ಹಯಗ್ರೀವ

ಸಾಂಪ್ರದಾಯಕವಾದ ಹಯಗ್ರೀವ ಸಿಹಿ ಖ್ಯಾದ್ಯವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಯಗ್ರೀವ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ – 1/2 ಪಾವು ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು ತುರಿದ ಕೊಬ್ಬರಿ – 1 ಬಟ್ಟಲು ಗಸಗಸೆ – 20 ಗ್ರಾಂ ಗೊಡಂಬಿ – 8-10 ದ್ರಾಕ್ಷಿ – 8-10 ಏಲಕ್ಕಿ – 2-3 ತುಪ್ಪ – 3-4… Read More ಹಯಗ್ರೀವ

ಹಲಸಿನಕಾಯಿ ಬಿರಿಯಾನಿ

ಬಿರ್ಯನಿ ಭಾರತೀಯ ಉಪಖಂಡದ ಒಂದು ಜನಪ್ರಿಯ ಖಾದ್ಯವಾಗಿದೆ. ಇದನ್ನು ಅಕ್ಕಿ, ತರಕಾರಿಗಳು, ಮತ್ತು ಮಸಾಲಾಗಳನ್ನು ಬೆರೆಸಿ ತಯಾರಿಸಲಾಗುತ್ತದಾದರೂ ಕುರಿ ಇಲ್ಲವೇ ಕೋಳಿ ಪೀಸ್ ಹಾಕಿದ ಬಿರ್ಯಾನಿಯೇ ಅತ್ಯಂತ ಜನ ಪ್ರಿಯ ಖಾದ್ಯವಾಗಿದೆ. ಸಸ್ಯಾಹಾರಿಗಳಿಗೂ ತಮ್ಮ ಬಿರ್ಯಾನಿಯಲ್ಲಿ ಪೀಸ್ ತಿನ್ನುವ ಅನುಭವವಾಗುಂತಹ ಹಲಸಿನ ಕಾಯಿ ಬಿರಿಯಾನಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿ ಕೊಡುತ್ತಿದ್ದೇವೆ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಲಸಿನಕಾಯಿ ಬಿರ್ಯಾನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಬಾಸ್ಮತಿ ಅಕ್ಕಿ -2 ಬಟ್ಟಲು ಟೊಮೆಟೊ – 2… Read More ಹಲಸಿನಕಾಯಿ ಬಿರಿಯಾನಿ

ಖಾರಾ ಅವಲಕ್ಕಿ (ಚೂಡಾ)

ಈಗಂತೂ ಮಳೆಗಾಲ. ಸಂಜೆ ಧೋ ಎಂದು ಮಳೆ ಬೀಳುತ್ತಿದ್ದರೆ, ನಾಲಿಗೆ ಬಿಸಿ ಬಿಸಿಯಾದ ಮತ್ತು ಖಾರವಾದ  ಕುರುಕಲನ್ನು ಬಯಸುತ್ತದೆ. ಚಹಾದ ಜೊತೆ ಚೂಡಾ ಹಂಗಾ ಎನ್ನುವಂತೆ ಬಿಸಿಬಿಸಿಯಾದ ಕಾಫೀ/ಟೀ  ಜೊತೆ ಖಾರದ ಅವಲಕ್ಕಿ ಅರ್ಥಾತ್ ಚೂಡ ತಿನ್ನಲು ಮಜವಾಗಿರುತ್ತದೆ. ಹಾಗಾಗಿ ನಮ್ಮ ನಳಪಾಕ ಮಾಲಿಕೆಯಲ್ಲಿ ಖಾರದ ಅವಲಕ್ಕಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಖಾರ ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ತೆಳು(ಪೇಪರ್) ಅವಲಕ್ಕಿ 4 ಬಟ್ಟಲು ಕಡಲೆಬೀಜ – 2 ಚಮಚ ಹುರಿಗಡಲೆ – … Read More ಖಾರಾ ಅವಲಕ್ಕಿ (ಚೂಡಾ)

ಹಾಗಲಕಾಯಿ ಗೊಜ್ಜು

ಸಾಧಾರಣವಾಗಿ ಹಾಗಲಕಾಯಿ ಗೊಜ್ಜು ಎಂದರೆ ಅದರ ಕಹಿ ಗುಣದಿಂದಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯ ಈ ಕಹೀ ಗುಣವೇ ಮಧುಮೇಹಿಗಳಿಗೆ ರಾಮಬಾಣ. ಬರೀ ಹಾಗಲಕಾಯಿಯನ್ನು ತಿನ್ನಲು ಅಸಾಧ್ಯವಾದ್ದರಿಂದ ಕಾಯಿ, ಹುಣಸೇಹಣ್ಣು, ಬೆಲ್ಲ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಗೊಜ್ಜು ತಯಾರಿಸಲು ಬೇಕಾಗುವ ಪದಾರ್ಥಗಳು ಮಧ್ಯಮ ಗಾತ್ರದ ಹಾಗಲಕಾಯಿ – 2 ನೆನಸಿದ ಹುಣಸೇ ಹಣ್ಣು… Read More ಹಾಗಲಕಾಯಿ ಗೊಜ್ಜು

ಅವಿಯಲ್ ಮತ್ತು ಮಸಾಲಾ ಚಪಾತಿ (ಪುದೀನಾ ಪರೋಟ)

ತಮಿಳುನಾಡು ಮತ್ತು ಕೇರಳದ ಬಹುತೇಕರ ಶುಭಸಮಾರಂಭಗಳಲ್ಲಿ ಉಣಬಡಿಸುವ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾದ ಅವಿಯಲ್ ಮತ್ತು ಅದರ ಜೊತೆ ಮಸಾಲಾ ಚಪಾತಿ (ಪುದೀನಾ ಪರೋಟ)ಯನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 5-6 ಜನರಿಗೆ ಸಾಕಾಗುವಷ್ಟು ಅವಿಯಲ್ ತಯಾರಿಸಲು ಬೇಕಾಗುವ ತರಕಾರಿ ಮತ್ತು ಸಾಮಗ್ರಿಗಳು ಹುರಳೀಕಾಯಿ – 1 ಬಟ್ಟಲು ಸೀಮೇಬದನೇಕಾಯಿ – 1 ಬಟ್ಟಲು ಕ್ಯಾರೆಟ್ – 1 ಬಟ್ಟಲು ಗೆಡ್ಡೇಕೋಸು – 1 ಬಟ್ಟಲು… Read More ಅವಿಯಲ್ ಮತ್ತು ಮಸಾಲಾ ಚಪಾತಿ (ಪುದೀನಾ ಪರೋಟ)

ಕಡಲೇಕಾಯಿ ಬಾತ್

ಮನೆಯಲ್ಲಿ ಅದೇ ಚಿತ್ರಾನ್ನ, ಮೊಸರನ್ನ, ಪಲಾವ್, ಮೆಂತ್ಯಾಬಾತ್, ಫ್ರೈಡ್ ರೈಸ್ ಜೀರಾರೈಸ್ ಇಲ್ಲವೇ ಘೀರೈಸ್ ಮುಂತಾದ ಅನ್ನದ ತಿಂಡಿಗಳನ್ನು ತಿಂದು ಬೇಸರವಾಗಿದ್ದಾಗ, ಬದಲಾವಣೆಯಾಗಿ ನಾವು ತಿಳಿಸಿಕೊಡುವ ಅತ್ಯಂತ ಸರಳವಾದ ಕಡಲೇಕಾಯಿ ಬಾತ್ ಮಾಡಿಕೊಡಿ. ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ಇಷ್ಟ ಪಟ್ಟು ಮತ್ತಷ್ಟು ಮತ್ತು ಮಗದಷ್ಟು ತಿನ್ನದೇ ಇದ್ದರೆ ನೋಡಿ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಡಲೇಕಾಯಿ ಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ – 2 ಬಟ್ಟಲು ಎಳ್ಳು – 1 ಚಮಚ (ಬಿಳಿ ಅಥವಾ… Read More ಕಡಲೇಕಾಯಿ ಬಾತ್

ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ಕರ್ನಾಟಕಾದ್ಯಂತ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಬಿಳಿ ಹೋಳಿಗೆ ಮತ್ತು ಇಂದಿನ ಕಾಲಕ್ಕೆ ಅನುಗುಣವಾಗಿ ಮಾವಿನ ಹಣ್ಣಿನ ಗೊಜ್ಜನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಿಳೀ ಹೋಳಿಗೆಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಅಕ್ಕಿ ಹಿಟ್ಟು – 2 ಬಟ್ಟಲು • ಮೈದಾ ಹಿಟ್ಟು – 1 ಬಟ್ಟಲು • ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ – 1 ಚಮಚ •… Read More ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ಹೇರಳೇಕಾಯಿ ಗೊಜ್ಜು

ಜನರ ಆಡುಭಾಷೆಯಲ್ಲಿ ಎಳ್ಳಿಕಾಯಿ, ದೊಡ್ಲೀಕಾಯಿ ಎಂದು ಕರೆಸಿಕೊಳ್ಳುವ ಹೇರಳೇಕಾಯಿ ಆಯುರ್ವೇದದಲ್ಲಿ ಹಲವು ಕಾಯಿಲೆಗಳಿಗೆ ದಿವ್ಯೌಷಧಿಯಾಗಿದೆ. ವಿಟಮಿನ್ ಸಿ ಆಗರವಾಗಿರುವ ಹೇರಳೇಕಾಯಿಯ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ರಕ್ತ ಪರಿಶುದ್ಧಗೊಳ್ಳುವುದಲ್ಲದೆ ಲಿವರ್ನ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹಾನಿಕಾರಕ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೇರಳೇಕಾಯಿಯನ್ನು ನಮ್ಮ ಆಹಾರ ಪದ್ದತ್ತಿಯಲ್ಲಿ ಚಿತ್ರಾನ್ನ, ಉಪ್ಪಿನಕಾಯಿ, ಗೊಜ್ಜು ಹೀಗೇ ನಾನಾರೂಪದಲ್ಲಿ ಬಳೆಸುತ್ತೇವೆ. ಇಂದು ನಮ್ಮ ನಳಪಾಕ ಮಾಲಿಕೆಯಲ್ಲಿ ಹೇರಳೇಕಾಯಿ… Read More ಹೇರಳೇಕಾಯಿ ಗೊಜ್ಜು

ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡ್ಲೇಕಾಯ್..ಕಡ್ಲೇಕಾಯ್.. ತಾಜಾ ತಾಜಾ ಕಡ್ಲೇಕಾಯ್.. ಗರ್ಮಾ ಗರಂ ಕಡ್ಲೇಕಾಯ್ ಬಡವರ ಬಾದಾಮಿ ಕಡ್ಲೇಕಾಯ್ ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಕಡಲೇಕಾಯಿ ಆರೋಗ್ಯದಾಯಕವೂ ಮತ್ತು ಪೌಷ್ಟಿದಾಯಕವೂ ಹೌದು. ಹಾಗಾಗಿ ವಿವಿಧ ಖಾಧ್ಯಗಳ ರೂಪಗಳಲ್ಲಿ ಕಡಲೇಕಾಯಿಯನ್ನು ಸೇವಿಸುತ್ತೇವೆ. ನಾವು ಇಂದು ಮನೆಯಲ್ಲಿಯೇ ಸುಲಭವಾಗಿ ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ) ತಯಾರಿಸಿಕೊಳ್ಳುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಾಂಗ್ರೆಸ್ ಕಡಲೇ ಬೀಜ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ –… Read More ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)