ವಿಶ್ವ ಪರಿಸರ ದಿನ

ಭೂಮಿ,ಸೌರಮಂಡಲದಲ್ಲಿ 5ನೇ ದೊಡ್ಡ ಗ್ರಹ. ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ. ಅದಕ್ಕಾಗಿಯೇ ಕವಿಯೊಬ್ಬರು ಎಲ್ಲರಿಗೊಂದೇ ಭೂತಲವೆಂದೆ ಎಲ್ಲರಿಗೂ ಭಗವಂತನೇ ತಂದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಭೂಮಿ ನಮಗೆ ಆಶ್ರಯದಾತೆಯಲ್ಲದೇ ನಮ್ಮ ತಾಯಿಯೂ ಹೌದು. ಅದಕ್ಕಾಗಿಯೇ ನಮ್ಮ ಸನಾತನ ಧರ್ಮದಲ್ಲಿ ಭೂಮಿಗೆ ತಾಯಿಯ ಸ್ವರೂಪ ನೀಡಿ ಭೂಮಿತಾಯಿ ಎಂದೇ ಸಂಭೋಧಿಸುತ್ತೇವೆ. ಆದರೆ ಮನುಷ್ಯನ ದುರಸೆಯಿಂದಾಗಿ ಅದೇ ಭೂಮಿ ತಾಯಿ ಒಡಲನ್ನು ಅಗೆದು, ಬಗೆದು ರತ್ನಗರ್ಭ ವಸುಂಧರೆಯಲ್ಲಿ ಆಡಗಿದ್ದ ಖನಿಜ ಸಂಪತ್ತುಗಳನ್ನು ಬರಿದು ಮಾಡಿದ್ದಲ್ಲದೇ… Read More ವಿಶ್ವ ಪರಿಸರ ದಿನ

ವಿಶ್ವ ಸೈಕಲ್ ದಿನಾಚರಣೆ

ಜೂನ್ 3 ವಿಶ್ವ ಸೈಕಲ್ ದಿನಾಚರಣೆಯಂದು, ನಮ್ಮ ಬದುಕಿನಲ್ಲಿ ಸೈಕಲ್ಲಿನ ಪಾತ್ರ ಮತ್ತು ಸೈಕಲ್ ಬಳಸುವರಿಂದ ಆಗಬಹುದಾದ ಲಾಭಗಳ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ವಿಶ್ವ ಸೈಕಲ್ ದಿನಾಚರಣೆ

ಗುಂಡಿಗಳ ಮಧ್ಯೆ ರಸ್ತೆ ಇದೆ ಎಚ್ಚರಾ!!

ಮೊನ್ನೆ ನಾನು ಮತ್ತು ನನ್ನ ಸಹೋದ್ಯೋಗಿ ಸಂಜೆ ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆವು. ನಾನು ಕಾರಿನಲ್ಲಿ ಹೊರಟರೆ, ಆತ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯ ಕಡೆ ನನ್ನ ವಿರುದ್ಧ ದಿಕ್ಕಿನಲ್ಲಿ ಹೊರಟ. ಸ್ವಲ್ಪ ದೂರ ಹೊರಟೊಡನೆಯೇ ಇದ್ದಕ್ಕಿದ್ದಂತಯೇ ಮೋಡಗಳು ದಟ್ಟವಾಗಿ ಕಾರ್ಮೋಡಗಳಾದವು. ಮಿಂಚು, ಗುಡುಗು, ಸಿಡಿಲುಗಳು ಅಬ್ಬರಿಸತೊಡಗಿ ಅಚಾನಕ್ಕಾಗಿ ಧಾರಾಕಾರವಾಗಿ ಕುಂಬದ್ರೋಣ ಮಳೆ ಸುರಿತೊಡಗಿತು. ಸಾಧಾರಣ ಮಳೆಗೇ ತುಂಬಿ ತುಳುಕುವ ಬೆಂಗಳೂರಿನ ರಸ್ತೆಗಳು ಇನ್ನು ಧಾರಾಕಾರವಾಗಿ ಸುರಿಯಿತೆಂದರೆ ಇನ್ನು ಕೇಳ ಬೇಕೇ? ಸಿಕ್ಕ ಪಕ್ಕ ಕಡೆಗಳಲ್ಲಿ… Read More ಗುಂಡಿಗಳ ಮಧ್ಯೆ ರಸ್ತೆ ಇದೆ ಎಚ್ಚರಾ!!

ಕಾಮುಕ

ನೆನ್ನೆ ಕಳೆದ ಒಂದೂವರೆ ತಿಂಗಳು ನಡೆದ ಮಹಾಚುನಾಚಣೆಯ ಅಂತಿಮ ಫಲಿತಾಂಶದ ದಿನ. ಚುನಾವಣಾ ಸ್ಪರ್ಧಿಗಳಿಗೆ ಎಷ್ಟು ಒತ್ತಡ, ಕಾತುರ ಮತ್ತು ಕುತೂಹಲ ಇರುತ್ತದೋ ಅದಕ್ಕಿಂತಲೂ ಹೆಚ್ಚಿನ ಒತ್ತಡಕ್ಕೊಳಗಾಗಿ ರಾತ್ರಿಎಲ್ಲಾ ನಿದ್ದೆಯೇ ಬಾರದೆ, ಮುಂಜಾವ ನಾಲ್ಕುವರೆ ಘಂಟೆಗೇ ಎಚ್ಚರಗೊಂಡು ಪ್ರಾತರ್ವಿಧಿಗಳನ್ನು ಮುಗಿಸಿ, ಭಗವಂತಾ, ದೇಶಕ್ಕೆ ಸುಭದ್ರ ಮತ್ತು ಸಮರ್ಥ ನಾಯಕತ್ವ ಮತ್ತೊಮ್ಮೆ ಬರಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಚುನಾವಣಾ ನಿರ್ಗಮನ ಫಲಿತಾಂಶ ಬಿಜೆಪಿ ಪರವಾಗಿ ಬಂದಿದ್ದರಿಂದ ಚುನಾವಣೆ ಫಲಿತಾಂಶದ ದಿನ ಮನೆಯಲ್ಲಿಯೇ ಟಿವಿ ಮುಂದೆ ಕುಳಿತು ನೇರವಾಗಿ ಫಲಿತಾಂಶ… Read More ಕಾಮುಕ

ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ಕಳೆದ ಎರಡು ತಿಂಗಳುಗಳಲ್ಲಿ , ಇಡೀ ವಿಶ್ವದ ಚಿತ್ತ ನಮ್ಮ ದೇಶದತ್ತ ಇತ್ತು. ಕಾರಣ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಾರ್ವತ್ರಿಕ ಚುನಾವಣೆ ನಡೆಯುತ್ತಲಿತ್ತು. ಬಹುಶಃ ಪ್ರಪಂಚದ ಅತ್ಯಂತ ದೀರ್ಘಕಾಲದ ಮತ್ತು ಅತ್ಯಂತ ಹೆಚ್ಚಿನ ಕ್ಷೇತ್ರಗಳು ಮತ್ತು ಮತದಾರರು ಪಾಲ್ಗೊಂಡ ಚುನಾವಣೆ ಎಂದರೆ ಇದುವೇ ಇರಬೇಕು. 2014 ರಲ್ಲಿ UPA-1 ಮತ್ತು UPA-2ರ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಭಾರತೀಯರಿಗೆ ತಮ್ಮ ದೇಶವನ್ನು ಮುನ್ನಡೆಸಲು ಕಾಣಿಸಿದ ಏಕೈಕ ಆಶಾಕಿರಣವೆಂದರೆ ನರೇಂದ್ರ ದಾಮೋದರ್ ದಾಸ್ ಮೋದಿ. ಅರ್ಥಾತ್… Read More ಮತ್ತೆ ಮುದುಡಿತು ಕೈ , ಮತ್ತೊಮ್ಮೆ ಅರಳಿತು ಕಮಲ.

ರಸ್ತೆಗಳಲ್ಲಿ ಕಳ್ಳರು ಹೆಚ್ಚಾಗಿದ್ದಾರೆ ಎಚ್ಚರಿಕೆ

ಕೆಲ ದಿನಗಳ ಹಿಂದೆ, ಸಂಜೆ ಮಾರತ್ ಹಳ್ಳಿ ಕಡೆಯಿಂದ ರಿಂಗ್ ರೋಡಿನಲ್ಲಿ ಕಛೇರಿ ಮುಗಿಸಿಕೊಂಡು ನಮ್ಮ ಮನೆಯ ಕಡೆ ಕಾರ್ನಲ್ಲಿ ಒಬ್ಬನೇ ಹೊರಟಿದ್ದೆ. ಪ್ರತಿದಿನ ನಾನೂ ಮತ್ತು ನನ್ನ ಗೆಳೆಯ ಕಾರ್ ಪೂಲ್ ಮಾಡಿ ಕೊಂಡು ಹೋಗುವುದಾರರೂ ಅಂದು ಆತ ಕಛೇರಿಗೆ ಬಾರದಿದ್ದರಿಂದ ನಾನೋಬ್ಬನೇ ಎಫ್ ಎಂನಲ್ಲಿ ಹಾಡು ಕೇಳುತ್ತಾ ಸೆಖೆ ಇದ್ದ ಕಾರಣ ಕಾರಿನ ಮುಂಬಾಗಿಲಿನ ಎರಡೂ ಕಿಟಕಿಗಳನ್ನು ಅರ್ಧ ತೆರೆದುಕೊಂಡು ನಿಧಾನವಾಗಿ ಚಲಾಯಿಸುತ್ತಿದ್ದೆ. ಕಾರ್ ಅಷ್ಟರಲ್ಲಾಗಲೇ ಕೃಷ್ಣರಾಜಪುರಂ ಜಂಕ್ಷನ್ ತಲುಪಿಯಾಗಿತ್ತು. ಅಲ್ಲಿ ದಿನದ 24… Read More ರಸ್ತೆಗಳಲ್ಲಿ ಕಳ್ಳರು ಹೆಚ್ಚಾಗಿದ್ದಾರೆ ಎಚ್ಚರಿಕೆ

ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ

ಸರಿ ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದೆ ಯಾವುದೇ ಮನೆಗಳಿಗೆ ಹೋದರೂ ನಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದದ್ದು ಬಾಗಿಲಿಗೆ ಕಟ್ಟಿರುವ ಒಣಗಿದ ಮಾವಿನ ಎಲೆಯ ತೋರಣ. ತೋರಣದ ಅಡಿಯಲ್ಲಿ ತಲೆಬಾಗಿ ಮನೆಯ ಒಳ ಹೊಕ್ಕಲ್ಲಿ ವಿಶಾಲವಾದ ಪ್ರಾಂಗಣ ಅದರ ಮೂಲೆಯಲ್ಲೊಂದು ಕಾಲ್ತೊಳೆಯುವ ಸ್ಥಳ. ತಾಮ್ರವೋ ಇಲ್ಲವೇ ಹಿತ್ತಾಳೆ ಕೊಳಗದಲ್ಲಿದ್ದ ನೀರನ್ನು ತಂಬಿಗೆಯಿಂದ ತುಂಬಿಕೊಂಡು ಕಾಲ್ತೊಳೆದುಕೊಂಡು, ಶುದ್ಧವಾದ ವಸ್ತ್ರದಿಂದ ಒರೆಸಿಕೊಂಡು ಹಜಾರದಲ್ಲಿ ಹಾಕಿರುವ ನಾನಾ ರೀತಿಯ ಮರದ ಪೀಠೋಪರಣದ ಮೇಲೆ ಆಸೀನರಾಗುತ್ತಿದ್ದಂತೆಯೇ ಮನೆಯೊಡತಿ ಪಳ ಪಳನೆ ಹೊಳೆಯುತ್ತಿದ್ದ ಹಿತ್ತಾಳೆ ಲೋಟದಲ್ಲಿ… Read More ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ

ಅಮ್ಮಾ

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದ್ದಕ್ಕೇ ಆಗಲಿ ಪರ್ಯಾಯ ಹುಡುಕ ಬಹುದೇನೋ, ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತಿಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಅಂಡಾಣುವಿನಿಂದ ಮಗುವಿನ ರೂಪ ತಾಳುವವರೆಗೆ ಜೋಪಾನವಾಗಿಟ್ಟುಕೊಂಡು, ತಾನು ತಿನ್ನುವ ಆಹಾರವನ್ನೇ ತನ್ನ ಒಡಲಿನಲ್ಲಿರುವ ಮಗುವಿನೊಂದಿಗೆ ಕರಳು ಬಳ್ಳಿಯ ಮೂಲಕ ಹಂಚಿಕೊಂಡು ದೇಹದ… Read More ಅಮ್ಮಾ

ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

2019ರ ಲೋಕಸಭಾ ಚುನಾವಣೆ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳಿಗೆ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವ ಚುನಾವಣೆಯಾಗಿತ್ತು. ಹೇಗಾದರೂ ಮಾಡಿ ಮೋದಿಯವರನ್ನು ಹಣಿಯದಿದ್ದರೆ ತಮ್ಮ ಉಳಿಗಾಲವಿಲ್ಲ ಎಂಬುದನ್ನು ಎಲ್ಲರೂ ಮನಗಂಡಿದ್ದರು. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಇದನ್ನು ಬಾಯಿ ಬಿಟ್ಟೇ ಹೇಳಿಯೂ ಬಿಟ್ಟರು. ಅದಕ್ಕಾಗಿಯೇ ಎಲ್ಲರೂ ಮೋದಿ…ಮೋದಿ…ಮೋದಿ… ಈ ಒಂದೇ ಒಂದು ಹೆಸರು ದೇಶಾದ್ಯಂತ ಯಾವ ರೀತಿಯ ಒಂದು ಹವಾ ಸೃಷ್ಟಿಸಿತೆಂದರೆ, ಮೋದಿಯವರ ಬೆಂಬಲಿಗರು ಬಿಡಿ ಮೋದಿಯವರ ವಿರೋಧಿಗಳ ಬಾಯಲ್ಲೂ ಮೊದಲು ಬರುವ ಪದವೇ ಮೋದಿ… Read More ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ