ಗೃಹಿಣಿ ಗೃಹಮುಚ್ಯತೆ

ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಆ ಮನೆಯ ಮಗಳಿಗೆ ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಾಳೆ. ಮುಂದೆ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂ ಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದ ಹುಡುಗನೊಂದಿಗೆ ಆಕೆಯ ಮದುವೆಯಾಗಿ ತುಂಬು ಕುಟುಂಬದ… Read More ಗೃಹಿಣಿ ಗೃಹಮುಚ್ಯತೆ

ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನೀವೇನೂ ಮೋದಿ ಗೆಲ್ಬೇಕು ಅಂತಿರಾ ಆದ್ರೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡ್ತಾನೆ ಏನ್ ಮಾಡೋದು ? ಸದ್ಯಕ್ಕೆ ಬಹುತೇಕರು ಕೇಳೊ ಪ್ರಶ್ನೆ ಇದು, ಸಣ್ಣದಾಗಿ ಒಂದ್ ರೌಂಡ್ ಪುರಾಣ ಸುತ್ಕೊಂಡ್ ಬರೋಣ, ಕುಂತಿ ಮಾಡಿದ ತಪ್ಪಿಗೆ ಕರ್ಣನ ಜನನವಾಯ್ತು, ಆಮೇಲೆ ಕೀಳು ಜಾತಿಯಲ್ಲಿ ಬೆಳೆದವ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ವಿದ್ಯೆ ಕಲಿಸಲಿಲ್ಲ, ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಕ್ಷತ್ರಿಯರ ಕಟು ವಿರೋಧಿ ಪರಶುರಾಮರ ಬಳಿ ವಿದ್ಯೆ… Read More ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನಿಜಾಥ೯ದಲ್ಲಿ ಮಾನವರಾಗೋಣ

ಆತ್ಮೀಯರೇ, ಚಳಿ ಇಳಿಮುಖವಾಗಿ ನೀಧಾನವಾಫಿ ಬೇಸಿಗೆ ಕಾಲ ಆರಂಭವಾಗಿದೆ. ಪಕ್ಷಿಸಂಕುಲಕ್ಕೆ ಇದು ಕಷ್ಟದ ಕಾಲ. ಬಾಯಾರಿಕೆ ತಣಿಸಿಕೊಳ್ಳಲು ನೀರನ್ನರಸುವ ಹಕ್ಕಿಗಳ ಉಳಿವಿಗಾಗಿ ನಮ್ಮ ಕೈತೋಟದಲ್ಲಿ, ತಾರಸಿಯ ಮೇಲೆ ಅಗಲವಾದ ಅಂಚು ದಪ್ಪಗಿರುವ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಒಂದಿಷ್ಟು ನೀರನ್ನಿಡೋಣ. ಆ ಪಾತ್ರೆಯೊಳಗೆ ಪಕ್ಷಿಗಳು ಕುಳಿತು ನೀರು ಕುಡಿಯಲು ಅನುಕೂಲವಾಗುವ ಹಾಗೆ ಯಾವುದಾದರೂ ಒಂದೆರಡು ಕತ್ತರಿಸಿದ ಗಿಡಗಳ ಕಾಂಡಗಳನ್ನು ಹಾಕಿಡೋಣ. ಸಾಧ್ಯವಾದರೆ ಒಂದೆರಡು ಚಮಚೆ ಕಿರು ಧಾನ್ಯ ಗಳನ್ನೂ ಪಕ್ಕದಲ್ಲೇ ಇನ್ನೊಂದು ತಟ್ಟೆಯಲ್ಲಿಡೋಣ. ನಮ್ಮ ಪರಿಸರ ಸ್ವಚ್ಛ… Read More ನಿಜಾಥ೯ದಲ್ಲಿ ಮಾನವರಾಗೋಣ

ಮೌನವೇ ಪರಿಣಾಮಕಾರಿ ಅಸ್ತ್ರ

ಅಂದೊಂದು ದೊಡ್ಡ ಕಾಡು. ಅಲ್ಲಿ ಅನೇಕ ಬಗೆ ಬಗೆಯ ಗಿಡ ಮರಗಳು ನಾನಾ ರೀತಿಯ ಕಾಡು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು. ಎಲ್ಲಾ ಪ್ರಾಣಿ ಪಕ್ಷಿಗಳು ಸುಖಃದಿಂದ ನೆಮ್ಮದಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವಾದರೂ ಅಗಾಗ ಅವುಗಳಿಗೆ ಪಕ್ಕದ ಊರಿನ ಬೇಟೆಗಾರಿಂದ ಸದಾ ತೊಂದರೆಯಾಗುತ್ತಲೇ ಇತ್ತು. ಕಾಡಿನ ರಾಜ ಇದು ಕಾಡಿನಲ್ಲಿ ಆಗುವ ಸಹಜ ಪ್ರಕ್ರಿಯೆ ಎಂದು ಸದಾ ಸುಮ್ಮನಾಗಿ ಬಿಡುತ್ತಿರಿಂದ ದಿನೇ ದಿನೇ ಬೇಟೆಗಾರರ ಧಾಳಿ ಹೆಚ್ಚುತ್ತಿತ್ತು. ಇದರಿಂದ ಬೇಸತ್ತು ನರಸತ್ತ ರಾಜನನ್ನು ಬದಲಿಸಿ ಭಲಾಡ್ಯ ರಾಜನನ್ನು… Read More ಮೌನವೇ ಪರಿಣಾಮಕಾರಿ ಅಸ್ತ್ರ

ಅವರೇ ಮೇಳ

ರಂಗು ರಂಗಿನ ಶಬ್ಧ ಮತ್ತು ಬೆಳಕಿನ ಸಮ್ಮಿಳನದ ದೀಪಾವಳಿ ಹಬ್ಬ ಮುಗಿದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರನ್ನೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯಲ್ಲಿ ಪ್ರತೀವರ್ಷವೂ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನೆಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯೇನಲ್ಲ.… Read More ಅವರೇ ಮೇಳ

ಕನ್ನಡ ಚಿತ್ರರಂಗದ ಅಂಕಲ್ ಲೋಕನಾಥ್ ಅಜರಾಮರ

ಇಂದು ಕಛೇರಿಗೆ ಬರುತ್ತಿದ್ದಂತೆಯೇ ಮೊದಲಿಗೆ ನೋಡಿದ ಸುದ್ದಿ ರಂಗಭೂಮಿ ಮತ್ತು ಚಲನಚಿತ್ರ ರಂಗದ ಮೇರು ನಟ ಸಿ.ಎಚ್.ಲೋಕನಾಥ್ ಇನ್ನಿಲ್ಲ  ಆ ಸುದ್ದಿ ಓದುತ್ತಿದ್ದಂತೆಯೇ ನನ್ನ ಮನಸ್ಸಿಗೆ ನಮ್ಮ ಮನೆಯವರನ್ನೊಬ್ಬರನ್ನೇ ಕಳೆದುಕೊಂಡಷ್ಟೇ ದುಃಖವಾಯಿತು.  ಕನ್ನಡ ಚಿತ್ರರಂಗದಲ್ಲಿ ಅಂಕಲ್ ಎಂದೇ ಚಿರಪರಿಚಿತರಾಗಿದ್ದ ಲೋಕನಾಥರ ಅಕಾಲಿಕ  ಅಗಲಿಗೆ ಕನ್ನಡ ಚಿತ್ರರಂಗಕ್ಕೆ ತುಂಬಲಾದರ ನಷ್ಟವೇ ಸರಿ. ಅವರನ್ನು ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹನೆಂದರೆ ತಪ್ಪಾಗಲಾರದು. ಡಿಸೆಂಬರ್ ಅಂತ್ಯಕ್ಕೂ ಕನ್ನಡ ಚಿತ್ರರಂಗಕ್ಕೂ ಕೂಡಿ ಬರುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಯಿತು. ಡಿ. 29 ಕಂಚಿನ… Read More ಕನ್ನಡ ಚಿತ್ರರಂಗದ ಅಂಕಲ್ ಲೋಕನಾಥ್ ಅಜರಾಮರ