ಜ್ಞಾನಚೂರ್ಣ ನಶ್ಯ

ಬಹುಶಃ ಇಂದಿನ ಕಾಲದಲ್ಲಿ ಯಾವುದೇ ಚಟವಿಲ್ಲದವರು ಸಿಗುವುದೇ ಅಪರೂಪ ಎಂದರೂ ತಪ್ಪಾಗಲಾರದೇನೋ?. ಇಂದಿನ ಬಹುತೇಕ ಹುಡುಗರು ಕಾಲೇಜು ಮೆಟ್ಟಿಲು ಹತ್ತುವುದರೊಳಗೇ ಬೀಡಿ ಇಲ್ಲವೇ ಸಿಗರೇಟ್ ಈ ರೀತಿ ಯಾವುದಾದರೂಂದು ತಂಬಾಕಿನ ಉತ್ಪನ್ನಕ್ಕೆ ದಾಸರಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಆದರೆ ಇವೆರೆಡರ ಹೊರತಾಗಿಯೂ ತಂಬಾಕಿನಿಂದ ತಯಾರಾದ ಹೊಗೆರಹಿತ ಸಣ್ಣದಾಗಿ ನಶೆ ಏರಿಸುವ ವಸ್ತುವೇ ನಶ್ಯ ಇಲ್ಲವೇ ನಸ್ಯ ಎಂದೂ ಕರೆಯುತ್ತಾರೆ.. ಇಂತಹ ನಶ್ಯದ ಕುರಿತಾದ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ತಿಳಿದಂತೆ, ನಶ್ಯಕ್ಕೂ ನಮ್ಮ… Read More ಜ್ಞಾನಚೂರ್ಣ ನಶ್ಯ

ಗಾಡಿ ಕಾಣ್ತಾ ಇಲ್ಲಾ

ಅದೊಂದು ಶನಿವಾರ ಬೆಳಿಗ್ಗೆ ಎಂದಿನಂತೆ ಐದಕ್ಕೆಲ್ಲಾ ಎದ್ದು ಪ್ರಾರ್ಥರ್ವಿಧಿಗಳನ್ನು ಮುಗಿಸಿ ಗೆಳೆಯರೊಡನೆ ಸುಮಾರು ಹತ್ತು ಹನ್ನೆರಡು ಕಿಮೀ ದೂರಗಳಷ್ಟು ಸುದೀರ್ಘವಾದ ನಡಿಗೆಯನ್ನು ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದು ಸ್ನಾನ ಸಂಧ್ಯಾವಂದನೆಯನ್ನು ಮುಗಿಸಿ ಅಡುಗೆ ಮನೆಗೆ ಹೋಗಿ ನೋಡಿದರೆ ತಿಂಡಿ ಇನ್ನೂ ಮಾಡಿರಲಿಲ್ಲ. ಇದೇನಮ್ಮಾ ಇಷ್ಟು ಹೊತ್ತಾದಾರೂ ತಿಂಡಿಯೇ ಮಾಡಿಲ್ಲ್ಲ ಎಂದು ಮನೆಯಾಕಿಯನ್ನು ಕೇಳಿದರೆ, ಈ ಇವತ್ತು ಮಕ್ಕಳಿಗೂ ರಜೆ ಹಾಗಾಗಿ ಸ್ವಲ್ಪ ಹೆಚ್ಚಿನ ಹೊತ್ತು ನಿದ್ದೇ ಮಾಡಿಬಿಟ್ಟೆ. ಒಂದು ಹದಿನೈದು ಇಪ್ಪತ್ತು ನಿಮಿಷ ಇರಿ ಬಂದು ಏನಾದ್ರೂ… Read More ಗಾಡಿ ಕಾಣ್ತಾ ಇಲ್ಲಾ

ಸಿಹಿ-ಕಹಿ ಪ್ರಸಂಗ-1

ಯಾವುದೇ ಸಮಾರಂಭಗಳಲ್ಲಿ ಸಿಹಿ ತಿಂಡಿಯದ್ದೇ ಭರಾಟೆ. ಸಮಾರಂಭಕ್ಕೆ ಅಡುಗೆಯವರನ್ನು ಮಾತು ಕಥೆಗೆ ಕರೆಸಿದಾಗ, ಪಾಯಸ, ಎರಡು ಪಲ್ಯ, ಎರಡು ಕೋಸಂಬರಿ, ಗೊಜ್ಜು, ಅನ್ನಾ ಸಾರು, ಕೂಟು ಎಂಬೆಲ್ಲವೂ ಮಾಮೂಲಿನ ಅಡುಗೆಯಾದರೇ, ಸಮಾರಂಭಗಳ ಊಟದ ಘಮ್ಮತ್ತನ್ನು ಹೆಚ್ಚಿಸುವುದೇ ಸಿಹಿ ತಿಂಡಿಗಳು. ಸಮಾರಂಭದಲ್ಲಿ  ಎಷ್ಟು ಬಗೆಯ ಸಿಹಿ ತಿಂಡಿಗಳು ಮತ್ತು ಯಾವ ಯಾವ ಸಿಹಿತಿಂಡಿಗಳನ್ನು ಮಾಡಿಸಿರುತ್ತಾರೋ ಅದರ ಮೇಲೆ ಅವರ ಅಂತಸ್ತು ಮತ್ತು ಸಮಾರಂಭದ ಘನತೆಯನ್ನು ಹೆಚ್ಚಿಸುತ್ತದೆ ಎಂದರೂ ತಪ್ಪಾಗಲಾರದು.  ಸಮಾರಂಭ ಮುಗಿದ  ಎಷ್ಟೋ ದಿನಗಳ ನಂತರವೂ ಅಲ್ಲಿ ತಿಂದಿದ್ದ … Read More ಸಿಹಿ-ಕಹಿ ಪ್ರಸಂಗ-1

ಎತ್ತುಗಳ ನಿಯತ್ತು

ಕೂರೋನಾ ಲಾಕ್ ಡೌನ್ ಸಮಯದಲ್ಲಿ ತನ್ನೂರಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ಅಂಡಲೆಯುತ್ತಿದ್ದ ಸಾಫ್ಟ್‌ವೇರ್ ಇಂಜೀನಿಯರ್ ಒಬ್ಬ, ತನ್ನೂರಿನ ಎಣ್ಣೆ ತೆಗೆಯುವ ಗಾಣದಲ್ಲಿ ಎತ್ತುಗಳು ತಮ್ಮ ಪಾಡಿಗೆ ತಾವು ಸುತ್ತುತ್ತಿದ್ದರೆ, ರೈತನೊಬ್ಬ ಆರಾಮವಾಗಿ ನಿದ್ರಿಸುತ್ತಿದ್ದನ್ನು ನೋಡಿ ಆಶ್ಚರ್ಯ ಚಕಿತನಾದ. ನಿದ್ರಿಸುತ್ತಿದ್ದ ರೈತನನ್ನು ಎಬ್ಬಿಸಿ, ಈ ಎತ್ತುಗಳು ಗಾಣವನ್ನು ಅರೆಯುವುದನ್ನು ನಿಲ್ಲಿಸಿದರೆ ನಿಮಗೆ ಹೇಗೆ ತಿಳಿಯುತ್ತದೇ?ಎಂದು ಕುತೂಹಲದಿಂದ ಕೇಳಿದ. ರೈತ ಕೂಡಾ ಹಾಗೆಯೇ ಕಣ್ತೆರೆಯದೇ, ಸ್ಚಾಮೀ, ಎತ್ತುಗಳು ಸುತ್ತುವುದನ್ನು ನಿಲ್ಲಿಸಿದರೆ ಅವುಗಳ ಕತ್ತಿನಲ್ಲಿರುವ ಗಂಟೆಯ ಶಬ್ಧ ನಿಲ್ಲುತ್ತದೆ ಎಂದ.… Read More ಎತ್ತುಗಳ ನಿಯತ್ತು

ಪೋಲಿಸರ ಬಿಸಿ ಬಿಸಿ ಕಜ್ಜಾಯ

ಕೊರೋನಾ ಮಹಾಮಾರಿಯ ಸಲುವಾಗಿ ದೇಶಾದ್ಯಂತ ಏನೂ, ಇಡೀ ಪ್ರಪಂಚಾದ್ಯಂತ ಎಲ್ಲಾ ದೇಶಗಳೂ ಲಾಕ್ ಡೌನ್ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ಎಲ್ಲಾ ಧರ್ಮಗುರುಗಳಾದಿಯಾಗಿ ಪರಿ ಪರಿಯಾಗಿ ಕೇಳಿಕೊಂಡರೂ, ಇನ್ನೂ ಕೆಲವು ಪುಂಡ ಪೋಕರಿಗಳು ರಸ್ತೆಯಲ್ಲಿ ಅಂಡಲೆಯುತ್ತಿರುವವರಿಗೆ ಪೋಲೀಸರು ತಮ್ಮ ಬೆತ್ತದಿಂದ ಬಿಸಿ ಬಿಸಿಯಾದ ಕಜ್ಜಾಯ ಉಣಿಸುತ್ತಿರುವ ವೀಡೀಯೋ ಅಥವಾ ಪೋಟೋಗಳನ್ನು ನೋಡುತ್ತಿರುವಾಗ ಅಥವಾ ಓದುತ್ತಿರುವಾಗ ಸುಮಾರು ವರ್ಷಗಳ ಹಿಂದೆ ನಮ್ಮ ಗೆಳೆಯರ ಗುಂಪೊಂದಕ್ಕೆ ಇದೇ ರೀತಿಯಾಗಿ ಪೋಲೀಸರು ಕೊಟ್ಟಿದ್ದ ರಸವತ್ತಾದ ಕಜ್ಜಾಯದ… Read More ಪೋಲಿಸರ ಬಿಸಿ ಬಿಸಿ ಕಜ್ಜಾಯ

ನೀರ್ದೋಸೆ

ಒಂದು, ಎರಡು, ಮೂರು ನಾಲ್ಕು ಸಾಲ್ತಿಲ್ಲ ನೀರ್ದೋಸೆ ಇನ್ನೂ ಹಾಕು ಮನೇಲೀ ಇರೋರಿಗೆ ಎಲ್ರಿಗೂ ಬೇಕು ಹೆಂಡ್ತಿ ಹೇಳಿದ್ಮೇಲೆ ಒಪ್ಗೋಳ್ಳಲೇ ಬೇಕು. ಇಷ್ಟು ಹೇಳಿಯೂ ಐದ್ನೇ ನೀರ್ದೋಸೆ ತಟ್ಟೇಲಿ ಬಿತ್ತು ಇದೇ ನೋಡಿ ಗಂಡ-ಹೆಂಡ್ರ ಪ್ರೀತಿಯ ಗಮ್ಮತ್ತು ಇದನ್ನು ಒಪ್ಪೋರು, ಕೊಡ್ರೀ ನಿಮ್ಮಾಕಿಗೆ ಒಂದು ಸಿಹಿ ಮುತ್ತು ಏಕೆಂದ್ರೇ ಖಂಡಿತವಾಗಿಯೂ ಆಕೆನೇ ನಮ್ಮನೇ ಸಂಪತ್ತು. ಏನಂತೀರೀ? ಇಂದು ನಮ್ಮಾಕಿ ಮಾಡಿಕೊಟ್ಟ ಬಿಸಿ ಬಿಸಿಯಾದ ಗರಿ ಗರಿಯಾದ ನೀರು ದೋಸೆ ಮತ್ತು ಕಾಯಿ ಚಟ್ನಿ ತಿಂದ ಮೇಲೆ ಬರೆದ… Read More ನೀರ್ದೋಸೆ

ಪೋಲೀಸರೊಂದಿಗೆ ಪಜೀತಿಯ ಪ್ರಸಂಗಗಳು

ಮೊನ್ನೆ ಹೋಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಆತ್ಮೀಯ ಗೆಳೆಯರಾದ ಸಹಕಾರ ನಗರದ ಐಯ್ಯಂಗಾರ್ ಆಹಾರದ ಶ್ರೀ ವಿಜಯ್ ಹೆರಗು ಅವರು ಹೋಳಿ ಹಬ್ಬದ ಸಮಯದಲ್ಲಿ ತಮ್ಮದ್ದಲ್ಲದ ತಪ್ಪಿಗಾಗಿ ಪೋಲೀಸರ ಕೈಗೆ ಸಿಕ್ಕಿಕೊಂಡು ಪರದಾಡಿದ ತಮ್ಮ ಬಾಲ್ಯದ ಪಜೀತಿಯ ಪ್ರಸಂಗವನ್ನು ಸುಂದರವಾಗಿ ಮುಖಪುಟದಲ್ಲಿ ಬರೆದಿದ್ದರು. ಅದನ್ನು ಓದುತ್ತಿದ್ದಾಗ ಪೋಲೀಸರೊಂದಿಗೆ ವಯಕ್ತಿಕವಾಗಿ ಮತ್ತು ನಮ್ಮ ಗೆಳೆಯರಿಗಾದ ಕೆಲ ಮೋಜಿನ ಸಂಗತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಪೋಲೀಸರೆಂದರೆ ನನಗೆ ಒಂದು ರೀತಿಯ ಪೂಜ್ಯ ಭಾವ. ಅವಿನಾಭಾವ ಸಂಬಂಧ. ಹಗಲಿರಳು ಎನ್ನದಂತೆ ಸದಾಕಾಲವೂ… Read More ಪೋಲೀಸರೊಂದಿಗೆ ಪಜೀತಿಯ ಪ್ರಸಂಗಗಳು

ಲಭ್ಯ

ಹೆಣ್ಣು, ಹೊನ್ನು ಮತ್ತು ಮಣ್ಣು ಎಲ್ಲವೂ ಲಭ್ಯ ಇದ್ದಲ್ಲಿ ಮಾತ್ರವೇ ಎಲ್ಲರಿಗೂ ಸಿಗುತ್ತದೆ ಎನ್ನುವುದು ದೊಡ್ಡವರು ಹೇಳುವ ಮಾತು. ಕಷ್ಟ ಪಟ್ಟು, ಬಿಸಿಲಿನಲ್ಲಿ ಬವಳಿ ಬೆಂದು, ಅಕ್ಕ ಪಕ್ಕದವರೊಡನೆ ಕಾದಾಡಿ, ಹೋರಾಡಿ ಸರದಿಯಲ್ಲಿ ನಿಂತು ಖರೀದಿಸಿದ ಕಲ್ಲೆಣ್ಣೆ (ಸೀಮೇಎಣ್ಣೆ ) ಅಂತಿಮವಾಗಿ ನಮಗೆ ಸಿಗದೇ, ಲಭ್ಯ ಇದ್ದವರಿಗೇ ಸಿಕ್ಕಾಗ ಆಗುವ ಸಿಟ್ಟು ಸೆಡವು ನಿಜಕ್ಕೂ ಹೇಳಲಾಗದು. ಅಂತಹ ರೋಚಕ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆಗ ಎಂಭತ್ತರ ದಶಕ. ಆಗ ತಾನೇ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದೆ. ಊರಿನಲ್ಲಿದ್ದ… Read More ಲಭ್ಯ

ನೆರೆ ಮನೆಯ ಸಾರಿನ ರುಚಿಯೇ ಚೆನ್ನ

ಪ್ರತಿದಿನ ಮಧ್ಯಾಹ್ನ ನಮ್ಮ ಕಛೇರಿಯ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಬಹಳ ವರ್ಷಗಳಿಂದ ರೂಢಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಒಬ್ಬರು ಪ್ರತಿದಿನವೂ ಅವರ ಮನೆಯಾಕಿ ಶ್ರಧ್ದೆಯಿಂದ ಪ್ರೀತಿಯಿಂದ ಅಡುಗೆ ಮಾಡಿ ಊಟದ ಡಬ್ಬಿಯನ್ನು ಕಟ್ಟಿ ಕಳುಹಿಸಿದ್ದರೂ ಅದೇಕೋ ಏನೋ ಬಹಳಷ್ಟು ಬಾರಿ ಯಾರು ಹೋಟೆಲ್ನಿಂದ ಊಟ ತರಿಸಿರುತ್ತಾರೋ ಅವರಿಗೆ ತಮ್ಮ ಮನೆಯ ಊಟವನ್ನು ಕೊಟ್ಟು ತಾವು ಹೋಟೆಲ್ ಊಟ ಮಾಡುತ್ತಾರೆ. ಕುತೂಹಲದಿಂದ ಹಾಗೇಕೆ ಮಾಡುತ್ತೀರೆಂದು ಕೇಳಿದರೆ ಇದು ಒಂದು ಊಟವೇ ಒಳ್ಳೇ ದನದ ಆಹಾರ… Read More ನೆರೆ ಮನೆಯ ಸಾರಿನ ರುಚಿಯೇ ಚೆನ್ನ