ಮಾಹಿಮಾಪುರದ ಮಹಿಮಾರಂಗ

ಸಾಧಾರಣವಾಗಿ ಯಾರಾದರೂ, ಯಾವುದಾದರೂ ತೀರ್ಥಕ್ಷೇತ್ರ ಅಥವಾ ಪುಣ್ಯಕ್ಷೇತ್ರಕ್ಕೆ ಹೋಗಿ ಬಂದು ತೀರ್ಥಪ್ರಸಾದವನ್ನು ಕೊಟ್ಟು ಆ ಕ್ಷೇತ್ರದ ಮಹಿಮೆಯನ್ನು ವಿವರಿಸಿ ನೀವು ಆದಷ್ಟು ಶೀಘ್ರದಲ್ಲಿ ಖಂಡಿತವಾಗಿಯೂ ಹೋಗಿ ಬರಲೇ ಬೇಕು ಎಂದಾಗ. ಅಯ್ಯೋ ನೀವೇ ಪುಣ್ಯವಂತರು. ನಮಗೆಲ್ಲಿದೆ ಆ ಭಾಗ್ಯ. ಆ ಭಗವಂತ ನಮ್ಮನ್ನು ಯಾವಾಗ ಕರೆಸಿಕೊಳ್ಳೊತ್ತಾನೋ ಎಂದು ಹೇಳುವುದು ಸಹಜ ಪ್ರಕ್ರಿಯೆ. ಅದರಂತೆಯೇ, ಮೂರ್ನಲ್ಕು ವಾರಗಳ ಹಿಂದೆ ನಮ್ಮ ಸ್ನೇಹಿತನ ಮದುವೆಗೆ ಹೋಗುವ ನೆಲಮಂಗಲ ದಾಟಿ ದಾರಿಯಲ್ಲಿ ತಿಂಡಿಗೆ ನಿಲ್ಲಿಸಿದ್ದಾಗ ದೂರದಲ್ಲಿ ಬೆಟ್ಟದ ತುದಿಯಲ್ಲಿ ಸುಂದರ ದೇವಸ್ಥಾನ… Read More ಮಾಹಿಮಾಪುರದ ಮಹಿಮಾರಂಗ

ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

ಜೇಷ್ಠ ಮಾಸ ಇನ್ನೇನು ಮುಗಿಯುತ್ತಿದ್ದು, ಆಷಾಡ ಮಾಸ ಆರಂಭವಾಗುತ್ತಲಿದೆ.  ಆಷಾಡ ಮಾಸದ ಗಾಳಿಯ ರಭಸ ಈಗಾಗಲೇ ಹೆಚ್ಚಾಗಿಯೇ ಹೋಗಿದೆ. ಹೇಳೀ ಕೇಳಿ ಭಾನುವಾರ ಎಂದರೆ  ಬಹಳಷ್ಟು ಬೆಂಗಳೂರಿಗರಿಗೆ ಬೆಳಾಗಾಗುವುದೇ ಸೂರ್ಯ ನೆತ್ತಿಗೆ ಬಂದ ಮೇಲೆಯೇ ಎಂದರೆ ತಪ್ಪಾಗಲಾರದೇನೋ? ಆದರೆ ಅದಕ್ಕೆ ಅಪವಾದ ಎಂಬಂತೆ ಇಂದು  ಬೆಂಗಳೂರಿನ ಉತ್ತರದ ಭಾಗದ ಸಹಕಾರ ನಗರದಲ್ಲಿ ಬೆಳ್ಳಂಬೆಳ್ಳಗ್ಗೆಯೇ  ಹಬ್ಬದ ವಾತಾವರಣ ಮೂಡಿತ್ತು ಎಂದರೆ ತಪ್ಪಾಗಲಾದರದು. ಕಾರು, ಬಸ್,  ನಾನಾ ತರಹದ ದ್ವಿಚಕ್ರ ವಾಹನಗಳು ಮುಂತಾದ ಮೋಟಾರು ವಾಹನಗಳ ದಟ್ಟಣೆ  ಅವುಗಳು ಉಗುಳುವ… Read More ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

ಯಾರೋ ಯಾರೋ ಗೀಚಿ ಹೋದಾ, ಹಾಳು ಹಣೆಯ ಬರಹ

ಮೊನ್ನೆ ಯೋಗ ದಿನಾಚರಣೆಯ ಹಿಂದಿನ ದಿನ ಬೆಳಿಗ್ಗೆ ಸಂಪರ್ಕಕ್ಕೆಂದು ಹಲವಾರು ಜನರನ್ನು ಭೇಟಿ ಮಾಡಲು ಹೋಗುವ ಸಂಧರ್ಭದಲ್ಲಿ ನಮ್ಮ ಕಾರ್ಯಕರ್ತ ಗುರು ಆವರ ಮನೆಗೂ ಹೋಗಿದ್ದೆವು. ಅವರ ಮನೆಯ ಮುಂದೆ ನಮ್ಮ ಗಾಡಿಗಳನ್ನು ನಿಲ್ಲಿಸುವಾಗಲೇ ಗುರು ಎಲ್ಲಿಗೋ ಹೊರಡಲು ಅನುವಾಗಿದ್ದನ್ನು ನೋಡಿ, ಕ್ಷಿಪ್ರವಾಗಿ ನಾಳಿನ ಕಾರ್ಯಕ್ರಮದ ಸ್ವರೂಪ ತಿಳಿಸಿ, ನೀವೇಲ್ಲೋ ಹೊರಟಿದ್ದೀರಿ. ಹೋಗಿ ಬನ್ನಿ ನಿಮ್ಮ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದಾಗ. ಎಲ್ಲಿ ಜೀ ಶುಭ. ನಾನು ಹೋಗುತ್ತಿರುವುದೇ ಆಶುಭ ಕಾರ್ಯಕ್ರಮಕ್ಕೆ ಎಂದಾಗ ಒಮ್ಮೆಲೆ ಮನಸ್ಸು ಪಿಚ್ಚೆನಿಸಿತು.… Read More ಯಾರೋ ಯಾರೋ ಗೀಚಿ ಹೋದಾ, ಹಾಳು ಹಣೆಯ ಬರಹ

ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಯೋಗ ಎಂಬುದು ನಮ್ಮ  ಭಾರತೀಯರ ಪರಂಪರೆಯ ಒಂದು ಬಹುಮುಖ್ಯ ಅಂಗವಾಗಿದೆ. ನಮ್ಮ  ಋಷಿಮುನಿಗಳ ಸಹಸ್ರಾರು ವರ್ಷಗಳ ಪರಿಶ್ರಮದ ಫಲವೇ ಯೋಗಾಸನ. ಇತರೇ ಎಲ್ಲಾ ವ್ಯಾಯಾಮಗಳು ಕೇವಲ ದೈಹಿಕ ಸಧೃಡತೆ ಕೊಟ್ಟರೆ  ಯೋಗಾಸನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಡೃಡತೆ ಕೊಡುತ್ತದೆ ಎಂಬುದು ಈಗ ಜಗಜ್ಜಾಹೀರಾತಾಗಿರುವ ವಿಷಯ  ಅದಕ್ಕೆಂದೇ ಸಾವಿರಾರು ವರ್ಷಗಳ ಹಿಂದೆ ಸಡೃಡ ಆರೋಗ್ಯಕ್ಕಾಗಿ ದೇವರನ್ನು ನಮಿಸುವುದರೊಂದಿಗೆ ಯೋಗಾಸನ ಮಾಡಬೇಕು ಎಂದು ಭಾರತೀಯ ಋಷಿಮುನಿಗಳು ತೋರಿಸಿಕೊಟ್ಟರು.  ಅದಕ್ಕೆ ಪತಂಜಲಿ ಮಹರ್ಷಿಗಳು  ಒಂದು ರೂಪವನ್ನು ಕೊಟ್ಟು  ಯೋಗ  ಪಿತಾಮಹ… Read More ಅಂತರಾಷ್ಟ್ರೀಯ ಯೋಗ ದಿನಾಚರಣೆ 2019

ಸರಸ್ವತಿ ನದಿ ಮತ್ತವಳ ಪುನಶ್ವೇತನ

ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ,  ಸರಸ್ವತಿ ನದಿ ಮತ್ತವಳ ಪುನಶ್ವೇತನದ ಕುರಿತಾದ  ವಿಷಯದ ಬಗ್ಗೆ  ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಆರ್. ಕೃಷ್ಣಮೂರ್ತಿ( ಖಾಸಗೀ ಕಂಪನಿಯ ಉದ್ಯೋಗಿಗಳು ಮತ್ತು ಇತಿಹಾಸ ಸಂಕಲನಕಾರರು)  ಅವರ ಅಮೃತ ಹಸ್ತದಿಂದ  ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಮತ್ತು ಅವರ ಮಗಳು ಅನನ್ಯಳ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದೇಶದ ನಾಗರೀಕತೆ ಮತ್ತು ಸಂಸ್ಕೃತಿಗಳು ಬಹುತೇಕ ಒಂದಲ್ಲಾ ಒಂದು ನದಿ ಪಾತ್ರದ ಸುತ್ತಮುತ್ತಲೇ ಬೆಳೆದು… Read More ಸರಸ್ವತಿ ನದಿ ಮತ್ತವಳ ಪುನಶ್ವೇತನ

ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ಬಾಲ್ಯದ ಗೆಳೆಯ/ಗೆಳತಿಯರ ಗೆಳೆತನ ಸಾಧಾರಣವಾಗಿ ಶಾಲೆಯ ವಿದ್ಯಾಭ್ಯಾಸ ಮುಗಿಯುವವರೆಗೂ ಇರುತ್ತದೆ. ಹೆಚ್ಚೆಂದರೆ ಒಂದಿಬ್ಬರ ಗೆಳೆತನ ಕಾಲೇಜಿನವರೆಗೆ ‌ಮುಂದುವರಿದರೆ ಭಾರಿ ಅನಿಸುತ್ತದೆ. ‌ಅದರಲ್ಲೂ ಹೆಚ್.ಎಂ.ಟಿ ಕಾರ್ಖಾನೆಯ ಕಾರ್ಮಿಕರ ಮಕ್ಕಳು ಎಂದರೆ ಮಧ್ಯಮ ‌ವರ್ಗದ ಜನ. ಎಲ್ಲರ ವಾಸ, ಕಾರ್ಖಾನೆಯ ಕಾಲೋನಿಯಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ , ಎಲ್ಲಾ ಧರ್ಮದ, ಜನ ಒಂದೇ ಕಡೆ ಒಟ್ಟಾಗಿ ಆಟ, ಪಾಠವಾಡುತ್ತಾ ಒಟ್ಟೊಟ್ಟಿಗೆ ‌ಬೆಳೆಯುವವರು. ಇದೆಲ್ಲಾ ‌ತಮ್ಮ ತಂದೆಯವರು ಕೆಲಸದಿಂದ ನಿವೃತ್ತಿ ಹೊಂದಿದಾಗಲೋ ಇಲ್ಲವೇ ಸ್ವಂತ ಮನೆ ಕಟ್ಟಿಸಿಕೊಂಡು ಹೋಗುವವರೆಗೆ ಇರುತ್ತದೆ.… Read More ಪ್ರಾಣ ಸ್ನೇಹಿತರ ಪರಿಸರ ಪ್ರೇಮ

ನಾನು ಅಪ್ಪನಾದ ಮಧುರ ಕ್ಷಣ

ಭಾರತದಂತಹ ಪುಣ್ಯಭೂಮಿಯಲ್ಲಿ ಹುಟ್ಟುವುದಕ್ಕೇ ಪುಣ್ಯ ಮಾಡಿರ ಬೇಕು. ಇನ್ನು ಕಾಲ ಕ್ರಮೇಣ ದೊಡ್ಡವರಾಗುತ್ತಿದ್ದಂತೆಯೇ, ಅವರೇ ಅಪ್ಪಾ, ಅಮ್ಮಾ ಇಲ್ಲವೇ ತಾತ ಮತ್ತು ಅಜ್ಜಿಯರಾಗಿ ಭಡ್ತಿ ಪಡೆಯುವ ಅನುಭವವಂತೂ ನಿಜಕ್ಕೂ ಅದ್ಭುತ ಮತ್ತು ಅವರ್ಣನೀಯವೇ ಸರಿ.

ಇನ್ನು ನಿಮ್ಮವನೇ ಉಮಾಸುತದಿಂದ ಸೃಷ್ಟಿಕರ್ತ ಉಮಾಸುತ ಎಂಬ ಅಡಿಬರಹ ಬರೆಯಲು ಕಾರಣವೇನು? ಎಂಬೆಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ನಾನು ಅಪ್ಪನಾದ ಮಧುರ ಕ್ಷಣ

ಪೆಪ್ಪರ್ಮೆಂಟ್

ಬಹುಷಃ ಎಪ್ಪತ್ತು ಮತ್ತು ಎಂಭತ್ತು ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ ಎಂಬ ನಂಬಿಕೆ ನನ್ನದು. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ತಿಂಡಿಯೇ ಅದು. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಪೆಪ್ಪರ್ಮೆಂಟ್. ನಾವು ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನವಾಗಿ ಸಿಗುತ್ತಿದ್ದದ್ದೇ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ ಜೊತೆ ಮಕ್ಕಳಿಗೆಂದೇ ಪೆಪ್ಪರ್ಮೆಂಟ್ ತಂದೇ ತರುತ್ತಿದ್ದರು.… Read More ಪೆಪ್ಪರ್ಮೆಂಟ್

ಮನಸ್ಸಿದ್ದಲ್ಲಿ ಮಾರ್ಗ

ಅಮೆರಿಕದಲ್ಲಿದ್ದರೂ ತನ್ನ ಭಾರತದಲ್ಲಿನ ಹುಟ್ಟೂರಿಗೆ ಸಹಾಯ ಮಾಡಿದ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿನ ಯುವಕ ದತ್ತ ಪಾಟೀಲ. ಭಾರತದ ಬರ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು 800 ಅಡಿಯಿಂದ 100 ಅಡಿಗೆ ತಂದ ಯುವಕನ ಸಾಹಸಗಾಥೆ. ಸರ್ಕಾರಗಳು ಇದನ್ನು ಅರಿತು ಕೆಲಸ ಮಾಡಬೇಕು. 2016ರಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಬರವನ್ನು ಕಂಡಿತ್ತು. ಜನರು ಕುಡಿಯುವ ನೀರಿಗೂ ಪರದಾಡಿದ್ದರು. ಈತನ ಉಳಿದಿದ್ದ ಕ್ಯಾಲಿಫೋರ್ನಿಯ ಕೂಡ ಕಳೆದ ಐದು ವರ್ಷದಿಂದ ನೀರಿನ ಬರ ಕಂಡಿತ್ತು. ಭಾರತಕ್ಕೆ ಪ್ರವಾಸಕ್ಕೆಂದು ಬಂದ ದತ್ತ ಪಾಟೀಲ ಬರೀ ಕಂಡಿದ್ದು… Read More ಮನಸ್ಸಿದ್ದಲ್ಲಿ ಮಾರ್ಗ