ಏಕದಂತ ಮಿತ್ರ ವೃಂದ ಕನ್ನಡ ರಾಜ್ಯೋತ್ಸವ

ಅಲ್ಲಿ ಹಾರ ತುರಾಯಿಗಳಿರಲಿಲ್ಲ. ಬಾಜಾ ಭಜಂತ್ರಿಯ ಅಬ್ಬರವಿರಲಿಲ್ಲ. ಹೇಳಿಕೊಳ್ಳುದಕ್ಕೆ ದೊಡ್ಡವರಾರು ಇರರಲಿಲ್ಲ. ಅಲ್ಲಿದ್ದ ಬಹುತೇಕರು ಸಣ್ಣ ವಯಸ್ಸಿನ ಮಕ್ಕಳೇ. ಇನ್ನೂ ಹೇಳಬೇಕೆಂದರೆ  ಅಲ್ಲಿದ್ದವರ ಹೆಚ್ಚಿನ ಮಾತೃಭಾಷೆ ಕನ್ನಡವೇ ಆಗಿರಲಿಲ್ಲ. ಆದರೂ ಅವರೆಲ್ಲರೂ ಸುಲಲಿತವಾಗಿ ಕನ್ನಡ ಮಾತನಾಡುವ ಮೂಲಕ  ಕನ್ನಡಿಗರೇ ಆಗಿದ್ದರು  ಮತ್ತು  ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕಠಿ ಬದ್ದರಾಗಿದ್ದರು. ಹೌದು. ನೆನ್ನೆ ಬೆಳಿಗ್ಗೆ  ಬೆಂಗಳೂರಿನ ತಿಂಡ್ಲುವಿನ ವಿಶ್ವೇಶ್ವರಯ್ಯ ಬಡಾವಣೆಯ ಏಕದಂತ ಮಿತ್ರ ವೃಂದದ ಸಣ್ಣ ವಯಸ್ಸಿನ ಮಕ್ಕಳು ತಮ್ಮ ಪೋಷಕರೊಡಗೂಡಿ ಕರುನಾಡ ಹೆಮ್ಮೆಯ ಹಬ್ಬ  ಕರ್ನಾಟಕ… Read More ಏಕದಂತ ಮಿತ್ರ ವೃಂದ ಕನ್ನಡ ರಾಜ್ಯೋತ್ಸವ

64ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀಗಂಧ ಕನ್ನಡ ಸಂಘದ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮತ್ತು ಸಡಗರಗಳಿಂದ ಅಧ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವನ್ನು  ಸ್ಥಳೀಯ ಮುಖಂಡರುಗಳಾದ ಶ್ರೀಯುತ ತಿಂಡ್ಲು ಬಸವರಾಜ್ ಅವರ ಸಮ್ಮುಖದಲ್ಲಿ ಶ್ರೀ ಹರಿಯವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ತಿಂಡ್ಲುವಿನ ಬಸವೇಶ್ವರ ಪ್ರತಿಮೆಯ ಆವರಣದಲ್ಲಿ  ಆರೋಹಣ ಮಾಡುವುದರ ಮೂಲಕ ಉಧ್ಘಾಟಿಸಲಾಯಿತು. ನಂತರ ಎಲ್ಲರ ಒಕ್ಕೊರಲಿನ ಕಂಠಗಳಿಂದ  ಸುಂದವಾಗಿ ಮೂಡಿಬಂದ ನಾಡ ಗೀತೆ ಜೈ ಭಾರತ ಜನನಿಯ ತನುಜಾತೆ ಎಲ್ಲರ ಗಮನ ಸೆಳೆಯಿತು. … Read More 64ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಹಬ್ಬಗಳ ಆಚರಣೆಯಲ್ಲಿ ತಾರತಮ್ಯ

ದೀಪಾವಳಿ ಬೆಳಕಿನ ಹಬ್ಬ ನಮ್ಮ ಸಂಪ್ರದಾಯದಲ್ಲಿ ಆಬಾಲ ವೃದ್ದರಾಗಿ ಸಡಗರ ಸಂಭ್ರಮದಿಂದ ಭರಪೂರ ಐದು ದಿನಗಳು ಆಚರಿಸುವ ಹಬ್ಬ. ಆದರೆ ನೆನ್ನೆ ಈ ಕೆಳಕಂಡ ಫೋಟೋ ನೋಡಿ ಮನಸ್ಸಿಗೆ ಬೇಸರ ತರಿಸಿತು ಏನೂ ಅರಿಯದ ಎರಡು ಪುಟ್ಟ ಕಂದಮ್ಮಗಳ ಕೈಯಲ್ಲಿ ಪಟಾಕಿ ಬಿಡಿ, ಬಡ ಮಕ್ಕಳಿಗೆ ಎರಡು ಹೊತ್ತು ಒಪ್ಪತ್ತು ಊಟ ಕೊಡಿ ಎಂದು ಬರೆದಿತ್ತು. ಅರೇ ಬಡಮಕ್ಕಳಿಗೆ ಊಟ ಹಾಕುವುದಕ್ಕೂ ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯುವುದಕ್ಕೂ ಏನು ಸಂಬಂಧ? ಹಾಗಾದರೆ ನಾವು ಹಬ್ಬಗಳನ್ನು ಮಾಡದಿದ್ದ ಮಾತ್ರಕ್ಕೇ… Read More ಹಬ್ಬಗಳ ಆಚರಣೆಯಲ್ಲಿ ತಾರತಮ್ಯ

ಮಂಗಳೂರು ದಸರಾ

ದಸರಾ ಎಂದ ಕೂಡಲೇ ಥಟ್ ಅಂತಾ ನಮಗೆಲ್ಲಾ ನೆನಪಾಗೋದೇ ಮೈಸೂರು ದಸರಾ. ದಸರಾ ನಮ್ಮ ನಾಡ ಹಬ್ಬ. ಕನ್ನಡಿಗರ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭವಾಗಿ ದಶಮಿಯವರೆಗೂ ನಡೆಯುವ ವೈಭವದ ಹಬ್ಬ. 1610ರಲ್ಲಿ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದರು. ಅಂದು ವಿಜಯನಗರದ ಸಾಮ್ರಾಜ್ಯದಲ್ಲಿ ಕೇವಲ ದಶಮಿಯಂದು ಸೀಮೋಲ್ಲಂಘನ ಮಾಡಿ ಬನ್ನಿ ಮಂಟಪಕ್ಕೆ ಮಾತ್ರವೇ ಸೀಮಿತವಾಗಿದ್ದ… Read More ಮಂಗಳೂರು ದಸರಾ

ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ದಸರಾಹಬ್ಬ ಮೈಸೂರು ಪ್ರಾಂತದ ನಾಡಹಬ್ಬ ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೇ ಬಾಗಿಣ ಕೊಡುವುದು ಸಂಪ್ರದಾಯ. ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು,… Read More ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ಅನಂತ ಚತುರ್ದಶಿ ವ್ರತ

ಭಾದ್ರಪದ ಮಾಸದ ಶುಕ್ಲ ಪಕ್ಷದ ಹದಿನಾಲ್ಕನೇಯ ದಿನದಂದು ಭಕ್ತಿಭಾವದಂದ ಆಚರಿಸಲ್ಪಡುವ ಅನಂತ ಚತುರ್ದಶಿ ಅಥವಾ ಅನಂತನ ಹಬ್ಬದ ಪೌರಾಣಿಕ ಹಿನ್ನಲೆ, ಹಬ್ಬದ ವೈಶಿಷ್ಟತೆ ಮತ್ತು ಹಬ್ಬದ ಆಚರಣೆಯ ಸಂಪೂರ್ಣ ವಿವರ ಇದೋ ನಿಮಗಾಗಿ… Read More ಅನಂತ ಚತುರ್ದಶಿ ವ್ರತ

ಹಬ್ಬದ ಸಡಗರ ಸಂಭ್ರಮ

ಎಲ್ಲಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಯೂ ಇಂದು ವಿಶ್ವಾದ್ಯಂತ, ದೇಶಾದ್ಯಂತ, ನಾಡಿನಾದ್ಯಂತ ….. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ದೃಶ್ಯ ಮತ್ತು ಮುದ್ರಣ ಮಾದ್ಯಮದಲ್ಲಿ ಕೇಳುವುದು ಮತ್ತು ಓದುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾದರೆ ಆ ಸಡಗರ ಮತ್ತು ಸಂಭ್ರಮ ಎಂದರೆ ಏನು? ಅದು ಹೇಗೆ ಇರುತ್ತದೆ ಎಂಬುದನ್ನು ಆಲೋಚಿಸುತ್ತಿರುವಾಗಲೇ ಮೂಡಿದ ಲೇಖವವೇ ಇದು. ಹಬ್ಬಗಳ ವಿಷಯಕ್ಕೆ ಬಂದಾಗ, ಸಡಗರ ಮತ್ತು ಸಂಭ್ರಮ ಎರಡೂ ಜೋಡಿ ಪದಗಳು. ಸಡಗರ ಹಬ್ಬದ ಹಿಂದಿನ ಪ್ರಕ್ರಿಯೆಗಳಾದರೆ, ಸಂಭ್ರಮ ಹಬ್ಬ… Read More ಹಬ್ಬದ ಸಡಗರ ಸಂಭ್ರಮ

ಹೂವಿನ ಹಾರ

ಹಬ್ಬ ಹರಿ ದಿನಗಳಲ್ಲಿ ದೇವರ ಅಲಂಕಾರ ಮಾಡಲು ಯಾವುದೇ ರೀತಿಯ ಎಷ್ಟೇ ಆಭರಣಗಳಿಂದ ದೇವರನ್ನು ಅಲಂಕರಿಸಿದರೂ ವಿಧ ವಿಧದ ಹೂವುಗಳು ಮತ್ತು ಹೂವಿನ ಹಾರಗಳ ಅಲಂಕಾರದ ಮುಂದೆ ಉಳಿದೆಲ್ಲವೂ ನಗಣ್ಯವೇ ಸರಿ. ಅದೇ ರೀತಿ ಮುನಿಸಿಕೊಂಡಿರುವ ನಾರಿಯರನ್ನು ಸರಳವಾಗಿ ಮತ್ತು ಸುಲಭವಾಗಿ ಒಲಿಸಿಕೊಳ್ಳಲು ಒಂದು ಮೊಳ ಮಲ್ಲೇ ಅಥವಾ ಮಲ್ಲಿಗೆ ಹೂ ಸಾಕು ಎನ್ನುವುದು ಕೆಲವು ಅನುಭವಸ್ತರ ಅಂಬೋಣ. ಸುಮಾರು ವರ್ಷಗಳ ಹಿಂದೆ ಕೃಷ್ಣರಾಜಾ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನ ಹೂವಿನ ಹಾರ ಕೊಂಡು ಕೊಳ್ಳಲು ಹೋದಾಗ… Read More ಹೂವಿನ ಹಾರ

ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರಾವಣ ಬಹುಳ ಅಷ್ಟಮಿಯಂದು ದೇಶಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುವ ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ವೈಶಿಷ್ಠ್ಯಗಳು ಮತ್ತು ಅದರ ಆಚರಣೆಯ ಜೊತೆಗೆ ಶ್ರೀ ಕೃಷ್ಣನ ಜನ್ಮದಿನವನ್ನು ಎರಡು ವಿಭಿನ್ನ ದಿನಗಳಲ್ಲಿ ಏಕೆ ಆಚರಿಸುತ್ತಾರೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೃಷ್ಣ ಜನ್ಮಾಷ್ಟಮಿ