ನೆನ್ನೆ ತಾನೇ 15 ನೇ ರಾಷ್ಟ್ರಪತಿಗಳ ಆಯ್ಕೆಗಾಗಿ ಚುನಾವಣೆ ಮುಗಿದಿದ್ದು ಅದರ ಜೊತೆಯಲ್ಲೇ ಉಪರಾಷ್ಟ್ರಪತಿಗಳ ಚುನಾವಣೆಯ ಪ್ರಕ್ರಿಯೆಗಳೂ ಆರಂಭವಾಗಿರುವಾಗ, ಸ್ವಘೋಷಿತ ಬುದ್ಧಿಜೀವಿ ಚಲನಚಿತ್ರ ನಿರ್ಮಾಪಕ, ಮತ್ತು ಮೂಲತಃ ಹಿರಿಯ ಪತ್ರಕರ್ತರಾದ ಶ್ರೀ ಪ್ರೀತೀಶ್ ನಂದಿಯವರು. ಭಾರತದಲ್ಲಿ ಮುಸ್ಲಿಮ್ಮರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವ ಮೂಲಕ ಈ ದೇಶದ ಸಾಂವಿಧಾನಿಕ ಹುದ್ದೆಗೂ ಧರ್ಮವನ್ನು ತಳುಕು ಹಾಕಿ ಒಂದು ರೀತಿಯ ವಿವಾದ ಸೃಷ್ಟಿಸಲು ಮುಂದಾಗಿರುವುದು ನಿಜಕ್ಕೂ ಹೇಯಕರವಾಗಿದೆ.
ದೇಶದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಅದ್ಯಾವುದೋ ಊರಿನ ಹಿಂದೂಗಳು ಶ್ರದ್ಧೆಯಿಂದ ಗೋವುಗಳನ್ನು ಜತನದಿಂದ ಸಾಕಿದ್ದನ್ನು ಕದ್ದೊಯ್ಯುವಾಗ ಸಿಕ್ಕಿಕೊಂಡ ಮುಸಲ್ಮಾನರನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದರೆ, ದೇಶಾದ್ಯಂತ ಶುಕ್ರವಾರ ಮಧ್ಯಾಹ್ನ ನಮಾಜ್ ಮುಗಿಸಿಕೊಂಡು ಬಂದು ಇದ್ದಕ್ಕಿದ್ದಂತೆಯೇ ಕಲ್ಲು ತೂರುತ್ತಾ ಸಾರ್ವಜನಿಕರ ಆಸ್ಥಿ ಪಾಸ್ತಿ ಹಾಳು ಮಾಡುವಂತಹ ಮನಸ್ಥಿತಿ ಇರುವಾಗ, ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಮುಸಲ್ಮಾನರು ಈ ದೇಶದ ಪ್ರಧಾನಿ ಅಥವಾ , ರಾಷ್ಟ್ರಪತಿಯಾಗಲು ಸಾಧ್ಯವಾಗದ ಹಂತದಲ್ಲಿದೆಯೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಪಿಎಂ ಎಂಬ ಹ್ಯಾಶ್ ಟ್ಯಾಗ್ ಹಾಕಿ ಈ ರೀತಿಯ ವಿವಾದಾತ್ಮಕವಾಗಿ ಟ್ರೆಂಡ್ ಮಾಡುವ ಪ್ರಮೇಯವೇನಿದೆ? ಎಂಬುದನ್ನು ಖ್ಯಾತ ಪತ್ರಕರ್ತ ಪ್ರಿತೀಶ್ ನಂದಿಯವರೇ ಉತ್ತರಿಸಬೇಕಾಗಿದೆ. ಅಭಿವ್ಯಕ್ತಿ ಸ್ವಾತ್ರಂತ್ರ್ಯ ಎಂಬ ಹೆಸರಿನಲ್ಲಿ ಮನಸ್ಸಿಗೆ ಬಂದದ್ದನ್ನು ಬರೆದು ಈ ದೇಶವೇ ಹೊತ್ತಿ ಉರಿಯುವಂತಹ ವಾತಾವರಣ ಸೃಷ್ಟಿಯಾಗುತ್ತಿರುವ ಸಂಧರ್ಭದಲ್ಲಿ ಈ ರೀತಿಯ ವಿವಾದಾತ್ಮಕ ಹೇಳಿಕೆಗಳು ಸದ್ಯಕ್ಕೆ ಖಂಡಿತವಾಗಿಯೂ ಅನಾವಶ್ಯಕ ಎಂದೇ ಸಮಸ್ತ ಭಾರತೀಯರ ಭಾವನೆಯಾಗಿದೆ
ಸತ್ಯಂ ಭ್ರೂಯಾತ್, ಪ್ರಿಯಂ ಭೂಯಾತ್, ನ ಬ್ರೂಯಾತ್ ಸತ್ಯಮ ಪ್ರಿಯಂ!
ಪ್ರಿಯಂಚ ನಾನೃತಂ ಬ್ರೂಯಾತ್, ಏಷ ಧರ್ಮಃ ಸನಾತನ !!
ಅಂದರೆ, ಎಲ್ಲರಿಗೂ ಪ್ರಿಯವಾಗುವ ಸತ್ಯದ ಮಾತುಗಳನ್ನೇ ಸದಾ ಆಡಬೇಕು. ನಾವು ಆಡುವ ಸತ್ಯವಾದ ಮಾತು ಬೇರೆಯವರಿಗೆ ನೋವಾಗುವಂತಿದ್ದರೆ ಅಂತಹ ಅಪ್ರಿಯವಾದ ಸತ್ಯವನ್ನು ಎಂದೂ ಹೇಳಕೂಡದು. ಅದೇ ರೀತಿಯಾಗಿ ಬೇರೆಯವರಿಗೆ ಸಂತೋಷವಾಗುತ್ತದೆ ಎಂದು ಅವರಿಗೆ ಪ್ರಿಯವಾಗುವ ಸುಳ್ಳನ್ನೂ ಹೇಳಕೂಡದು. ಇದೇ ನಿಜವಾದ ಸನಾತನ ಧರ್ಮ ಎನ್ನುವ ಸುಭಾಷಿತವು ಹಿರಿಯ ಪತ್ರಕರ್ತರಾದ ಪ್ರೀತೀಶ್ ನಂದಿಯವರಿಗೆ ತಿಳಿಯದ ವಿಷಯವೇನಲ್ಲ.
ಆದರೂ ಸಹಾ, ಯಾರನ್ನೋ ಓಲೈಸುವ ಇಲ್ಲವೇ ಯಾವುದೋ ಆಮಿಷದಕ್ಕೆ ಬಲಿಯಾಗಿಯೋ, 2022 ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ದೇಶದ ಚುನಾವಣಾ ವ್ಯವಸ್ಥೆಯ ಸಮಗ್ರತೆಯ ಬಗ್ಗೆ ಈ ರೀತಿಯ ವಿವಾದಾತ್ಮಕ ಚರ್ಚೆಯನ್ನು ಎತ್ತಿರುವುದು ಖಂಡನಾರ್ಹವಾಗಿದೆ. ಅದರಲ್ಲೂ ಈ ದೇಶದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಅರ್ಹತೆಯ ಮೇಲೆ ಮೊದಲ ಬಾರಿಗೆ ದೇಶದ ರಾಷ್ಟ್ರಪತಿಯಾಗುತ್ತಿರುವಾಗ, ಯಾವುದೇ ಮುಸ್ಲಿಂ ಪ್ರಧಾನಿ ಅಥವಾ ರಾಷ್ಟ್ರಪತಿಯಾಗುತ್ತಾರಾ? ಎಂಬ ಪ್ರಶ್ನೆಯನ್ನು ನಂದಿಯವರು ಎತ್ತುವ ಮೂಲಕ, ಇನ್ನು ಮುಂದೆ ಈ ದೇಶದಲ್ಲಿ ಎಂದಿಗೂ ಮುಸ್ಲಿಂ ಪ್ರಧಾನಿ ಅಥವಾ ರಾಷ್ಟ್ರಪತಿಯಾಗಲು ಸಾಧ್ಯವೇ ಇಲ್ಲಾ ಎಂದು ಷರಾ ಬರೆದಂತಿದೆ.
ತಮ್ಮ ಹೇಳಿಕೆಗೆ ಪೂರಕವಾಗಿ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷರಾಗಿದ್ದಾರೆ. ಅದೇ ರೀತಿ ಭಾರತೀಯ ಮೂಲದ ರಿಷಿ ಸುನಕ್, ಇಂಗ್ಲೇಂಡಿನ ಪ್ರಧಾನಿಯಾಗುವ ಹೊಸ್ತಿಲಿನಲ್ಲಿ ಇರುವಾಗ, ಭಾರತದಲ್ಲಿ, ಭಾರತೀಯ ಮೂಲದ ಮುಸ್ಲಿಂ ಭಾರತದ ಪ್ರಧಾನಿ ಅಥವಾ ಮತ್ತೊಮ್ಮೆ ಅಧ್ಯಕ್ಷರಾಗುತ್ತಾರೆಯೇ? ಹೀಗೇ ಪ್ರತಿ 7 ಭಾರತೀಯರಲ್ಲಿ ಒಬ್ಬರಾಗಿರುವ ಮುಸಲ್ಮಾನರನ್ನು ಈ ದೇಶದ ಉನ್ನತ ರಾಜಕೀಯ ಹುದ್ದೆಗೆ ಅನರ್ಹರನ್ನಾಗಿ ಮಾಡಬಹುದೇ? ಎಂಬ ಬಾಲಿಶವಾದ ಪ್ರಶ್ನೆಯನ್ನು ಕೇಳುವ ಮೂಲಕ ಪ್ರೀತೀಶ್ ನಂದಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಪ್ರೀತೀಶ್ ನಂದಿ ಅವರ ಈ ರೀತಿಯ ಪ್ರಶ್ನೆಗೆ ಅಷ್ಟೇ ತೀಷ್ಣವಾದ ಪ್ರತಿಕ್ರಿಯೆಗಳು ಮತ್ತು ವಿರೋಧಗಳು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವುದು ಆಶಾದಾಯಕವಾಗಿದೆ. ಸ್ವಾತ್ರಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಬ್ಬರು ಮುಸ್ಲಿಂ ಅಧ್ಯಕ್ಷರು ಮುನ್ನಡೆಸಿದ್ದರೆ, ಸ್ವಾತ್ರಂತ್ಯಾನಂತರ ಜಾಕಿರ್ ಹುಸೇನ್ (1967-1969) ಮತ್ತು ಫಕ್ರುದ್ದೀನ್ ಅಲಿ ಅಹ್ಮದ್ (1974-1977) ಕಾಂಗ್ರೇಸ್ ಸರ್ಕಾರ ಇದ್ದಾಗ ಈ ದೇಶದ ರಾಷ್ಟ್ರಪತಿಯ ಹುದ್ದೆಯನ್ನು ಅಲಂಕರಿಸಿದ್ದರೆ, ಇನ್ನು ಆಟಲ್ ಬಿಹಾರಿ ವಾಜಪೇಯಿವರ ಬಿಜೆಪಿ ಸರ್ಕಾರ ಇದ್ದಾಗ ಎಪಿಜೆ ಅಬ್ದುಲ್ ಕಲಾಂ (2002- 2007) ಅವರು ಈ ದೇಶದ ರಾಷ್ಟ್ರಪತಿಗಳಾಗಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಈ ದೇಶದ ಮತ್ತೊಂದು ಅಲ್ಪಸಂಖ್ಯಾತ ಸಿಖ್ ಕೋಮಿನವರಾದ ಗ್ಯಾನಿ ಜೈಲ್ ಸಿಂಗ್ (1982-1987) ರಾಷ್ಟ್ರಪತಿಗಳಾದರೆ, ಅದೇ ಸಿಖ್ ಸಮುದಾಯದ ಮನಮೋಹನ್ ಸಿಂಗ್ (2004-2014) 10 ವರ್ಷಗಳ ಕಾಲ ಈ ದೇಶದ ಪ್ರಧಾನಿಗಳಾಗಿದ್ದಾರೆ. ಇನ್ನು ಖಟ್ಟರ್ ಮುಸಲ್ಮಾನರೆಂದೇ ಗುರುತಿಸಿಕೊಳ್ಳುವ ಹಮೀದ್ ಅನ್ಸಾರಿ (2007-2017) 10ಗಳ ಕಾಲ ಈ ದೇಶದ ಉಪರಾಷ್ಟ್ರಪತಿಹುದ್ದೆಯನ್ನು ಸವಿದಿದ್ದಲ್ಲದೇ ಪಾಕೀಸ್ತಾನದದ ಪತ್ರಕರ್ತನಿಗೆ ಭಾರತೀಯ ಗೌಪ್ಯತೆಗಳನ್ನು ಬಿಟ್ಟು ಕೊಟ್ಟ ಆರೋಪವನ್ನೂ ಎದುರಿಸುತ್ತಿದ್ದಾರೆ. ಇನ್ನು. ಕ್ರಿಶ್ಚಿಯನ್ ಸಮುದಾಯದ ಜಾರ್ಜ್ ಫರ್ನಾಂಡೀಸ್ ರಕ್ಷಣಾ ಖಾತೆಯ ಕೇಂದ್ರ ಸಚಿವರಾಗಿದ್ದರೆ, ಆಸ್ಕರ್ ಫರ್ನಾಂಡೀಸ್ ಕೇಂದ್ರ ಮಂತ್ರಿಯಾಗಿ ವಿವಿಧ ಇಲಾಖೆಗಳನ್ನು ನಿಭಾಯಿಸಿದ್ದಾರೆ. ಅದೇ ರೀತಿ ಕಾಶ್ಮೀರದಿಂದ ಪಂಡಿತರನ್ನು ಹೊರಹಾಕುವುದರಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿ ಕುಖ್ಯಾತರಾದ ಮುಫ್ತಿ ಮಹಮ್ಮೊದ್ ಸಯೀದ್ ಅಂತಹವರೇ ಈ ದೇಶದ ಗೃಹಮಂತ್ರಿಯಾಗಿದ್ದರೆ, ಗುಲಾಂ ನಬಿ ಆಝಾದ್ ಸಹಾ ಕೇಂದದಲ್ಲಿ ವಿವಿಧ ಇಲಾಖೆಯ ಮಂತ್ರಿಯಾಗಿದ್ದಾರೆ. ಸದ್ಯದ ಲೋಕಸಭೆಯಲ್ಲಿ 27 ಮುಸ್ಮಿಂ ಸಮುದಾಯದ ಲೋಕಸಭಾ ಸದಸ್ಯರು ಇದ್ದರೆ ದೇಶಾದ್ಯಂತ ವಿವಿಧ ರಾಜ್ಯ್ಗಳಲ್ಲಿ ನೂರಾರು ಮುಸಲ್ಮಾನ ಶಾಸಕರು ಆರಿಸಿ ಬರುವ ಮೂಲಕ ಮುಸಲ್ಮಾನರು ಭಾರತೀಯ ರಾಜಕಾರಣದಲ್ಲಿ ಸಕ್ರೀಯವಾಗಿದ್ದು ಪ್ರಭಲವಾಗಿದ್ದರೂ ಈ ರೀತಿಯ ಪ್ರಚೋಚನಾತ್ಮಕ ಹೇಳಿಕೆ ದೇಶದ ಐಕ್ಯತೆ ಧಕ್ಕೆ ತರುವಂತಿದೆ.
ಆಮೇರಿಕಾದಲ್ಲಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿರುವುದು ಮತ್ತು ಇಂಗ್ಲೇಂಡಿನಲ್ಲಿ ರಿಷಿ ಸುನಕ್ ಪ್ರಧಾನ ಮಂತ್ರಿಯ ಹುದ್ದೆಯ ಪಟ್ಟಕ್ಕೆ ಏರುವ ಸ್ಥಿತಿಯನ್ನು ತಲುವಿರುವುದು ಅವರು ಅಯಾಯಾ ದೇಶದ ಅಲ್ಪಸಂಖ್ಯತರು ಎಂದಲ್ಲ. ಅವರುಗಳು ಆ ಹುದ್ದೆಗೆ ಆಯ್ಕೆಯಾಗಿರುವುದು ತಮ್ಮ ತಮ್ಮ ಅರ್ಹತೆ ಮತ್ತು ರಾಜಕೀಯ ಅನುಭವದ ಮೂಲಕ ಎನ್ನುವುದನ್ನು ಪ್ರೀತೀಶ್ ನಂದಿ ಹೇಳದೇ ಇರುವುದು ವಿವಾದಕ್ಕೆ ಮತ್ತಷ್ಟು ತುಪ್ಪವನ್ನು ಸುರಿಯುವಂತಿದೆ. ಅವರಿಬ್ಬರ ಪೂರ್ವಜರು ಬಹಳ ಹಿಂದೆಯೇ ಆಯಾಯಾ ದೇಶಗಳಿಗೆ ವಲಸೆ ಹೋಗಿ ಅಲ್ಲಿಯ ಪ್ರಜೆಗಳಾಗಿರುವ ಕಾರಣ ಅವರಿಬ್ಬರು ಅದೇ ದೇಶದಲ್ಲೇ ಹುಟ್ಟಿ ಜನ್ಮತಃ ಅಲ್ಲಿಯ ಪ್ರಜೆಗಳು ಎನ್ನುವುದೂ ಗಮನಾರ್ಹವಾಗಿದೆ. ಇವೆಲ್ಲಕ್ಕೂ ಹೆಚ್ಚಾಗಿ ಅವರಿಬ್ಬರ ಮನಸ್ಥಿತಿ ಎಂದಿಗೂ ಸಹಾ ಅವರ ದೇಶದ ಪರವಾಗಿಯೇ ಇದೆಯೇ ಹೊರತು ಅವರೆಂದೂ ತಮ್ಮ ಧರ್ಮಾಧಾರಿತವಾಗಿ ಭಾರತದ ಪರ ಒಲವು ತೋರದಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.
ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮುಂದಾದ 52 ಮುಸ್ಲಿಂ ರಾಷ್ಟ್ರಗಳಲ್ಲಿ ಒಬ್ಬ ಹಿಂದೂ ಅಧ್ಯಕ್ಷರಾಗಲು ಸಾಧ್ಯವೇ? ಎಂದು ಪ್ರತಿಯೊಬ್ಬ ಭಾರತೀಯ ಹಿಂದುಗಳು ಪ್ರೀತೀಶ್ ನಂದಿಯವರನ್ನು ಪ್ರಶ್ನೆ ಮಾಡುತ್ತಿರುವುದರಲ್ಲಿ ತಪ್ಪಿಲ್ಲ ಎಂದು ಕಾಣುತ್ತಿದೆ. ಈ ದೇಶದಲ್ಲಿ ಹುಟ್ಟಿದ ಈ ದೇಶದವನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರೀಕರೂ ಅರ್ಹತೆಯ ಆಧಾರದ ಮೇಲೆ ಜನರಿಂದ ಪ್ರಜಾಪ್ರಭುತ್ವದ ಆಧಾರದ ಮೇಲೆ ಆಯ್ಕೆಯಾಗಿ ಉನ್ನತ ಪದವಿಯನ್ನು ಏರಬಹುದಾದ ಸೌಲಭ್ಯಗಳನ್ನು ನಮ್ಮ ಸಂವಿಧಾನ ಕಲ್ಪಿಸಿಕೊಟ್ಟಿರುವಾಗ, ತಮ್ಮ ತೆವಲುಗಳಿಗಾಗಿ ಧರ್ಮ, ಜಾತಿ ಮತ್ತು ಪಂಥದಗಳ ನಡುವೆ ವಿಷಬೀಜವನ್ನು ಬಿತ್ತಿ ದೇಶವನ್ನು ಧರ್ಮಾಧಾರಿತವಾಗಿ ಮತ್ತೊಮ್ಮೆ ವಿಭಜಿಸಲು ಪತ್ರಕರ್ತರ ಸೋಗಿನಲ್ಲಿ ಮುಂದಾಗಿರುವ ಪ್ರೀತೀಶ್ ನಂದಿಯಂತಹವರಿಗೆ ಧಿಕ್ಕಾರ ವಿರಲಿ.
ಕಡೆಯ ಮಾತು : ಪ್ರೀತೀಶ್ ನಂದಿಯವರ ಭಾರತದಲ್ಲಿ ಮುಸ್ಲಿಮ್ಮರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗೆ, ಸದ್ಯದ ಪರಿಸ್ಥಿತಿಯಲ್ಲಿ ಈ ದೇಶದಲ್ಲಿ ಹುಟ್ಟಿ ಈ ದೇಶದ ಸಕಲ ಸರ್ಕಾರೀ ಸೌಲಭ್ಯಗಳನ್ನು ಪಡೆದು ಬೆಳೆದು ವಿದ್ಯಾವಂತರಾಗಿ, ಈ ದೇಶವನ್ನು ಪ್ರೀತಿಸುವ ನಿಜವಾದ ಭಾರತೀಯ ಮನಸ್ಥಿತಿಯ ಮುಸಲ್ಮಾನರು ಮತ್ತು ಮುಸ್ಲಿಂ ರಾಜಕೀಯ ನಾಯಕರು ದುರ್ಬೀನ್ ಹಾಕಿ ಹುಡುಕಿದರೂ ಈ ದೇಶದಲ್ಲಿ ಸಿಗದೇ ಇರುವುದೇ ನಿಮ್ಮ ಪ್ರಶ್ನೆಯ ಉತ್ತರವಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ