ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ಸಿವಿಲ್ ಇಂಜೀನಿಯರಿಂಗ್ ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಅಧೂತ್ ಮೋಹಿತ್ ಎಂಬುವರ ಲೇಖನದ ಭಾವಾರ್ಥವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಬ್ರಾಹ್ಮಣನಲ್ಲ, ನಾನು ಮರಾಠಿಗ. ಆದರೂ ಕಳೆದ ಕೆಲವು ವರ್ಷಗಳಿಂದ ನನ್ನ ಅವಲೋಕನಗಳನ್ನು ಆಧರಿಸಿ ಇದಕ್ಕೆ ಸೂಕ್ತವಾದ ಉತ್ತರವನ್ನು ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಇಂದಿನ ಭಾರತದಲ್ಲಿ ಬ್ರಾಹ್ಮಣನಾಗಿರುವುದು ಎಂದರೆ 1930ರ ಜರ್ಮನಿಯಲ್ಲಿ ಯಹೂದಿಗಳಿದ್ದಂತೆ. ಜರ್ಮನಿಯ ಜನಸಂಖ್ಯೆಗೆ ಹೋಲಿಸಿದರೆ, ಯಹೂದಿಗಳ ಶೇಕಡಾವಾರು ಸಂಖ್ಯೆ ಬಹಳಷ್ಟು ಕಡಿಮೆ ಇದ್ದರೂ, ಜರ್ಮನ್ನರಿಗೆ ತಮ್ಮೆಲ್ಲಾ ಸಮಸ್ಯೆಗಳಿರೂ ಯಹೂದಿಗಳೇ ಕಾರಣರು ಎಂಬ ಭಾವನೆಯಾಗಿತ್ತು.… Read More ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?

ಪೊಗರು ಇಳಿಸಿದ ಪರಿ

ಕಳೆದ ಶುಕ್ರವಾರ ಬಹು ನಿರೀಕ್ಷಿತ ನಂದಕಿಶೋರ್ ನಿರ್ದೇಶಿಸಿದ ಮತ್ತು ಧೃವ ಸರ್ಜಾ ನಟಿಸಿದ ಪೊಗರು ಚಿತ್ರ, ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೇ ಚಿತ್ರಕ್ಕಾಗಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಣ್ಣ ಮತ್ತು ದಪ್ಪ ಮಾಡಿಕೊಂಡಿದ್ದ ಧೃವ ಸರ್ಜಾ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದದ್ದನ್ನು ಓದಿ, ಕೇಳಿ ಎಲ್ಲರೂ ಪುಳಕಿತಗೊಂಡಿದ್ದಂತೂ ಸುಳ್ಳಲ್ಲ. ಆದರೆ ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ಚಿತ್ರದಲ್ಲಿ ಒಂದು ಸಮುದಾಯವನ್ನು ಬಹಳ ಕೀಳಾಗಿ ಚಿತ್ರೀಕರಿಸಲ್ಪಟ್ಟಿದೆ ಎಂಬ… Read More ಪೊಗರು ಇಳಿಸಿದ ಪರಿ

ಬೌದ್ಧಿಕ ದಿವಾಳಿತನ

ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ. ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛 ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨… Read More ಬೌದ್ಧಿಕ ದಿವಾಳಿತನ

ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಅಂದು ಶಂಕರನ ಮನೆಯಲ್ಲಿ ಅವರ ತಾತನ ಶ್ರಾದ್ಧಾಕಾರ್ಯವಿತ್ತು. ಅವರ ಮನೆಯಲ್ಲಿ ಶ್ರಾಧ್ಧ ಕಾರ್ಯವೆಂದರೆ ಅದೊಂದು ದೊಡ್ಡವರ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಎಲ್ಲಾ ಸಂಬಂಧೀಕರು ಒಟ್ಟಿಗೆ  ಅಗಲಿದ ಹಿರೀಕರ ನೆನೆಯುವ ನೆಪದಲ್ಲಿ ಒಂದುಗೂಡುವ ಸಮಾರಂಭವಾಗಿತ್ತು.  ಹಿರಿಯರು, ಕಿರಿಯರು, ನೆಂಟರು ಇಷ್ಟರು ಮತ್ತು ಬಹಳ ಆತ್ಮೀಯರೂ ಸೇರಿದಂತೆ ಸುಮಾರು 60-70 ಜನರು ಬರುತ್ತಿದ್ದ ಕಾರಣ  ಹೊತ್ತಿಗೆ ಮುಂಚೆಯೇ ಅಡುಗೆಯವರು ಮನೆಗೆ ಬಂದು  ಬೆಳಗಿನಿಂದಲೇ  ಮಡಿಯಲ್ಲಿ  ಶ್ರಾದ್ಧ ಆಡುಗೆಯ ಸಿದ್ದತೆಯಲ್ಲಿದ್ದರು.  ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಮಡಿಯ ವಾತಾವರಣ. ಚಿಕ್ಕ ಮಕ್ಕಳಿಗಂತೂ ಮನೆಯ… Read More ಪಟಾ ಪಟಾ ಚೆಡ್ಡಿಗೆ ಜಟಾಪಟಿ