ಹಲಸಿನಕಾಯಿ ಬಿರಿಯಾನಿ

ಬಿರ್ಯನಿ ಭಾರತೀಯ ಉಪಖಂಡದ ಒಂದು ಜನಪ್ರಿಯ ಖಾದ್ಯವಾಗಿದೆ. ಇದನ್ನು ಅಕ್ಕಿ, ತರಕಾರಿಗಳು, ಮತ್ತು ಮಸಾಲಾಗಳನ್ನು ಬೆರೆಸಿ ತಯಾರಿಸಲಾಗುತ್ತದಾದರೂ ಕುರಿ ಇಲ್ಲವೇ ಕೋಳಿ ಪೀಸ್ ಹಾಕಿದ ಬಿರ್ಯಾನಿಯೇ ಅತ್ಯಂತ ಜನ ಪ್ರಿಯ ಖಾದ್ಯವಾಗಿದೆ. ಸಸ್ಯಾಹಾರಿಗಳಿಗೂ ತಮ್ಮ ಬಿರ್ಯಾನಿಯಲ್ಲಿ ಪೀಸ್ ತಿನ್ನುವ ಅನುಭವವಾಗುಂತಹ ಹಲಸಿನ ಕಾಯಿ ಬಿರಿಯಾನಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿ ಕೊಡುತ್ತಿದ್ದೇವೆ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಲಸಿನಕಾಯಿ ಬಿರ್ಯಾನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಬಾಸ್ಮತಿ ಅಕ್ಕಿ -2 ಬಟ್ಟಲು ಟೊಮೆಟೊ – 2… Read More ಹಲಸಿನಕಾಯಿ ಬಿರಿಯಾನಿ

ಅಪರೂಪ ಮತ್ತು ಅನುರೂಪದ ಅವಳಿಗಳು

ಕೆಲ ವರ್ಷಗಳ ಹಿಂದೆ ಗ್ರೇಟರ್ ನೋಯ್ಡಾದ ಆಸ್ಟರ್ ಪಬ್ಲಿಕ್ ಶಾಲೆಯ ಮಾನ್ಸಿ ಸಿಂಗ್ ಮತ್ತು ಮಾನ್ಯ ಸಿಂಗ್ ಅವಳಿ ಸಹೋದರಿಯರಿಬ್ಬರೂ ಸಿಬಿಎಸ್ಇ ದ್ವಿತೀಯ ಪಿಯುಸಿಯಲ್ಲಿ ಶೇ.95.8ರಷ್ಟು ಅಂಕ ಪಡೆಡ ಕುರಿತಾಗಿ ಲೇಖನವನ್ನು ಓದಿದ್ದೀರಿ.

ಈಗ ಧರ್ಮಸ್ಥಳದ ಉಜಿರೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಸ್ಪಂದನ ಮತ್ತು ಸ್ಪರ್ಶ ಅವರಿಬ್ಬರೂ, ಸರಿಸಮಾನವಾಗಿ 594/600 ಅಂಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವ ಕುತೂಹಲಕಾರಿ ವಿಷಯ ಇದೋ ನಿಮಗಾಗಿ… Read More ಅಪರೂಪ ಮತ್ತು ಅನುರೂಪದ ಅವಳಿಗಳು

ಲೀನಾ ಮೆಡೀನಾ ಜಗತ್ತಿನ ಅತ್ಯಂತ ಕಿರೀ ವಯಸ್ಸಿನ ತಾಯಿ

ಪೆರು ದೇಶದ ಲೀನಾ ಐದು ವರ್ಷ ಪುಟ್ಟ ಹುಡುಗಿ. ಆಕೆ ಪದೇ ಪದೇ ಹೊಟ್ಟೇ ನೋವು ಎಂದು ಸಂಕಟ ಪಡುತ್ತಿದ್ದದ್ದಲ್ಲದೇ ಆಕೆಯ ಹೊಟ್ಟೆಯೂ ಕೂಡಾ ದಿನೇ ದಿನೇ ಬೆಳೆಯಲು ಆರಂಭಿಸಿದಾಗ, ಆಕೆಯ ತಾಯಿಯು ಅಕೆಯನ್ನು ಪಿಸ್ಕೋದ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಆರಂಭದಲ್ಲಿ ಅವಳ ಹೊಟ್ಟೆಯಲ್ಲಿ ದೊಡ್ಡದಾದ ಗೆಡ್ಡೆಯೊಂದು ಬೆಳೆಯುತ್ತಿರಬಹುದು ಎಂದೇ ಆರಂಭದಲ್ಲಿ ನಂಬಿದ್ದರಾದರೂ ನಂತರ ಕೂಲಂಕಷವಾಗಿ ಪರೀಕ್ಷಿಸಿದ ಡಾ. ಗೆರಾರ್ಡೊ ಲೊಜಾಡಾ ಎಂಬ ವೈದ್ಯೆ ಆಶ್ವರ್ಯಚಕಿತರಾಗಿ ಹೋದರು. ಕೇವಲ ಐದು ವರ್ಷದ ಆ ಹಾಲುಗಲ್ಲದ ಹಸುಳೆ ಗರ್ಭಿಣಿಯಾಗಿದ್ದಳು.… Read More ಲೀನಾ ಮೆಡೀನಾ ಜಗತ್ತಿನ ಅತ್ಯಂತ ಕಿರೀ ವಯಸ್ಸಿನ ತಾಯಿ

ಋಣಗಳು

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಜನ್ಮಿಸುವ ಪ್ರತಿಯೊಬ್ಬರಿಗೂ ತಮ್ಮ ಜೀವಿತಾಧಿಯಲ್ಲಿ ಐದು ಋಣಗಳನ್ನು ತೀರಿಸಲೇ ಬೇಕಾದ ಜವಾಬ್ಧಾರಿಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಋಣಭಾರವೋ, ಮಣಭಾರವೋ ಎಂಬ ಗಾದೆಯ ಮಾತಿದೆ. ಆ ಐದು ಋಣಗಳಾವುವೆಂದರೆ ಪಿತೃ ಋಣ, ದೇವ ಋಣ, ಋಷಿ ಋಣ, ಭೂತ ಋಣ ಮತ್ತು ಮನುಷ್ಯ ಋಣ. ಈ ಋಣಗಳ ಬಗ್ಗೆ ವಿವರವಾಗಿ ಮತ್ತು ಅವುಗಳಿಂದ ಹೇಗೆ ಋಣಮುಕ್ತರಾಗುವುದು ಹೇಗೆ ಎಂಬುದರ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಪಿತೃ ಋಣ: ನಮಗೆ ಜನ್ಮ ಕೊಟ್ಟ ಮಾತಾ ಪಿತೃಗಳೇ ನಮಗೆ… Read More ಋಣಗಳು

ಕಲ್ಪವೃಕ್ಷ

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ನನ್ನನ್ನು ಏಳು ವರ್ಷ ಜನನದಿಂದ ಕಾಪಾಡು. ನಾನು ನಿನ್ನನ್ನು ಎಪ್ಪತ್ತು ವರ್ಷದ ವರೆಗೂ ನೆಮ್ಮದಿಯಿಂದ ಕಾಪಾಡುತ್ತೇನೆ ಎಂದು ತೆಂಗಿನಮರ ಹೇಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದದ ಮಾತಿನಲ್ಲಿ ಖಂಡಿತವಾಗಿಯೂ ಸತ್ಯವಿದೆ. ತೆಂಗಿನ ಮರದ ಪ್ರತಿಯೊಂದು ಭಾಗಗಳೂ ಉಪಯೋಗಿಸುವಂತಹದ್ದೇ ಅಗಿದ್ದು ಅದರಲ್ಲಿ ಬಿಸಾಡುವಂತಹ ತ್ರಾಜ್ಯಗಳೇ ಇಲ್ಲದಿರುವುದು ಮೆಚ್ಚಬೇಕಾದಂತಹ ಸಂಗತಿ. ತೆಂಗಿನ ಮರ ಇದ್ದಾಗ ಅನುಭವಿಸಿದ ಸಂತೋಷ ಮತ್ತು ಈಗ ತೆಂಗಿನ ಮರ ಇಲ್ಲದಿರುವಾಗ ಅನುಭವಿಸುತ್ತಿರುವ ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.… Read More ಕಲ್ಪವೃಕ್ಷ

ಸತ್ತವರಿಬ್ಬರೂ ಭಾರತೀಯರೇ ಆಗಿದ್ದರೂ, ಭಾರತೀಯರ ಭಾವನೆಗಳು ಮಾತ್ರ ತದ್ವಿರುದ್ಧ

ಈ ವಾರವಿಡೀ ದೇಶಾದ್ಯಂತ ಎರಡು ಹತ್ಯೆಯ ಬಗ್ಗೆಯೇ ಪರ ವಿರೋಧಗಳ ಚರ್ಚೆಗಳು ತೀವ್ರವಾಗಿ ನಡೆಯುತ್ತಲಿದೆ.  ಸತ್ತವರಿಬ್ಬರೂ ಭಾರತೀಯರೇ. ಧರ್ಮದಲ್ಲಿ ನೋಡಿದರೆ ಒಬ್ಬ ಮುಸಲ್ಮಾನ ಮತ್ತೊಬ್ಬ ಹಿಂದೂ ಬ್ರಾಹ್ಮಣ. ಒಬ್ಬನ ಸಾವಿನ ಬಗ್ಗೆ ಸಂತಾಪ ವ್ಯಕ್ತ ಪಡಿಸುತ್ತಿದ್ದರೆ ಮತ್ತೊಬ್ಬನ ಸಾವನ್ನು ಸಂಭ್ರಮಿಸದಿದ್ದರೂ, ಅವನು ಸತ್ತ ರೀತಿಗೆ ಸಂತಸ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ವಾಸೀಂ ಬಾರಿ : ಹೆಸರೇ ಸೂಚಿಸುವಂತೆ ಆತ ಒಬ್ಬ ಮುಸಲ್ಮಾನ. ಅದರೇ ಬಹುತೇಕ ಕಾಶ್ಮೀರೀ ಮುಸಲ್ಮಾನರಂತೆ ಭಾರತದ ವಿರೋಧಿಯಾಗಿರದೇ ಅಪ್ಪಟ ದೇಶ ಪ್ರೇಮಿ. ತನ್ನ ಕುಲಬಾಂಧವರ… Read More ಸತ್ತವರಿಬ್ಬರೂ ಭಾರತೀಯರೇ ಆಗಿದ್ದರೂ, ಭಾರತೀಯರ ಭಾವನೆಗಳು ಮಾತ್ರ ತದ್ವಿರುದ್ಧ

ವಿಕಾಸ್‌ ದುಬೆ

ನಿಜವಾಗಲೂ ಈತನ ಕುರಿತಾಗಿ ಈ ರೀತಿ ಒಂದು ಲೇಖನವನ್ನಾಗಲೀ ಅಥವಾ ಆತನ ಬಗ್ಗೆ ಮಾತನಾಡಿಕೊಳ್ಳ ಬೇಕಾದಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯೇ ಅಲ್ಲದಿದ್ದರೂ ಕಳೆದ ಒಂದು ವಾರಗಳಿಂದ ಈತ ದೇಶಾದ್ಯಂತ ಎಲ್ಲಾ ದೃಶ್ಯಮಾದ್ಯಮಗಳಿಗೂ ಟಿ.ಆರ್.ಪಿ ತಂದು ಕೊಟ್ಟಂತಹ ವ್ಯಕ್ತಿ ಎನ್ನುವುದಂತೂ ಸತ್ಯ. 2001 ರಲ್ಲಿ, ಉತ್ತರ ಪ್ರದೇಶದ ಬಿಜೆಪಿ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಹಾಡಹಗಲಲ್ಲೇ ಗುಂಡಿಕ್ಕಿ ಕೊಲ್ಲುವ ಮೂಲಕ ಒಮ್ಮೆಂದೊಮ್ಮೆಲೆ ಪ್ರವರ್ಧಮಾನಕ್ಕೆ ಬಂದಂತಹ ಪಾತಕಿ ಸುಮಾರು ಆರು ತಿಂಗಳ ಪೋಲೀಸರಿಗೆ ಶರಣಾಗಿ ಕೊಲೆಯಾದ ಸಚಿವರ ಗನ್ ಮೆನ್… Read More ವಿಕಾಸ್‌ ದುಬೆ

ಖಾರಾ ಅವಲಕ್ಕಿ (ಚೂಡಾ)

ಈಗಂತೂ ಮಳೆಗಾಲ. ಸಂಜೆ ಧೋ ಎಂದು ಮಳೆ ಬೀಳುತ್ತಿದ್ದರೆ, ನಾಲಿಗೆ ಬಿಸಿ ಬಿಸಿಯಾದ ಮತ್ತು ಖಾರವಾದ  ಕುರುಕಲನ್ನು ಬಯಸುತ್ತದೆ. ಚಹಾದ ಜೊತೆ ಚೂಡಾ ಹಂಗಾ ಎನ್ನುವಂತೆ ಬಿಸಿಬಿಸಿಯಾದ ಕಾಫೀ/ಟೀ  ಜೊತೆ ಖಾರದ ಅವಲಕ್ಕಿ ಅರ್ಥಾತ್ ಚೂಡ ತಿನ್ನಲು ಮಜವಾಗಿರುತ್ತದೆ. ಹಾಗಾಗಿ ನಮ್ಮ ನಳಪಾಕ ಮಾಲಿಕೆಯಲ್ಲಿ ಖಾರದ ಅವಲಕ್ಕಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಖಾರ ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ತೆಳು(ಪೇಪರ್) ಅವಲಕ್ಕಿ 4 ಬಟ್ಟಲು ಕಡಲೆಬೀಜ – 2 ಚಮಚ ಹುರಿಗಡಲೆ – … Read More ಖಾರಾ ಅವಲಕ್ಕಿ (ಚೂಡಾ)

ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?

ನನಗೆ ಬುದ್ದಿ ತಿಳಿದು ಬರುವ ಹೊತ್ತಿಗೆ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು ಮನೆಗೆ ಬರುತ್ತಿದ್ದ ನಂದೀ ಬ್ರಾಂಡ್ ಪ್ರಜಾವಾಣಿ ಅಂದಿಗೂ ಇಂದಿಗೂ ಕಾಂಗ್ರೇಸ್ ಮುಖವಾಣಿಯಾಗಿಯೇ ಇದ್ದ ಕಾರಣ ಅಲ್ಲಿ ಪ್ರಕಟವಾಗುತ್ತಿದ್ದದ್ದನ್ನೇ ಜೋಡಿಸಿ ಕೊಂಡು ಓದಿ ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ, ದೇಶದಲ್ಲಿ ಚುನಾವಣೆ ನಡೆದು ಎಲ್ಲಾ ವಿರೋಧ ಪಕ್ಷಗಳೂ ಒಮ್ಮತವಾಗಿ ಜನತಾಪಕ್ಷದ ಅಡಿಯಲ್ಲಿ ಅಭೂತಪೂರ್ವವಾಗಿ ಜಯಿಸಿ ಬಂದು ಒಂದು ಕಾಲದಲ್ಲಿ ಇಂದಿರಾ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜೀ ದೇಸಾಯಿ ದೇಶದ ಪ್ರಪ್ರಥಮ ಕಾಂಗ್ರೇಸ್ಸೇತರ ಪ್ರಧಾನ ಮಂತ್ರಿಗಳಾದರು. ಅವರ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್… Read More ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?