ಕ್ರಿಕೆಟ್ ಆಟಗಾರರಾಗಿ ಸ್ವಾಮಿ ವಿವೇಕಾನಂದ

ಲೇಖನದ ಶೀರ್ಷಿಕೆ ನೋಡಿ ಶಾಕ್ ಆಯ್ತಾ? ಆಗಿರ್ಲೇ ಬೇಕು. ನನಗೂ ಇದರ ಬಗ್ಗೆ ತಿಳಿದುಕೊಂಡಾಗ ಇದೇ ರೀತಿ ಶಾಕ್ ಆಗಿತ್ತು. ನಮಗೆಲ್ಲ ತಿಳಿದಿರುವಂತೆ ಸ್ವಾಮೀ ವಿವೇಕಾನಂದರ ಆಧ್ಯಾತ್ಮದ ಗುರುಗಳು. ಇಡೀ ಜಗತ್ತಿನವರಿಗೆ ಹಿಂದೂ ಧರ್ಮದ ಬಗ್ಗೆ ಇದ್ದ ತಾತ್ಸಾರವನ್ನು ಹೋಗಲಾಡಿಸಿ ಅವರ ಮನದಲ್ಲಿ ಹಿಂದೂ ಧರ್ಮದ ಬಗ್ಗೆ ಪೂಜ್ಯ ಭಾವನೆ ಮೂಡಿಸುವುದರಲ್ಲಿ ಶ್ರಮಿಸಿದ ಅಗ್ರಗಣ್ಯರು. ಆದರೆ ಈ ಶೀರ್ಷಿಕೆಯಲ್ಲಿ ಕ್ರಿಕೆಟ್ ಆಟ ಅಂತಾ ಇದೇ? ಎಲ್ಲಿಯ ಬೆಟ್ಟದ ನೆಲ್ಲಿಕಾಯಿ? ಎಲ್ಲಿಯ ಸಮುದ್ರ ಉಪ್ಪು? ಎಲ್ಲಿಂದ ಎಲ್ಲಿಗೆ ಸಂಬಂಧ… Read More ಕ್ರಿಕೆಟ್ ಆಟಗಾರರಾಗಿ ಸ್ವಾಮಿ ವಿವೇಕಾನಂದ

ಬಾಳಗಂಚಿ  ಹೆಬ್ಬಾರಮ್ಮ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಸುಮಾರು 400-500 ಮನೆಗಳಿರುವ ಅಂದಾಜಿನ ಪ್ರಕಾರ 3000 ಜನರು… Read More ಬಾಳಗಂಚಿ  ಹೆಬ್ಬಾರಮ್ಮ

ಪೋಲೀಸರೊಂದಿಗೆ ಪಜೀತಿಯ ಪ್ರಸಂಗಗಳು

ಮೊನ್ನೆ ಹೋಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಆತ್ಮೀಯ ಗೆಳೆಯರಾದ ಸಹಕಾರ ನಗರದ ಐಯ್ಯಂಗಾರ್ ಆಹಾರದ ಶ್ರೀ ವಿಜಯ್ ಹೆರಗು ಅವರು ಹೋಳಿ ಹಬ್ಬದ ಸಮಯದಲ್ಲಿ ತಮ್ಮದ್ದಲ್ಲದ ತಪ್ಪಿಗಾಗಿ ಪೋಲೀಸರ ಕೈಗೆ ಸಿಕ್ಕಿಕೊಂಡು ಪರದಾಡಿದ ತಮ್ಮ ಬಾಲ್ಯದ ಪಜೀತಿಯ ಪ್ರಸಂಗವನ್ನು ಸುಂದರವಾಗಿ ಮುಖಪುಟದಲ್ಲಿ ಬರೆದಿದ್ದರು. ಅದನ್ನು ಓದುತ್ತಿದ್ದಾಗ ಪೋಲೀಸರೊಂದಿಗೆ ವಯಕ್ತಿಕವಾಗಿ ಮತ್ತು ನಮ್ಮ ಗೆಳೆಯರಿಗಾದ ಕೆಲ ಮೋಜಿನ ಸಂಗತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಪೋಲೀಸರೆಂದರೆ ನನಗೆ ಒಂದು ರೀತಿಯ ಪೂಜ್ಯ ಭಾವ. ಅವಿನಾಭಾವ ಸಂಬಂಧ. ಹಗಲಿರಳು ಎನ್ನದಂತೆ ಸದಾಕಾಲವೂ… Read More ಪೋಲೀಸರೊಂದಿಗೆ ಪಜೀತಿಯ ಪ್ರಸಂಗಗಳು

ನೀರಾ ಆರ್ಯ

ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. .  ಅಲ್ಲಿ ಚಾಪೆ ಕಂಬಳಿ ಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ ಅಜ್ಞಾತ ದ್ವೀಪದಲ್ಲಿ ಕೊಳೆಯುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಹೇಗೆ ದೊರಕೀತು..? ಎಂಬ ಚಿಂತೆ ಕಂಬಳಿ ಚಾಪೆಯ ಚಿಂತೆಯನ್ನು ದೂರ ಮಾಡಿತ್ತು..  ಹೇಗೂ ಆಯಾಸದಿಂದ ಕಲ್ಲು ಚಪ್ಪಡಿಯ ಮೇಲೆ ಒರಗಿದಂತೆಯೇ ನಿದ್ದೆ ಬಂದಿತ್ತು. ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಒಬ್ಬ ಗಾರ್ಡ್ ಕಂಬಳಿ ತೆಗೆದುಕೊಂಡು ಬಂದು… Read More ನೀರಾ ಆರ್ಯ

ಕೇಸರಿ ವೀರ ಸಂಭಾಜಿ ಮಹಾರಾಜ

128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೋಲದೇ ದೆಹಲಿ‌ಯ ಕೆಂಪು ಕೋಟೆಯ ಸಹಿತ ಜಿಹಾದಿಗಳ ಎದೆಯ ಮೇಲೆ ಕೇಸರಿ ಧ್ವಜ ನೆಟ್ಟಿದ್ದ ಕೇಸರಿ ವೀರ ಸಂಭಾಜಿ ಮಹಾರಾಜ!! ತನ್ನ ಹದಿನಾರನೇ ವಯಸ್ಸಿನಲ್ಲೇ ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸು ನನಸು ಮಾಡಿದ ಶಿವಾಜಿ ಮಹಾರಾಜರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಕಸ್ಮಾತ್ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನೆಗಾಗಿ ಸದಾ… Read More ಕೇಸರಿ ವೀರ ಸಂಭಾಜಿ ಮಹಾರಾಜ

ಛತ್ರಪತಿ ಶಿವಾಜಿ ಮಹಾರಾಜ್

ಮೊಘಲರ ಧಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ, ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ
Read More ಛತ್ರಪತಿ ಶಿವಾಜಿ ಮಹಾರಾಜ್

ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಕರಗ ಮಹೋತ್ಸವ

ಬೆಂಗಳೂರಿನ ಆಸುಪಾಸಿನಲ್ಲಿ ಶತಶತಮಾನಗಳಿಂದಲೂ ಪ್ರಮುಖ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ದೇವಿಯ ದೇವಸ್ಥಾನಗಳಲ್ಲಿ ಕರಗ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ(ಕರಕ) ಎಂಬ ಮಾತಿಗೆ ಕುಂಭ ಎಂಬ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ… Read More ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಕರಗ ಮಹೋತ್ಸವ

ಪರಿಶಿಂಚನೆ ಮತ್ತು ಚಿತ್ರಾವತಿ

ನಾವೆಲ್ಲಾ ಪ್ರತೀಬಾರಿ ಊಟ ಮಾಡುವುದಕ್ಕಿಂತ ಮುನ್ನ ನೀರಿನಿಂದ ಪರಿಶಿಂಚನೆ ಮಾಡಿ ನಾಲ್ಕು ಅಗುಳು ಅನ್ನವನ್ನು ತೆಗೆದು ಕೊಂಡು ಎಲೆಯ ಬಲೆಗಡೆಯಲ್ಲಿ ಇಟ್ಟು ನಂತರ ಮತ್ತೊಮ್ಮೆ ಅನ್ನವನ್ನು ತೆಗೆದುಕೊಂಡು ಆರು ಬಾರಿ ಹಲ್ಲಿಗೆ ತಾಕದಂತೆ ತಿಂದು ತಾಯಿ ಅನ್ನಪೂರ್ಣೆಗೆ ನಮಿಸಿ ಊಟವನ್ನು ಮುಂದುವರೆಸುತ್ತೇವೆ. ಆದರೆ ಬಹುತೇಕರಿಗೆ ಭೋಜನವಿಧಿ ಮತ್ತದರ ಅರ್ಥವೇ ಗೊತ್ತಿಲ್ಲದೇ ಸುಮ್ಮನೇ ಯಾಂತ್ರೀಕೃತವಾಗಿ ಮಾಡುತ್ತಿರುತ್ತಾರೆ. ಆದ ಕಾರಣ ಚಿತ್ರಾವತಿ ಎಂದರೆ ಏನು? ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಚಿತ್ರಾವತಿ ಹೇಗೆ ಇಡಬೇಕು? ಮತ್ತು ಚಿತ್ರಾವತಿ ಇಡುವಾಗ ಯಾವ… Read More ಪರಿಶಿಂಚನೆ ಮತ್ತು ಚಿತ್ರಾವತಿ

ಲಭ್ಯ

ಹೆಣ್ಣು, ಹೊನ್ನು ಮತ್ತು ಮಣ್ಣು ಎಲ್ಲವೂ ಲಭ್ಯ ಇದ್ದಲ್ಲಿ ಮಾತ್ರವೇ ಎಲ್ಲರಿಗೂ ಸಿಗುತ್ತದೆ ಎನ್ನುವುದು ದೊಡ್ಡವರು ಹೇಳುವ ಮಾತು. ಕಷ್ಟ ಪಟ್ಟು, ಬಿಸಿಲಿನಲ್ಲಿ ಬವಳಿ ಬೆಂದು, ಅಕ್ಕ ಪಕ್ಕದವರೊಡನೆ ಕಾದಾಡಿ, ಹೋರಾಡಿ ಸರದಿಯಲ್ಲಿ ನಿಂತು ಖರೀದಿಸಿದ ಕಲ್ಲೆಣ್ಣೆ (ಸೀಮೇಎಣ್ಣೆ ) ಅಂತಿಮವಾಗಿ ನಮಗೆ ಸಿಗದೇ, ಲಭ್ಯ ಇದ್ದವರಿಗೇ ಸಿಕ್ಕಾಗ ಆಗುವ ಸಿಟ್ಟು ಸೆಡವು ನಿಜಕ್ಕೂ ಹೇಳಲಾಗದು. ಅಂತಹ ರೋಚಕ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆಗ ಎಂಭತ್ತರ ದಶಕ. ಆಗ ತಾನೇ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದೆ. ಊರಿನಲ್ಲಿದ್ದ… Read More ಲಭ್ಯ