ಅತಿಯಾಗಿ ದುರುಪಯೋಗವಾಗುತ್ತಿದೆಯೇ ಜಾತಿ ನಿಂದನೆ ಕಾಯ್ದೆ?

ಜಾತಿಯ ಕಾರಣದಿಂದಾಗಿ ನೂರಾರು ವರ್ಷಗಳ ಹಿಂದೆ ತುಳಿತಕ್ಕೆ ಒಳಗಾದವರನ್ನು ಇಂದಿಗೂ ಅದೇ ಜಾತಿಯ ಹೆಸರಿನಲ್ಲಿ ನಿಂದಿಸಿ ಅವಮಾನ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಮಾಡಿದ ಕಾನೂನನ್ನೆ ಗುರಾಣಿಯಾಗಿಸಿಕೊಂಡು, ಕೆಲವು ದಲಿತರು ಸವರ್ಣೀಯರ ಮೇಲೆ ಸೇಡಿನಿಂದಲೋ, ತಮ್ಮ ಸ್ವಾರ್ಥಕ್ಕಾಗಿಯೂ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಅತಿಯಾಗಿ ದುರುಪಯೋಗವಾಗುತ್ತಿದೆಯೇ ಜಾತಿ ನಿಂದನೆ ಕಾಯ್ದೆ?

ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಮಕ್ಕಳು ದೇವರ ಸಮಾನ. ಮಕ್ಕಳನ್ನು ಪ್ರೀತಿಯಿಂದ ಅಕ್ಕರೆಯಿಂದ ಬೆಳೆಸುವ ಭರದಲ್ಲಿ ಕೇಳಿದ್ದೆಲ್ಲವನ್ನೂ ಸುಲಭವಾಗಿ ಕೊಡಿಸುವುದಕ್ಕಿಂತ, ಪರಿಸ್ಥಿತಿಯನ್ನು ಸಮತೋಲನದಿಂದ ಎದುರಿಸುವ ಸಾಮರ್ಥ್ಯವನ್ನು ಕಲಿಸುವುದು ಮುಖ್ಯ. ವಿಶಾಖಪಟ್ಟಣದ ಶಾಲೆ ಮತ್ತು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಾಡ್ಯಾ ಗುಡ್ಡದಲ್ಲಿ ಮೊಬೈಲ್‌ ಫೋನ್‌ ಕುರಿತಾಗಿ ನಡೆದ ದುರ್ಘಟನೆಗಳು ನಿಜಕ್ಕೂ ಕರುಣಾಜನಕವಾಗಿದ್ದು ಅದರ ಕಥೆ-ವ್ಯಥೆ ಇದೋ ನಿಮಗಾಗಿ… Read More ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಭಾರತದ ಭವಿಷ್ಯವು ಜಾತಿ ಆಧಾರಿತ ರಾಜಕೀಯದಿಂದಲ್ಲ, ಸಾಮರ್ಥ್ಯ, ಸಮಾನ ಅವಕಾಶ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಿಂದ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ತಪ್ಪಲ್ಲ. ಆದರೆ ಜಾತಿ ನಿರ್ಮೂಲನೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ರಾಜಕೀಯದ ಕಾರ್ಯಪದ್ಧತಿಯಲ್ಲಿಯೇ ಬದಲಾವಣೆ ತಂದಾಗ ಮಾತ್ರವೇ ಸಾಧ್ಯ ಆಗುತ್ತದೆ ಅಲ್ವೇ?… Read More ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ದೇವಾಲಯಗಳು ಸನಾತನ ಧರ್ಮ ಮತ್ತು ಗ್ರಾಮೀಣ ಆರ್ಥಿಕತೆಯ ಜೀವಾಳವಾಗಿದ್ದು, ಬೆಳ್ಳೂರು ಕ್ರಾಸ್‌ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಗಂಗರು, ಹೊಯ್ಸಳರ ಕಾಲದ ಇತಿಹಾಸವಿರುವ ದಡಗ ಗ್ರಾಮದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯವು ಶಿಥಿಲಾವಸ್ಥೆಗೆ ತಲುಪಿದ್ದು, ಈ ದೇವಾಲಯದ ಜೀರ್ಣೋದ್ಧಾರದ ಕಾರ್ಯಕ್ಕೆ ಸಕಲ ಆಸ್ತಿಕರ ಸಹಕಾರದ ಅವಶ್ಯಕತೆ ಇದೆ. ಈ ದೇವಾಲಯದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಜೀರ್ಣೋದ್ಧಾರಗೊಳ್ಳುತ್ತಿರುವ ದಡಗದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯ

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ

ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ತಮ್ಮ ಜೀವನದಲ್ಲಿ ಆದ ಒಂದು ಕಹಿ ಘಟನೆಯಿಂದ ಅರಿತು, ಒಬ್ಬ ಉತ್ತಮ ಶಿಕ್ಷಕ ತನ್ನ ಧನಾತ್ಮಕ ಚಿಂತನೆಗಳ ಪಾಠ ಪ್ರವಚನಗಳಿಂದ ಸಾವಿರಾರು ಉತ್ತಮ ಪ್ರಜೆಗಳನ್ನು ರೂಪಿಸಬಲ್ಲ ಎಂದು ಬಯಸೀ ಬಯಸೀ ಶಿಕ್ಷಕ ವೃತ್ತಿಯನ್ನೇ ಆಯ್ದುಕೊಂಡು, ಈಗ ದೇಶವೇ ಹೆಮ್ಮೆ ಪಡುವಂತಹ ಶಿಕ್ಷಣ ತಜ್ಞರಾಗಿರುವ ಡಾ. ಗುರುರಾಜ ಕರ್ಜಗಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ

ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಪ್ರಾಧ್ಯಪಕರಾಗಿದ್ದೂ, ಕಲೆ, ಶಿಕ್ಷಣ, ಸಾಹಿತ್ಯ, ಭಾಷೆ, ಕ್ರೀಡೆ, ಇತಿಹಾಸ, ಹಬ್ಬಗಳು, ಜನಪದ, ನೀತಿ ಕಥೆಗಳು, ಜನಪದ, ಸುಭಾಷಿತಗಳು, ಗಾದೆಗಳು, ಆರೋಗ್ಯ, ವ್ಯಕ್ತಿ ವಿಕಸನ, ಜೀವನದಲ್ಲಿನ ಸಫಲತೆ, ಪ್ರವಾಸ, ಹೀಗೆ ನೂರಾರು ವಿಷಯಗಳ ಕುರಿತಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರತಿದಿನವೂ ನಾಡಿನ ಒಂದಲ್ಲಾ ಒಂದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಲೇ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೆಲುಕು, ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಭಾರತೀಯರು ಮತ್ತು ಸರ್ಕಾರೀ ಉಚಿತ ಕೊಡುಗೆಗಳು

ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ವಿಭಾಗಗಳಲ್ಲಿ ಸರ್ಕಾರ ಜನರ ಪರವಾಗಿ ನಿಲ್ಲಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನರ ದೈನಂದಿನ ಬದುಕಿಗೆ ಬೇಕಾಗುವಂತಹ ಎಲ್ಲಾ ಅವಶ್ಯ ವಸ್ತುಗಳನ್ನೂ ಸರ್ಕಾರವೇ ಉಚಿತವಾಗಿ ಕೊಡಬೇಕು. ಹೆಣ್ಣುಮಕ್ಕಳು ತಮ್ಮ ವಯಕ್ತಿಕ ನೈರ್ಮಲ್ಯಕ್ಕೆ ಅವಶ್ಯಕತೆ ಇರುವ ನ್ಯಾಪ್ಕಿನ್ ಪ್ಯಾಡ್ ಗಳನ್ನೂ ಸರ್ಕಾರವೇ ಉಚಿತವಾಗಿ ಜನರ ತೆರಿಗೆ ಹಣದಲ್ಲಿ ಕೊಡಬೇಕು ಎಂದು ಬಯಸುವಂತಹ ದೈನೇಸಿ ಸ್ಥಿತಿ ನಿಜಕ್ಕೂ ಮೂರ್ಖತನ ಮತ್ತು ಧೂರ್ತತನದ ಪರಮಾವಧಿಯಾಗಿದೆ ಅಲ್ವೇ?… Read More ಭಾರತೀಯರು ಮತ್ತು ಸರ್ಕಾರೀ ಉಚಿತ ಕೊಡುಗೆಗಳು

ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ… Read More ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಅಆಇಈ ಯಲ್ಲೂ ಅಪಸವ್ಯವೇ?

ನಾವು ಚಿಕ್ಕವರಿದ್ದಾಗ ಸಮಾಜ ಶಾಸ್ತ್ರದಲ್ಲಿ ಭಾರತವನ್ನು ಕಂಡುಹಿಡಿದವರು ಯಾರು? ಎಂಬ ಪ್ರಶ್ನೆಗೆ 1492 ರಲ್ಲಿ ಪೋರ್ಚುಗೀಸ್ ಮೂಲದ ನಾವಿಕನಾದ ವಾಸ್ಕೋ ಡಿ ಗಾಮಾ ಪೋರ್ಚುಗಲ್‌ನ ಲಿಸ್ಬನ್‌ನಿಂದ ನೌಕಾಯಾನ ಮಾಡುತ್ತಾ ಅಟ್ಲಾಂಟಿಕ್ ಸಾಗರದ ಮೂಲಕ ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಆಫ್ರಿಕಾದ ಪೂರ್ವ ಕರಾವಳಿಯ ಮಲಿಂಡಿಯಲ್ಲಿ ಕೆಲಕಾಲ ಲಂಗರು ಹಾಕಿ ಅಂತಿಮವಾಗಿ ಕೇರಳದ ಮಲಬಾರ್ ಕರಾವಳಿಯ ಕ್ಯಾಲಿಕಟ್‌ಗೆ ಬರುವ ಮೂಲಕ ಭಾರತವನ್ನು ಕಂಡು ಹಿಡಿದರು ಎಂದೇ ಹೇಳಿಕೊಡಲಾಗುತ್ತಿತ್ತು. ಹಾಗಾದರೆ ಅದಕ್ಕೂ ಮುಂಚೆ ಭಾರತದ ಅಸ್ತಿತ್ವವೇ ಇರಲಿಲ್ಲವೇ?… Read More ಅಆಇಈ ಯಲ್ಲೂ ಅಪಸವ್ಯವೇ?