ಭಾರತೀಯ ಮತದಾರನ ಹೃದಯಾಂತರಾಳದ ಮಾತು

ನನ್ನ ಹೆಸರು ಮನೀಷ್ ಕುಮಾರ್.  ಜನ್ಮತಃ ನಾನೊಬ್ಬ ಹಿಂದು ಮತ್ತು 2014 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೇ ನನ್ನ ಮತವನ್ನು ನೀಡಿದ್ದೇನೆ . ಗುಜರಾತ್ ಮಾದರಿಯ ಬಗ್ಗೆ ನಾನು ಕೇಳಿದ್ದೆ, ಮೋದಿ ಪ್ರಧಾನಿಯಾದರೆ,ದೇಶಾದ್ಯಂತ ಗೋಧ್ರಾ ಮಾದರಿಯ ಕೋಮು ದಳ್ಳುರಿಯ ಪ್ರಕರಣಗಳು ಹೆಚ್ಚಾಗಬಹುದು ಎಂದು ಎಣಿಸಿದಿದ್ದೆ. ಆದರೆ ಜನರು ಬಹುತದಿಂದ ಮೋದಿಯವರನ್ನು ಅಯ್ಕೆಮಾಡಿ ಪ್ರಧಾನಿಯನ್ನಾಗಿ ಮಾಡಿದಾಗ, ಅಯ್ಯೋ  ನನ್ನ  ಒಂದು  ಮತ ವ್ಯರ್ಥವಾಯಿತಲ್ಲಾ ಎಂದು ವಿಷಾಧಿಸಿದ್ದೆ. ನನ್ನ ಸ್ನೇಹಿತರೊಂದಿಗೆ  ವಾದಮಾಡುತ್ತಾ  ಮೋದಿ ಜನರಲ್ಲಿ ಹಗೆತನವನ್ನು ಹೆಚ್ಚಿಸುವ ಮತ್ತು ರಾಮ… Read More ಭಾರತೀಯ ಮತದಾರನ ಹೃದಯಾಂತರಾಳದ ಮಾತು

ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀರಾಮ ನವಮಿ ಅಂದ್ರೇ ಪೂಜೆ ಜೊತೆ ಪ್ರಸಾದರೂಪದಲ್ಲಿ ಕೊಡುವ ಪಾನಕ, ಕೋಸಂಬರಿ, ನೀರು ಮಜ್ಜಿಗೆಯ ಗಮ್ಮತ್ತೇ ಬೇರೆ. ಇಡೀ ದಿನವೆಲ್ಲಾ ಇದನ್ನೇ ತಿಂದು ಕುಡಿದು ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ರಾಮನವಮಿ ಪಾನಕವೆಂದರೆ ನನಗೆ ಒಂದೆರಡು ರೋಚಕ ಅನುಭವಗಳು ನೆನಪಾಗುತ್ತದೆ. ಅಂತಹ ರಸಾನುಭವ ಇದೋ ನಿಮಗಾಗಿ. ಆಗಿನ್ನೂ ಎಪ್ಪತ್ತರ ದಶಕ ನಾನಿನ್ನೂ ಸಣ್ಣ ಹುಡುಗ. ರಾಮನವಮಿಯಂದು ಅಮ್ಮಾ ಪಾನಕ, ಕೋಸಂಂಬರಿ, ಮಜ್ಜಿಗೆ ಎಲ್ಲಾ ಮಾಡಿದ್ದರು. ಪಾನಕಕ್ಕೆ ನಾಲ್ಕೈದು ಹನಿ ಪೈನಾಪಲ್ ಎಶೆನ್ಸ್ ಸೇರಿಸಿದ್ದ ಕಾರಣ ಪಾನಕದ ರುಚಿ ಮತ್ತಷ್ಟು ಹೆಚ್ಚಾಗಿದ್ದದ್ದು… Read More ಶ್ರೀರಾಮ ನವಮಿಯ ಪಾನಕದ ಪಜೀತಿ

ಶ್ರೀ ರಾಮ ನವಮಿ

ಸಮಸ್ತ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಶೋತ್ತಮ, ದಶರಥ ಪುತ್ರ, ಶ್ರೀ ರಾಮಚಂದ್ರ ಪ್ರಭು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ತ್ರೇತಾಯುಗದಲ್ಲಿ ಸರಯೂ ನದಿ ತಟದ ಅಯೋಧ್ಯೆಯಲ್ಲಿ ಜನಿಸಿದ ದಿನ. ಈ ದಿನವನ್ನು ದೇಶಾದ್ಯಂತ ಭಕ್ತಿಭಾವದಿಂದ, ಶ್ರಧ್ಧಾ ಪೂರ್ವಕವಾಗಿ ಬಹಳ ಸಂಭ್ರಮದಿಂದ ಹಬ್ಬವಾಗಿ ಆಚರಿಸುತ್ತಾರೆ. ಕರ್ನಾಟಕದ ಬಹಳಷ್ಟು ಮನೆಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಅಂದರೆ ಯುಗಾದಿ ದಿನದಿಂದ ಮುಂದಿನ ಒಂಭತ್ತು ದಿನ ಅಂದರೆ ನವಮಿ, ರಾಮ ನವಮಿಯವರೆಗೆ ಪ್ರತೀ ದಿನ ರಾಮಾಯಣ ಪಾರಾಯಣ… Read More ಶ್ರೀ ರಾಮ ನವಮಿ

Time Bank, ಸಮಯದ ಬ್ಯಾಂಕು

ಮೊನ್ನೆ ಪರಿಚಯಸ್ತರೊಬ್ಬರ ಮನೆಗೆ ಹೋಗಿದ್ದೆ. ಹೀಗೇ ಅವರ ಬಳಿ ಮಾತಾನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ಸ್ವಿಡ್ವರ್ಲ್ಯಾಂಡಿನಲ್ಲಿ ಇರುವ ನಿಮ್ಮ ಮಗ ಹೇಗಿದ್ದಾರೆ ಎಂದು ಕೇಳಿದೆ. ಓ ಆವನಾ… ಹೂಂ ಈಗ ಚೆನ್ನಾಗಿದ್ದಾನೆ ಅಂದರು. ಓ ಅವನಾ.. ಎಂಬ ದೀರ್ಘ ಎಳೆದದ್ದು ನನಗೆ ಏನೂ ಸಮಸ್ಯೆ ಇರಬೇಕು ಎಂದು ತಿಳಿದು, ಯಾಕೆ ಏನಾಯ್ತು? ಎಲ್ಲಾ ಸರಿಯಾಗಿದೆ ತಾನೇ ಎಂದು ಮರು ಪ್ರಶ್ನಿಸಿದೆ. ಹೇ.. ಹೇ.. ಹಾಗೇನಿಲ್ಲಾ ಎಲ್ಲಾವೂ ಚೆನ್ನಾಗಿದೆ. ಒಂದೆರಡು ತಿಂಗಳ ಹಿಂದೆ ನಮ್ಮ ಮಗ ಅಲ್ಲಿ ತನ್ನ ಆಫೀಸಿಗೆ… Read More Time Bank, ಸಮಯದ ಬ್ಯಾಂಕು

ಕರಿಯ

ಸಾಧಾರಣವಾಗಿ ಬಹುತೇಕರ ಮನೆಗಳಲ್ಲಿ ಬೆಕ್ಕು, ನಾಯಿ, ಬಿಳಿ ಇಲಿ, ಮೊಲ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕು ಪ್ರಾಣಿಗಳಾಗಿ ಬೆಳೆಸುವ ಪರಿಪಾಠವಿದೆ. ಅದರಲ್ಲೂ ಸ್ವಾಮಿ ಭಕ್ತಿಗೆ ಮತ್ತೊಂದು ಹೆಸರೇ ಶ್ವಾನಗಳು ಅದಕ್ಕಾಗಿಯೇ ನಾಯಿಗಳನ್ನು ಉಳಿದೆಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಮನೆಗಳಲ್ಲಿ ಸಾಕುತ್ತಾರೆ. ಇತ್ತೀಚೆಗೆ ಅಪಘಾತದಲ್ಲಿ ಮಡಿದ ತನ್ನ ಮಾಲೀಕನ ಶವ ಬಿಟ್ಟು ಕದಲದ ನಾಯಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ (https://www.msgp.pl/0goFLOw) ಆಗಿದ್ದನು ನೋಡುತ್ತಿದ್ದಾಗ, ಬಾಲ್ಯದಲ್ಲಿ ನನ್ನ ಅಜ್ಜಿಯ ಮನೆಯ ಸಾಕು ನಾಯಿ ಕರಿಯನ ನೆನಪು… Read More ಕರಿಯ

ಹಿರಿಯರು ಇರಲವ್ವಾ ಮನೆತುಂಬಾ

ಹಬ್ಬ ಹರಿದಿನಗಳಲ್ಲಿ, ಮದುವೆ ಮುಂಜಿ ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಆಚಾರ, ವಿಚಾರ ಕಟ್ಟು ಪಾಡುಗಳು ಮತ್ತು ಸಂಪ್ರದಾಯದ ಆಚರಣೆಗಳೇ ಹೆಚ್ಚಿನ ಮಹತ್ವ ಪಡೆದಿರುತ್ತವೆ. ಒಂದೊಂದು ಪ್ರದೇಶದಲ್ಲಿಯೂ, ಒಬ್ಬೊಬ್ಬರ ಮನೆಗಳಲ್ಲಿಯೂ ಅಲ್ಲಿಯ ಸ್ಥಳೀಯ ಪರಿಸರ, ಹವಾಮಾನ ಮತ್ತು ಅನುಕೂಲಕ್ಕೆ ತಕ್ಕಂತೆ ಆಚರಣೆಗಳು ರೂಢಿಯಲ್ಲಿರುತ್ತದೆ. ಹಾಗಂದ ಮಾತ್ರಕ್ಕೆ ಈ ಪದ್ದತಿಗಳಿಗೆ ಯಾವುದೇ ಲಿಖಿತ ವಿಧಿವಿಧಾನಗಳು ಇಲ್ಲವಾದರೂ ಅದು ತಲೆ ತಲಾಂತರದಿಂದ ಹಿರಿಯರು ಆಚರಿಸುತ್ತಿದ್ದದ್ದನು ನೋಡಿ, ಕೇಳಿ ತಿಳಿದು ರೂಢಿಯಲ್ಲಿಟ್ಟು ಕೊಂಡು ಬಂದಿರುತ್ತಾರೆ. ನೆನ್ನೆ ವರಮಹಾಲಕ್ಷ್ಮಿ ಹಬ್ಬ. ಸಕಲ ಹಿಂದೂಗಳು… Read More ಹಿರಿಯರು ಇರಲವ್ವಾ ಮನೆತುಂಬಾ

ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು

🌿🌱 ಪ್ರಕೃತಿಯಲ್ಲಿ ಹಳೆ ಬೇರು ಹೊಸ ಚಿಗುರು ಮೂಡುವಂತೆ, ನಮ್ಮೆಲ್ಲರಲ್ಲೂ ಹೊಸಾ ಉತ್ಸಾಹ ಮೂಡಲಿ. ಜೀವನದಲ್ಲಿ ಸುಖಃ-ದುಖಃ,ಗಳು ಬೇವು-ಬೆಲ್ಲದಂತೆ ಹದವಾಗಿದ್ದು, ಸಿಹಿ ಪಾಲು ಹೆಚ್ಚಾಗಿರಲಿ. ಎಲ್ಲರಿಗೂ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು ಈ ಹೊಸಾ ವರ್ಷದಲ್ಲಿ, ದೇಶಾದ್ಯಂತ ಸಕಾಲಕ್ಕೆ ಮಳೆಯಾಗಿ ಸಂವೃದ್ಧವಾದ ಬೆಳೆಯಾಗಿ, ನಮ್ಮೆಲರ ಬಾಳು, ಸುಖಃ, ಶಾಂತಿ, ನೆಮ್ಮದಿ ಮತ್ತು ಸಮೃದ್ದಿಯಿಂದಿರಲಿ. ನೇರ, ದಿಟ್ಟ, ಸಮರ್ಥ ನಾಯಕ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಭಾರತ ದೇಶ ಮತ್ತೊಮ್ಮೆ ವಿಶ್ವಗುರುವಾಗಲಿ 🌿🌱

ಮಾವಿನ ತಳಿರು ತೋರಣದ ಮಹತ್ವ

ನಮ್ಮ ಭಾರತೀಯ ಹಿಂದೂ  ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ   ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ  ಅಥವಾ ಮನೆಗಳಲ್ಲಿ   ಮದುವೆ,ಮುಂಜಿ, ನಾಮಕರಣ ಮುಂತಾದ  ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವ ಒಂದು ಅಂಶವೆಂದರೆ ಮಾವಿನ ತಳಿರು ತೋರಣ. ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರ ಬಹುದು,  ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯ ಬಾಗಿಲಾಗಿರಬಹುದು… Read More ಮಾವಿನ ತಳಿರು ತೋರಣದ ಮಹತ್ವ

ಸಂತೋಷಕೇ ಹಾಡು ಸಂತೋಷಕೇ

ಸುಖಃವಿರಲಿ, ದುಃಖವಿರಲಿ, ಭಾಷೆಯ ಗೊತ್ತಿಲ್ಲದಿದ್ದರೂ ಸಂವಹವಾಗಿ ಉಪಯೋಗಿಸಬಹುದಾದ ಏಕೈಕ ಸಾಧನವೆಂದರೆ ಸಂಗೀತ. ಇದನ್ನು ನಾನು ಹೇಳುವುದಕ್ಕಿಂತ ನನ್ನ ಮಗಳು ಸೃಷ್ಟಿಯಈ ಚೊಚ್ಚಲು ಬರಹವನ್ನು ಓದಿ ತಿಳಿದರೇ ಆನಂದ. ಸಂಗೀತವೆಂದರೆ ಸುರ ಗಂಗೆಯಂತೆ, ಸಂಗೀತವೆಂದರೆ ರವಿಕಾಂತಿಯಂತೇ. ಏನಂತೀರೀ?