ಭಾರತದಲ್ಲಿ ಮುಸಲ್ಮಾನರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ?

ನೆನ್ನೆ ತಾನೇ 15 ನೇ ರಾಷ್ಟ್ರಪತಿಗಳ ಆಯ್ಕೆಗಾಗಿ ಚುನಾವಣೆ ಮುಗಿದಿದ್ದು ಅದರ ಜೊತೆಯಲ್ಲೇ ಉಪರಾಷ್ಟ್ರಪತಿಗಳ ಚುನಾವಣೆಯ ಪ್ರಕ್ರಿಯೆಗಳೂ ಆರಂಭವಾಗಿರುವಾಗ, ಸ್ವಘೋಷಿತ ಬುದ್ಧಿಜೀವಿ ಚಲನಚಿತ್ರ ನಿರ್ಮಾಪಕ, ಮತ್ತು ಮೂಲತಃ ಹಿರಿಯ ಪತ್ರಕರ್ತರಾದ ಶ್ರೀ ಪ್ರೀತೀಶ್ ನಂದಿಯವರು. ಭಾರತದಲ್ಲಿ ಮುಸ್ಲಿಮ್ಮರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವ ಮೂಲಕ ಈ ದೇಶದ ಸಾಂವಿಧಾನಿಕ ಹುದ್ದೆಗೂ ಧರ್ಮವನ್ನು ತಳುಕು ಹಾಕಿ ಒಂದು ರೀತಿಯ ವಿವಾದ ಸೃಷ್ಟಿಸಲು ಮುಂದಾಗಿರುವುದು ನಿಜಕ್ಕೂ ಹೇಯಕರವಾಗಿದೆ. ದೇಶದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ,… Read More ಭಾರತದಲ್ಲಿ ಮುಸಲ್ಮಾನರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ?

ಪತ್ರಿಕಾ ಧರ್ಮ

ಯಾವುದೇ ಕಾರ್ಯ ಅಥವಾ ಕಾರ್ಯಕ್ರಮವನ್ನು ನಡೆಸಿದ ನಂತರ ಅದರ ಫಲವನ್ನು ಯಾರು ಯಾರು ಅನುಭವಿಸಬಹುದು? ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಸಂಸ್ಕೃತ ಸುಭಾಷಿತದಲ್ಲಿ ಉಲ್ಲೇಖಿಸಿಲಾಗಿದೆ. ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ | ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ || ಯಾವುದೇ ಒಳ್ಳೆಯ ಕೆಲಸವೇ ಇರಲಿ ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಈ ನಾಲ್ಕೂ ಜನರೂ… Read More ಪತ್ರಿಕಾ ಧರ್ಮ

ಪದ್ಮ ಪ್ರಶಸ್ತಿಗೆ ಅರ್ಹತೆ ಏನು?

ಪದ್ಮ ಪ್ರಶಸ್ತಿಗಳು ಗಣರಾಜ್ಯೋತ್ಸವದ ಮುನ್ನಾದಿನದಂದು ವಾರ್ಷಿಕವಾಗಿ ಘೋಷಿಸಲ್ಪಡುವ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆ) ಮತ್ತು ಪದ್ಮಶ್ರೀ (ವಿಶಿಷ್ಟ ಸೇವೆ). ಸಾರ್ವಜನಿಕ ಸೇವೆಯ ಅಂಶ ಒಳಗೊಂಡಿರುವ ಎಲ್ಲಾ ಚಟುವಟಿಕೆಗಳು ಅಥವಾ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 1954 ರಲ್ಲಿ ಭಾರತ ರತ್ನ ಮತ್ತು ಪದ್ಮವಿಭೂಷಣ ಎಂಬ ಎರಡು ನಾಗರಿಕ ಪ್ರಶಸ್ತಿಗಳನ್ನು ನೀಡಲು ಆರಂಭಿಸಿ, ನಂತರ… Read More ಪದ್ಮ ಪ್ರಶಸ್ತಿಗೆ ಅರ್ಹತೆ ಏನು?

ವಿರೋಧ ಪಕ್ಷಗಳು

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹುಮತ ಪಡೆದವರು ಆಡಳಿತ ನಡೆಸುವ ಅಥಿಕಾರ ಪಡೆದರೆ, . ಬಹುಮತ ಪಡೆಯದವರು ವಿರೋಧ ಪಕ್ಷವಾಗುತ್ತಾರೆ.  ದೇಶದ ಹಿತದೃಷ್ಟಿಯಿಂದ ದೇಶದ ಆಗು ಹೋಗುಗಳ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಆಡಳಿತ ಪಕ್ಷದಷ್ಟೇ ಜವಾಬ್ಧಾರಿ ವಿರೋಧಪಕ್ಷಕ್ಕೂ ಇರುತ್ತದೆ. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳನ್ನು ಕಾವಲು ನಾಯಿಗಳಿಗೆ ಹೋಲಿಸಲಾಗುತ್ತದೆ,  ವಿರೋಧ ಪಕ್ಷ ಎಂದ ಮಾತ್ರಕ್ಕೆ ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳನ್ನೂ ವಿರೋಧಿಸಲೇ ಬೇಕೆಂಬ ನಿಯಮವೇನಿಲ್ಲ. ವಿರೋಧ ಪಕ್ಷವು ರಚನಾತ್ಮಕವಾಗಿ ಕಾರ್ಯನಿಭಾಯಿಸುವ ಮೂಲಕ ಆಡಳಿತ ಪಕ್ಷ ದೇಶವನ್ನು ಸರಿಯಾದ… Read More ವಿರೋಧ ಪಕ್ಷಗಳು

ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ನಮ್ಮ ದೇಶದಲ್ಲಿ ಅತ್ಯಂತ ಹಿಂದುಳಿದ ಕೆಲವೇ ಕೆಲವೂ ರಾಜ್ಯಗಳಲ್ಲಿ ಒರಿಸ್ಸಾ ರಾಜ್ಯವೂ ಒಂದು. ಇಂದೂ ಸಹ ದೇಶಾದ್ಯಂತ ಅದರಲ್ಲೂ ಬೆಂಗಳೂರಿನ ಅನೇಕ ಸಾಪ್ಘ್ವೇರ್ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್ ಗಳಲ್ಲಿ ಹೆಚ್ಚಿನವರು ಒರಿಸ್ಸಾದವರೇ ಆಗಿರುತ್ತಾರೆ ತಮ್ಮ SSLC ಅಥವಾ PUC ಎಲ್ಲೋ ಕೆಲವರು Degree ಮುಗಿಸಿ ತಕ್ಕ ಮಟ್ಟಿಗಿನ English ಕಲಿತರೆಂದರೆ ಅಲ್ಲಿಂದ ಬೆಂಗಳೂರು, ಹೈದ್ರಾರಾಬಾದ್ ಇಲ್ಲವೇ ಕಲ್ಕತ್ತಾದ ಕಡೆ ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕ್ರಮವಾಗಿ 2004, 2009, 2014 ಮತ್ತು 2019 ರ ಅಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ… Read More ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ