ಅಂಬಿ ಮಜ್ಜಿಗೆ

ಇತ್ತೀಚೆಗೆ ನಮ್ಮ ಮನೆಯಿಂದ ಅಣ್ಣನ ಮನೆಉ ಕಡೆ ಹೋಗುವಾಗ ರಾಜಕುಮಾರ್ ಸ್ಮಾರಕ ದಾಟಿ ಸ್ವಲ್ಪ ‌ಮುಂದೆ ಹೋಗುತ್ತಿರುವಾಗ ವರ್ತುಲ ರಸ್ತೆಯ ಬದಿಯ ತಳ್ಳು ಗಾಡಿಯ ಮೇಲೆ ಅಂಬಿ ಮಜ್ಜಿಗೆ ಅನ್ನೋ ಬೋರ್ಡ್ ನೋಡಿ ಅರೇ ಇದೇನಪ್ಪಾ‌ ಒಂದು ತರಹದ ವಿಶೇಷವಾದ ಶೀರ್ಷಿಕೆ‌ ಇದೆಯಲ್ಲಾ? ಅಂಬಿ‌ (ಅಂಬರೀಷ್) ಅಭಿಮಾನಿಗಳ ‌ಅಭಿಮಾನಕ್ಕೆ ಕೊನೆಯೇ ಇಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಇದನ್ನೇ ಗಮನಿಸಿದ ನನ್ನ ಮಡದಿಯೂ ಕೂಡಾ ಅಂಬಿ‌ ಯಾವಾಗ ಇಲ್ಲಿಗೆ ಬಂದು ಮಜ್ಜಿಗೆ ಕುಡಿದಿದ್ರೋ? ಅವರು ಕುಡಿತಿದ್ದ ‌ಮಜ್ಜಿಗೆಯೇ ಬೇರೆ ಅಲ್ವೇ?… Read More ಅಂಬಿ ಮಜ್ಜಿಗೆ

ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಮೊಬೈಲ್ ಹೆಸರೇ ಹೇಳುವಂತೆ ಜಂಗಮವಾಣಿ. ಎಲ್ಲೆಂದರೆಲ್ಲಿ , ಎಷ್ಟು ಹೊತ್ತಿನಲ್ಲಿಯೂ, ಯಾರನ್ನು ಬೇಕಾದರೂ ಸಂಪರ್ಕಿಸ ಬಹುದಾದ ಸುಲಭವಾದ ಸಾಧನ. ಭಾರತದಲ್ಲಿ ಎಂಭತ್ತರ ದಶಕದಲ್ಲಿ ದೂರವಾಣಿಯ ಸಂಪರ್ಕ ಕ್ರಾಂತಿಯಾಗಿ ಮನೆ ಮನೆಗಳಲ್ಲಿ ಟೆಲಿಫೋನ್ ರಿಂಗಣಿಸತೊಡಗಿದರೆ, ತೊಂಭತ್ತರ ದಶಕದಲ್ಲಿ ಸಿರಿವಂತರ ಕೈಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸಿಕೊಳ್ಳುವ ಸಾಧನವಾಗಿ ದೊಡ್ಡ ದೊಡ್ಡ ಮೊಬೈಲ್ ಫೋನ್ಗಳು ಬಂದರು. ಆದರೆ, ಯಾವಾಗ 2001-2002ರಲ್ಲಿ ರಿಲೆಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಮಾರುಕಟ್ಟೆಯಲ್ಲಿ ಕಾಸಿಗೊಂದು ಕೊಸರಿಗೊಂದು ಎನ್ನುವಂತೆ 500-2000 ರೂಪಾಯಿಗಳ ಮೊಬೈಲ್ ಬಿಡುಗಡೆ ಮಾಡಿತೋ ಅಂದಿನಿಂದ ಭಾರತದಲ್ಲಿ… Read More ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಅನುಭವದ ಪಾಠ

ನೀರು ಎಲ್ಲರ ಜೀವಾಮೃತ. ಕಡೇ ಪಕ್ಷ ಊಟ ಇಲ್ಲದಿದ್ದರೂ ಸುಮಾರು ದಿನಗಳು ಜೀವಿಸಬಹುದು. ಆದರೆ ನೀರು ಇಲ್ಲದೇ ಜೀವಿಸಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಆಹಾರ ಇಲ್ಲದಿದ್ದಾಗ ಹೊಟ್ಟೆ ತುಂಬಾ ನೀರನ್ನು ಕುಡಿದೇ ಹೊಟ್ಟೆ ತುಂಬಿಸುಕೊಂಡ ಎಷ್ಟೋ ಉದಾಹರಣೆಗಳಿವೆ. ಅಂತಹ ನೀರನ್ನು ಕುಡಿಯುವಾಗ ಆದ ಅನುಭವದ ಸಂಗತಿಯೇ ಇಂದಿನ ಕಥಾವಸ್ತು. ಶಂಕರ ಅದೊಂದು ಪ್ರತಿಷ್ಥಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾರತದಲ್ಲದೇ ದೇಶ ವಿದೇಶದ ನಾನಾ ಭಾಗಗಳಲ್ಲಿ ಅವನ ಕಂಪನಿಯ ಶಾಖೆ ಇತ್ತು. ಪ್ರಪ್ರಥಮ ಬಾರಿಗೆ ಅವನಿಗೆ ಕೆಲಸದ… Read More ಅನುಭವದ ಪಾಠ

ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಅಂದು ಶಂಕರನ ಮನೆಯಲ್ಲಿ ಅವರ ತಾತನ ಶ್ರಾದ್ಧಾಕಾರ್ಯವಿತ್ತು. ಅವರ ಮನೆಯಲ್ಲಿ ಶ್ರಾಧ್ಧ ಕಾರ್ಯವೆಂದರೆ ಅದೊಂದು ದೊಡ್ಡವರ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಎಲ್ಲಾ ಸಂಬಂಧೀಕರು ಒಟ್ಟಿಗೆ  ಅಗಲಿದ ಹಿರೀಕರ ನೆನೆಯುವ ನೆಪದಲ್ಲಿ ಒಂದುಗೂಡುವ ಸಮಾರಂಭವಾಗಿತ್ತು.  ಹಿರಿಯರು, ಕಿರಿಯರು, ನೆಂಟರು ಇಷ್ಟರು ಮತ್ತು ಬಹಳ ಆತ್ಮೀಯರೂ ಸೇರಿದಂತೆ ಸುಮಾರು 60-70 ಜನರು ಬರುತ್ತಿದ್ದ ಕಾರಣ  ಹೊತ್ತಿಗೆ ಮುಂಚೆಯೇ ಅಡುಗೆಯವರು ಮನೆಗೆ ಬಂದು  ಬೆಳಗಿನಿಂದಲೇ  ಮಡಿಯಲ್ಲಿ  ಶ್ರಾದ್ಧ ಆಡುಗೆಯ ಸಿದ್ದತೆಯಲ್ಲಿದ್ದರು.  ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಮಡಿಯ ವಾತಾವರಣ. ಚಿಕ್ಕ ಮಕ್ಕಳಿಗಂತೂ ಮನೆಯ… Read More ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಹರಕೆ

ತಮ್ಮ ನಾನಾ ರೀತಿಯ ಇಚ್ಚೆಗಳನ್ನು ಈಡೇರಿಸಲು ಭಗವಂತನ ಬಳಿ ಬೇಡಿಕೊಳ್ಳುವ ಸಮಯದಲ್ಲಿ ಭಕ್ತಿಯಿಂದ ಭಗವಂತನಿಗೆ ಏನದರೊಂದು ಕಾಣಿಕೆಯನ್ನು ಸಮರ್ಪಿಸುತ್ತೇನೆಂದು ಕೇಳಿಕೊಳ್ಳುವುದು ನಮ್ಮಲ್ಲಿರುವ ವಾಡಿಕೆ. ಆ ರೀತಿಯಾಗಿ ಕೇಳಿಕೊಳ್ಳುವ ಪದ್ದತಿಯನ್ನೇ ಹರಕೆ ಎನ್ನುತ್ತಾರೆ. ಒಂದು ಪಕ್ಷ ಅವರ ಆಭಿಪ್ಸೆಗಳು ಅವರ ಇಚ್ಚೆಯ ಅನುಗುಣವಾಗಿ ಈಡೇರಿದ ಸಮಯದಲ್ಲಿ ತಾವು ಕಟ್ಟಿಕೊಂಡ ಹರಕೆಯನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸಿ ಧನ್ಯತಾಭಾವನೆಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತ ಸಮಯದಲ್ಲಾದ ಮೋಜಿನ ಸಂಗತಿಯೇ ಇಂದಿನ ಕಥಾವಸ್ತು. ಶ್ಯಾಮರಾಯರು ಅಂದಿನ ಕಾಲಕ್ಕೇ ಎಸ್. ಎಸ್.ಎಲ್.ಸಿ ಫಸ್ಟ್… Read More ಹರಕೆ

ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ… Read More ಪುರೋಹಿತರ ಪರದಾಟ

ಪೆಪ್ಪರ್ಮೆಂಟ್

ಬಹುಷಃ ಎಪ್ಪತ್ತು ಮತ್ತು ಎಂಭತ್ತು ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ ಎಂಬ ನಂಬಿಕೆ ನನ್ನದು. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ತಿಂಡಿಯೇ ಅದು. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಪೆಪ್ಪರ್ಮೆಂಟ್. ನಾವು ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನವಾಗಿ ಸಿಗುತ್ತಿದ್ದದ್ದೇ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ ಜೊತೆ ಮಕ್ಕಳಿಗೆಂದೇ ಪೆಪ್ಪರ್ಮೆಂಟ್ ತಂದೇ ತರುತ್ತಿದ್ದರು.… Read More ಪೆಪ್ಪರ್ಮೆಂಟ್

ರಂಜಾನ್ ರಾಮಾಯಣ

ಸುಮಾರು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು. ಆಗಷ್ಟೇ ನಮ್ಮನೆಯ ಹತ್ತಿರದ ಬಿಇಎಲ್ ಹೊಸಾ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ಆರಂಭವಾಗಿತ್ತು. ಹೈದರಾಬಾದ್ ಮೂಲದ ಪ್ಯಾರಡೈಸ್ ಹೊಟೆಲ್ ರುಚಿ ರುಚಿಯಾದ ಬಿರ್ಯಾನಿಗೆ ಬಲು ಖ್ಯಾತಿ. ಕೆಲಸದ ನಿಮಿತ್ತ ಹಲವು ಬಾರಿ ಹೈದರಾಬಾದ್ಗಗೆ ಹೋಗಿದ್ದಾಗ ಅಲ್ಲಿ ಬಿರ್ಯಾನಿ ಸವಿದದ್ದನ್ನು ನಮ್ಮ ಮನೆಯಲ್ಲಿ ಹಂಚಿಕೊಂಡಿದ್ದೆನಾದ್ದರಿಂದ ಬಿರ್ಯಾನಿ ಪ್ರಿಯೆ ನನ್ನ ಮಗಳು ಅಪ್ಪಾ, ಹೇಗೂ ಮನೆಯ ಸಮೀಪವೇ ಪ್ಯಾರಡೈಸ್ ಹೋಟೆಲ್ ಶುರುವಾಗಿದೆ. ಬಿರಿಯಾನಿ ತಿನ್ನಲು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ದಂಬಾಲು ಬಿದ್ದಿದ್ದಳು. ನಾನೂ… Read More ರಂಜಾನ್ ರಾಮಾಯಣ

ಕೊಬ್ಬರೀ ಮಿಠಾಯಿ ಪುರಾಣ

ಸಂಕ್ರಾಂತಿ ಹಬ್ಬಕ್ಕೆ ತಂದ ತೆಂಗಿನಕಾಯಿಗಳನ್ನು ಹಾಗೆ ಜಾಸ್ತೀ ದಿನ ಇಟ್ರೆ ಕೆಟ್ಟು ಹೋಗಬಹುದು. ಅದಕ್ಕೇ ಈ ರೀತಿಯಾಗಿ ರುಚಿ ರುಚಿಯಾದ ಘಮ ಘಮವಾದ ಕೊಬ್ಬರಿ ಮಿಠಾಯಿ ತಯಾರಿಸಿ ಮನೆಯವರಿಗೆ ಕೊಡಿ ಅದರ ಜೊತೆಯಲ್ಲೇ ನನ್ನ ಕೊಬ್ಬರೀ ಮಿಠಾಯಿ ಪುರಾಣವನ್ನು ಓದಿ ಆನಂದಿಸಿ. ಕೊಬ್ಬರೀ ಮಿಠಾಯಿ ಮಾಡಲು ಬೇಕಾಗುವ ಸಾಮಗ್ರಿಗಳು. ಸಕ್ಕರೆ – ಮುಕ್ಕಾಲು ಕಪ್ ಹಾಲು – 1 ಕಪ್(ಬೇಕಿದ್ದಲ್ಲಿ ಹಾಲಿನಪುಡಿಯನ್ನೂ ಬಳಸಬಹುದು) ಏಲಕ್ಕಿ – ಪುಡಿ ಮಾಡಿದ 5ರಿಂದ 6 ಏಲಕ್ಕಿ ( ಏಲಕ್ಕಿ ಎಷೆನ್ಸ್… Read More ಕೊಬ್ಬರೀ ಮಿಠಾಯಿ ಪುರಾಣ