ವಿಶ್ವ ಆರೋಗ್ಯ ದಿನಾಚರಣೆ

ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಪ್ರತಿವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯದ ಕಾಳಜಿ ಕುರಿತಾಗಿ ವಿಶ್ವಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವೆಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ… Read More ವಿಶ್ವ ಆರೋಗ್ಯ ದಿನಾಚರಣೆ

ಹೆಸರುಬೇಳೆ ಇಡ್ಲಿ

ಇಡ್ಲಿ ಎಂದರೆ ಎಲ್ಲರ ಕಣ್ಣುಮುಂದೆ ಬರುವುದೇ ಹಬೆಯಲ್ಲಿ ಬೇಯಿಸಿದ, ಉಬ್ಬಿದ ಬಿಸಿ ಬಿಸಿಯಾದ ಮೃದುವಾದ ದಕ್ಷಿಣ ಭಾರತದ ಪ್ರಖ್ಯಾತವಾದ ತಿಂಡಿ. ಇಂತಹ ಇಡ್ಲಿಯ ಜೊತೆಗೆ ರುಚಿಕರವಾದ ಕಾಯಿ ಚಟ್ನಿ ಮತ್ತು ಸಾಂಬಾರ್ ಇದ್ದರಂತೂ ಬೇರಾವ ತಿಂಡಿಯೂ ಮನಸ್ಸಿಗೆ ಬೇಡ ಎನ್ನಿಸುತ್ತದೆ ಎಂದರೆ ಸುಳ್ಳಲ್ಲ. ಯಾವುದೇ ರೀತಿಯ ಎಣ್ಣೆ ಅಥವಾ ಜಿಡ್ಡಿಲ್ಲದೇ ಕೇವಲ ಅಕ್ಕಿ ಮತ್ತು ಉದ್ದಿನ ಬೇಳೆಯ ಸರಿಯದ ಪ್ರಮಾಣದ ಮಿಶ್ರಿತವಾಗಿ ಹಬೆಯಲ್ಲಿ ಬೆಂದು ಸರಿಸಮಾನದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಇರುವ ಅತ್ಯಂತ ಕಡಿಮೆ ಕ್ಯಾಲೋರಿ ಇರುವ,… Read More ಹೆಸರುಬೇಳೆ ಇಡ್ಲಿ

ಕಾಯಿಹಾಲು

ಸುಮಾರು 20-25 ಲೋಟಗಳಷ್ಟು ಸಾಂಪ್ರದಾಯಿಕ ರೀತಿಯಲ್ಲಿ ಕಾಯಿಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಲ್ಲಿದೆ. ಕಾಯಿಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ತೆಂಗಿನ ಕಾಯಿ ತುರಿ 2 ಕಪ್ ಬೆಲ್ಲ 1/2 ಕೆಜಿ ಅಕ್ಕಿ 1/4 ಕಪ್ ದ್ರಾಕ್ಷಿ 1/4 ಕಪ್ ಗೋಡಂಬಿ 1/4 ಕಪ್ ಬಾದಾಮಿ 1/4 ಕಪ್ ಗಸಗಸೆ 4 ಚಮಚ ಏಲಕ್ಕಿ ಪುಡಿ. 1 ಚಮಚ ಕಾಯಿ ಹಾಲು ಮಾಡುವ ವಿಧಾನ • ಮೊದಲು ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಬೇಕು • ಅಕ್ಕಿ ಮತ್ತು ಗಸಗಸೆಯನ್ನು… Read More ಕಾಯಿಹಾಲು

ನೀರ್ದೋಸೆ

ಒಂದು, ಎರಡು, ಮೂರು ನಾಲ್ಕು ಸಾಲ್ತಿಲ್ಲ ನೀರ್ದೋಸೆ ಇನ್ನೂ ಹಾಕು ಮನೇಲೀ ಇರೋರಿಗೆ ಎಲ್ರಿಗೂ ಬೇಕು ಹೆಂಡ್ತಿ ಹೇಳಿದ್ಮೇಲೆ ಒಪ್ಗೋಳ್ಳಲೇ ಬೇಕು. ಇಷ್ಟು ಹೇಳಿಯೂ ಐದ್ನೇ ನೀರ್ದೋಸೆ ತಟ್ಟೇಲಿ ಬಿತ್ತು ಇದೇ ನೋಡಿ ಗಂಡ-ಹೆಂಡ್ರ ಪ್ರೀತಿಯ ಗಮ್ಮತ್ತು ಇದನ್ನು ಒಪ್ಪೋರು, ಕೊಡ್ರೀ ನಿಮ್ಮಾಕಿಗೆ ಒಂದು ಸಿಹಿ ಮುತ್ತು ಏಕೆಂದ್ರೇ ಖಂಡಿತವಾಗಿಯೂ ಆಕೆನೇ ನಮ್ಮನೇ ಸಂಪತ್ತು. ಏನಂತೀರೀ? ಇಂದು ನಮ್ಮಾಕಿ ಮಾಡಿಕೊಟ್ಟ ಬಿಸಿ ಬಿಸಿಯಾದ ಗರಿ ಗರಿಯಾದ ನೀರು ದೋಸೆ ಮತ್ತು ಕಾಯಿ ಚಟ್ನಿ ತಿಂದ ಮೇಲೆ ಬರೆದ… Read More ನೀರ್ದೋಸೆ

ನಿಮಗಿದು ಗೊತ್ತೆ?

ನಮ್ಮ ಭಾರತ ದೇಶದಲ್ಲಿ 545 ಲೋಕಸಭಾ ಸದಸ್ಯರುಗಳು 245 ರಾಜ್ಯಸಭಾ ಸಂಸದರು 4120 ಶಾಸಕರು ಹೀಗೇ ಒಟ್ಟಾರೆಯಾಗಿ 4910 ಸಾರ್ವಜನಿಕ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿಯೇ ಆಯ್ಕೆಯಾದ ಈ ಜನಪ್ರತಿನಿಧಿಗಳು ಕಾಲಕಾಲಕ್ಕೆ ಸರ್ಕಾರದಿಂದ ಮಾಸಿಕ ಸಂಬಳ, ಆ ಭತ್ಯೆ, ಈ ಭತ್ಯೆ ಎಂದು ಲಕ್ಷಾಂತರ ರೂಪಾಯಿಗಳನ್ನು ಜನರ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣದಿಂದ ಪಡೆಯುತ್ತಿದ್ದಾರೆ. ನೆರೆ ಬರಲಿ ಬರ ಬರಲಿ, ಸೋಂಕುಗಳ ಹಾವಳಿ ಇರಲಿ ಇವರ ಭತ್ಯೆಗಳಿಗೆ ಮತ್ತು ಸೌಲಭ್ಯಗಳಿಗೆ ಯಾವುದೇ ಕುಂದು ಕೊರತೆಯಂತೂ… Read More ನಿಮಗಿದು ಗೊತ್ತೆ?

ರವೇ ಉಪ್ಪಿಟ್ಟು, ರವೇ ದೋಸೆ

  ರವೆ, ಹಸೀಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕಾಯಿತುರಿ, ತುರಿದ ಶುಂಠಿ, ಜೀರಿಗೆ,  ರುಚಿಗೆ ತಕ್ಕಷ್ಟು ಉಪ್ಪು , ತುಪ್ಪಾ ಹಾಕಿ ಘಮ್ ಅಂತಾ ಉಪ್ಪಿಟ್ಟು ಮಾಡಿದ್ರೇ, ಉಪ್ಪಿಟ್ಟಾ ಅಂತಾ ಕ್ಕೆಕರಿಸಿ ನೋಡ್ತಾರೆ ನಮ್ಮ ಮಕ್ಕಳು.       ಅದೇ ರವೆಗೆ ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಸ್ವಲ್ಪ ಹುಳಿ ಮೊಸರಿನೊಂದಿಗೆ ಕಲಸಿ,ಗರಿ ಗರಿಯಾಗಿ ಬರಲು ಸ್ವಲ್ಪ ಅಕ್ಕಿಹಿಟ್ಟು ಬೆರೆಸಿ, ಕಾವಲಿ ಮೇಲೆ ತುಪ್ಪ ಹಾಕಿ ಚುರ್ ಅಂತಾ ದೋಸೆ ಹುಯ್ದು, ಜೊತೆಗೆ ಕಾಯಿ,… Read More ರವೇ ಉಪ್ಪಿಟ್ಟು, ರವೇ ದೋಸೆ

ಎಲೆಮರೆ ಕಾಯಿಗಳು

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಮಾರಿ ಕೊರೋನ ಚೀನಾದೇಶದಲ್ಲಿ ಆರಂಭವಾಗಿ ಐರೋಪ್ಯ ದೇಶಗಳಲ್ಲಿ ಅಟ್ಟಹಾಸ ಮೆರೆದು ಈಗ ಭಾರತದ ಕಡೆ ತನ್ನ ಕೆನ್ನಾಲಿಗೆ ಬೀರಲು ಸಿದ್ಧವಾಗುತ್ತಿದೆ. ಅದನ್ನು ತಡೆಯಲು ನಮ್ಮ ಸರ್ಕಾರವೂ ಕೂಡ ಏಪ್ರಿಲ್ 15ರ ತನಕ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದೆ. ಹಾಗಾಗಿ ಕೋಟ್ಯಾಂತರ ದಿನಗೂಲಿ ನೌಕರಿಗೆ ಮತ್ತು ಬಡಬಗ್ಗರಿಗೆ ದಿನ ನಿತ್ಯದ ಕೂಳಿಗೆ ತೊಂದರೆಯಾಗುತ್ತಿದ್ದದ್ದನ್ನು ಮನಗಂಡು ಪ್ರಧಾನಿಗಳೂ ಸಹಾ ಕೋಟ್ಯಾಂತರ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ ಮತ್ತು ದೇಶವಾಸಿಗಳಿಂದ ಈ ಮಹತ್ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು… Read More ಎಲೆಮರೆ ಕಾಯಿಗಳು

ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ… Read More ಅಳಿಲು ಸೇವೆ

ತಂಬುಳಿ

ಕಡಿಮೆ ಸಮಯದಲ್ಲಿ ಮನೆಯಲ್ಲಿ ಇರುವ ವಸ್ತುಗಳಲ್ಲಿಯೇ ದಿಢೀರ್ ಆಗಿ ಮಾಡಬಹುದಾದ ರುಚಿಕರವಾದ ಪದಾರ್ಥವೇ ತಂಬುಳಿ. ಮಜ್ಜಿಗೆಯನ್ನು ಬಳಸಿ ಮಾಡುವುದಾದರಿಂದ ಇದು ದೇಹಕ್ಕೆ ತಂಪಾಗಿ ಇರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಪದಾರ್ಥಗಳು ತೆಂಗಿನಕಾಯಿ ತುರಿ 1/2 ಕಪ್ ಜೀರಿಗೆ 1/4 ಚಮಚ ಮೆಣಸು 1/4 ಚಮಚ ಹಸೀ ಮೆಣಸಿನಕಾಯಿ 3-4 ಬೆಳ್ಳುಳ್ಳಿ(ಐಚ್ಚಿಕ) 3-4 ಎಸಳು ಉಪ್ಪು ರುಚಿಗೆ ತಕ್ಕಷ್ಟು ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನೂ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು 2 ಕಪ್ ಕಡೆದ ಮಜ್ಜಿಗೆಯೊಂದಿಗೆ ಸೇರಿಸಿದಲ್ಲಿ ತಂಬುಳಿ… Read More ತಂಬುಳಿ