ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಪ್ರತೀ ವರ್ಷ ಸೆಪ್ಟೆಂಬರ್ 3ನೇ ಭಾನುವಾರದಂದು ಆಚರಿಸಲಾಗುವ ಪತ್ನಿಯ ಮೆಚ್ಚುಗೆಯ ದಿನ ಅರ್ಥಾತ್ Wife Appreciation Day ಎಂದರೆ ಏನು? ಅದರ ಉದ್ದೇಶ ಏನು? ಆ ಆಚರಣೆಯ ಹಿಂದಿರುವ ಘನ ಘೋರ ಸತ್ಯಾಸತೆಗಳ ವಸ್ತುನಿಷ್ಠ ಪರಿಚಯ ಇದೋ ನಿಮಗಾಗಿ… Read More ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಹಿತ್ತಲ ಗಿಡ ಮದ್ದಲ್ಲ

ಸತತವಾಗಿ ಹತ್ತು ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಯಲ್ಲೇ ಕಳೆದು 75ವರ್ಷಗಳ ಹಿಂದೆ ಸ್ವತಂತ್ರ ದೇಶವಾದರೂ, ಇಂದಿಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಭಾರತೀಯರಾದ ಅದಾನಿ, ಅಂಬಾನಿ, ರಾಮ್ ದೇವ್, ಮಹೇಂದ್ರ, ಟಿವಿಎಸ್ ಸುಂದರಂ ಅವರ ಹೆಸರುಗಳನ್ನು ಕೇಳುತ್ತಿದ್ದಂತೆಯೇ ಕೆಲವರು ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಎಲ್ಲಿಲ್ಲದ ಆಕ್ರೋಶ ಮತ್ತು ಪ್ರತಿರೋಧ ವ್ಯಕ್ತಪಡಿಸುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತದೆ. ಇಲ್ಲಿ ಯಾರನ್ನೂ ಸಮರ್ಥನೆ ಮಾಡಿಕೊಳ್ಳದೇ ವಸ್ತುನಿಷ್ಟ ವಿಷಯದ ಪ್ರಸ್ತುತಿ ಇದೋ ನಿಮಗಾಗಿ… Read More ಹಿತ್ತಲ ಗಿಡ ಮದ್ದಲ್ಲ

ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಟ್ಟ ಪೋಷಕರ ಔದಾರ್ಯತೆ, ಮನೆ ಮತ್ತು ಶಾಲೆಗಳ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?… Read More ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ಇಂದು ಬೆಳಿಗ್ಗೆ ಎದ್ದು ವಿಜಯ ಕರ್ನಾಟಕ ಪತ್ರಿಕೆಯ ಮುಖ ಪುಟದ ಈ ವಿಷಯ ಓದುತ್ತಿದ್ದಂತೆಯೇ ಬಹಳ ದಿನಗಳಿಂದಲೂ ಬರೆಯಬೇಕೆಂದಿದ್ದ ವಿಚಾರಕ್ಕೆ ಪೂರಕವೆನಿಸಿ ಈ ಲೇಖನವನ್ನು ನಿಮ್ಮೊಂದಿಗೆ ಪ್ರಸ್ತುತ ಪದಿಸುತ್ತಿದ್ದೇನೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 2500 ಎಂಜಿನಿಯರಿಂಗ್ ಕಾಲೇಜುಗಳು, 1400 ಪಾಲಿಟೆಕ್ನಿಕ್‌ಗಳಿವೆ. ಈ ಕಾಲೇಜುಗಳಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸರಿಸುಮಾರು 15 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಇನ್ನು ಕರ್ನಾಟಕದಲ್ಲೇ ಸುಮರು 542 ಎಂಜಿನಿಯರಿಂಗ್ ಕಾಲೇಜುಗಳಿದ್ದು ಅವುಗಳಲ್ಲಿ 134 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳದರೆ, ಖಾಸಗೀ ಕಾಲೇಜುಗಳೇ 407… Read More ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ಸ್ವದೇಶೀ ಜಾಗೃತಿ

ಮೊನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ಇಪ್ಪತ್ತು ಲಕ್ಷ ಕೋಟಿಗಳ (ಅಂಕೆಯಲ್ಲಿ ಬರೆದರೆ ಎಷ್ಟು ಸೊನ್ನೆ ಹಾಕಬೇಕು ಅನ್ನುವುದೇ ಗೊತ್ತಾಗದ ಕಾರಣ ಅಕ್ಷರದಲ್ಲೇ ಬರೆಯುತ್ತಿದ್ದೇನೆ 😃😃 ) ಆತ್ಮನಿರ್ಭರ್ (ಸ್ವಾಲಂಭನೆ) ಪರಿಹಾರ ನಿಧಿಯ ಜೊತೆಗೆ ಜೊತೆಗೆ ದೇಶವಾಸಿಗಳು ಸ್ವದೇಶಿ ಉತ್ಪನ್ನಗಳನ್ನು ಬಳೆಸುವತ್ತ ಹರಿಸಬೇಕು ತಮ್ಮ ಚಿತ್ತ ಎಂದು ಕರೆ ನೀಡುತ್ತಿದ್ದಂತೆಯೇ ಇಡೀ ಭಾರತೀಯರು ಜಾಗೃತವಾಗಿಬಿಟ್ಟಿದ್ದಾರೆ. ಈ ಕೂಡಲೇ ಬಹುರಾಷ್ಟ್ರೀಯ ಕಂಪನಿ ಉತ್ಪಾದಿತ ಸೋಪು, ಶಾಂಪು, ಟೂಟ್ ಪೇಸ್ಟ್ ಗಳನ್ನು ಬದಲಿಸಿ ಎಂದು ಸಾಮಾಜಿಕ ಅಂತರ್ಜಾಲದಲ್ಲಿ ತಾವೇ ಸ್ವದೇಶೀ… Read More ಸ್ವದೇಶೀ ಜಾಗೃತಿ