ಭಜರಂಗಿ ಮಹೇಂದ್ರ ಕುಮಾರ್

ಅದು ತೊಂಭತ್ತರ ಕಡೆಯ ದಿನಗಳು ಮತ್ತು ಎರಡು ಸಾವಿರ ಇಸ್ವಿಯ ಆರಂಭದ ದಿನಗಳು. ರಾಜ್ಯದಲ್ಲಿ ಭಜರಂಗ ದಳ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಲಕ್ಷಾಂತರ ಯುವಕರು ಭಜರಂಗ ದಳಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಅಂತಹ ಯುವಕರಲ್ಲಿ ಚಿಕ್ಕಮಗಳೂರಿನ ಮೂಲದ ಮಹೇಂದ್ರ ಕುಮಾರು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬಂದಂತಹ ಯುವಕ. ತನ್ನ ನಡೆ ನುಡಿ, ವಾಗ್ಪಟುತ್ವತೆ, ಪ್ರಖರ ಹಿಂದುತ್ವ ಮತ್ತು ಉಗ್ರ ಹೋರಾಟದ ಫಲವಾಗಿ ಮಹೇಂದ್ರ ಕುಮಾರ್ ನೋಡ ನೋಡುತ್ತಿದ್ದಂತೆಯೇ ಬಜರಂಗದ ರಾಜ್ಯ ಸಂಚಾಲಕರಾಗಿ ಹೋದರು.… Read More ಭಜರಂಗಿ ಮಹೇಂದ್ರ ಕುಮಾರ್

ಸೆಟ್ ದೋಸೆ

ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಇಡ್ಲಿ ಮತ್ತು ದೋಸೆಗಳು ಹೆಸರುವಾಸಿಯಾಗಿವೆ. ಮನೆಯಲ್ಲಿ ಎಷ್ಟು ಚೆನ್ನಾಗಿ ದೋಸೆ ಮಾಡಿ ಕೊಟ್ಟರೂ, ಮಕ್ಕಳನ್ನು ಹೋಟೆಲ್ಲಿಗೆ ಕರೆದುಕೊಂಡು ಹೋದ ತಕ್ಷಣ ಆರ್ಡರ್ ಮಾಡುವುದೇ ಮಸಾಲೆ ದೋಸೆ. ಮಸಾಲೇ ದೋಸೆಗೆ ಸಡ್ಡು ಹೊಡೆಯಲು ಇರುವ ಗಾತ್ರದಲ್ಲಿ ಚಿಕ್ಕದಾಗಿ, ಸ್ಪಂಜಿನಂತೆ ಸ್ವಲ್ಪ ದಪ್ಪದಾಗಿ, ಅಷ್ಟೇ ಮೃದುವಾದ ಮತ್ತೊಂದು ದೋಸೆಯೇ ಸೆಟ್ ದೋಸೆ. ಅಂತಹ ಸೆಟ್ ದೋಸೆಯನ್ನು ಸಾಂಪ್ರದಾಯಿಕವಾಗಿ ಮತ್ತು ದಿಡೀರ್ ಆಗಿ ಮಾಡುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಸಾಂಪ್ರದಾಯಿಕವಾದ ಸುಮಾರು 12-15 ಸೆಟ್ ದೋಸೆ… Read More ಸೆಟ್ ದೋಸೆ

ವೆಜ್ ಮೋಮೋಸ್

ವೆಜ್ ಮೋಮೋಸ್ ನೇಪಾಳೀ ಹಾಗೂ ಈಶಾನ್ಯ ಭಾರತದ ಸಾಂಪ್ರದಾಯಿಕ ತಿಂಡಿಯಾಗಿದೆ. ಸರಳ ತರಕಾರಿಗಳು ಮತ್ತು ಕಡಿಮೆ ಎಣ್ಣೆ ಬಳಸಿ, ಕೇವಲ ಹಬೆಯಲ್ಲಿ ಬೇಯಿಸುವ ಕಾರಣ ಆರೋಗ್ಯಕರ ಆಹಾರವೂ (ಮೈದಾ ಬದಲು ಗೋದಿ ಹಿಟ್ಟು ಬಳೆಸಿದಲ್ಲಿ) ಹೌದು. ಇತ್ತೀಚಿನ ದಿನಗಳಲ್ಲಿ ಈಶಾನ್ಯ ಭಾರತೀಯರು ಭಾರತದ್ಯಂತ ಸಂಜೆ ಹೊತ್ತಿನಲ್ಲಿ ಮೋಮೋಸ್ ಗಳನ್ನು ಜನಪ್ರಿಯ ಬೀದಿ ಆಹಾರವನ್ನಾಗಿ ಮಾಡಿ ನಮ್ಮ ನಾಲಿಗೆ ಬರವನ್ನು ತಣಿಸುತ್ತಾ , ತಮ್ಮ ಹೊಟ್ಟೆಯ ಪಾಡನ್ನು ನೋಡಿ ಕೊಳ್ಳುತ್ತಿದ್ದಾರೆ. ವೆಜ್ ಮೋಮೋಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮೈದಾ… Read More ವೆಜ್ ಮೋಮೋಸ್

ಅಮೃತಸರೀ ಚೆನ್ನಾ ಚೋಲೇ ಬತೂರ

ಸುಮಾರು  5-6  ಜನರಿಗೆ ಸಾಕಾಗುವಷ್ಟು  ಸಾಂಪ್ರದಾಯಿಕ ರೀತಿಯಲ್ಲಿ  ಅಮೃತಸರೀ ಚೆನ್ನಾ ಚೋಲೇ ಬತೂರ  ತಯಾರಿಸಲು  ಬೇಕಾಗುವ ಸಾಮಗ್ರಿಗಳು ಈ ರೀತಿಯಲ್ಲಿದೆ. ನೆನೆಸಿದ ಕಾಬೂಲ ಕಡಲೇ 1/2  ಕೆಜಿ ಅಚ್ಚ ಖಾರದ ಪುಡಿ 3 ಟೇಬಲ್ ಸ್ಪೂನ್ ದನಿಯಾ ಪುಡಿ 3 ಟೇಬಲ್ ಸ್ಪೂನ್ ಚೆನ್ನಾ ಮಸಾಲ 3 ಟೇಬಲ್ ಸ್ಪೂನ್ ಲವಂಗ 4-5 ಏಲಕ್ಕಿ 3-4 ದೊಡ್ಡ ಏಲಕ್ಕಿ 2 ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2  ಟೇಬಲ್ ಸ್ಪೂನ್ ತುರಿದ… Read More ಅಮೃತಸರೀ ಚೆನ್ನಾ ಚೋಲೇ ಬತೂರ

ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

ಜಯ ಹನುಮಾನ್ ಜ್ಞಾನ ಗುಣ ಸಾಗರ! ಜಯ ಕಪೀಶ ತಿಹುಮ್ ಲೋಕ ಉಜಾಗರ! ರಾಮ ದೂತ ಅತುಲಿತ ಬಲ ಧಾಮ! ಅಂಜನೀ ಪುತ್ರ ಪವನ ಸುತ ನಾಮ! ರಾಮಾಯಣದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ನಂತರ ಅತ್ಯಂತ ಜನಪ್ರಿಯನಾಗಿರುವವನೇ ರಾಮನ ಭಂಟ ಆಂಜನೇಯ. ಮಾಯಾಜಿಂಕೆಯ ಜಾಲದಲ್ಲಿ ಮುಳುಗಿಸಿ ಸೀತಾಮಾತೆಯನ್ನು ಯಾರು ಅಪಹರಿಸಿಕೊಂಡು ಹೋಗಿರಬಹುದು ಎಂದು ವೈದೇಹೀ ಎನಾದಳೋ ಲಕ್ಷ್ಮಣಾ, ನನ್ನ ಸೀತೆಯನ್ನು ನೀವು ನೋಡಿದ್ದೀರಾ? ನೀವು ನೋಡಿದ್ದೀರಾ? ಎಂದು ಗಿಡ ಮರ ಬಳ್ಳಿಗಳನ್ನು, ಪ್ರಾಣಿ ಪಶು ಪಕ್ಷಿಗಳನ್ನು,… Read More ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

EatOut

ಧಾರವಾಡದ ಸಾಧನ ಕೇರಿಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದಲ್ಲಾ ಒಂದು ಸಾಹಿತಿಗಳ ಮನೆಯ ಮೇಲೆ ಬೀಳುವಂತೆ  ಬೆಂಗಳೂರಿನ ವಿದ್ಯಾರಣ್ಯಪುರದ ಯಾವುದೇ ಭಾಗದಲ್ಲಿ ನಿಂತು ಕಲ್ಲೆಸೆದರೆ ಅದು ಬೀಳುವುದು ಒಂದೋ ಯಾವುದಾದರೂ ಐಟಿ ಬಿಟಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಯ ಮನೆಗೋ ಇಲ್ಲವೇ ಯಾವುದಾದರೂ ಉಪಹಾರ ಗೃಹಗಳಿಗೋ  ಎಂದರೆ ಅತಿಶಯೋಕ್ತಿಯೇನಲ್ಲ. ಮಧ್ಯಮ ವರ್ಗದವರು ಇಲ್ಲವೇ ತುಸು ಹೆಚ್ಚಿನ ಮಧ್ಯಮವವರ್ಗದವರೇ ಹೆಚ್ಚಾಗಿಯೇ ನೆಲಸಿರುವ ವಿದ್ಯಾರಣ್ಯಪುರ, ಪ್ರಖ್ಯಾತವಾಗಿರುವುದು  ಇಲ್ಲಿರುವ ಜಗತ್ಪ್ರಸಿದ್ಧ ದೇವಾಲಯಗಳಿಗೆ ಮತ್ತು  ಕೈಗೆಟುಕುವ ಬೆಲೆಯಲ್ಲಿ ರುಚಿ ರುಚಿಯಾಗಿ ಸಿಗುವ ಬಗೆ ಬಗೆ… Read More EatOut

ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ಬಾಲ್ಯದ ಗೆಳೆಯ/ಗೆಳತಿಯರ ಗೆಳೆತನ ಸಾಧಾರಣವಾಗಿ ಶಾಲೆಯ ವಿದ್ಯಾಭ್ಯಾಸ ಮುಗಿಯುವವರೆಗೂ ಇರುತ್ತದೆ. ಹೆಚ್ಚೆಂದರೆ ಒಂದಿಬ್ಬರ ಗೆಳೆತನ ಕಾಲೇಜಿನವರೆಗೆ ‌ಮುಂದುವರಿದರೆ ಭಾರಿ ಅನಿಸುತ್ತದೆ. ‌ಅದರಲ್ಲೂ ಹೆಚ್.ಎಂ.ಟಿ ಕಾರ್ಖಾನೆಯ ಕಾರ್ಮಿಕರ ಮಕ್ಕಳು ಎಂದರೆ ಮಧ್ಯಮ ‌ವರ್ಗದ ಜನ. ಎಲ್ಲರ ವಾಸ, ಕಾರ್ಖಾನೆಯ ಕಾಲೋನಿಯಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ , ಎಲ್ಲಾ ಧರ್ಮದ, ಜನ ಒಂದೇ ಕಡೆ ಒಟ್ಟಾಗಿ ಆಟ, ಪಾಠವಾಡುತ್ತಾ ಒಟ್ಟೊಟ್ಟಿಗೆ ‌ಬೆಳೆಯುವವರು. ಇದೆಲ್ಲಾ ‌ತಮ್ಮ ತಂದೆಯವರು ಕೆಲಸದಿಂದ ನಿವೃತ್ತಿ ಹೊಂದಿದಾಗಲೋ ಇಲ್ಲವೇ ಸ್ವಂತ ಮನೆ ಕಟ್ಟಿಸಿಕೊಂಡು ಹೋಗುವವರೆಗೆ ಇರುತ್ತದೆ.… Read More ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು

🌿🌱 ಪ್ರಕೃತಿಯಲ್ಲಿ ಹಳೆ ಬೇರು ಹೊಸ ಚಿಗುರು ಮೂಡುವಂತೆ, ನಮ್ಮೆಲ್ಲರಲ್ಲೂ ಹೊಸಾ ಉತ್ಸಾಹ ಮೂಡಲಿ. ಜೀವನದಲ್ಲಿ ಸುಖಃ-ದುಖಃ,ಗಳು ಬೇವು-ಬೆಲ್ಲದಂತೆ ಹದವಾಗಿದ್ದು, ಸಿಹಿ ಪಾಲು ಹೆಚ್ಚಾಗಿರಲಿ. ಎಲ್ಲರಿಗೂ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು ಈ ಹೊಸಾ ವರ್ಷದಲ್ಲಿ, ದೇಶಾದ್ಯಂತ ಸಕಾಲಕ್ಕೆ ಮಳೆಯಾಗಿ ಸಂವೃದ್ಧವಾದ ಬೆಳೆಯಾಗಿ, ನಮ್ಮೆಲರ ಬಾಳು, ಸುಖಃ, ಶಾಂತಿ, ನೆಮ್ಮದಿ ಮತ್ತು ಸಮೃದ್ದಿಯಿಂದಿರಲಿ. ನೇರ, ದಿಟ್ಟ, ಸಮರ್ಥ ನಾಯಕ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಭಾರತ ದೇಶ ಮತ್ತೊಮ್ಮೆ ವಿಶ್ವಗುರುವಾಗಲಿ 🌿🌱

ದೇಶ ಮತ್ತು ದ್ವೇಷ

ನೆನ್ನೆ  ಸಂಜೆ ತೋಳ ಬಂತು ತೋಳ ಅನ್ನುವ ಹಾಗೆ ಈಗ ಬಿಡುಗಡೆ ಮಾಡ್ತೀವಿ, ಅಗ ಬಿಡುಗಡೆ ಮಾಡ್ತೀವಿ. ಚಿದಂಬರಂ ಮತ್ತು ಮೋಯ್ಲಿಯವರ ತಂಡ ಎಲ್ಲಾ ಸಿದ್ದ ಪಡಿಸ್ತಿದ್ದಾರೆ ಅಂತ ಹೇಳ್ತಾನೇ, ನೆನ್ನೆ ಮಧ್ಯಾಹ್ನ ಕಾಂಗ್ರೇಸ್  ಗಜಗರ್ಭದಂತೆ  ತನ್ನ ಪಕ್ಷದ ಪ್ರಣಾಳಿಕೆಯನ್ನು  ಬಿಡುಗಡೆ ಮಾಡಿತು.  ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ಓದುತ್ತಿದ್ದಂತೆಯೇ ಇದು ನಮ್ಮದೇಶದ ಒಂದು ರಾಷ್ಟ್ರೀಯ ಪಕ್ಷದ ಪ್ರಣಾಳಿಕೆಯೋ ಇಲ್ಲವೇ ಪಾಪೀಸ್ಥಾನದ ಉಗ್ರರ ಪ್ರಣಾಳಿಕೆಯೋ ಅನ್ನುವ ಅನುಮಾನ ಮೂಡಿದ್ದಂತೂ ಸತ್ಯ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಅಂಬೇಡ್ಕರ್… Read More ದೇಶ ಮತ್ತು ದ್ವೇಷ