ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ

ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಜನಜಂಗುಳಿಯ ಮಧ್ಯದಲ್ಲಿ ಎಲೆಮರೆಕಾಯಿಯಂತಿರುವ ಬಹುತೇಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪರೀಕ್ಷಾ ದೇವರು ಅಥವಾ ಹಾಲ್ ಟಿಕೆಟ್ ಹಯಗ್ರೀವ ಎಂದೇ ಪ್ರಖ್ಯಾತವಾಗಿರುವ ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಸ್ಥಾನದ ಹಯಗ್ರೀವ ದೇವರ ಮಹಿಮೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಹಾಲ್ ಟಿಕೆಟ್ ಹಯಗ್ರೀವ

ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರಿನ ಕೋರಮಂಗಲದಲ್ಲಿ ಸಾಫ್ಟ್ ವೇರ್ ಕಂಪನಿಗಳ ಟೆಕ್ಕಿಗಳ ಮನೋಭಿಲಾಷೆಯನ್ನು ಈಡೇರಿಸುವ ಅತ್ಯಂತ ಶಕ್ತಿಶಾಲಿ ಮತ್ತು ಕುತೂಹಲಕಾರಿ ಶ್ರೀ ಟೆಕ್ಕಿ ಗಣೇಶನ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ರಾಮೇಶ್ವರ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ ಶ್ರೀರಾಮಚಂದ್ರನಿಂದ ಮರಳಿನಿಂದ ನಿರ್ಮಿಸಲ್ಪಟ್ಟ ಶಿವನ ಲಿಂಗ ಮತ್ತು ನಳ ಮತ್ತು ನೀಲರ ಜೊತೆಯಲ್ಲಿ ತನ್ನ ಕಪಿಸೇನೆಯ ಸಹಾಯದೊಂದಿಗೆ ಧನುಷ್ಕೋಟಿಯಿಂದ ಲಂಕೆಯ ನಡುವಿನ ಸಮುದ್ರಕ್ಕೆ ಕಟ್ಟಿದ ರಾಮಸೇತು. ನಿಜ ಹೇಳಬೇಕೆಂದರೆ ಈ ಎರಡೂ ಪವಿತ್ರ ಕ್ಷೇತ್ರಗಳ ಹೊರತಾಗಿ ಇನ್ನೂ ಹತ್ತು ಹಲವಾರು ಕುತೂಹಲಕಾರಿ ಸ್ಥಳಗಳಿದ್ದು, ಅಂತಹವುಗಳಲ್ಲಿ ಒಂದಾದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಶ್ರೀ ರಾಮಚಂದ್ರ ಪ್ರಭು ತನ್ನ ಚಿಕ್ಕಮ್ಮ ಕೈಕೇಯಿಗೆ ಕೊಟ್ಟ ಭಾಷೆಯಂತೆ, 14ವರ್ಷ… Read More ರಾಮೇಶ್ವರದಲ್ಲೊಂದು ವಿಭೀಷಣನ ದೇಗುಲ

ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ದಿನಾಂಕ 27.03.2024 ಬುಧವಾರ, ಪಾಲ್ಗುಣ ಮಾಸದ ಬಹುಳ ಬಿದಿಗೆಯಂದು ‌ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಮೃತಹಸ್ತದಿಂದ ನಡೆದ ಬಾಳಗಂಚಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವದ ಸುಂದರ ಕ್ಷಣಗಳು ಇದೋ ನಿಮಗಾಗಿ… Read More ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ಯಗವ ಕೋಟೆ ಶ್ರೀ ವೀರನಾರಾಯಣ ಸ್ವಾಮಿ

ನಮ್ಮ ಕರ್ನಾಟಕದಲ್ಲಿ ಹತ್ತಾರು ವೀರನಾರಯಣ ಸ್ವಾಮಿಯ ದೇವಾಲಯಗಳು ಇದ್ದರೂ, ಶ್ರೀ ವೀರನಾರಾಯಣ ಎಂಬ ಹೆಸರನ್ನು ಕೇಳಿದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಥಟ್ ಅಂತ ಮೂಡುವುದೇ ಕನ್ನಡದಲ್ಲಿ ಮಹಾಭಾರತವನ್ನು ಬರೆದ ಕುಮಾರ ವ್ಯಾಸನ ಆರಾಧ್ಯ ದೈವ ಗದುಗಿನ ವೀರ ನಾರಾಯಣ ಸ್ವಾಮಿ. ನಾವಿಂದು ಗದುಗಿನ ವೀರನಾರಾಯಣ ಸ್ವಾಮಿಯಷ್ಟೇ ಮುದ್ದಾಗಿರುವ ಆದರೆ ಅದಕ್ಕಿಂತಲೂ ವಿಭಿನ್ನವಾಗಿರುವ ಮತ್ತು ಅತ್ಯಂತ ಪುರಾತನವಾದ ದೇವಾಲಯವು ರಾಜಧಾನಿ ಬೆಂಗಳೂರಿನಿಂದ ಕೇವಲ 95 ಕಿಮೀ ದೂರದಲ್ಲಿರುವ ಯಗವಕೋಟೆಯಲ್ಲಿದ್ದು ಆಲ್ಲಿನ ಸ್ಥಳ ಪುರಾಣದ ಜೊತೆಗೆ ಶ್ರೀ ವೀರನಾರಾಯಣ ಸ್ವಾಮಿಯ… Read More ಯಗವ ಕೋಟೆ ಶ್ರೀ ವೀರನಾರಾಯಣ ಸ್ವಾಮಿ

ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ಒಂದು ಕಾಲದಲ್ಲಿ ಕಾಶ್ಮೀರೀ ಪಂಡಿತರಿಂದಲೇ ಆವೃತವಾಗಿದ್ದ ಕಾಶ್ಮೀರದ ಕಣಿವೆಯಲ್ಲಿಿ ಇಂದು ಅವರೇ ಅಲ್ಪಸಂಖ್ಯಾತರಾಗಿರುವಂತಹ ದೌರ್ಭಾಗ್ಯವಾಗಿದ್ದರೂ, ಶ್ರೀನಗರದ ಹೃದಯಭಾಗದಲ್ಲಿರುವ ಭವ್ಯವಾದ ಶ್ರೀ ಶಂಕರಾಚಾರ್ಯ ದೇವಾಲಯ ಇಡೀ ಶ್ರೀನಗರಕ್ಕೇ ಮುಕುಟಪ್ರಾಯವಾಗಿದೆ. ಆ ದೇವಾಲಯದ ಸ್ಥಳ ಪುರಾಣ, ಶೀ ಜೇಷ್ಠೇಶ್ವರನ ದರ್ಶನದ ಜೊತೆಗೆ, ಮೈಸೂರು ಅರಸರಿಗೂ ಆ ದೇವಾಲಯಕ್ಕೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಯೋಣ ಬನ್ನಿ… Read More ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಸಾಧಾರಣವಾಗಿ ಹೊರ ಊರುಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರು ರೈಲ್ವೇ ನಿಲ್ದಾಣ, ವಿಧಾನ ಸೌಧ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರೆ, 90ರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಆರಂಭದಲ್ಲಿ ಇಸ್ಕಾನ್ ದೇವಾಲಯ ನಿರ್ಮಾಣವಾದ ಕೂಡಲೇ, ಬೆಂಗಳೂರಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲೀ ಈ ದೇವಾಲಯವೂ ಸೇರಿಕೊಂಡಿದೆ ಏಂದರೂ ತಪ್ಪಾಗದು. ಬೆಂಗಳೂರಿಗೇ ಕಿರೀಟಪ್ರಾಯವಾದ ಅತ್ಯಂತ ಸುಂದರವಾದ ಇಸ್ಕಾನಿನ ಶ್ರೀ ರಾಧಾ ಕೃಷ್ಣ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ… Read More ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಮಂಡ್ಯಾ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕ್ಕಿನ ಅಕ್ಕಿ ಹೆಬ್ಬಾಳು ಗ್ರಾಮದ ಸ್ಥಳಪುರಾಣ, ಆ ಊರಿಗೆ ಅಕ್ಕಿಹೆಬ್ಬಾಳು ಎಂಬ ಹೆಸರಿನ ಹಿಂದಿನ ರಹಸ್ಯ, ಆ ಊರಿನಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ನೆಲೆಗೊಂಡ ರೋಚಕತೆ ಮತ್ತು ಮಹಾವಿಷ್ಣುವಿನ ವಾಹನ ಗರುಡನ ಆಜ್ಞೆ ಇಲ್ಲದೇ ಆರಂಭವಾಗದ ಆ ಊರಿನ ರಥೋತ್ಸವ, ಹೀಗೆ ಅಕ್ಕಿ ಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕುರಿತಾದ ಹತ್ತು ಹಲವಾರು ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ