ದೊಡ್ದವರೆಲ್ಲಾ ಜಾಣರಲ್ಲಾ!

ದ್ವಾರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ  ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ… Read More ದೊಡ್ದವರೆಲ್ಲಾ ಜಾಣರಲ್ಲಾ!

ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ಈಗಷ್ಟೇ 2024ರ ಲೋಕಸಭಾ ಚುನಾವಣೆಯ 3 ಹಂತಗಳ ಚುನಾವಣೆ ಮುಗಿದಿದ್ದು ಇನ್ನೂ 4 ಹಂತಗಳ ಚುನಾವಣೆಗಳು ನಡೆಯಬೇಕಿರುವಾಗಲೇ, ಕಾಂಗ್ರೇಸ್ ಪಕ್ಷದ ಹಣೆಬರಹ ಜಗಜ್ಜಾಹೀರಾತಾಗಿದ್ದು,, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಡೆಯ ಬಹುದಾದಂತಹ ಸ್ಥಾನಗಳ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದವರಿಲ್ಲ

2024ರ ಲೋಕಸಭಾ ಚುನಾವಣೆಯ ನಡೆಯುತ್ತಿರುವ ಸಂಧರ್ಭದಲ್ಲಿ, ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯವರು ಇಚ್ಚಿಸುತ್ತಿದ್ದರೆ, ಯಥಾ ಪ್ರಕಾರ ಅವರ ವಿರೋಧಿಗಳು ಮೋದಿಯವರನ್ನು ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದು ಹಳಿಯುತ್ತಾ, ವಯಕ್ತಿಕ ಟೀಕೆಗಳಲ್ಲಿಯೇ ಮುಳುಗಿರುವಾಗ ಅದರ ಸತ್ಯ ಸತ್ಯತೆಯ ಕುರಿತಾದ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದವರಿಲ್ಲ

ವಿಧಾನಸೌಧ

ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಯಾರು? ಎಂದು? ಏಕಾಕಿ ನಿರ್ಮಿಸಿದರು? ಅದರ ವಿಶೇಷತೆಗಳು ಏನು? ಹೀಗೆ ವಿಧಾನ ಸೌಧ ನಿರ್ಮಾಣದ ಹಿಂದಿರುವ ರೋಚಕ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಧಾನಸೌಧ

ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಅತ್ಯಂತ ಸುಭಿಕ್ಷವಾದ ಕರ್ನಾಟಕ ರಾಜ್ಯವನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ಪರಸ್ಪರ ತೂ.. ತೂ.. ಮೈ.. ಮೈ.. ಎಂದು ಆರೋಪಿಸುತ್ತಿರುವುದರಿಂದ ಹಾಳಾಗಿ ಹೋಗುತ್ತಿರುವುದು ಕರ್ನಾಟಕ ಮತ್ತು ಕನ್ನಡಿಗರ ಮಾನ ಅಲ್ವೇ?… Read More ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಪ್ರಜಾಪ್ರಭುತ್ವ ಮತ್ತು ಅದರ ಅಣಕ

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಜುಲೈ 21 2022 ಅತ್ಯಂತ ಮಹತ್ವ ದಿನವಾಗಿದ್ದು ಇಂದು ಈ ದೇಶದ ಎರಡು ಪ್ರಭಲ ಮಹಿಳೆಯರಿಗೆ ಮೀಸಲಾಗಿದೆ. ಒಬ್ಬರು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಪ್ರಜಾತಾಂತ್ರಿಕವಾಗಿ ಹೇಗೆ ದೇಶದ ಉನ್ನತ ಪದವಿಯನ್ನೇರಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾದರೆ, ಮತ್ತೊಬ್ಬರು ಈ ದೇಶವನ್ನು ಆಳಿದ ಅತಿದೊಡ್ಡ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಬಹುದು ಎಂಬ ಕೆಟ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ.… Read More ಪ್ರಜಾಪ್ರಭುತ್ವ ಮತ್ತು ಅದರ ಅಣಕ

ಆಂತರಿಕ ಹಿತಶತ್ರುಗಳು

ಮೊನ್ನೆ ಪಂಜಾಬಿನಲ್ಲಿ ವಿವಿಧ ಯೋಜನೆಗಳನ್ನು ಉಧ್ಘಾಟಿಸುವ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ನಿಗಧಿಯಂತೆ ಹೆಲಿಕ್ಯಾಪ್ಟರಿನಲ್ಲಿ ಪ್ರಯಾಣಿಸಲು ನಿರ್ಧಾರವಾಗಿದ್ದರೂ, ಹವಾಮಾನದ ವೈಪರೀತ್ಯದಿಂದಾಗಿ ಕೂಡಲೇ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ನಿರ್ಧರಿಸಿ, ಆದರ ಸಂಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿ ಅವರ ರಕ್ಷಣೆಯ ಜವಾಬ್ಛಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿರುತ್ತದೆ. ನಂತರ ವಿವಿಧ ಕಾರಣಗಳಿಂದಾಗಿ ನಮ್ಮ ಪ್ರಧಾನ ಮಂತ್ರಿಗಳನ್ನು ರಸ್ತೆಯ ಮಾರ್ಗದ ಮಧ್ಯದಲ್ಲೇ ಸುಮಾರು 15-20 ನಿಮಿಷಗಳ ಕಾಲ ಮೇಲ್ಸೇತುವೆ ಮೇಲೆ ತಡೆದು ನಿಲ್ಲಿಸುವ ಮೂಲಕ ಈ ದೇಶದಲ್ಲಿ ಹಿಂದೆಂದೂ ಕಾಣದ ವಿಛಿದ್ರಕಾರಿ… Read More ಆಂತರಿಕ ಹಿತಶತ್ರುಗಳು

ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ರಾಜ್ಯದಲ್ಲಿ ಈಗ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೇ ಕೇವಲ ರಾಜ್ಯದಲ್ಲೇಕೇ, ಇಡೀ ರಾಷ್ಟ್ರದಲ್ಲಿಯೇ ಗ್ರಾಮೀಣ ಮಟ್ಟಕ್ಕೆ ಅಧಿಕಾರವನ್ನು ವಿಕೇಂದ್ರೀಕರಿಸಿದ ಹಿಂದಿರುವ ಕಥೆ ಬಲು ರೋಚಕವಾಗಿದೆ. ಅದು 1983, ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಪರ್ವ. ಸುಮಾರು 35-37 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತಿದ್ದ ಕನ್ನಡಿಗರು ಮೊತ್ತ ಮೊದಲ ಬಾರಿಗೆ ಕಾಂಗ್ರೇಸ್ಸನ್ನು ಧಿಕ್ಕರಿಸಿ, ಜನತಾ ಪಕ್ಷ + ಕ್ರಾಂತಿರಂಗ= ಜನತಾರಂಗವನ್ನು ಬೆಂಬಲಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ , ಬಿಜೆಪಿಯ… Read More ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?

ನನಗೆ ಬುದ್ದಿ ತಿಳಿದು ಬರುವ ಹೊತ್ತಿಗೆ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು ಮನೆಗೆ ಬರುತ್ತಿದ್ದ ನಂದೀ ಬ್ರಾಂಡ್ ಪ್ರಜಾವಾಣಿ ಅಂದಿಗೂ ಇಂದಿಗೂ ಕಾಂಗ್ರೇಸ್ ಮುಖವಾಣಿಯಾಗಿಯೇ ಇದ್ದ ಕಾರಣ ಅಲ್ಲಿ ಪ್ರಕಟವಾಗುತ್ತಿದ್ದದ್ದನ್ನೇ ಜೋಡಿಸಿ ಕೊಂಡು ಓದಿ ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ, ದೇಶದಲ್ಲಿ ಚುನಾವಣೆ ನಡೆದು ಎಲ್ಲಾ ವಿರೋಧ ಪಕ್ಷಗಳೂ ಒಮ್ಮತವಾಗಿ ಜನತಾಪಕ್ಷದ ಅಡಿಯಲ್ಲಿ ಅಭೂತಪೂರ್ವವಾಗಿ ಜಯಿಸಿ ಬಂದು ಒಂದು ಕಾಲದಲ್ಲಿ ಇಂದಿರಾ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜೀ ದೇಸಾಯಿ ದೇಶದ ಪ್ರಪ್ರಥಮ ಕಾಂಗ್ರೇಸ್ಸೇತರ ಪ್ರಧಾನ ಮಂತ್ರಿಗಳಾದರು. ಅವರ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್… Read More ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?