಾದಾದ ಆಂಟೇನಾದ ಮುಖಾಂತರ ಕಪ್ಪು ಬಿಳುಪು ಟಿವಿ ಕೆಲವೇ ಕೆಲವು ಬೆರಳೆಣಿಕೆಯವರ ಮನೆಯಲ್ಲಿತ್ತು. ಅದರ ಮೂಲಕವೇ ಕ್ರಿಕೆಟ್ ಪುಟ್ಬಾಲ್ ಮತ್ತು ಟೆನ್ನಿಸ್ ಮುಂತಾದ ಆಟಗಳ ಪಂದ್ಯಾವಳಿಯನ್ನು ನೋಡಿ ಕಲಿಯಲಾರಂಭಿಸಿದ್ದ ಕಾಲವದು. ಸಾಮಾನ್ಯವಾಗಿ ಎಲ್ಲರೂ No. 1 ಆಗಿರಲು ಬಯಸುತ್ತಾರೆ. ಆದರೆ ಆಗ ಬಹುತೇಕ ನನ್ನ ವಯಸ್ಸಿನ ಹುಡುಗರಿಗೆ No.10 ಮೇಲೆ ವಿಶೇಷವಾದ ಮಮಕಾರ ಇಂದಿನಂತೆ T-Shirtಗಳು ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರಕದಿದ್ದ… Read More ಫುಟ್ಬಾಲ್ ದಂತಕಥೆ, ಡೀಗೋ ಮರಡೋನಾ

ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

ಕ್ರಿಕೆಟ್ ಪ್ರಿಯರಿಗೆಲ್ಲರಿಗೂ ನೆನಪಿರುವಂತೆ ಎಂಭತ್ತರ ದಶಕದಲ್ಲಿ ಪಂಜಾಬ್ ಪರವಾಗಿ ಆಡುತ್ತಿದ್ದ ಎಡಗೈ ಸ್ಪಿನ್ನರ್ ರಾಜೇಂದರ್ ಸಿಂಗ್ ಗೋಯಲ್ ರಣಜೀ ಪಂದ್ಯಾವಳಿಗಳಲ್ಲಿ 637 ವಿಕೆಟ್ ಪಡೆದಿರುವ ದಾಖಲೆಯನ್ನು ಇದುವರೆಗೂ ಯಾರೋಬ್ಬರಿಗೂ ಮುರಿಯುವುದಿರಲಿ ಅದರ ಹತ್ತಿರಕ್ಕೂ ಬರಲು ಸಾಧ್ಯವಾಗಿಲ್ಲ. ಅದೇ ರೀತಿ ದೆಹಲಿ ತಂಡಕ್ಕೆ ಆಡುತ್ತಿದ್ದ ಭಾಸ್ಕರ್ ಪಿಳ್ಳೆ ದೇಶೀಯ ಕ್ರಿಕೆಟ್ಟಿನಲ್ಲಿ ಸಾವಿರಾರು ರನ್ನುಗಳ ಸರದಾರ. ಭಾರತ ಕ್ರಿಕೆಟ್ ತಂಡದ ಹೆಸರಾಂತ ಆರಂಭಿಕ ಆಟಗಾರ ಸುನೀಲ್ ಗವಾಸ್ಕರ್ ಕ್ರಿಕೆಟ್ಟಿನಿಂದ ನಿವೃತ್ತಿ ಹೊಂದಿದಾಗ ಆವರ ಸ್ಥಾನವನ್ನು ತುಂಬುವ ಸಾಮರ್ಥ್ಯ ಯಾರಿಗಿದೇ ಎಂದು… Read More ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

ರಾಹುಲ್ ತೆವಾಟಿಯ

2014ರ ಐಪಿಲ್ ಹರಾಜು ಪ್ರಕ್ರಿಯೆಯಲ್ಲಿ ಹರಿಯಾಣದ ಫರೀದಾಬಾದಿನ 21 ವಯಸ್ಸಿನ ಅಷ್ಟೇನು ಖ್ಯಾತನಾಗಿರದಿದ್ದ ಆಲ್ರೌಂಡರ್ ರಾಹುಲ್ ತೆವಾಟಿಯಾ ಎಂಬ ಯುವಕನನ್ನು ಮೂಲ ಬೆಲೆಯಾದ 10 ಲಕ್ಷಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನು ಆಡಿಸಿ ಡಗ್ ಔಟಿನಲ್ಲಿ ನೀರನ್ನು ಹೊತ್ತು ತರಲು ಬಳಸಿಕೊಳ್ಳುತ್ತದೆ. 2017ರಲ್ಲಿ ರಾಜಸ್ಥಾನ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರೂ ಹೆಚ್ಚಿನ ಬದಲಾವಣೆ ಇಲ್ಲದೇ ಒಂದೇ ವರ್ಷಕ್ಕೆ ಅವರನ್ನು ಕೈಬಿಟ್ಟಿತ್ತು.… Read More ರಾಹುಲ್ ತೆವಾಟಿಯ

ಗರಡಿ ಮನೆ

ಸುಮಾರು ಎರಡು ದಶಕಗಳ ಹಿಂದೆ ನಮ್ಮ ದೇಶದ ಬಹುತೇಕ ಹಳ್ಳಿಗಳಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿಯೇ ಅಲ್ಲೊಂದು ಸುಮಾರಾಗಿರುವ ಕಟ್ಟಡ ಅದರ ಮೇಲೊಂದು ಕೇಸರಿ ಬಾವುಟ ಎದ್ದು ಕಾಣುತ್ತಿದ್ದಲ್ಲಿ ಆ ಊರಿನಲ್ಲಿ ಯಾವುದೇ ಕಳ್ಳಕಾಕರ ಭಯವಿಲ್ಲ. ಆ ಊರಿನ ಹೆಣ್ಣುಮಕ್ಕಳು ನಿರ್ಭಿಡೆಯಾಗಿ ಯಾವ ಹೊತ್ತಿನಲ್ಲಾದರೂ ಓಡಾಡಬಹುದು. ಅಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟವಿರುವುದಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತಿದ್ದವು. ಅರೇ, ಒಂದು ಕಟ್ಟಡದಿಂದಾಗಿ ಇಷ್ಟೊಂದು ಸಾಮಾಜಿಕ ಬದಲಾವಣೆಯೇ ಎಂದು ತಿಳಿದಲ್ಲಿ, ಆ ಕಟ್ಟಡ ಸಾಮ್ಯಾನ್ಯ ಕಟ್ಟಡವಾಗಿರದೇ, ಅದನ್ನು ಗರಡಿ ಮನೆ… Read More ಗರಡಿ ಮನೆ

ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ಚೊಚ್ಚಲು ಟಿ20 ವಿಶ್ವಕಪ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಉಳಿದೆಲ್ಲಾ ತಂಡಗಳಿಗೆ ಹೋಲಿಸಿದಲ್ಲಿ, ಭಾರತಕ್ಕೆ ಅಷ್ಟೇನೂ ಟಿ20 ಪಂದ್ಯಾವಳಿಗಳ ಅನುಭವವಿರಲಿಲ್ಲ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಸಚಿನ್, ಸೌರವ್, ದ್ರಾವಿಡ್ ಅಂತಹ ಘಟಾನುಘಟಿಗಳಿಲ್ಲದೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಯುವಕರ ಪಡೆಯೇ ದಕ್ಷಿಣ ಆಫ್ರಿಕಾಕ್ಕೆ ಹೋಗಿತ್ತು. 2007ರ, Sep 14 ರಂದು ದರ್ಭಾನ್ ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನವನ್ನು ಎದುರಿಸುತ್ತಿತ್ತು. ಕ್ರೀಡಾಂಗಣದಲ್ಲಿ ಭಾರತೀಯರು ಮತ್ತು ಪಾಕೀಸ್ಥಾನೀಯರಿಂದಲೇ ಕಿಕ್ಕಿರಿದು ತುಂಬಿದ್ದ ಕಾರಣ ಅದೊಂದು ಭಾರತ ಮತ್ತು ಪಾಕ್ ಉಪಖಂಡದಲ್ಲಿಯೇ… Read More ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ಲತಾ ಭಗವಾನ್ ಖರೆ, ಕಲಿಯುಗದ ಸತ್ಯವಾನ್ ಸಾವಿತ್ರಿ

ನಾವು ನಮ್ಮ ಪುರಾಣದಲ್ಲಿ ತನ್ನ ಗಂಡನ ಪ್ರಾಣವನ್ನು ಉಳಿಸಿಕೊಳ್ಳಲು ಯಮಧರ್ಮರಾಯನನ್ನೇ ಎದಿರು ಹಾಕಿಕೊಂಡ ಸತ್ಯವಾನ್ ಸಾವಿತ್ರಿಯ ಕಥೆಯನ್ನು ಕೇಳಿದ್ದೇವೆ. ಈಗಿನ ಕಾಲದಲ್ಲಿಯೂ ತನ್ನ ಗಂಡನ ಆರೋಗ್ಯದ ಸಲುವಾಗಿ ತನ್ನನ್ನೇ ತಾನು ಫಣಕ್ಕಿಟ್ಟುಕೊಂಡು ತನ್ನ ಗಂಡನ ಜೀವನವನ್ನು ಉಳಿಸಿಕೊಂಡ ಮತ್ತು ಇಂದಿನ ಯುವಜನತೆಗೆ ಮಾದರಿಯಾಗವಲ್ಲ ಶ್ರೀಮತಿ ಲತಾ ಭಗವಾನ್ ಖರೆಯ ಸಾಹಸಗಾಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದು 2013ರ ಸಮಯ. ಮಹಾರಾಷ್ಟ್ರದ ಬುಲ್ದಾನ ಜೆಲ್ಲೆಯ ಸಣ್ಣ ಗ್ರಾಮವೊಂದರಲ್ಲಿ 68 ವರ್ಷದ ಭಗವಾನ್ ಖರೆ ಮತ್ತು ಮತ್ತು 67 ವರ್ಷದ ಆತನ… Read More ಲತಾ ಭಗವಾನ್ ಖರೆ, ಕಲಿಯುಗದ ಸತ್ಯವಾನ್ ಸಾವಿತ್ರಿ

ಶೂನ್ಯದಿಂದ ಸಾಧನೆಯವರೆಗೆ

ನನ್ನ ಹಿಂದಿನ ಲೇಖನದಲ್ಲಿ ಖ್ಯಾತ ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಕುರಿತಂತೆ ಲೇಖನದಲ್ಲಿ ವಯಕ್ತಿಕ ಸಮಸ್ಯೆಯಿಂದ ಹೊರಬರಲಾರದೇ, ಖಿನ್ನತೆಗೆ ಒಳಗಾಗಿ ಬದುಕನ್ನೇ ಅಕಾಲಿಕವಾಗಿ  ಅಂತ್ಯ ಮಾಡಿಕೊಂಡ ದುರಂತ ಕಥೆಯ ಕುರಿತಂತೆ ಅನೇಕ ಓದುಗರು ವಿವಿಧ ರೀತಿಯ ಟೀಕೆ ಟಿಪ್ಪಣಿಗಳನ್ನು ಬರೆದಿದ್ದರು. ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುವುದು ಸಹಜ ಆದರೆ ಅದನ್ನು  ಸವಾಲಾಗಿ ಸ್ವೀಕರಿಸಿ ಅದರಿಂದ  ಹೇಗೆ ಹೊರಬಂದು ಸಾಧನೆಯ ಮಟ್ಟಲುಗಳನ್ನು ಏರಿ ಯಶಸ್ವಿಯಾಗಿರುವ ಕೆಲವು ಅಧ್ಬುತ ಪ್ರಸಂಗಗಳು ಇದೋ ನಿಮಗಾಗಿ. ಕ್ರಿಕೆಟ್ ವೀಕ್ಷಕವಿವರಣಾಗಾರ ಶ್ರೀ ಹರ್ಷ… Read More ಶೂನ್ಯದಿಂದ ಸಾಧನೆಯವರೆಗೆ