ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

ಎಲ್ಲರಿಗೂ ಗೊತ್ತಿರುವಂತೆ ಅಮೇರಿಕಾದ ಜನರಲ್ ಮೋಟಾರ್ಸ್ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಪುರಾತನವಾದ ಮತ್ತು ಅಷ್ಟೇ ದೊಡ್ಡ ಹೆಸರನ್ನು ಗಳಿಸಿದೆ. ಆ ಕಂಪನಿಯ ವಾಹನಗಳನ್ನು ಹೊಂದಲು ಇಂದಿಗೂ ಜನ ಹೆಮ್ಮೆ ಪಡುತ್ತಾರೆ. ಆದರೆ ಆಂತಹ ಜನರಲ್ ಮೋಟಾರ್ಸ್ ಕಂಪನಿಯನ್ನೇ ಒಂದು ವೆನಿಲ್ಲಾ ಐಸ್ ಕ್ರೀಮ್ ಗೊಂದಲಕ್ಕೀಡು ಮಾಡಿದಂತಹ ಜನರಲ್ ಮೋಟಾರ್ಸ್ ಗ್ರಾಹಕ ಮತ್ತು ಅದರ ಗ್ರಾಹಕ-ಆರೈಕೆ ಕಾರ್ಯನಿರ್ವಾಹಕರ ನಡುವೆ ನಡೆದ ಒಂದು ನೈಜ ರೋಚಕವಾದ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದೊಂದು ದಿನ ಜನರಲ್ ಮೋಟಾರ್ಸ್‌ನ ಕಂಪನಿಯ ಫಾನ್ಟಿಯಾಕ್ ಕಾರನ್ನು… Read More ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.

ಕಡಲೇಕಾಯಿ ಬಾತ್

ಮನೆಯಲ್ಲಿ ಅದೇ ಚಿತ್ರಾನ್ನ, ಮೊಸರನ್ನ, ಪಲಾವ್, ಮೆಂತ್ಯಾಬಾತ್, ಫ್ರೈಡ್ ರೈಸ್ ಜೀರಾರೈಸ್ ಇಲ್ಲವೇ ಘೀರೈಸ್ ಮುಂತಾದ ಅನ್ನದ ತಿಂಡಿಗಳನ್ನು ತಿಂದು ಬೇಸರವಾಗಿದ್ದಾಗ, ಬದಲಾವಣೆಯಾಗಿ ನಾವು ತಿಳಿಸಿಕೊಡುವ ಅತ್ಯಂತ ಸರಳವಾದ ಕಡಲೇಕಾಯಿ ಬಾತ್ ಮಾಡಿಕೊಡಿ. ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ಇಷ್ಟ ಪಟ್ಟು ಮತ್ತಷ್ಟು ಮತ್ತು ಮಗದಷ್ಟು ತಿನ್ನದೇ ಇದ್ದರೆ ನೋಡಿ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಡಲೇಕಾಯಿ ಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ – 2 ಬಟ್ಟಲು ಎಳ್ಳು – 1 ಚಮಚ (ಬಿಳಿ ಅಥವಾ… Read More ಕಡಲೇಕಾಯಿ ಬಾತ್

ಶ್ರೀ ಕುದ್ಮುಲ್ ರಂಗರಾಯರು

ಬ್ರಿಟೀಷರು ಭಾರತೀಯರನ್ನು ಒಡೆದು ಆಳುವ ನಿಟ್ಟಿನಲ್ಲಿ ಬಿತ್ತಿಹೋದ ಜಾತಿ ಮತ್ತು ಸಾಮಾಜಿಕ ಅಸಮಾನತೆ ಎಂಬ ಕಳೆ ಈಗ ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆಯ ಪಿಡುಗನ್ನು ತೊಡೆದು ಹಾಕುವುದರಲ್ಲಿ ತಮ್ಮದೇನೂ ಕಿಂಚಿತ್ ಪಾತ್ರವಿರದಿದ್ದರೂ ತಮ್ಮ ಬಾಯಿ ಚಪಲ ಮತ್ತು ಸುತ್ತಮುತ್ತಲಿನ ವಂದಿಮಾಗಧರ ಚೆಪ್ಪಾಳೆಗಾಗಿ ದಲಿತರು, ಬಲಿತರು ಎಂಬ ವಿತಂಡವಾದವನ್ನು ಮಂಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿರುವವರೇ ಹೆಚ್ಚಾಗಿರುವಾಗ ಈ ಸಂದರ್ಭದಲ್ಲಿ ಸುಮಾರು ಸುಮಾರು 150 ವರ್ಷಗಳ ಹಿಂದೆಯೇ ದೀನ ದಲಿತರ ಸೇವೆಗಾಗಿಯೇ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದ… Read More ಶ್ರೀ ಕುದ್ಮುಲ್ ರಂಗರಾಯರು

ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಅನಕ್ಷರಸ್ಥ ಕುರಿ ಕಾಯುವ ವೃತ್ತಿಯನ್ನು ಮಾಡುವ 84 ವರ್ಷ ಕುರುಬ ಕಲ್ಮನೆ ಕಾಮೇಗೌಡ ಎಂಬ ಹೆಸರು ಬಹುಶಃ ಅವರ ಊರು ಅಥವಾ ಅವರ ತಾಲ್ಲೂಕಿನ ಹೊರತಾಗಿ ಹೊರಗಿನವರಿಗೆ ಹೆಚ್ಚಾಗಿ ಪರಿಚಯವೇ ಇರಲಿಲ್ಲ. ಆದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್  ನಲ್ಲಿ ಈ ವ್ಯಕ್ತಿಯ ಬಗ್ಗೆ  ಯಾವಾಗ ಮಾತನಾಡಿದರೋ ಆ ಕೂಡಲೇ ಅವರ ಹೆಸರು ದೇಶಾದ್ಯಂತ ಪರಿಚಿತವಾಗಿ ಗೂಗಲ್ಲಿನಲ್ಲಿ… Read More ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ… Read More ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

# 10, ಜನಪಥ್ ಬಂಗಲೆ

ಈ ಬಂಗಲೆಯ ವಿಳಾಸ ಓದಿದ ಕೂಡಲೇ ಬಹುತೇಕ ಭಾರತೀಯರಿಗೆ ಗೊತ್ತಿರುವ ಸಂಗತಿಯೇನೆಂದರೆ, ಆ ಬಂಗಲೆಯಲ್ಲಿ ಸದ್ಯಕ್ಕೆ ವಾಸಿಸುತ್ತಿರುವವರು, ಅರ್ಹತೆ ಇಲ್ಲದಿದ್ದರೂ, ನಮ್ಮ ಸರ್ಕಾರದಲ್ಲಿ ಯಾವುದೇ ಉನ್ನತ ಹುದ್ದೆ ಹೊಂದಿರದಿದ್ದರೂ, ನಮ್ಮ ದೇಶದ ಅನೇಕ ಆಗುಹೋಗುಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣೀಭೂತರಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಹೌದು ನಿಮ್ಮ ಉಹೆ ಸರಿ. ನಾನೀಗ ಹೇಳ ಹೊರಟಿರುವುದು ನಮ್ಮ ಸರ್ಕಾರದ ಭಾಗವಾಗಿರದ ಕೇವಲ ಸಾಂಸದೆಯಾಗಿರುವ ಸೋನಿಯಾ ಗಾಂಧಿ ಅವರು ಹೇಗೆ ಈ ಬಂಗಲೆಯಲ್ಲಿ ಇನ್ನೂ ವಾಸಿಸುತ್ತಿದ್ದಾರೆ? ಇನ್ನೂ ಆ… Read More # 10, ಜನಪಥ್ ಬಂಗಲೆ

ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ಕರ್ನಾಟಕಾದ್ಯಂತ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಬಿಳಿ ಹೋಳಿಗೆ ಮತ್ತು ಇಂದಿನ ಕಾಲಕ್ಕೆ ಅನುಗುಣವಾಗಿ ಮಾವಿನ ಹಣ್ಣಿನ ಗೊಜ್ಜನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಿಳೀ ಹೋಳಿಗೆಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಅಕ್ಕಿ ಹಿಟ್ಟು – 2 ಬಟ್ಟಲು • ಮೈದಾ ಹಿಟ್ಟು – 1 ಬಟ್ಟಲು • ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ – 1 ಚಮಚ •… Read More ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ತಿರುನಲ್ವೇಲಿ ಹಲ್ವಾ ಹರಿಸಿಂಗ್

ಐತಿಹಾಸಿಕವಾಗಿ ತಮಿಳುನಾಡಿನ ತಿರುನೆಲ್ವೇಲಿ ಒಂದು ಪ್ರಾಚೀನ ನಗರ. ಸುಮಾರು 2000 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ ಇತಿಹಾಸ ಈ ನಗರಕ್ಕಿದೆ. ತಾಮಿರಭರಣಿ ನದಿಯ ತಟದಲ್ಲಿರುವ ಈ ಪಟ್ಟಣ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚ್ಚಿ ಮತ್ತು ಸೇಲಂ ಹೊರತು ಪಡಿಸಿದರೆ ತಮಿಳು ನಾಡಿನ ಆರನೇ ಅತಿದೊಡ್ಡ ಪುರಸಭೆ ಹೊಂದಿರುವ ನಗರವಾಗಿದೆ. ಇದನ್ನು ಆರಂಭಿಕ ಕಾಲದಲ್ಲಿ ಪಾಂಡ್ಯರು, ಆನಂತರ ಚೋಳರು ಪುನಃ ಪಾಂಡ್ಯರ ಆಳ್ವಿಕೆ ಕಂಡು ಕೆಲ ಕಾಲ ನಮ್ಮ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಬ್ರಿಟಿಷರು… Read More ತಿರುನಲ್ವೇಲಿ ಹಲ್ವಾ ಹರಿಸಿಂಗ್

ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿ

ಕಹಿಕಷಾಯವದೆಂದು, ಕಾರಚೂರ್ಣಮಾದೆಂದು| ಸಿಹಿಯ ಲೇಹ್ಯಮದೆಂದು ನಿನಗೆ ಹಿತವಹುದೋ|| ವಿಹಿತ ಗೈವನು ವೈದ್ಯ ನೀನಲ್ಲ, ರೋಗಿ ನೀಂ| ಗ್ರಹಿಸು ವಿಧಿಯೌಷದವ – ಮರುಳ ಮುನಿಯ|| ಎಂದು ಡಿ.ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗ ಭಾಗ-೨ ಅಥವಾ ಮಂಕುತಿಮ್ಮನ ತಮ್ಮ ಎಂದು ಕರೆದ ಗ್ರಂಥದಲ್ಲಿ ಬರೆದಿದ್ದಾರೆ. ಈ ಸಮಯದಲ್ಲಿ ವೈದ್ಯರಿಗೆ ಸಂಬಂಧಿಸಿದ ಪದ್ಯವನ್ನೇಕೆ ಹೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ಹೌದು ಕಾರಣವಿದೆ. ಖ್ಯಾತ ಆಯುರ್ವೇದ ಪಂಡಿತ ಕ್ಯಾನ್ಸರ್ ಅಂತಹ ಮಾರಣಾಂತಿಕ ರೋಗಕ್ಕೆ ರಾಮಬಾಣದಂತಹ ಔಷದವನ್ನು ನೀಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ… Read More ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿ