ಶ್ರಾವಣ ಶನಿವಾರ ಪಡಿ ಬೇಡುವುದು

ಶ್ರಾವಣ ಮಾಸದ ಶನಿವಾರಗಳಂದು, ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಭಗವಂತನ ಹೆಸರಿನಲ್ಲಿ ಪಡಿ ಬೇಡುವುದು ಎಂದರೇನು? ಶ್ರಾವಣ ಮಾಸದಲ್ಲಿಯೇ ಈ ರೀತಿ ಪಡಿಯನ್ನು ಬೇಡುವುದರ ಹಿನ್ನಲೆ ಏನು? ಪಡಿ ಬೇಡಿದ್ದನ್ನು ಏನು ಮಾಡುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಶ್ರಾವಣ ಶನಿವಾರ ಪಡಿ ಬೇಡುವುದು

ಜಾಫರ್ ಷರೀಫ್

ಜಾಫರ್ ಷರೀಫ್, 70-90ರ ದಶಕದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವೀ ಹೆಸರು. ಮೂಲತಃ ಚಿತ್ರದುರ್ಗದ ಕಡೆಯವರಾದ ಷರೀಫರು, ನಿಜಲಿಂಗಪ್ಪನವರ ಸಹಾಯಕರಾಗಿ ಸಂಸ್ಥಾ ಕಾಂಗ್ರೇಸ್ ಮತ್ತು ಇಂದಿರಾ ಕಾಂಗ್ರೇಸ್ ಎಂದು ಇಬ್ಭಾಗವಾದಾಗ, ಇಂದಿರಾ ಕಿಚನ್ ಕ್ಯಾಬಿನೆಟ್ ಭಾಗವಾಗಿ ರಾಜಕಾರಣದ ಉತ್ತುಂಗದ ಸ್ಥಿತಿ ತಲುಪಿದ್ದವರು. ನರಸಿಂಹರಾಯರ ಆಳ್ವಿಕೆಯಲ್ಲಿ ಕೇಂದ್ರದ ರೈಲ್ವೇ ಸಚಿವರಾಗಿದ್ದ ಶ್ರೀಯುತರು ಒಂದು ಕಾಲಕ್ಕೆ ತಮ್ಮ ಪ್ರಭಾವೀ ವ್ಯಕ್ತಿತ್ವದಿಂದಾಗಿ ರಾಜ್ಯದಲ್ಲಿಯೇ ಮುಖ್ಯಮಂತ್ರಿ ‌ಸ್ಥಾನದ ಮೇಲೂ ಕಣ್ಣಿಟ್ಟಿದ್ದದ್ದು ಅದು ಅವರಿಗೆ ಮರೀಚಿಕೆಯಾಗಿಯೇ ಉಳಿದು ಹೋದದ್ದು ವಿಪರ್ಯಾಸವೇ ಸರಿ.… Read More ಜಾಫರ್ ಷರೀಫ್

ಭೀಮನ ಅಮಾವಾಸ್ಯೆ

ಪತಿಯ ಶ್ರೇಯೋಭಿವೃದ್ಧಿ ಮತ್ತು ತನ್ನ ಸುಮಂಗಲೀತನ ದೀರ್ಘವಾಗಿರಲೀ ಎಂದು ಪತ್ನಿಯು ಗಂಡನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ ಎಂದು ಎಲ್ಲರೂ ತಿಳಿದಿರುವಾಗ, ಭೀಮನಿಗೂ ಈ ಹಬ್ಬಕ್ಕೂ ಎಲ್ಲಿಯ ಸಂಬಂಧ? ಭೀಮನ ಅಮಾವಾಸ್ಯೆ ಹಬ್ಬದ ವೈಶಿಷ್ಟ್ಯತೆಗಳು ಮತ್ತು ಆದರ ಆಚರಣೆಗಳು ಇದೋ ನಿಮಗಾಗಿ… Read More ಭೀಮನ ಅಮಾವಾಸ್ಯೆ

ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಕಳೆದ ಎರಡು ದಿನಗಳಿಂದಲೂ ರಾಜ್ಯದಲ್ಲಿ ಒಂದು ರೀತಿಯ ಸೂತಕದ ಛಾಯೆ. ಕರ್ನಾಟಕದ ಕಾಫಿಯ ಕಂಪನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದ , ಹತ್ತು ರೂಪಾಯಿಗೆ ಬಿಸಿ ಬಿಸಿ ಕಾಫಿ ಕುಡಿಯಲು ಹಿಂದು ಮುಂದು ನೋಡುತ್ತಿದ್ದ ಭಾರತೀಯರಿಗೆ ಅದೇ ಕಾಫಿಯನ್ನು ತಣ್ಣಗೆ ಮಾಡಿ ನೂರಾರು ರೂಪಾಯಿಗಳಿಗೆ ಕುಡಿಸುವ ಚಟವನ್ನು ಹತ್ತಿಸಿದ್ದ , ತನ್ಮೂಲಕವೇ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಉದ್ಯಮಿಯ ನಾಪತ್ತೆಯ ವಿಷಯ ಎಲ್ಲರ ಮನಸ್ಸಿನಲ್ಲಿ ದುಗುಡ ತುಂಬಿತ್ತು. ಇಡೀ ಜಿಲ್ಲಾಡಳಿತವೇ ಸಜ್ಜಾಗಿ ನಾನಾ ರೀತಿಯಲ್ಲಿ ಅವರನ್ನು ಹುಡುಕುವ ಪ್ರಯತ್ನ… Read More ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ

ವಿದ್ಯಾರಣ್ಯಪುರ ಮಂಥನದ ಹತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ವಿಶ್ವನಾಥ್ ಶ್ರಿಕಂಠಯ್ಯ (ಜಲ ಸಂರಕ್ಷರು ಮತ್ತು ಮಳೆ ನೀರು ಕೊಯ್ಲು ತಜ್ಞರು) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಸಿಂಧೂ ನದಿ… Read More ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ

ಆ-ರಕ್ಷಕರೋ ಇಲ್ಲಾ ಭಕ್ಷಕರೋ?

ಕೆಲ ದಿನಗಳ ಹಿಂದೆ weekend with ramesh ಕಾರ್ಯಕ್ರಮದಲ್ಲಿ infosys ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿಗಳು ಹೇಳಿದ ಮಾತು ಮೊದಲು ಅರಗಿಸಿಕೊಳ್ಳಲು ಸ್ವಲ್ಪ ಕಸಿವಿಸಿ ಎನಿಸಿದರೂ ನಿಧಾನವಾಗಿ ಆಲೋಚಿಸಿದಾಗ ಅವರು ಹೇಳಿದ್ದು ಸರಿಯೇ ಎನಿಸಿತು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಜನ ಶಿಸ್ತು ಸಂಯಮ ಕಾಪಾಡುವುದು ಸ್ವಲ್ಪ ಕಡಿಮೆ ಅವರು ಸದಾ ಕಾನೂನು ಮುರಿಯುವುದರಲ್ಲಿಯೇ ಹೆಚ್ಚಿನ ಸಂತೋಷ ಪಡುತ್ತಾರೆ ಎಂಬರ್ಥದಲ್ಲಿ ಹೇಳಿದ್ದರು. ಹಾಗಾಗಿ ಇಂತಹ ಜನರನ್ನು ಕಾನೂನಾತ್ಮವಾಗಿ ಪರಿಪಾಲಿಸಲು ಮತ್ತು ಅದನ್ನು ಹದ್ದು ಮೀರಿದಲ್ಲಿ ಸರಿದಾರಿಗೆ… Read More ಆ-ರಕ್ಷಕರೋ ಇಲ್ಲಾ ಭಕ್ಷಕರೋ?

ಅರಿವೇ ಗುರು

ಅರಿವೇ ಗುರು ಅದೊಂದು ಶಿಶುವಿಹಾರ ಅಲ್ಲಿ ಅನೇಕ ಪುಟ್ಟ ಪುಟ್ಟ ಮಕ್ಕಳು ಕಲಿಯುತ್ತಿದ್ದವು. ಅದೊಂದು ದಿನ ಸಂಜೆ ಆ ಶಿಶುವಿಹಾರಕ್ಕೆ ಒಂದು ವಯಸ್ಸಾದ ದಂಪತಿಗಳು ಫಲ ಪುಷ್ಪ ಕಾಣಿಕೆಗಳೊಂದಿಗೆ ಬಂದು ಉಮಾ ಮಿಸ್ ಎಲ್ಲಿದ್ದಾರೆ ಎಂದು ಕೇಳುತ್ತಾರೆ. ಅಲ್ಲಿದ್ದ ಆಯಾ ಆ ವಯೋದಂಪತಿಗಳನ್ನು ಅಲ್ಲಿಯೇ ಕುಳ್ಳರಿಸಿ ಕುಡಿಯಲು ನೀರು ತಂದು ಕೊಟ್ಟು, ಸ್ವಲ್ಪ ಸಮಯ ಕುಳಿತಿರಿ ಅವರನ್ನು ಕರೆದು ಕೊಂಡು ಬರುತ್ತೇನೆ ಎಂದು ಹೋಗಿ ಸ್ವಲ್ಪ ಸಮಯದ ನಂತರ ಉಮಾ ಮಿಸ್ ಬಂದವರೇ ನಮಸ್ಕಾರ ನಾನೇ ಉಮಾ.… Read More ಅರಿವೇ ಗುರು

ಸಮಸ್ಯೆಗಳಿಗೆ ಸಾವೇ ಪರಿಹಾರವೇ?

ರಮೇಶ ಹಳ್ಳಿಯಲ್ಲಿ  ತಕ್ಕ ಮಟ್ಟಿಗೆ ಓದಿ ಬೆಂಗಳೂರಿಗೆ ಬಂದು ಕೆಲಸ ಗಿಟ್ಟಿಸಿಕೊಂಡು ಜೀವನ ನಡೆಸ ತೊಡಗಿದರು.  ಆವರದ್ದು ಸಂಪ್ರದಾಯಸ್ತ ಒಟ್ಟು ಕುಟಂಬವಾದ್ದರಿಂದ ಅಕ್ಕ ತಂಗಿಯರಿಗೆಲ್ಲ ಮದುವೆ ಮಾಡಿ ತಮ್ಮಂದಿರಿಗೆ ಒಂದು ದಾರಿ ತೋರಿಸಿ ಮದುವೆ ಆಗುವಷ್ಟರಲ್ಲಿ ಅವರ ಮದುವೆಯ ವಯಸ್ಸು ಮೀರಿದ್ದರೂ ಮದುವೆ ಆಗಿ ಆವರ ಸುಖಃ ದಾಂಪತ್ಯದ ಫಲವಾಗಿ  ವರ್ಷದೊಳಗೇ ಹೆಣ್ಣು ಮಗುವಿನ ಜನನವಾಗಿ ಮಗಳಿಗೆ ಆಶಾ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಿದ್ದರು. ಹೆಣ್ಣು ಗಂಡುಗಳ ನಡುವೆ ಬೇಧವಿಲ್ಲ  ಎಂದು ಎಷ್ಟೇ ಹೇಳಿದರೂ ಇಂದಿಗೂ ನಮ್ಮ… Read More ಸಮಸ್ಯೆಗಳಿಗೆ ಸಾವೇ ಪರಿಹಾರವೇ?

ಪಟಾ ಪಟಾ ಹಾರೋ ಗಾಳಿಪಟ

ಹೊಸದಾಗಿ ಮದುವೆಯಾದ ಸಹೋದ್ಯೋಗಿ ಸುಮಾರು ಎಂಟು ಗಂಟೆಯಾದರೂ ಇನ್ನೂ  ಕಛೇರಿಯಲ್ಲಿಯೇ ಇದ್ದದ್ದನ್ನು ಗಮನಿಸಿದ ನಾನು, ಏನಪ್ಪಾ ರಾಜಾ, ಮನೆಗೆ ಹೋಗುವುದಿಲ್ಲವಾ?  ಮೊನ್ನೆ ಮೊನ್ನೆ ತಾನೇ  ಮದುವೆ ಆಗಿದ್ದೀಯಾ,ನಿಮ್ಮ ಮನೆಯಲ್ಲಿ ನಿಮ್ಮ ಮನೆಯವರು ಒಬ್ಬರೇ ಇರುತ್ತಾರೆ ಮತ್ತು ನಿನ್ನ ಆಗಮನವನ್ನೇ ಕಾಯುತ್ತಿರುತ್ತಾರೆ.  ಪರವಾಗಿಲ್ಲಾ ನಾಳೆ ಕೆಲಸ ಮುಂದುವರಿಸುವಂತೆ ಎಂದು ತಿಳಿಹೇಳಿದೆ.  ಅದಕ್ಕವನು ಸಾರ್, ಹಾಗೇನಿಲ್ಲ ಸಾರ್. ಮನೆಯಲ್ಲಿ ಯಾರೂ ಇಲ್ಲಾ. ಸುಮ್ಮನೆ ಮನೆಗೆ ಹೋಗಿ ಮಾಡಲು ಏನೂ ಕೆಲಸ ಇಲ್ಲ. ಅದೇ ಟಿವಿ ನೋಡುವ ಬದಲು  ಎಲ್ಲಾ ಕೆಲಸ… Read More ಪಟಾ ಪಟಾ ಹಾರೋ ಗಾಳಿಪಟ