ಪಡ್ಡು / ಗುಳಿಯಪ್ಪ/ ಗುಂತ ಪೊಂಗಣಾಲು

ಬೆಳಿಗ್ಗೆ ತಿಂಡಿಗೆ ದೋಸೆ ಮಾಡಿರ್ತೀರೀ. ದೋಸೆ ಹಿಟ್ಟು ಇನ್ನೂ ಹಾಗೆಯೇ ಉಳಿದಿರುತ್ತದೆ. ಸಂಜೆನೂ  ಅದೇ ಹಿಟ್ಟಿನಲ್ಲಿ ದೋಸೇ ಮಾಡಿದ್ರೇ ಮನೆಯವರೆಲ್ಲರೂ  ಬೆಳಿಗ್ಗೆನೂ ದೋಸೇ ಈಗಲೂ ದೋಸೇನಾ ಅಂತಾ ತಿನ್ನಲು ಮೂಗು ಮುರಿತಾರೆ.  ಹಾಗಂತ ಈಗಿನ ಪರಿಸ್ಥಿತಿಯಲ್ಲಿ  ಅ ದೋಸೆ ಹಿಟ್ಟನ್ನು ಬಿಸಾಡಲೂ ಮನಸ್ಸು ಬರುವುದಿಲ್ಲ.  ಅದಕ್ಕೇ ಅಂತಾನೇ, ಅದೇ ದೋಸೆ ಹಿಟ್ಟಿನಲ್ಲಿ ರುಚಿಯಾದ ಮತ್ತು ಆಕರ್ಷಣೀಯವಾದ ಪಡ್ಡು/ ಗುಳಿಯಪ್ಪ/  ಗುಂತ ಪೊಂಗಣಾಲು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು ಐದಾರು ಜನರಿಗೆ ಸಾಕಾಗುವಷ್ಟು  ಪಡ್ಡು/ ಗುಳಿಯಪ್ಪ/  ಗುಂತ ಪೊಂಗಣಾಲು… Read More ಪಡ್ಡು / ಗುಳಿಯಪ್ಪ/ ಗುಂತ ಪೊಂಗಣಾಲು

ವೆಜ್ ಮಂಚೂರಿಯನ್

ವೆಜ್ ಮಂಚೂರಿಯನ್. ಇದು ಈಶಾನ್ಯ ಭಾರತ ಮತ್ತು ಚೀನಿಯರ ಸಾಂಪ್ರದಾಯಿಕ ಅಡುಗೆಯಾಗಿದೆ.   ಸರಳ ತರಕಾರಿಗಳನ್ನು ಬಳೆಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ತಿನಿಸಾಗಿದೆ.   ಈಗಂತೂ ಭಾರತದ್ಯಂತ ಸಂಜೆ ಹೊತ್ತಿನಲ್ಲಿ ತರ ತರಹದ ಮಂಚೂರಿಯನ್ ಗಳು ಜನಪ್ರಿಯವಾದ ರಸ್ತೆ ಬದಿಯ ಆಹಾರವಾಗಿ ಎಲ್ಲರ ನಾಲಿಗೆ ಬರವನ್ನು ತಣಿಸುತ್ತಿದೆ. ವೆಜ್ ಮಂಚೂರಿಯನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಣ್ಣಗೆ ಕತ್ತರಿಸಿದ ಎಲೇ ಕೋಸು – 3 ಕಪ್ ಸಣ್ಣಗೆ ಕತ್ತರಿಸಿದ ಕ್ಯಾರೆಟ್ – 2 ಕಪ್ ಸಣ್ಣಗೆ ಕತ್ತರಿಸಿದ… Read More ವೆಜ್ ಮಂಚೂರಿಯನ್

ಕೈಂಕರ್ಯ

ಸೇವೆ ಎಂದರೆ ಕೇವಲ ಹಣದಿಂದ ಮಾತ್ರವೇ ಮಾಡಬೇಕು ಎಂದೇನಿಲ್ಲ ಮತ್ತು ಮಾಡಿದ ಸೇವೆಯನ್ನು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯೂ ಇಲ್ಲ. ಇಲ್ಲಿ ಯಾರು? ಏನೇನು? ಎಷ್ಟೆಷ್ಟು? ಹೇಗೆ ಸೇವೆ ಮಾಡಿದರು ಅನ್ನೋದರ ಕುರಿತು ಚರ್ಚಿಸಿದರೆ, ಅವರು ಮಾಡಿದ ಸೇವೆಗೆ ಅಪಮಾನ ಮಾಡಿತಂತೆ. ಅವರವರು ಮಾಡಿದ ಸೇವೆ ಅವರಿಗೇ ಮತ್ತು ಭಗವಂತನಿಗೆ ಗೊತ್ತಾದರೆ ಸಾಕು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯದ ಹಾಗೆ ಮಾಡಿದರೇನೇ ಕೈಂಕರ್ಯ/ಸೇವೆ ಅನ್ನೋದು.… Read More ಕೈಂಕರ್ಯ

ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬಹುಪಾಲು ಭಾರತೀಯರು ಶ್ರೀ ನರೇಂದ್ರ ಮೋದಿಯನ್ನು ಇಷ್ಟಪಡುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲವಾದರೂ, ಭಾರತೀಯರು ಬಿಜೆಪಿಯಿಂದ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ಅದಕ್ಕೆ ಉತ್ತರವನ್ನು ಹುಡುಕುವುದು ತುಂಬಾ ಸುಲಭ. ಪ್ರಧಾನಿಗಳಾಗಿ ಮೋದಿಯವರ ಕಾರ್ಯತತ್ಪರತೆಯನ್ನು ದೇಶ ವಿದೇಶಗಳಲ್ಲಿ ಇರುವ ಕೋಟ್ಯಾಂತರ ಭಾರತೀಯರು ಬಹಳವಾಗಿ ಇಷ್ಟು ಪಡುತ್ತಾರೆ. ದಿನದ ಹದಿನೆಂಟು ಗಂಟೆಗಳ ಕಾಲ ದೇಶಕ್ಕಾಗಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವುದನ್ನು ಜನರು ಗೌರವಿಸುತ್ತಾರೆ. ನಿಜವಾಗಿಯೂ ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ವಿದೇಶೀ ಬಾಂಧವ್ಯ ಬಹಳಷ್ಟು ಸುಧಾರಣೆಯಾಗಿದೆ.… Read More ಇತ್ತೀಚಿನ ದಿನಗಳಲ್ಲಿ ಭಾರತೀಯರು ಮೋದಿಯವರನ್ನು ಮತ್ತು ಬಿಜೆಪಿಯನ್ನು ಇಷ್ಟ ಪಡುತ್ತಿಲ್ಲವೇ?

ಸೆಟ್ ದೋಸೆ

ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಇಡ್ಲಿ ಮತ್ತು ದೋಸೆಗಳು ಹೆಸರುವಾಸಿಯಾಗಿವೆ. ಮನೆಯಲ್ಲಿ ಎಷ್ಟು ಚೆನ್ನಾಗಿ ದೋಸೆ ಮಾಡಿ ಕೊಟ್ಟರೂ, ಮಕ್ಕಳನ್ನು ಹೋಟೆಲ್ಲಿಗೆ ಕರೆದುಕೊಂಡು ಹೋದ ತಕ್ಷಣ ಆರ್ಡರ್ ಮಾಡುವುದೇ ಮಸಾಲೆ ದೋಸೆ. ಮಸಾಲೇ ದೋಸೆಗೆ ಸಡ್ಡು ಹೊಡೆಯಲು ಇರುವ ಗಾತ್ರದಲ್ಲಿ ಚಿಕ್ಕದಾಗಿ, ಸ್ಪಂಜಿನಂತೆ ಸ್ವಲ್ಪ ದಪ್ಪದಾಗಿ, ಅಷ್ಟೇ ಮೃದುವಾದ ಮತ್ತೊಂದು ದೋಸೆಯೇ ಸೆಟ್ ದೋಸೆ. ಅಂತಹ ಸೆಟ್ ದೋಸೆಯನ್ನು ಸಾಂಪ್ರದಾಯಿಕವಾಗಿ ಮತ್ತು ದಿಡೀರ್ ಆಗಿ ಮಾಡುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಸಾಂಪ್ರದಾಯಿಕವಾದ ಸುಮಾರು 12-15 ಸೆಟ್ ದೋಸೆ… Read More ಸೆಟ್ ದೋಸೆ

ಹುಳಿಯವಲಕ್ಕಿ (ಗೊಜ್ಜವಲಕ್ಕಿ)

ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ಹುಳಿಯವಲಕ್ಕಿ (ಗೊಜ್ಜವಲಕ್ಕಿ) ತಯಾರಿಸಲು ಬೇಕಾಗುವ ಸಾಮಗ್ರಿಗಳು ಗಟ್ಟಿ ಅವಲಕ್ಕಿ – 1/4 ಕೆಜಿ ಹುಣಸೇ ಹಣ್ಣು- 100 gms ಬೆಲ್ಲ – 200 gms ಸಾರಿನಪುಡಿ- 3 ಚಮಚ ಬಿಳೀ ಎಳ್ಳು- 1 ಚಮಚ ಮೆಂತ್ಯ- 1 ಚಮಚ ಜೀರಿಗೆ- 1 ಚಮಚ ರುಚಿಗೆ ತಕ್ಕಷ್ಟು ಉಪ್ಪು ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು ತುರಿದ ಕೊಬ್ಬರೀ – 1 ಕಪ್ ಕಡಲೇಕಾಯಿ ಬೀಜ – 50-100 gms ಸಾಸಿವೆ – ½ ಚಮಚ… Read More ಹುಳಿಯವಲಕ್ಕಿ (ಗೊಜ್ಜವಲಕ್ಕಿ)

ಕಾಲ ಹೀಗೇ  ಇರುವುದಿಲ್ಲ

ಸ್ವಲ್ಪ ದಿನಗಳಾದ ನಂತರ, ಯಾರೂ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಚಾರಿಸುವುದೇ ಇಲ್ಲಾ ನೀವು ಎಷ್ಟು ಹಣ ಸಂಪಾದಿಸಿದ್ದೀರೀ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು? ನಿಮ್ಮಲ್ಲಿ ಎಷ್ಟು ಮತ್ತು ಯಾವ ಕಾರುಗಳಿವೆ? ಅಂತಾ, ಅದರ ಬದಲು ಎಲ್ಲರೂ ಕೇಳುವುದು ಕೇವಲ ಎರಡೇ ಪ್ರಶ್ನೆಗಳು ನಿಮ್ಮ ಆರೋಗ್ಯ ಹೇಗಿದೆ? ನಿಮ್ಮ ಮಕ್ಕಳು ಏನು ಮಾಡ್ತಾ ಇದ್ದಾರೆ? ಹಾಗಾಗಿ ಈ ಕರೋನಾ ಲಾಕ್ ಡೊನ್ ಸಮಯದಲ್ಲಿ ಚೆನ್ನಾಗಿ ಊಟ ತಿಂಡಿ ಮಾಡಿ, ಸ್ವಲ್ಪ ವ್ಯಾಯಾಮಾನೂ ಮಾಡಿ , ಮನೆಯಿಂದ ಹೊರಗೆ… Read More ಕಾಲ ಹೀಗೇ  ಇರುವುದಿಲ್ಲ

ಜೀರಾ ರೈಸ್ ಮತ್ತು ದಾಲ್

ಅನ್ನದಿಂದ ಬಹಳ ಸುಲಭವಾಗಿ ಮಾಡುವ ತಿಂಡಿ ಎಂದರೆ ಚಿತ್ರಾನ್ನ. ಅದರೇ ಅದೇ ಚಿತ್ರಾನ್ನವನ್ನು ಎಷ್ಟು ಸಲಾ ಅಂತಾ ಮಕ್ಕಳು ತಿನ್ನುತ್ತಾರೆ. ಚಿತ್ರಾನ್ನಕ್ಕೆ ಬಳಸುವ ಪರಿಕರಗಳನ್ನೇ ಉಪಯೋಗಿಸಿ, ಮತ್ತೊಂದು ಅಧ್ಭುತವಾದ ಉತ್ತರ ಭಾರತದ ತಿಂಡಿಯನ್ನು ತಯಾರಿಸಬಹುದೇ ಅದೇ ಜೀರಿಗೇ ಅನ್ನ ಅಥವಾ ಜೀರಾ ರೈಸ್. ಬನ್ನಿ ಈಗ ಜೀರಾ ರೈಸ್ ಮತ್ತು ಅದರ ಜೊತೆಗೆ ನೆಂಚಿಕೊಳ್ಳಲು ರುಚಿಕರವಾದ ದಾಲ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇನೆ. ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ಜೀರಾ ರೈಸ್ ಮತ್ತು ದಾಲ್ ತಯಾರಿಸಲು ಬೇಕಾಗುವ… Read More ಜೀರಾ ರೈಸ್ ಮತ್ತು ದಾಲ್

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕಾಂಗ್ರೇಸ್ ಮತ್ತು ನೆಹರು ಕುಟುಂಬದ ಭವಿಷ್ಯ ಏನು?

ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕ್ರಾಂಗ್ರೇಸ್ ಮತ್ತು ನೆಹರು ಕುಟುಂಬದ ಭವಿಷ್ಯ ಭಯಾನಕವಾಗಿದೆ ಮತ್ತು ಮುಂದಿನ ದಿನಗಳಲ್ಲಿ, ಅವರ ಪರಿಸ್ಥಿತಿ ಇನ್ನೂ ಹದಗೆಡಲಿದೆ ಎಂಬುದು ನನ್ನ ಸೀಮಿತ ರಾಜಕೀಯ ಅನುಭವದಲ್ಲಿ ಹೇಳಲು ಇಚ್ಚಿಸುತ್ತಿದ್ದೇನೆ. ಹೀಗೆ ಹೇಳುವುದಕ್ಕೆ ಹಲವಾರು ಪ್ರಭಲ ಕಾರಣಗಳಿವೆ ಆ ಪಕ್ಷ ಮತ್ತು ಕುಟುಂಬದ ಸಮಸ್ಯೆ ಏನೆಂದರೆ, ಅವರ ರಾಜಕೀಯ ಅಧಃಪತನದ ಸ್ಥಿತಿ ಅವರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆಯಾದರೂ, ಅದರಿಂದ ಹೇಗೆ ಹೊರಬರುವುದು ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕಿಂದ ಅವರಲ್ಲಿರುವ ಅಹಂ ನಿಂದಾಗಿ ಪರಿಸ್ಥಿತಿಯಿಂದ… Read More ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಕಾಂಗ್ರೇಸ್ ಮತ್ತು ನೆಹರು ಕುಟುಂಬದ ಭವಿಷ್ಯ ಏನು?