ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತದ ಅನುಷ್ಠಾನ

ಇತ್ತೀಚಿಗೆ ವ್ಯಾಟ್ಸಪ್ಬಲ್ಲಿನ ನೋಡಿದ ಒಂದು ಗೋಡೇ ಬರಹ ನನ್ನನ್ನು ಬಹಳಷ್ಟು ಕಾಡಿತು. ಅದರ ಸಾರಾಂಶ ಈ ರೀತಿಯಾಗಿದೆ. ಮಗ ತಾಯಿಗೆ ಕೂಗಿ ಹೇಳುತ್ತಾನೆ. ಅಮ್ಮಾ ಕಸದವರು ಬಂದಿದ್ದಾರೆ. ಅದಕ್ಕೆ ಮನೆಯೊಳಗಿನಿಂದ ತಾಯಿ ಶಾಂತಚಿತ್ತದಿಂದ ಮಗನಿಗೆ ತಿಳಿ ಹೇಳುತ್ತಾಳೆ. ಮಗೂ ಕಸದವರು ಅವರಲ್ಲ , ನಾವುಗಳು. ಅವರು  ನಾವು ಮಾಡಿದ ಕಸವನ್ನು ಸ್ವಚ್ಛ ಗೊಳಿಸಲು ಬಂದಿದ್ದಾರೆ. ಇನ್ನೊಬ್ಬರ ಕೆಲಸವನ್ನು ಹೀಯಾಳಿಸದೆ ನಮ್ಮ ಮನಸ್ಥಿತಿಯನ್ನು ನಮ್ಮ ದೃಷ್ಟಿಕೋನವನ್ನು ಬದಲಿಸಿ ನೋಡು ಎಲ್ಲವೂ ಸ್ಚಚ್ಚವಾಗಿ ಕಾಣುತ್ತದೆ ಎಂದು ‌ಸುಂದರವಾಗಿ ಸ್ವಚ್ಚತೆಯ ಬಗ್ಗೆ… Read More ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತದ ಅನುಷ್ಠಾನ

ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೇ ಕೆಲವು ದಿನಗಳು ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನವೂ ಇರಲಾರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡಾರೂ ಜೀವನ ಮಾಡ್ತೀವಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಹಿಂದೆಲ್ಲಾ ನಿತ್ಯಹರಿದ್ವರ್ಣ ಕಾಡುಗಳಿದ್ದವು. ಎಲ್ಲಾ ಕಡೆಯಲ್ಲೂ ಹಸಿರು ಮಯವಾಗಿರುತ್ತಿದ್ದು. ಹಾಗಾಗಿ ಕಾಲ ಕಾಲಕ್ಕೆ ಯಥೇಚ್ಚವಾಗಿ ಮಳೆಗಳು ಆಗುತ್ತಿದ್ದವು. ಕೆರೆ ಕಟ್ಟೆಗಳು, ಕಲ್ಯಾಣಿ, ಭಾವಿ ಮತ್ತು ಮತ್ತು ನದಿಗಳು ತುಂಬಿ ಹರಿಯುತ್ತಿದ್ದವು. ಇದರಿಂದ ಯಾರಿಗೂ ನೀರಿನ… Read More ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ಬದುಕು ಜಟಕಾ ಬಂಡಿ

ಇಂದು ಬೆಳಿಗ್ಗೆ ಮನೆಯ ಹತ್ತಿರ ಜಾಗಿಂಗ್ ಮಾಡುತ್ತಿದ್ದೆ. ಹಾಗೆ ಮಾಡುವಾಗ ನನಗಿಂತ ಸುಮಾರು ಅರ್ಧ ಕಿಲೋ ಮೀಟರ್ ಮುಂದೆ ಜಾಗಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗಮನಿಸಿದೆ. ಅವರು ಸ್ವಲ್ಪ ನಿಧಾನವಾಗಿ ಓಡುತ್ತಿರುವುದನ್ನು ಗಮನಿಸಿ ಅವರನ್ನು ಹಿಂದಿಕ್ಕಬೇಕೆಂದು ನನ್ನ ಒಳ ಮನಸ್ಸು ಹೇಳಿತು. ಹಾಗಾಗಿ ನಾನು ಮತ್ತಷ್ಟೂ ವೇಗ ಮತ್ತು ವೇಗವಾಗಿ ಓಡಲು ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಅವರಿಗಿಂತ 100 ಅಡಿಗಳ ಹಿಂದೆ ಬಂದಿದ್ದನ್ನು ಗಮನಿಸಿದ ಅವರೂ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ನಾನೂ ಕೂಡ ಅವರನ್ನು ಹಿಂದಿಕ್ಕಲು ಸರ್ವ… Read More ಬದುಕು ಜಟಕಾ ಬಂಡಿ

ರಂಜಾನ್ ರಾಮಾಯಣ

ಸುಮಾರು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು. ಆಗಷ್ಟೇ ನಮ್ಮನೆಯ ಹತ್ತಿರದ ಬಿಇಎಲ್ ಹೊಸಾ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ಆರಂಭವಾಗಿತ್ತು. ಹೈದರಾಬಾದ್ ಮೂಲದ ಪ್ಯಾರಡೈಸ್ ಹೊಟೆಲ್ ರುಚಿ ರುಚಿಯಾದ ಬಿರ್ಯಾನಿಗೆ ಬಲು ಖ್ಯಾತಿ. ಕೆಲಸದ ನಿಮಿತ್ತ ಹಲವು ಬಾರಿ ಹೈದರಾಬಾದ್ಗಗೆ ಹೋಗಿದ್ದಾಗ ಅಲ್ಲಿ ಬಿರ್ಯಾನಿ ಸವಿದದ್ದನ್ನು ನಮ್ಮ ಮನೆಯಲ್ಲಿ ಹಂಚಿಕೊಂಡಿದ್ದೆನಾದ್ದರಿಂದ ಬಿರ್ಯಾನಿ ಪ್ರಿಯೆ ನನ್ನ ಮಗಳು ಅಪ್ಪಾ, ಹೇಗೂ ಮನೆಯ ಸಮೀಪವೇ ಪ್ಯಾರಡೈಸ್ ಹೋಟೆಲ್ ಶುರುವಾಗಿದೆ. ಬಿರಿಯಾನಿ ತಿನ್ನಲು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ದಂಬಾಲು ಬಿದ್ದಿದ್ದಳು. ನಾನೂ… Read More ರಂಜಾನ್ ರಾಮಾಯಣ

ವಿಶ್ವ ಪರಿಸರ ದಿನ

ಭೂಮಿ,ಸೌರಮಂಡಲದಲ್ಲಿ 5ನೇ ದೊಡ್ಡ ಗ್ರಹ. ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ. ಅದಕ್ಕಾಗಿಯೇ ಕವಿಯೊಬ್ಬರು ಎಲ್ಲರಿಗೊಂದೇ ಭೂತಲವೆಂದೆ ಎಲ್ಲರಿಗೂ ಭಗವಂತನೇ ತಂದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಭೂಮಿ ನಮಗೆ ಆಶ್ರಯದಾತೆಯಲ್ಲದೇ ನಮ್ಮ ತಾಯಿಯೂ ಹೌದು. ಅದಕ್ಕಾಗಿಯೇ ನಮ್ಮ ಸನಾತನ ಧರ್ಮದಲ್ಲಿ ಭೂಮಿಗೆ ತಾಯಿಯ ಸ್ವರೂಪ ನೀಡಿ ಭೂಮಿತಾಯಿ ಎಂದೇ ಸಂಭೋಧಿಸುತ್ತೇವೆ. ಆದರೆ ಮನುಷ್ಯನ ದುರಸೆಯಿಂದಾಗಿ ಅದೇ ಭೂಮಿ ತಾಯಿ ಒಡಲನ್ನು ಅಗೆದು, ಬಗೆದು ರತ್ನಗರ್ಭ ವಸುಂಧರೆಯಲ್ಲಿ ಆಡಗಿದ್ದ ಖನಿಜ ಸಂಪತ್ತುಗಳನ್ನು ಬರಿದು ಮಾಡಿದ್ದಲ್ಲದೇ… Read More ವಿಶ್ವ ಪರಿಸರ ದಿನ

ವಿಶ್ವ ಸೈಕಲ್ ದಿನಾಚರಣೆ

ಜೂನ್ 3 ವಿಶ್ವ ಸೈಕಲ್ ದಿನಾಚರಣೆಯಂದು, ನಮ್ಮ ಬದುಕಿನಲ್ಲಿ ಸೈಕಲ್ಲಿನ ಪಾತ್ರ ಮತ್ತು ಸೈಕಲ್ ಬಳಸುವರಿಂದ ಆಗಬಹುದಾದ ಲಾಭಗಳ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ವಿಶ್ವ ಸೈಕಲ್ ದಿನಾಚರಣೆ

ಗುಂಡಿಗಳ ಮಧ್ಯೆ ರಸ್ತೆ ಇದೆ ಎಚ್ಚರಾ!!

ಮೊನ್ನೆ ನಾನು ಮತ್ತು ನನ್ನ ಸಹೋದ್ಯೋಗಿ ಸಂಜೆ ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆವು. ನಾನು ಕಾರಿನಲ್ಲಿ ಹೊರಟರೆ, ಆತ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯ ಕಡೆ ನನ್ನ ವಿರುದ್ಧ ದಿಕ್ಕಿನಲ್ಲಿ ಹೊರಟ. ಸ್ವಲ್ಪ ದೂರ ಹೊರಟೊಡನೆಯೇ ಇದ್ದಕ್ಕಿದ್ದಂತಯೇ ಮೋಡಗಳು ದಟ್ಟವಾಗಿ ಕಾರ್ಮೋಡಗಳಾದವು. ಮಿಂಚು, ಗುಡುಗು, ಸಿಡಿಲುಗಳು ಅಬ್ಬರಿಸತೊಡಗಿ ಅಚಾನಕ್ಕಾಗಿ ಧಾರಾಕಾರವಾಗಿ ಕುಂಬದ್ರೋಣ ಮಳೆ ಸುರಿತೊಡಗಿತು. ಸಾಧಾರಣ ಮಳೆಗೇ ತುಂಬಿ ತುಳುಕುವ ಬೆಂಗಳೂರಿನ ರಸ್ತೆಗಳು ಇನ್ನು ಧಾರಾಕಾರವಾಗಿ ಸುರಿಯಿತೆಂದರೆ ಇನ್ನು ಕೇಳ ಬೇಕೇ? ಸಿಕ್ಕ ಪಕ್ಕ ಕಡೆಗಳಲ್ಲಿ… Read More ಗುಂಡಿಗಳ ಮಧ್ಯೆ ರಸ್ತೆ ಇದೆ ಎಚ್ಚರಾ!!

ನಾ ಕಂಡಂತೆ ಪ್ರೀಮಿಯರ್ ಪದ್ಮಿನಿ

ಮನುಷ್ಯ ಸಂಘ ಜೀವಿ. ಆವನು ಹೆಚ್ಚು ಕಾಲ ಏಕಂತವಾಗಿರಲಾರ. ಹಾಗಾಗಿ ಬಲು ಬೇಗ ತಮ್ಮ ಅಭಿರುಚಿಗೆ ತಕ್ಕಂತೆ ಗೆಳೆಯ/ಗೆಳತಿಯರನ್ನು ಮಾಡಿಕೊಳ್ಳುತ್ತಾನೆ. ತಮ್ಮ ಸುಖಃ ದುಃಖಗಳನ್ನು ಹಂಚಿಕೊಳ್ಳುತ್ತಾನೆ. ಇದು ಬಾಲ್ಯದಿಂದ ಆರಂಭವಾಗಿ, ಯೌವನದಲ್ಲಿ ಮುಂದುವರೆದು, ವೃದ್ದಾಪ್ಯದಲ್ಲಿಯೂ ಕಾಣ ಬಹುದಾಗಿದೆ. ಅದಕ್ಕನುಗಣವಾಗಿ ಯೌವನದಲ್ಲಿ ಮದುವೆ ಎಂಬ ಕಟ್ಟು ಪಾಡಿನ ಬಂಧನದಲ್ಲಿ ಸಿಕ್ಕಿಸಿ ಅದಕ್ಕೊಂದು ಸುಮಧುರ ಬಾಂಧ್ಯವ್ಯವನ್ನು ಬೆಸೆದಿದ್ದಾರೆ ನಮ್ಮ ಪೂರ್ವಜರು. ಆದರೆ ಇಂದು ಆ ರೀತಿಯ ಮೌಲ್ಯಗಳೆಲ್ಲಾ ಮಾಯವಾಗಿ ಪಾಶ್ವಾತ್ಯೀಕರಣದ ಅಂಧಾನುಕರಣದಲ್ಲಿ ಮದುವೆಯೆಂಬ ಸುಮಧುರ ಬಾಂಧವ್ಯ ಮರೆಯಾಗಿ ಕೇವಲ ದೈಹಿಕ… Read More ನಾ ಕಂಡಂತೆ ಪ್ರೀಮಿಯರ್ ಪದ್ಮಿನಿ

ಕಾಮುಕ

ನೆನ್ನೆ ಕಳೆದ ಒಂದೂವರೆ ತಿಂಗಳು ನಡೆದ ಮಹಾಚುನಾಚಣೆಯ ಅಂತಿಮ ಫಲಿತಾಂಶದ ದಿನ. ಚುನಾವಣಾ ಸ್ಪರ್ಧಿಗಳಿಗೆ ಎಷ್ಟು ಒತ್ತಡ, ಕಾತುರ ಮತ್ತು ಕುತೂಹಲ ಇರುತ್ತದೋ ಅದಕ್ಕಿಂತಲೂ ಹೆಚ್ಚಿನ ಒತ್ತಡಕ್ಕೊಳಗಾಗಿ ರಾತ್ರಿಎಲ್ಲಾ ನಿದ್ದೆಯೇ ಬಾರದೆ, ಮುಂಜಾವ ನಾಲ್ಕುವರೆ ಘಂಟೆಗೇ ಎಚ್ಚರಗೊಂಡು ಪ್ರಾತರ್ವಿಧಿಗಳನ್ನು ಮುಗಿಸಿ, ಭಗವಂತಾ, ದೇಶಕ್ಕೆ ಸುಭದ್ರ ಮತ್ತು ಸಮರ್ಥ ನಾಯಕತ್ವ ಮತ್ತೊಮ್ಮೆ ಬರಲೀ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಚುನಾವಣಾ ನಿರ್ಗಮನ ಫಲಿತಾಂಶ ಬಿಜೆಪಿ ಪರವಾಗಿ ಬಂದಿದ್ದರಿಂದ ಚುನಾವಣೆ ಫಲಿತಾಂಶದ ದಿನ ಮನೆಯಲ್ಲಿಯೇ ಟಿವಿ ಮುಂದೆ ಕುಳಿತು ನೇರವಾಗಿ ಫಲಿತಾಂಶ… Read More ಕಾಮುಕ