ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ವಯಸ್ಸು 80+ ಎಲ್ಲಾ ರೀತಿಯ ರಾಜಕೀಯ ಅಧಿಕಾರವನ್ನೂ ಸವಿದ ನಂತರ, ಈಗ ಸ್ವತಂತ್ರವಾಗಿ ನಡೆಯಲಾಗದೇ, ಸ್ಪಷ್ಟವಾಗಿ ಮಾತನಾಡಲಾಗದೇ, ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತು ಕೊಳ್ಳುವವರೆಲ್ಲಾ ಇನ್ನೂ ಅಧಿಕಾರದ ಆಸೆಯಿಂದಾಗಿ ಸಕ್ರೀಯ ಚುನಾವಣಾ ರಾಜಕಾರಣ ಮಾಡುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದಕ್ಕೇ ಒದ್ದಾಡುತ್ತಿರುವವರಿಗೆ, ಐದು ಬಾರಿ ಜನಪ್ರಿಯ ಶಾಸಕರಾಗಿಯೂ ಮಂತ್ರಿಗಿರಿಗೆ ಲಾಭಿಯನ್ನು ನಡೆಸದೇ ತಮ್ಮ 72ನೇ ವಯಸ್ಸಿನಲ್ಲಿಯೇ ಸ್ವಯಂಪ್ರೇರಿತರಾಗಿ ಸಕ್ರೀಯ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವ ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿರ್ಧಾರ ಮೇಲ್ಪಂಕ್ತಿ ಆಗಬೇಕು ಅಲ್ವೇ?… Read More ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ಸಹಸ್ರ ದಳ ಪದ್ಮ

ಸಾಮಾನ್ಯವಾಗಿ ತಾವರೆ, ನೈದಿಲೆ ಹೂವುಗಳು ಸುಮಾರು 18 ದಳಗಳನ್ನು ಹೊಂದಿದ್ದು ಕೆರೆ ಕಟ್ಟೆಗಳಲ್ಲಿ ಕೆಸರಿನಲ್ಲಿ ಅರಳುವ ಈ ಹೂವು ಭಗವಾನ್ ವಿಷ್ಣು ಮತ್ತು ಆತನ ಪತ್ನಿ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಹೂವಾಗಿದೆ. ಆದರೆ, 20 ಪದರಗಳಿರುವ, ಪ್ರತೀ ಪದರದಲ್ಲೂ ಸರಿ ಸುಮಾರು 50 ದಳಗಳನ್ನು ಹೊಂದಿರುವ ಒಟ್ಟು 1,000 ದಳಗಳನ್ನು ಹೊಂದಿರುವ ವಿಶೇಷವಾದ ಅಷ್ಟೇ ವೈಶಿಷ್ಟವಾದ ಹಾಗೂ ಅಪರೂಪದ ಕಮಲದ ಹೂವನ್ನು ಸಹಸ್ರದಳ ಪದ್ಮ ಎಂದು ಕರೆಯಲಾಗುತ್ತದೆ. ಬಹಳ ಅಪರೂಪದ ಈ ಹೂವು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು.… Read More ಸಹಸ್ರ ದಳ ಪದ್ಮ

ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು… Read More ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಸಂತೋಷ್ ಬಿ ಎಲ್, ಸಂಘಟನಾ ಚತುರ

ನೆನ್ನೆ ಸಂಜೆ ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಸಭೆಯನ್ನು ಉದ್ದೇಶಿಸಿ ಮೋದಿಯವರ ಕಳೆದ ಆರು ವರ್ಷಗಳ ಆಡಳಿತ ಅವರ ವಿದೇಶಾಂಗ ನೀತಿಗಳು ಮತ್ತು ಇತ್ತೀಚಿನ ಪಾಕ್, ಜೀನಾ ಆಕ್ರಮಣದ ಕುರಿತಂತೆ ಮೋದಿಯವರ ನಿರ್ಧಾರಗಳು,ಇಂತಹ ವಿಪತ್ತಿನಲ್ಲಿ ದೇಶದ ಪರವಾಗಿ ನಿಲ್ಲದೇ ಶತ್ರುಗಳಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಹಿತಶತ್ರುಗಳನ್ನು ಎಳೆ ಎಳೆಯಾಗಿ ಜಗ್ಗಾಡುತ್ತಾ ಹಿಗ್ಗಾ ಮುಗ್ಗಿ ನಯವಾಗಿಯೇ ಜಾಡಿಸಿ ಮಾತನಾಡುತ್ತಿದ್ದದ್ದನು ಮನೆಯಲ್ಲಿಯೇ ಕುಳಿತು online ಮೂಲಕ ನೋಡುತ್ತಿದ್ದಾಗ ಮನಸ್ಸಿನಲ್ಲಿ… Read More ಸಂತೋಷ್ ಬಿ ಎಲ್, ಸಂಘಟನಾ ಚತುರ