ಸಹಸ್ರ ದಳ ಪದ್ಮ

t1ಸಾಮಾನ್ಯವಾಗಿ ತಾವರೆ, ನೈದಿಲೆ ಹೂವುಗಳು ಸುಮಾರು 18 ದಳಗಳನ್ನು ಹೊಂದಿದ್ದು ಕೆರೆ ಕಟ್ಟೆಗಳಲ್ಲಿ ಕೆಸರಿನಲ್ಲಿ ಅರಳುವ ಈ ಹೂವು ಭಗವಾನ್ ವಿಷ್ಣು ಮತ್ತು ಆತನ ಪತ್ನಿ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಹೂವಾಗಿದೆ. ಆದರೆ, 20 ಪದರಗಳಿರುವ, ಪ್ರತೀ ಪದರದಲ್ಲೂ ಸರಿ ಸುಮಾರು 50 ದಳಗಳನ್ನು ಹೊಂದಿರುವ ಒಟ್ಟು 1,000 ದಳಗಳನ್ನು ಹೊಂದಿರುವ ವಿಶೇಷವಾದ ಅಷ್ಟೇ ವೈಶಿಷ್ಟವಾದ ಹಾಗೂ ಅಪರೂಪದ ಕಮಲದ ಹೂವನ್ನು ಸಹಸ್ರದಳ ಪದ್ಮ ಎಂದು ಕರೆಯಲಾಗುತ್ತದೆ. ಬಹಳ ಅಪರೂಪದ ಈ ಹೂವು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು. ವಿಶೇಷ ಸಂಧರ್ಭದ ಪೂಜೆಗಳಲ್ಲಿ ಇದನ್ನು ಬಳಸುವುದಲ್ಲದೇ, ಈ ಹೂವಿನ ಪ್ರತೀ ದಳವೂ ಔಷದೀಯ ಗುಣಗಳನ್ನು ಹೊಂದಿರುವ ಕಾರಣ ಈ ಹೂವನ್ನು ಹೊರಗೆ ಬಿಸಾಡುವುದಾಗಲೀ ಅಥವಾ ಕಾಲಿನಲ್ಲಿ ತುಳಿಯುವುದು ನಿಷಿದ್ಧವಾಗಿದೆ. ಒಮ್ಮೆ ಅರಳಿದ ಈ ಸಹಸ್ರದಳ ಪದ್ಮ ಸುಮಾರು 2 ದಿನಗಳ ಕಾಲ ಅತ್ಯಂತ ಪ್ರಪುಲ್ಲಕರವಾಗಿರುತ್ತದೆ.

brahma1ಪೌರಾಣಿಕ ಹಿನ್ನಲೆಯ ಪ್ರಕಾರ ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರ ಚಾಚಿದಾಗ, ಅದರ ಮೇಲೆ ‘ಕಮಲಭವ‘ ಅಂದರೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ. ಸಾವಿರ ಸುವರ್ಣದಳಗಳುಳ್ಳ ಈ ಕಮಲ, ವಿಶ್ವ ವಿಸ್ತರಿಸಿದಂತೆ ತಾನೂ ಸಹಾ ಬೆಳೆಯುತ್ತಾ ಹೋಗುತ್ತದೆ. ಅದರ ದಳಗಳಿಂದ ಪರ್ವತಗಳು ಉದ್ಭವಿಸುತ್ತವೆ, ನೀರು ಪ್ರವಹಿಸುತ್ತದೆ. ದಳದ ಮುಂಭಾಗದಲ್ಲಿ ದೇವತೆಗಳ ಚಿತ್ರ, ದಳದ ಹಿಂಭಾಗದಲ್ಲಿ ರಾಕ್ಷಸರ ಮತ್ತು ಸರ್ಪಗಳ ಚಿತ್ರವಿದೆ. ಪ್ರತಿಯೊಂದು ಕಲ್ಪ ಅಥವಾ ದಿನ ಮುಗಿದ ನಂತರ, ವಿಷ್ಣುವಿನ ನಾಭಿಯ ಕಮಲದ ಮೇಲೆ ಬ್ರಹ್ಮ ಮರು ಹುಟ್ಟು ಪಡೆಯುತ್ತಾನೆಂದು ‘ಪದ್ಮ ಪುರಾಣ’ದಲ್ಲಿ ಹೇಳಲಾಗಿದೆ.

mathanaಹಾಲ್ಗಡಲನ್ನು ಮಥಿಸಿದಾಗ ಮೊದಲು ಬಂದ ವಸ್ತುಗಳಲ್ಲಿ ಇದು ಒಂದು. ಕಮಲದೊಂದಿಗೆ ಹೆಣೆದುಕೊಂಡ ಲಿಂಗವನ್ನು ಶಿವ ತನ್ನ ದೇವತೆಯಾದ ಶಕ್ತಿಗೆ ಇದನ್ನು ಕೊಡುತ್ತಾನೆ. ಕಾಳಿ/ಪಾರ್ವತಿಯಾದ ಅವಳು ನಿರಂತರ ಪೀಳಿಗೆಯ ಸಂಕೇತವಾದ ಕಮಲವನ್ನು ಒಂದು ಕೈಯಲ್ಲಿ ಹಿಡಿದಿದ್ದಾಳೆ. ಎಲ್ಲೆಲ್ಲೂ ನೀರೇ ತುಂಬಿದ್ದ ಈ ವಿಶ್ವದ ಮೇಲೆ ಒಂದು ಕಮಲದ ಎಳೆಯನ್ನು ಪ್ರಜಾಪತಿ ಕಂಡನೆಂದೂ ಅವನೇ ಸೃಷ್ಟಿಕರ್ತನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಅನೇಕ ದೇವರುಗಳು ತಮ್ಮ ಕೈಯಲ್ಲಿ ಕಮಲವನ್ನು ಹಿಡಿಯುವುದು ವೈಶಿಷ್ಟ್ಯವಾಗಿದೆ. ಭಗವಾನ್ ವಿಷ್ಣುವು ಸಹಾ ತನ್ನ ನಾಲ್ಕು ಕೈಗಳ ಪೈಕಿ ಒಂದರದಲ್ಲಿ ಕಮಲದ ಹೂವನ್ನು ಹಿಡಿದಿದ್ದಾನೆ. ಕಮಲವು ಕೇವಲ ಹಿಂದೂ ಧರ್ಮವಲ್ಲದೇ ಪ್ರಾಚೀನ ಜೈನ ಶಿಲ್ಪಗಳಲ್ಲಿಯೂ ಇದರ ಉಲ್ಲೇಖವಿದ್ದು ಅದು ಆರನೇ ಜಿನನ ಚಿಹ್ನೆಯಾಗಿದೆ. ಅವಲೋಕಿತನನ್ನು ‘ಪದ್ಮಪಾಣಿ’ ಎಂದು ಕರೆಯಲಾಗಿದೆ. ಶುಭ ಶಕುನದ ಎಂಟು ಬೌದ್ದ ಚಿಹ್ನೆಗಳಲ್ಲಿ ಕಮಲವೂ ಒಂದಾಗಿದೆ.

lalita3ಅದೇ ರೀತಿ ಲಲಿತಾ ಸಹಸ್ರನಾಮದ 109ನೇ ಶ್ಲೋಕ, ಶ್ರೀ ಲಲಿತಾಂಬಿಕೆಯ 528 ನೇ ನಾಮದಲ್ಲಿ ತಾಯಿ ಲಲಿತಾಂಬಿಕೆಯನ್ನು ಹೀಗೆ ವರ್ಣಿಸಲಾಗಿದೆ
ಸಹಸ್ರದಳ ಪದ್ಮಸ್ಥಾ, ಸರ್ವವರ್ಣೋಪ ಶೋಭಿತಾ |
ಸರ್ವಾಯುಧಧರಾ, ಶುಕ್ಲ ಸಂಸ್ಥಿತಾ, ಸರ್ವತೋಮುಖೀ ||

ಇನ್ನು ಕಮಲದ ಹೂವಿನ ಬಗೆಗೆ ಅನೇಕ ನಂಬಿಕೆಗಳಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೀಗಿದೆ.

  • ಗ್ರಾಮೀಣ ಬುಡಕಟ್ಟುಗಳಲ್ಲಿ ಕೆಟ್ಟ ಚೇತನಗಳಿಂದ ಒದಗುವ ದುರಾದೃಷ್ಟವನ್ನು ಕಮಲದ ಹೂ ನಿವಾರಿಸುತ್ತದೆ.
  • ಕಮಲದ ಹೂವಿನ ಪ್ರತಿ ಭಾಗಗಳನ್ನು ಔಷಧವನ್ನಾಗಿ ಬಳಸಬಹುದು.
  • ಶುಭ ನುಡಿಯುವಾಗ, ಬೇರೆಯವರಿಗೆ ಹರಸುವಾಗ ಕಮಲದ ಹೂ ಕೊಡುವುದು ವಾಡಿಕೆ.
  • ಕಮಲದ ಹೂವನ್ನು ಮುಡಿದರೆ ಶುಭ, ತಿಂದರೆ ಆರೋಗ್ಯಕಾರಕ.
  • ವಿರಹಕ್ಕೆ ಇದು ಪರಿಹಾರ; ಸತ್ತವರ ಆಹಾರವನ್ನು ಕಮಲದ ಹೂವಿನ ಹಾಳೆಯಲ್ಲಿ ಕಟ್ಟಿಡುತ್ತಾರೆ.
  • ದೀಪದ ಅಂಗಡಿಯವರಿಗೆ ಕಮಲದ ಹೂ ಶುಭದಾಯಕ ಚಿಹ್ನೆ.
  • ಕನಸಿನಲ್ಲಿ ಕಮಲದ ಹೂ ಕಂಡರೆ ಸಂತಾನ ಪ್ರಾಪ್ತಿಯಾಗುತ್ತದೆ.
  • ದುರ್ವಾಸನೆಯ ಕೆಸರಿನಲ್ಲೇ ಹುಟ್ಟಿದರೂ ಒಂದು ಚೂರು ಕೆಸರನ್ನು ತಮ್ಮ ಮೈಮೇಲೆ ಹರಡಿಕೊಳ್ಳದೇ ಅತ್ಯಂತ ಸುವಾಸನೆ ಭರಿತವಾಗಿರುವುದರಿಂದ ಕಮಲದ ಹೂವನ್ನು ಸ್ವಚ್ಚತೆ ಮತ್ತು ಪರಿಶುದ್ಧತೆಯ ಪ್ರತೀಕ ಎನ್ನಲಾಗುತ್ತದೆ.

padma1ಈ ರೀತಿಯಾಗಿ ಸಾಧಾರಣ ಕಮಲವೇ ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಪ್ರವಿತ್ರವಾದ ಸ್ಥಾನವನ್ನು ಪಡೆದಿದ್ದರೆ ಇನ್ನು ಸಹಸ್ರದಳ ಪದ್ಮ ಇನ್ನೆಷ್ಟು ಪವಿತ್ರವಾಗಿರಬಹುದು ಅಲ್ವೇ? ಈಗಾಗಲೇ ತಿಳಿಸಿದಂತೆ ಈ ಆಪರೂಪದ ಹೂವಿನ ಕುರಿತಾಗಿ ಲಲಿತಾ ಸಹಸ್ರನಾಮದಲ್ಲಿಯೂ ಉಲ್ಲೇಖವಿರುವ ಕಾರಣ ಈ ಹೂವನ್ನು ನೋಡುವುದೇ ಒಂದು ಪುಣ್ಯ ಎಂದೇ ಭಾವಿಸಲಾಗಿದ್ದು ಅಂತಹ ಪುಣ್ಯದ ಫಲ ನಮಗೆಲ್ಲರಿಗೂ ಲಭ್ಯವಾಗಿರುವುದು ಪೂರ್ವಜನ್ಮದ ಸುಕೃತವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s