ಅಆಇಈ ಯಲ್ಲೂ ಅಪಸವ್ಯವೇ?

ನಾವು ಚಿಕ್ಕವರಿದ್ದಾಗ ಸಮಾಜ ಶಾಸ್ತ್ರದಲ್ಲಿ ಭಾರತವನ್ನು ಕಂಡುಹಿಡಿದವರು ಯಾರು? ಎಂಬ ಪ್ರಶ್ನೆಗೆ 1492 ರಲ್ಲಿ ಪೋರ್ಚುಗೀಸ್ ಮೂಲದ ನಾವಿಕನಾದ ವಾಸ್ಕೋ ಡಿ ಗಾಮಾ ಪೋರ್ಚುಗಲ್‌ನ ಲಿಸ್ಬನ್‌ನಿಂದ ನೌಕಾಯಾನ ಮಾಡುತ್ತಾ ಅಟ್ಲಾಂಟಿಕ್ ಸಾಗರದ ಮೂಲಕ ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಆಫ್ರಿಕಾದ ಪೂರ್ವ ಕರಾವಳಿಯ ಮಲಿಂಡಿಯಲ್ಲಿ ಕೆಲಕಾಲ ಲಂಗರು ಹಾಕಿ ಅಂತಿಮವಾಗಿ ಕೇರಳದ ಮಲಬಾರ್ ಕರಾವಳಿಯ ಕ್ಯಾಲಿಕಟ್‌ಗೆ ಬರುವ ಮೂಲಕ ಭಾರತವನ್ನು ಕಂಡು ಹಿಡಿದರು ಎಂದೇ ಹೇಳಿಕೊಡಲಾಗುತ್ತಿತ್ತು. ಹಾಗಾದರೆ ಅದಕ್ಕೂ ಮುಂಚೆ ಭಾರತದ ಅಸ್ತಿತ್ವವೇ ಇರಲಿಲ್ಲವೇ?… Read More ಅಆಇಈ ಯಲ್ಲೂ ಅಪಸವ್ಯವೇ?

ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ. ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ | ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. || ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. || ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ… Read More ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ಉಕ್ರೇನಿನ ನೈಜ ಮುಖ

ಕಾಲು ಕೆರೆದುಕೊಂಡು ರಷ್ಯಾದ ವಿರುದ್ಧ ಯುದ್ದ ಮಾಡಲು ಹೋಗಿ ತಪರಾಕಿ ಹಾಕಿಸಿಕೊಳ್ಳುತ್ತಿರುವ ಉಕ್ರೇನಿನ ನೆರೆ ರಾಷ್ಟ್ರಗಳಿಂದ ಉಕ್ರೇನಿನಲ್ಲಿ ಸಿಲಿಕಿಕೊಂಡಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಆಪರೇಷನ್ ಗಂಗಾ ಮೂಲಕ ಭಾರತಕ್ಕೆ ಕರೆತರುವ ಪ್ರಯಾಸದಲ್ಲಿದ್ದರೆ, ಕಮ್ಯೂನಿಷ್ಟ್ ಮನಸ್ಥಿತಿಯ ಬಹುತೇಕ ಮಾಧ್ಯಮಗಳು ಹುಡುಕಿ ಹುಡುಕೀ ಭಾರತ ಸರ್ಕಾರದ ಉಚಿತ ವಿಮಾನದಲ್ಲೇ ಬಂದು ಅದೇ ಭಾರತ ಸರ್ಕಾರ ವಿರುದ್ಧ ಮಾತನಾಡುವವರ ಸಂದರ್ಶನವನ್ನು ಪ್ರಸರಿಸಿ ಪರೋಕ್ಷವಾಗಿ ಆಪರೇಷನ್ ಗಂಗಾ ಎನ್ನುವುದು ವಿಫಲ ಪ್ರಯತ್ನ… Read More ಉಕ್ರೇನಿನ ನೈಜ ಮುಖ

ಕಾಲೇಜಿಗೆ ಹೋಗುವುದು ಕಲಿಯುವುದಕ್ಕೋ? ಇಲ್ಲಾ…

ಅವಿಭಜಿತ ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಸದಾಕಾಲವು ಮುಂದಿದ್ದು ಉಡುಪಿಯಲ್ಲಿ 2003-04 ನೇ ಸಾಲಿನಲ್ಲಿ 93 ರ ಬಾಲಕಿಯರೊಂದಿಗೆ  ಪ್ರಾರಂಭವಾದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ  2020-21 ರಲ್ಲಿ 2300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಕಳೆದ ಮೂರು ವಾರಗಳಿಂದಲೂ ಈ ಕಾಲೇಜು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದು ಶೈಕ್ಷಣಿಕ ಸಾಧನೆಗಾಗಿ ಈ ರೀತಿಯ ಪ್ರಚಾರ ಪಡೆದಿದ್ದರೆ ಸಂತೋಷವಾಗುತ್ತಿತ್ತು. ಆದರೆ ಈಗ… Read More ಕಾಲೇಜಿಗೆ ಹೋಗುವುದು ಕಲಿಯುವುದಕ್ಕೋ? ಇಲ್ಲಾ…

ಟೀ.. ಚಾಯ್… ಕಾಪೀ.. ಕಾಪೀ…

ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ. ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ… Read More ಟೀ.. ಚಾಯ್… ಕಾಪೀ.. ಕಾಪೀ…

Google ಮತ್ತು ಗುರು ನಡುವಿನ ಅಂತರ, ಮಹತ್ವ

ಹಿಂದಿನ ಕಾಲದವರು‌ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದರೆ, ಇಂದಿನ ಕಾಲದವರು Google ಮುಂದೆ ಗುರು ಏನ್ ಮಹಾ? ಎನ್ನುವಂತಾಗಿರುವಾಗ, Google ಮತ್ತು ಗುರು ನಡುವಿನ ಅಂತರ, ಮಹತ್ವದ ಕುರಿತಾದ ವಿಶಿಷ್ಟವಾದ ಲೇಖನ ಇದೋ ನಿಮಗಾಗಿ… Read More Google ಮತ್ತು ಗುರು ನಡುವಿನ ಅಂತರ, ಮಹತ್ವ

ಶಿಕ್ಷಣ

ಇವತ್ತು ಬೆಳೆಗ್ಗೆ ಜಿಟಿ ಜಿಟಿ ಮಳೆ ಬೀಳ್ತಾ ಇದ್ದದ್ದರಿಂದ ಮುಂಜಾನೆಯ ವೃತ್ತ ಪತ್ರಿಕೆ ಎಲ್ಲಾ ಒದ್ದೆ ಮುದ್ದೆಯಾಗಿತ್ತು. ನನಗೆ ಒಂದು ಪಕ್ಷ ತಿಂಡಿ ತಿನ್ನೋದನ್ನ ಬಿಟ್ರೂ ಬೇಜಾರಿಲ್ಲ. ಆದರೆ ಬೆಳಗಿನ ಪೇಪರ್ ಓದದೇ ಹೋದ್ರೆ ಏನೋ ಕಳೆದು ಕೊಂಡ ಅನುಭವ. ಆಷ್ಟೆಲ್ಲ ಟಿವಿಯಲ್ಲಿ ವಾರ್ತೆಗಳನ್ನು ನೋಡಿದ್ರೂ, ಇಂಟರ್ನೆಟ್ಟಲ್ಲಿ ಸುದ್ದಿಗಳನ್ನು ಓದಿದ್ರೂ, ಪೇಪರ್ ಓದೋ ಮಜಾನೇ ಬೇರೆ. ಹಾಗೆ ಒದ್ದೆ ಆದ ಪೇಪರನ್ನು ಇಸ್ತ್ರಿಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿಕೊಂಡು ಓದಲು ಪುಟ ತಿರುವು ಹಾಕುತ್ತಿದ್ದಂತೆಯೇ ಗಕ್ಕನೆ ಕಾಲೇಜಿನ ಏಳನೇ ಮಹಡಿಯಿಂದ… Read More ಶಿಕ್ಷಣ