ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ… Read More ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಅತ್ತೆ ಮನೆ ಕೆನೆ ಮೊಸರು

ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಅದರ ಬಗ್ಗೆ ಅದೆಷ್ಟು ಹೊಗಳಿದರೂ ಮನಸ್ಸಿಗೆ ತೃಪ್ತಿನೇ ಅಗೋದಿಲ್ಲ. ಮೊನ್ನೆ ವಾರಾಂತ್ಯದಲ್ಲಿ ಸಂಕ್ರಾಂತಿ ಎಳ್ಳು ಬೀರಲು ನಮ್ಮ ಅತ್ತೆ ಅರ್ಥಾತ್ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದೇ ಊರಿನಲ್ಲಿ ಕೆಲವೇ ಕಿಮೀ ದೂರದಲ್ಲಿಯೇ ಇದ್ದರೂ ಪದೇ ಪದೇ ಅತ್ತೆ ಮನೆಗೆ ಹೋಗಲು ಸಾಧ್ಯವಾಗದಿದ್ದರೂ, ವರ್ಷಕ್ಕೆರಡು ಬಾರಿ ತಪ್ಪದೇ ಅತ್ತೇ ಮನೆಗೆ ಹೋಗಿ ಅವರ ಅದರಾತಿಧ್ಯವನ್ನು ಸವಿದು ಬಂದೇ ಬಿಡುತ್ತೇವೆ. ಒಂದು ಸಂಕ್ರಾಂತಿಗೆ ಎಳ್ಳು ಬೀರುವುದಕ್ಕಾದರೆ, ಎರಡನೆಯದು ಗೌರಿ ಹಬ್ಬಕ್ಕೆ… Read More ಅತ್ತೆ ಮನೆ ಕೆನೆ ಮೊಸರು

ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಮನೆಯಲ್ಲಿ ಮೊಸರು ಹೆಚ್ಚಿಗೆ ಉಳಿದು ಬಿಟ್ಟಲ್ಲಿ ಅಥವಾ ಮನೆಗೆ ಇದ್ದಕ್ಕಿದ್ದಂತೆಯೇ ಯಾರಾದ್ರೂ ಸಂಬಂಧೀಕರು ಬಂದು ಬಿಟ್ಟಲ್ಲಿ ಅಷ್ಟು ಹೊತ್ತಿನಲ್ಲಿ ಹುಳಿ, ಸಾರು ಮುಂತಾದವುಗಳನ್ನು ಮಾಡಲು ಪುರುಸೊತ್ತು ಇಲ್ಲದಿದ್ದಲ್ಲಿ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ – 1… Read More ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಪಂಚಾಮೃತ ಮತ್ತು ಪಂಚಲೋಹ

ಸಾಧಾರಣವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಿಗೂ ಬೆಳಗ್ಗೆ ಹೋದಾಗ ತೀರ್ಥದ ರೂಪದಲ್ಲಿ ಪಂಚಾಮೃತ ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸಿದ ನಂತರ ತುಳಸೀ ಮತ್ತು ಪಚ್ಚ ಕರ್ಪೂರ ಹಾಕಿದ ತೀರ್ಥವನ್ನು ಕೊಡುವುದನ್ನು ನಾವು ನೋಡಿದ್ದೇವೆ. ಪ್ರತೀ ದಿನ ದೇವರ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ,ಜೊತೆಗೆ ಬಾಳೆಹಣ್ಣು, ಎಳನೀರು, ನೀರಿನ ಮುಖಾಂತರ ಅಭಿಷೇಕವನ್ನು ಮಾಡಿದ ನಂತರ ಅವೆಲ್ಲವನ್ನೂ ಒಂದು ಶುಭ್ರವಾದ ಬೆಳ್ಳಿ ಇಲ್ಲವೇ ಹಿತ್ತಾಳೆ, ಕಂಚು ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಂದ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ… Read More ಪಂಚಾಮೃತ ಮತ್ತು ಪಂಚಲೋಹ