ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

ನಮ್ಮ ಸ್ನೇಹಿತರ ವಾಟ್ಯಾಪ್ ಗುಂಪಿನಲ್ಲಿ ಪ್ರತಿನಿತ್ಯ ವಿವಿಧ ದೇವಾಲಯಗಳ ಮತ್ತು ದೇವರುಗಳ ಚಿತ್ರಗಳನ್ನು ಹಂಚಿಕೊಳ್ಳುವ ಸಂಪ್ರದಾಯ ಬಹಳ ದಿನಗಳಿಂದ ಜಾರಿಯಲ್ಲಿದೆ. ಅದರಂತೆ ನಾನು ಹೋದ ಬಂದ ಕಡೆಯೆಲ್ಲಾ ನೋಡುವ ದೇವರ ಚಿತ್ರಗಳನ್ನು ಜತನದಿಂದ ಸಂಗ್ರಹಿಸಿ ಒಂದೊಂದೇ ಫೋಟೋಗಳನ್ನು ಅದರ ಜೊತೆಗೆ ಸಾಧ್ಯವಾದ ಮಟ್ಟಿಗೆ ಆ ದೇವರುಗಳ ಮಹಾತ್ಮೆ ಅಥವಾ ಆ ಕ್ಷೇತ್ರದ ವಿಶೇಷತೆ ಅಥವಾ ಹೆಗ್ಗಳಿಕೆಯನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಅದೇ ರೀತಿಯಾಗಿ ನನಗೆ ನನ್ನ ಸ್ನೇಹಿತ ಜಗದೀಶ ಪ್ರತೀ ದಿನವೂ ಉಡುಪಿಯ ಕೃಷ್ಣಮಠದ ಫೋಟೋಗಳನ್ನು ಕಳುಹಿಸುತ್ತಿದ್ದ.… Read More ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಶಂಕರ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದ ಚೊಕ್ಕದಾದ ಸಂಸಾರ. ಮಕ್ಕಳು ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಡದಿ ಗೃಹಿಣಿ. ನೆಮ್ಮದಿಯಾದ ಸಂಸಾರ.  ಶಂಕರನಿಗೆ  ಬರವಣಿಗೆಯಲ್ಲಿ  ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ  ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ.  ಎಷ್ಟೇ ಚಟುವಟಿಕೆಗಳಿಂದ ಕೂಡಿದ್ದರೂ ಅದು ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಧರ್ಮ,  ನೆಚ್ಚಿನ ಸಿದ್ಧಾಂತ ಮತ್ತು ರಾಜಕೀಯ ನಾಯಕರುಗಳ ಪರವಾಗಿ  ಪ್ರಖರವಾಗಿ ಲೇಖನ ಬರೆಯುತ್ತಿದ್ದ. ಅಂತಯೇ ಇನ್ನೊಬ್ಬರ ಬರಹಗಳಿಗೆ ವಾದ ಪ್ರತಿರೋಧ ಮಾಡುತ್ತಿದ್ದ. ಅವನ  ಬರವಣಿಗೆ,… Read More ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಅಮ್ಮಾ

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದ್ದಕ್ಕೇ ಆಗಲಿ ಪರ್ಯಾಯ ಹುಡುಕ ಬಹುದೇನೋ, ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತಿಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಅಂಡಾಣುವಿನಿಂದ ಮಗುವಿನ ರೂಪ ತಾಳುವವರೆಗೆ ಜೋಪಾನವಾಗಿಟ್ಟುಕೊಂಡು, ತಾನು ತಿನ್ನುವ ಆಹಾರವನ್ನೇ ತನ್ನ ಒಡಲಿನಲ್ಲಿರುವ ಮಗುವಿನೊಂದಿಗೆ ಕರಳು ಬಳ್ಳಿಯ ಮೂಲಕ ಹಂಚಿಕೊಂಡು ದೇಹದ… Read More ಅಮ್ಮಾ

ಕೊಬ್ಬರೀ ಮಿಠಾಯಿ ಪುರಾಣ

ಸಂಕ್ರಾಂತಿ ಹಬ್ಬಕ್ಕೆ ತಂದ ತೆಂಗಿನಕಾಯಿಗಳನ್ನು ಹಾಗೆ ಜಾಸ್ತೀ ದಿನ ಇಟ್ರೆ ಕೆಟ್ಟು ಹೋಗಬಹುದು. ಅದಕ್ಕೇ ಈ ರೀತಿಯಾಗಿ ರುಚಿ ರುಚಿಯಾದ ಘಮ ಘಮವಾದ ಕೊಬ್ಬರಿ ಮಿಠಾಯಿ ತಯಾರಿಸಿ ಮನೆಯವರಿಗೆ ಕೊಡಿ ಅದರ ಜೊತೆಯಲ್ಲೇ ನನ್ನ ಕೊಬ್ಬರೀ ಮಿಠಾಯಿ ಪುರಾಣವನ್ನು ಓದಿ ಆನಂದಿಸಿ. ಕೊಬ್ಬರೀ ಮಿಠಾಯಿ ಮಾಡಲು ಬೇಕಾಗುವ ಸಾಮಗ್ರಿಗಳು. ಸಕ್ಕರೆ – ಮುಕ್ಕಾಲು ಕಪ್ ಹಾಲು – 1 ಕಪ್(ಬೇಕಿದ್ದಲ್ಲಿ ಹಾಲಿನಪುಡಿಯನ್ನೂ ಬಳಸಬಹುದು) ಏಲಕ್ಕಿ – ಪುಡಿ ಮಾಡಿದ 5ರಿಂದ 6 ಏಲಕ್ಕಿ ( ಏಲಕ್ಕಿ ಎಷೆನ್ಸ್… Read More ಕೊಬ್ಬರೀ ಮಿಠಾಯಿ ಪುರಾಣ

ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

2019ರ ಲೋಕಸಭಾ ಚುನಾವಣೆ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳಿಗೆ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವ ಚುನಾವಣೆಯಾಗಿತ್ತು. ಹೇಗಾದರೂ ಮಾಡಿ ಮೋದಿಯವರನ್ನು ಹಣಿಯದಿದ್ದರೆ ತಮ್ಮ ಉಳಿಗಾಲವಿಲ್ಲ ಎಂಬುದನ್ನು ಎಲ್ಲರೂ ಮನಗಂಡಿದ್ದರು. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಇದನ್ನು ಬಾಯಿ ಬಿಟ್ಟೇ ಹೇಳಿಯೂ ಬಿಟ್ಟರು. ಅದಕ್ಕಾಗಿಯೇ ಎಲ್ಲರೂ ಮೋದಿ…ಮೋದಿ…ಮೋದಿ… ಈ ಒಂದೇ ಒಂದು ಹೆಸರು ದೇಶಾದ್ಯಂತ ಯಾವ ರೀತಿಯ ಒಂದು ಹವಾ ಸೃಷ್ಟಿಸಿತೆಂದರೆ, ಮೋದಿಯವರ ಬೆಂಬಲಿಗರು ಬಿಡಿ ಮೋದಿಯವರ ವಿರೋಧಿಗಳ ಬಾಯಲ್ಲೂ ಮೊದಲು ಬರುವ ಪದವೇ ಮೋದಿ… Read More ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

ಆದಿ ಶಂಕರಾಚಾರ್ಯ

ಶಂಕರರಿಲ್ಲದಿದ್ದಿದ್ದರೆ ಇಂದು ವೇದಾಂತ ತತ್ವ ಯಾರಿಗೂ ಅರ್ಥವಾಗುತ್ತಿರಲಿಲ್ಲ, ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ! ಅನಾದಿ ಕಾಲದಿಂದಲೂ ವೇದ ಭೂಮಿಯಾಗಿರುವ ಭಾರತ ಸಾರಿದ್ದು ಅದ್ವೈತ ಸಿದ್ಧಾಂತವನ್ನೇ. ವೇದಗಳ ಅದ್ವೈತ ಸಾರವನ್ನು ವೇದವ್ಯಾಸರಿಂದ ಯಾಜ್ಞವಲ್ಕ್ಯವರೆಗೂ ಸಾರಿದ್ದಾರೆ, ವೇದಾಂತ ಸಿದ್ಧಾಂತದ ಅದ್ವೈತವನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ. ಅದ್ವೈತ ಸಿದ್ಧಾಂತ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಕಾಲಕ್ರಮೇಣ ಧರ್ಮಕ್ಕೆ ಗ್ಲಾನಿಯುಂಟಾದಾಗ ಪಂಡಿತರೂ ವಿದ್ವಾಂಸರು ತಪ್ಪಾಗಿ ಅರ್ಥೈಸಿಕೊಂಡು ಅದ್ವೈತವನ್ನು ಮರೆತರು. ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶೃತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ… Read More ಆದಿ ಶಂಕರಾಚಾರ್ಯ

ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

ನೆನ್ನೆ ತಡರಾತ್ರಿ, ಬಸವ ಜಯಂತಿಯ ಪ್ರಯುಕ್ತ ಜಗಜ್ಯೋತಿ ಬಸವೇಶ್ವರ ಭಾವಚಿತ್ರದೊಂದಿಗೆ ಶುಭಾಶಯಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ, ಕೂಡಲೇ ಗೆಳೆಯ ನೀಲಕಂಠ ಸ್ವಲ್ಪ ವಿಭಿನ್ನವಾಗಿ ಮೇಲ್ಕಾಣಿಸಿದ ಬಸವನ ಭಾವಚಿತ್ರದೊಂದಿಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದಾಗ ಮನಸ್ಸು ಸ್ವಲ್ಪ ಕಸಿವಿಸಿಗೊಂಡು, ಇಂದು ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ, ಇದು ಕೋಲೇ ಬಸವಣ್ಣನವರ ಆಚರಣೆಯಲ್ಲ ಎಂದು ತುಸು ಖಾರವಾಗಿಯೇ ಪ್ರತಿಕ್ರಿಯಿಸಿದೆ. ಕೂಡಲೇ ಗೆಳೆಯ ನೀಲಕಂಠರ ಈ ಪ್ರತಿಕ್ರಿಯೆ ನಿಜಕ್ಕೂ ನನ್ನ ಕಣ್ಮನ ತೆರೆಸಿತು ಎಂದರೆ ತಪ್ಪಾಗಲಾರದು. ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ… Read More ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

ಅಣ್ಣಾ, ಮತ್ತೆ ಯಾವಾಗ ಸಿಗೋಣ?

ಜಗಣ್ಣಾ, ನಮಸ್ಕಾರ. ಎಲ್ಲಿದ್ದೀಯಾ? ಹೇಗಿದ್ದೀಯಾ? ಅಂತಾ ಫೋನ್ ಮಾಡಿದ್ರೆ, ಹಾಂ!! ಹೇಳಣ್ಣಾ, ಇಲ್ಲೇ ಕೆಲ್ಸದ್ ಮೇಲೆ ಇದ್ದೀನಿ. ಅಂತಾ ಶುರುವಾಗುತ್ತಿದ್ದ ನಮ್ಮ ಫೋನ್ ಸಂಭಾಷಣೆ ಕನಿಷ್ಟ ಪಕ್ಷ ಅರ್ಧ ಘಂಟೆಯವರೆಗೂ ನಡೆದು, ನಮ್ಮಿಬ್ಬರ ಕೆಲಸಕಾರ್ಯಗಳು, ನಂತರ ನಮ್ಮಿಬ್ಬರ ಮನೆಯವರೆಲ್ಲರ ಯೋಗಕ್ಷೇಮ ಅದಾದ ನಂತರ ನಮ್ಮ ಸಂಬಂಧೀಕರು, ನಮ್ಮೂರಿನ ಕುತೂಹಲಕಾರಿ ವಿಷಯಗಳನ್ನು ವಿಚಾರಿಸಿಕೊಂಡ ನಂತರ, ಒಂದೋ ನಾನು ಆಫೀಸ್ ತಲುಪಿರಬೇಕು ಇಲ್ಲವೇ ನಮ್ಮಿಬ್ಬರಿಗೆ ಬೇರಾವುದೋ ಕರೆ ಬಂದಾಗ, ಸರಿ ಅಣ್ಣಾ ಮತ್ತೇ ಸಿಗೋಣ ಎಂದು ಮಾತು ಮುಗಿಸಿ ಮತ್ತೊಂದು… Read More ಅಣ್ಣಾ, ಮತ್ತೆ ಯಾವಾಗ ಸಿಗೋಣ?

ಅಕ್ಷಯ ತೃತೀಯ/ತದಿಗೆ

ವೈಶಾಖ ಮಾಸದ ಶುದ್ಧ ತೃತೀಯದ ತಿಥಿಯನ್ನು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ವಸ್ತುವನ್ನು ಅಥವಾ ಸಂಪತ್ತನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದಲ್ಲಿ,‌ ಯಥೇಚ್ಛವಾಗಿ ದಾನ ಧರ್ಮ ಮಾಡಿದಲ್ಲಿ ಕಾಲಕ್ರಮೇಣ ಆ ಸಂಪತ್ತು ದ್ವಿಗುಣಗೊಳ್ಳುತ್ತದೆ ಎನ್ನುವುದು ಎಲ್ಲರ ನಂಬಿಕೆ ಇರುವ ಕಾರಣ ಎಲ್ಲೆಡೆಯೂ ದಾರ್ಮಿಕ ಅಚರಣೆಗಳು ಸಂಭ್ರಮದಿಂದ ನಡೆಸಲಾಗುತ್ತದೆ. ಇನ್ನು ಪೌರಾಣಿಕವಾಗಿ ಅಕ್ಷಯ ತದಿಗೆಯ ಮಹತ್ವವನ್ನು ನೋಡಿದಲ್ಲಿ, ಕೃಷ್ಣ ಸ್ನೇಹಿತ ಕುಚೇಲ ತನ್ನ ಗೆಳೆಯನಿಂದ ಸಹಾಯ ಪಡೆಯಲು ದ್ವಾರಕೆಗೆ… Read More ಅಕ್ಷಯ ತೃತೀಯ/ತದಿಗೆ