ಛತ್ ಪೂಜೆ

ಸಾಮಾನ್ಯವಾಗಿ ಉತ್ತರ ಭಾರತ, ಈಶಾನ್ಯಭಾರತ ಮತ್ತು ನೇಪಾಳದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ಛತ್ ಪೂಜೆ ಇತ್ತೀಚೆಗೆ ದೇಶಾದ್ಯಂತ ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವಾಗ ಈ ಛತ್ ಪೂಜೆಯ ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯ ಸವಿವರಗಳು ಇದೋ ನಿಮಗಾಗಿ… Read More ಛತ್ ಪೂಜೆ

ಕರ್ಣನೇ ದಾನ ವೀರ ಶೂರ ಏಕೆ?

ದಾನ ಎಂಬ ಪದ ಕೇಳಿದ ತಕ್ಷಣವೇ, ದಾನ ವೀರ ಶೂರ ಕರ್ಣನ ಹೆಸರು ಏಕೆ ಪ್ರಸ್ತಾಪವಾಗುತ್ತದೆ? ಎಂಬ ಬಹುತೇಕರ ಜಿಜ್ಞಾಸೆಗೆ ಭಗವಾನ್ ಶ್ರೀಕೃಷ್ಣನೇ ಈ ಪ್ರಸಂಗದ ಮೂಲಕ ಉತ್ತರ ನೀಡಿರುವುದು ಬಹಳ ಸುಂದರವಾಗಿದೆ ಮತ್ತು ಪ್ರೇರಣಾದಾಯಕವಾಗಿದೆ. … Read More ಕರ್ಣನೇ ದಾನ ವೀರ ಶೂರ ಏಕೆ?

ಗೀತಾ ಜಯಂತಿ

ಅದು ದ್ವಾಪರಯುಗ. ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಭಗವಾನ್ ವಿಷ್ಣುವು ಶ್ರೀ ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಅವತರಿಸುತ್ತಾನೆ. ಆತನ ಬಂಧುಗಳೇ ಆಗಿದ್ದ ಪಾಂಡವರನ್ನು ಅವರ ದೊಡ್ಡಪ್ಪನ ಮಗನೇ ಆಗಿದ್ದ ಧುರ್ಯೋಧನ ತನ್ನ ಮಾವ ಶಕುನಿಯ ಕುತ್ರಂತ್ರದಿಂದ ಪಗಡೆಯ ಆಟದಲ್ಲಿ ಸೋಲಿಸಿ ಅವರ ರಾಜ್ಯವನ್ನು ಕಿತ್ತುಕೊಂಡು  12 ವರ್ಷಗಳ ಕಾಲ ವನವಾಸ ಮತ್ತು 1 ವರ್ಷಗಳ ಕಾಲ ಅಜ್ಞಾನವಾಸವನ್ನು ಯಶಸ್ವಿಯಾಗಿ ಪೂರೈಸಿದ ನಂತರವೇ ರಾಜ್ಯವನ್ನು ಹಿಂದಿರುಗಿಸುವುದಾಗಿ ವಾಗ್ಧಾನ ಮಾಡಿರುತ್ತಾನೆ. ಒಪ್ಪಂದಂತೆ ವನವಾಸ ಮತ್ತು  ಅಜ್ಞಾತವಾಸವನ್ನು ಯಶಸ್ವಿಯಾಗಿ… Read More ಗೀತಾ ಜಯಂತಿ

ಪಿತೃಪಕ್ಷ

ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ದೇಶಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಪಿತೃ ಪಕ್ಷದ ಔಚಿತ್ಯ, ಆಚರಣೆಗಳು ಮತ್ತು ಜನರ ನಂಬಿಕೆಗಳ ಕುರಿತಾದ ಲೇಖನ ಇದೋ ನಿಮಗಾಗಿ… Read More ಪಿತೃಪಕ್ಷ

ನಿರೀಕ್ಷೆ

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಉತ್ತಮ ಗುರು ಶಿಷ್ಯರು ಅಥವಾ ಪರಮಾಪ್ತ ಸ್ನೇಹಿತರು ಯಾರು? ಎಂದು ಕೇಳಿದರೆ ಎಲ್ಲರೂ ಥಟ್ ಅಂತಾ ಹೇಳುವುದು ಕೃಷ್ಣಾ ಮತ್ತು ಅರ್ಜುನ ಜೋಡಿಯನ್ನೇ. ಅದೇ ರೀತಿ ದಾನ ಶೂರ ಯಾರು? ಎಂದು ಕೇಳಿದ ತಕ್ಷಣ ಕರ್ಣನ ಹೆಸರೇ ಕಣ್ಣ ಮುಂದೆ ಬರುತ್ತದೆ. ಅದೊಮ್ಮೆ ಕೃಷ್ಣ ಮತ್ತು ಅರ್ಜುನ ಅರ್ಜುನರಿಬ್ಬರು  ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ,ಕರ್ಣನನ್ನೇಕೆ ಅಪ್ರತಿಮ ದಾನಿಯೆಂದು ಏಕೆ ಪರಿಗಣಿಸಬೇಕು?  ನಮ್ಮ ಪಾಂಡವರಲ್ಲಿ ಅಂತಹವರಿಲ್ಲವೇ? ಎಂದು ಪರೋಕ್ಷವಾಗಿ ತನ್ನನ್ನೇಕೆ ಪರಿಗಣಿಸುತ್ತಿಲ್ಲ ಎಂದು ಕೇಳುತ್ತಾನೆ. ಅರ್ಜುನ… Read More ನಿರೀಕ್ಷೆ

ನಿಮಗಿದು ಗೊತ್ತೆ?

ನಮ್ಮ ಭಾರತ ದೇಶದಲ್ಲಿ 545 ಲೋಕಸಭಾ ಸದಸ್ಯರುಗಳು 245 ರಾಜ್ಯಸಭಾ ಸಂಸದರು 4120 ಶಾಸಕರು ಹೀಗೇ ಒಟ್ಟಾರೆಯಾಗಿ 4910 ಸಾರ್ವಜನಿಕ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿಯೇ ಆಯ್ಕೆಯಾದ ಈ ಜನಪ್ರತಿನಿಧಿಗಳು ಕಾಲಕಾಲಕ್ಕೆ ಸರ್ಕಾರದಿಂದ ಮಾಸಿಕ ಸಂಬಳ, ಆ ಭತ್ಯೆ, ಈ ಭತ್ಯೆ ಎಂದು ಲಕ್ಷಾಂತರ ರೂಪಾಯಿಗಳನ್ನು ಜನರ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣದಿಂದ ಪಡೆಯುತ್ತಿದ್ದಾರೆ. ನೆರೆ ಬರಲಿ ಬರ ಬರಲಿ, ಸೋಂಕುಗಳ ಹಾವಳಿ ಇರಲಿ ಇವರ ಭತ್ಯೆಗಳಿಗೆ ಮತ್ತು ಸೌಲಭ್ಯಗಳಿಗೆ ಯಾವುದೇ ಕುಂದು ಕೊರತೆಯಂತೂ… Read More ನಿಮಗಿದು ಗೊತ್ತೆ?