ಕಾಂತಾರ ಒಂದು ದಂತಕಥೆ

ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ, ಜಮೀನ್ದಾರರ ಕಾಡು ಒತ್ತುವರಿ, ಅರಣ್ಯಾಧಿಕಾರಿಗಳ ಕಿರಿಕಿರಿಯ ಜೊತೆಗೆ ಕರಾವಳಿಯ ಸಂಸ್ಕೃತಿ, ಕಂಬಳದ ಸೊಬಗು, ಭೂತಕೋಲದ ಬಗ್ಗೆ ಅಲ್ಲಿಯ ಜನರ ನಂಬಿಕೆಯನ್ನು ಅಧ್ಭುತವಾಗಿ ತೆರೆ ಮೇಲೆ ತರಲಾಗಿರುವ ಕಾಂತಾರ ಚಿತ್ರದ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ.… Read More ಕಾಂತಾರ ಒಂದು ದಂತಕಥೆ

ಕೋಯಾ-ಪಾಯ

ಅರೇ ಇದೇನಿದು! ಇದು ಯಾವ ಭಾಷೆಯ ಶೀರ್ಷಿಕೆ? ಅಂತಾ ಯೋಚಿಸ್ತಿದ್ದೀರಾ? ಇದು ಸರಳ ಸಂಸ್ಕೃತ ಭಾಷೆಯ ಪದ. ಕೋಯ ಎಂದರೆ ಕಳೆದು ಹೋದದ್ದು ಮತ್ತು ಪಾಯ ಎಂದರೆ ಸಿಕ್ಕಿದ್ದು ಅಂದರೆ ಕಳೆದುಕೊಂಡದ್ದು ಸಿಕ್ಕಿದೆ ಎಂದರ್ಧ. ದೇವರ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆಯೇ ಮಾತನಾಡಿ ದೇವಾಲಯದಿಂದ ಹೊರ ಬಂದ ಕೂಡಲೇ ದೇವರ ಶಕ್ತಿಯ (ಪವಾಡ) ಅನುಭವ ಪಡೆದ ಸರಳ ಸುಂದರ ಪ್ರಸಂಗ ಇದೋ ನಿಮಗಾಗಿ. ಪ್ರತೀ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ನಮ್ಮ ವಿದ್ಯಾರಣ್ಯಪುರದ ಸನಾತನ ವೇದ ಪಾಠಶಾಲೆಯ… Read More ಕೋಯಾ-ಪಾಯ

ಸಹೃದಯೀ, ಅಜಾತಶತ್ರು, ಶ್ರೀ ಕೆ. ಎನ್. ಸತ್ಯನಾರಾಯಣ ರಾವ್

ನಾನು ಚಿಕ್ಕವನಿದ್ದಾಗ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ || ಎಂಬ ಸುಭಾಷಿತವನ್ನು ಸಂಘದ ಶಾಖೆಯಲ್ಲಿ ಕಲಿಸಿಕೊಟ್ಟಿದ್ದರು. ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿ, ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರ ಮಾಡುವುದಕ್ಕಾಗಿಯೇ ಎನ್ನುವ ಅರ್ಥವಿರುವ ಆ ಶ್ಲೋಕಕ್ಕೆ ಅನ್ವರ್ಥವಾಗಿಯೇ ತಮ್ಮ ಇಡೀ ಜೀವಮಾನವನ್ನು ಸವೆಸಿದ ಹಿರಿಯ ಜೀವಿಯೊಬ್ಬರ… Read More ಸಹೃದಯೀ, ಅಜಾತಶತ್ರು, ಶ್ರೀ ಕೆ. ಎನ್. ಸತ್ಯನಾರಾಯಣ ರಾವ್

ದೇವರು ಎಷ್ಟು ದೊಡ್ಡವರು?

ಅದೊಂದು ಸಂಪ್ರದಾಯಸ್ಥ ಕುಟುಂಬ. ಅದೊಂದು ದಿನ ಅ ಮನೆಯ ಸಣ್ಣ ವಯಸ್ಸಿನ ಹುಡುಗನೊಬ್ಬ ತನ್ನ ತಂದೆಯನ್ನುದ್ದೇಶಿಸಿ, ಅಪ್ಪಾ, ನಾವು ನಂಬುವ ದೇವರು ದೊಡ್ಡವರಾಗಿರುತ್ತಾರೆ? ಅವರ ಗಾತ್ರವೇನು? ಎಂದು ಮುಗ್ಧತೆಯಿಂದ ಕೇಳುತ್ತಾನೆ. ಮಗನ ಪ್ರಶ್ನೆಯಿಂದ ಕೊಂಚ ಆಶ್ವರ್ಯ ಚಕಿತನಾದ ತಂದೆ ಒಂದು ಕ್ಶಣ ಮೌನವಾಗಿ ಯೋಚಿಸಿ ಇದಕ್ಕೆ ಹೇಗೆ ಉತ್ತರಿಸುವುದು ಎಂದು ನೋಡುತ್ತಿರುವಾಗಲೇ ಆಗಸದಲ್ಲಿ ವಿಮಾನವೊಂದು ಹೋಗುತ್ತಿರುತ್ತದೆ. ಕೂಡಲೇ ಮಗೂ, ಆ ವಿಮಾನದ ಗಾತ್ರ ಎಷ್ಟು ಎಂದು ಹೇಳಬಲ್ಲೆಯಾ ಎಂದು ಪ್ರಶ್ನಿಸುತ್ತಾನೆ. ಆಗಸದತ್ತ ದಿಟ್ಟಿಸಿ ವಿಮಾನವನ್ನು ನೋಡಿದ ಹುಡುಗ,… Read More ದೇವರು ಎಷ್ಟು ದೊಡ್ಡವರು?

ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?

ಇವತ್ತು ಬೆಳ್ಳಂಬೆಳಿಗ್ಗೆ ಎದ್ದಕೂಡಲೇ ಆತ್ಮೀಯ ಮಿತ್ರರಾದ ಶ್ರೀ ಅಜಯ್ ಶರ್ಮಾರವರು ದೇವಾಲಯದ ಜೀರ್ಣೋದ್ಧಾರದ ನೆಪದಲ್ಲಿ ಪ್ರಕೃತಿಯ ಮೇಲೆ ಎಗ್ಗಿಲ್ಲದೇ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆ ತೀವ್ರವಾಗಿ ನೊಂದು ಬರೆದ ಲೇಖನ ಓದಿ ನಿಜಕ್ಕೂ ಮನಸ್ಸಿಗೆ ಬಹಳ ಖೇದವುಂಟಾಗಿ ನಮ್ಮ ಪೂರ್ವಜರು ದೇವಾಲಯಗಳನ್ನು ಏಕೆ ಕಟ್ಟುತ್ತಿದ್ದರು? ಮತ್ತು ನಾವುಗಳು ದೇವಾಲಯಕ್ಕೇ ಹೋಗಿ ದೇವರ ದರ್ಶನವನ್ನೇಕೆ ಪಡೆಯಬೇಕು? ಎಂಬದರ ಕುರಿತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವವನ್ನು ಕೊಟ್ಟಿರುವ ಕಾರಣ… Read More ದೇವಾಲಯಗಳು ಶ್ರದ್ಧಾ ಕೇಂದ್ರಗಳೋ ಇಲ್ಲವೇ ಪ್ರವಾಸೀ ತಾಣಗಳೋ?