ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್

ಕನ್ನಡ ಚಿತ್ರರಂಗ ಕಂಡ ಆತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ಆದರೆ ಅಷ್ಟೇ ದುರದೃಷ್ಟವಂತ ನಟ ಎಂದೇ ಜನಜನಿತವಾಗಿದ್ದ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ, ಸಾಧನೆ ಮತ್ತು ಅವರು ಅನುಭವಿಸಿದ ನೋವು ನಲಿವುಗಳ ಸಮಗ್ರ ಚಿತ್ರಣ ಇದೋ ನಿಮಗಾಗಿ

ನಿಮ್ಮವನೇ ಉಮಾಸುತ… Read More ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್

ಪೇಜಾವರ  ಶ್ರೀ ವಿಶ್ವೇಶ ತೀರ್ಥರು

ಉಡುಪಿ ಅಂದ ತಕ್ಷಣ ನಮಗೆ ನೆನಪಾಗೋದು ಶ್ರೀಕೃಷ್ಣ ಪರಮಾತ್ಮ ಕನಕನ ಕಿಂಡಿ, ಆಷ್ಟ ಮಠಗಳು ಮತ್ತು ಅಲ್ಲಿನ ದಾಸೋಹ. ಇವೆಲ್ಲವ್ವಕ್ಕೂ ಕಳಸ ಪ್ರಾಯವಾಗಿ, ಇಡೀ ದೇಶಕ್ಕೆ ಉಡುಪಿಯನ್ನು ಹೆಚ್ಚಾಗಿ ಪರಿಚಯಿಸಿದ ಮತ್ತು ದೇಶಾದ್ಯಂತ ಎಲ್ಲೇ ಧಾರ್ಮಿಕ ಚಟುವಟಿಕೆಗಳು ನಡೆಯಲಿ ಆಥವಾ ಧರ್ಮಾಧಾರಿತ ಯಾವುದೇ ಸಮಸ್ಯೆಗಳಾದಲ್ಲಿ ಅದಕ್ಕೆ ಪರಿಹಾರವಾಗಿ ಉಡುಪಿಯತ್ತಲೇ ಮುಖಮಾಡುವ ಹಾಗೆ ಮಾಡಿದ ಕೀರ್ತಿ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ… Read More ಪೇಜಾವರ  ಶ್ರೀ ವಿಶ್ವೇಶ ತೀರ್ಥರು

ದಾಸಯ್ಯ

ಬಿಳಿ ಪಂಚೆ, ಬಿಳಿ ಜುಬ್ಬಾ ಅಥವಾ ಷರಾಯಿ ಹಾಕಿಕೊಂಡು ತಲೆಯಮೇಲೆ ಸುತ್ತಿದ ಒಂದು ಪೇಟ ಹಣೆಯಲ್ಲಿ ಒಂದು ಅಥವಾ ಮೂರು ಗೆರೆಗಳ ನಾಮ ಹಾಕಿಕೊಂಡು ಎಡಗೈಯಲ್ಲಿ ಉರಿಯುತ್ತಿರುವ ದೀಪದ ಕಂಬ, ಬಲಗೈಯ್ಯಿಗೆ ಜಾಗಟೆ ಕಟ್ಟಿಕೊಂಡು ಕೈಗಳಲ್ಲಿ ಕೆಲವೊಮ್ಮೆ ಕಹಳೆ ಮತ್ತು ಹೆಚ್ಚಿನ ಬಾರಿ ಶಂಖವನ್ನು ಇಟ್ಟುಕೊಂಡು ಎರಡೂ ತೋಳುಗಳಿಗೆ ಜೋಳಿಗೆ ಏರಿಸಿಕೊಂಡು ಎಲ್ಲರ ಮನೆಯ ಮುಂದೆ ಬಂದು ನಿಂತು ವೇಂಕಟರಮಣ ಸ್ವಾಮಿ ಪಾದಕ್ಕೆ ಗೋವಿಂದಾ! ಗೋವಿಂದಾ!! ಆಂಜನೇಯ ವರದಸ್ವಾಮಿ ಗೋವಿಂದಾ!! ಗೋವಿಂದಾ!! ಎಂದು ಜೋರಾಗಿ ಭಗವಂತನ ನಾಮ… Read More ದಾಸಯ್ಯ

ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

ಜಯ ಹನುಮಾನ್ ಜ್ಞಾನ ಗುಣ ಸಾಗರ! ಜಯ ಕಪೀಶ ತಿಹುಮ್ ಲೋಕ ಉಜಾಗರ! ರಾಮ ದೂತ ಅತುಲಿತ ಬಲ ಧಾಮ! ಅಂಜನೀ ಪುತ್ರ ಪವನ ಸುತ ನಾಮ! ರಾಮಾಯಣದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ನಂತರ ಅತ್ಯಂತ ಜನಪ್ರಿಯನಾಗಿರುವವನೇ ರಾಮನ ಭಂಟ ಆಂಜನೇಯ. ಮಾಯಾಜಿಂಕೆಯ ಜಾಲದಲ್ಲಿ ಮುಳುಗಿಸಿ ಸೀತಾಮಾತೆಯನ್ನು ಯಾರು ಅಪಹರಿಸಿಕೊಂಡು ಹೋಗಿರಬಹುದು ಎಂದು ವೈದೇಹೀ ಎನಾದಳೋ ಲಕ್ಷ್ಮಣಾ, ನನ್ನ ಸೀತೆಯನ್ನು ನೀವು ನೋಡಿದ್ದೀರಾ? ನೀವು ನೋಡಿದ್ದೀರಾ? ಎಂದು ಗಿಡ ಮರ ಬಳ್ಳಿಗಳನ್ನು, ಪ್ರಾಣಿ ಪಶು ಪಕ್ಷಿಗಳನ್ನು,… Read More ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

ಕನಕಗಿರಿ ಕನಕಾಚಲಪತಿ

ಕಾಲಿದ್ದವರು ಹಂಪೆ ಸುತ್ತಿ ನೋಡಬೇಕು ಮತ್ತು ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂಬ ನಾನ್ನುಡಿ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಚಲಿತವಾಗಿದೆ. ಅಂದಿನ ಕಾಲದ ವಿಜಯನಗರದ ಗತವೈಭವ ಇಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಂಚಿಹೋಗಿವೆ. ಹಂಪೆಯಿಂದ ಸುಮಾರು 30 ಕಿ.ಮಿ ದೂರದಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರಮುಖ ತಾಲ್ಲೂಕ್ ಕೇಂದ್ರವೇ ಕನಕಗಿರಿ. ಇಲ್ಲಿನ ಕನಕಾಚಲಪತಿ ದೇವಸ್ಥಾನದಿಂದಾಗಿ ಇದು ಐತಿಹಾಸಿಕ ಸ್ಥಳವಾಗಿದೆ. ಈ ಶ್ರೀಕ್ಷೇತ್ರವನ್ನು ಎರಡನೆ ತಿರುಪತಿ ಎಂಬ ನಂಬಿಕೆ ಇರುವ ಕಾರಣ ಹಂಪೆಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಯೂ ಬೇಟಿ… Read More ಕನಕಗಿರಿ ಕನಕಾಚಲಪತಿ

ಅನ್ನದಾತ ಸುಖೀಭವ

ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಶ್ರೀ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಅವರ ಅನ್ನದಾತ ಪದ್ಯವನ್ನು ಓದಿಯೇ ಇರುತ್ತೇವೆ. ನಮ್ಮೆಲ್ಲರ ಅನ್ನದಾತರಾದ ರೈತರನ್ನು ಇದಕ್ಕಿಂತಲೂ ಉತ್ತಮವಾಗಿ ವರ್ಣಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮನಮುಟ್ಟುವಂತಿದೆ ಈ ಪದ್ಯ. ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನುನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸವನೆ ದುಡಿಯುತ ಗಟ್ಟಿ ದೇಹ ದೊಡ್ಡ ಮನಸು ದೇವನಿಂದ… Read More ಅನ್ನದಾತ ಸುಖೀಭವ

ಎಲ್.ಎಸ್.ಶೇಷಗಿರಿರಾವ್

ಆಗ ಎಪ್ಪತ್ತರ ದಶಕ. ಆಗ ತಾನೆ ಓದಲು ಬರೆಯಲು ಕಲಿತ ಸಮಯ. ಅಮ್ಮಾ ಮೊದಲು ಪ್ರಜಾವಾಣಿ ಪತ್ರಿಕೆಯ ದಪ್ಪಕ್ಷರದ ಹೆಡ್ ಲೈನ್ ಓದುವ ಅಭ್ಯಾಸ ಮಾಡಿಸಿದರು. ಸ್ವಲ್ಪ ಅಕ್ಷರಗಳನ್ನು ಜೋಡಿಸಿ ಓದುವುದನ್ನು ಕರಗತ ಮಾಡಿಕೊಳ್ಳುತ್ತಿದ್ದಂತೆಯೇ, ತಂದೆಯವರು ಕೈಗಿತ್ತ ಪುಸ್ತಕ ಭಂಡಾರವೇ ಭಾರತ ಭಾರತಿ ಪುಸ್ತಕ ಸಂಪದ. ಚಿಕ್ಕ ಚಿಕ್ಕದಾದ ಬಹಳ ಸರಳ ಭಾಷೆಯಲ್ಲಿದ್ದರೂ ಅಷ್ತೇ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ದೇಶಭಕ್ತರ ಕಥಾ ಪುಸ್ತಕಗಳು. ಆರಂಭದಲ್ಲಿ ವಾರಕ್ಕೊಂದು ಪುಸ್ತಕವನ್ನು ಓದಿ ಅದನ್ನು ತಂದೆಯವರ ಸಮ್ಮುಖದಲ್ಲಿ ಓದಿದ ಪುಸ್ತಕದ ಬಗ್ಗೆ ವಿಚಾರ… Read More ಎಲ್.ಎಸ್.ಶೇಷಗಿರಿರಾವ್

ಹುಚ್ಚುಕೋಡಿ ಮನಸು ಹದಿನಾರರ ವಯಸು

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ! ಅಂದರೆ ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆ ಎಂದು ಹೇಳುವ ಮೂಲಕ ಜಗತ್ತಿನ ಬೇರಾವ ಸಂಸ್ಕೃತಿಯೂ ನೀಡದಂತಹ ಪೂಜ್ಯಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ನೀಡುತ್ತೇವೆಯಾದರೂ ನಮ್ಮಲ್ಲಿ ಅಂದಿನಿಂದಲೂ ಇಂದಿನವರೆಗೂ ಪುರುಷಪ್ರಧಾನವಾದ ಸಮಾಜವೇ. ವಂಶೋದ್ಧಾರಕ್ಕೆ ಗಂಡು ಮಕ್ಕಳೇ ಬೇಕು ಎಂದು ಬಯಸಿ, ಕಂಡ ಕಂಡ ದೇವರುಗಳಲ್ಲಿ ಸೆರಗೊಡ್ಡಿ, ಹರಕೆಯೊಡ್ಡಿ ಗಂಡು ಮಕ್ಕಳು ಆಗುವವರೆಗೂ ಸಂತಾನವನ್ನು ಬೆಳೆಸುತ್ತಲೇ ಹೋಗುವ… Read More ಹುಚ್ಚುಕೋಡಿ ಮನಸು ಹದಿನಾರರ ವಯಸು

ವಿಜಯ ದಿವಸ್ ಮತ್ತು ಪ್ರಹಾರ ದಿವಸ್

ಡಿಸೆಂಬರ್ 16, 1971 ನಿಜಕ್ಕೂ ನಮ್ಮ ಭಾರತದ ಮೂರೂ ಸೇನೆಗಳಿಗೆ ಅತ್ಯಂತ ಸ್ಮರಣಿಯ ದಿನ. ಇಡೀ ಪ್ರಪಂಚವೇ ನಮ್ಮ ವಿರುದ್ಧವಾಗಿದ್ದರೂ, ಸ್ವತಃ ಅಮೇರಿಕಾ ಹಿಂಬಾಗಿಲಿನಿಂದ ಪಾಕೀಸ್ಥಾನಕ್ಕೆ ಸಹಾಯ ಮಾಡುತ್ತಿದ್ದರೂ, ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇಲ್ಲದಿದ್ದರೂ ನಮ್ಮ ಭೂ,ವಾಯು ಮತ್ತು ಜಲ ಸೇನೆಗಳು ಜಂಟಿಯಾಗಿ ಛಲದಿಂದ ಪಾಕೀಸ್ಥಾನದ ವಿರುದ್ಧ ಜನರಲ್ ಮಾಣಿಕ್ ಷಾ ಅವರ ನೇತೃತ್ವದಲ್ಲಿ ಹೋರಾಡಿ ಸುಮಾರು 93000ಕ್ಕೂಅಧಿಕ ಪಾಕೀ ಸೈನಿಕರನ್ನು ಸೆರೆಗೈದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಅಂದಿನ ಪೂರ್ವ ಪಾಕೀಸ್ಥಾನದ ಜೆನರಲ್… Read More ವಿಜಯ ದಿವಸ್ ಮತ್ತು ಪ್ರಹಾರ ದಿವಸ್