ಏನಂತೀರೀ? 2025ರ ವಾರ್ಷಿಕ ವರದಿ

2019ರ ಮಹಾ ಶಿವರಾತ್ರಿಯಂದು ಆರಂಭವಾದ ನಿಮ್ಮೀ ಏನಂತೀರೀ? ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ಇಂದಿಗೆ 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 7 ವರ್ಷಗಳಲ್ಲಿ ಏನಂತೀರೀ? ಬ್ಲಾಗ್ ಮತ್ತು Enahtheeri YouTube Channel ನಡೆದು ಬಂದ ಹಾದಿ, ನಿಮ್ಮವನೇ ಉಮಾಸುತ ನಿಂದ ಸೃಷ್ಟಿಕರ್ತ ಮಂಜುಶ್ರೀ ಆದ ರೋಚಕತೆ ಇದೋ ನಿಮಗಾಗಿ… Read More ಏನಂತೀರೀ? 2025ರ ವಾರ್ಷಿಕ ವರದಿ

ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ… Read More ಮದುವೆಯ ಈ ಬಂಧ ಅನುರಾಗದ ಅನುಬಂಧ

ಉಮಾ

ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ಕೆ.ಜಿ.ಎಫ್ ನಲ್ಲಿದ್ದ  ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಜಾರಾವ್ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಸತವಾಗಿ ಏಳು ಗಂಡು ಮಕ್ಕಳ (ಅರು ಮಕ್ಕಳು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಳಿದು ಹೋಗಿದ್ದವು) ನಂತರ ಅವರ  ಮನೆಯಲ್ಲಿ ಮೊತ್ತ ಮೊದಲಬಾರಿಗೆ  ಮಹಾಲಕ್ಷ್ಮಿಯ ಜನನವಾಗಿತ್ತು.  ರಾಯರ ಮನೆ ದೇವರು ಮೇಲುಕೋಟೆ ಯೋಗಾನರಸಿಂಹನಾಗಿದ್ದ ಕಾರಣ,  ಅವರಿಗೆ ತಮ್ಮ ಮಗಳ ಹೆಸರು  ಲಕ್ಷ್ಮಿಯ ಹೆಸರಿಡಬೇಕು ಎಂದಿತ್ತು. ಆದರೆ ಅವರ ಮಡದಿ ವಿಶಾಲಾಕ್ಷಿ ಅವರ ತಾಯಿಯವರು ತಮ್ಮ ಮನೆ ದೇವರು … Read More ಉಮಾ

ಜನ್ಮ ರಹಸ್ಯ

ಸಾಧಾರಣ ನಾಮ ಸಂವತ್ಸರದ, ಆಶ್ವಯುಜ ಶುದ್ಧ ಪಂಚಮಿ, ಅರ್ಥಾತ್ ನವರಾತ್ರಿಯ ಪಂಚಮಿಯಂದು ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ(KGF) ಸಂಜೆ ಸರಿ ಸುಮಾರು 5:30ಕ್ಕೆ ಈ ಪ್ರಪಂಚಕ್ಕೆ ಕಾಲಿಟ್ಟವರೊಬ್ಬರ ಅದ್ಭುತ ರೋಚಕ ಜನ್ಮ ರಹಸ್ಯ ಇದೋ ನಿಮಗಾಗಿ… Read More ಜನ್ಮ ರಹಸ್ಯ

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

https://enantheeri.com/2019/03/10/appa/

ಸಂಕಟ ಬಂದಾಗಲೇ ವೆಂಕಟರಮಣನನ್ನು ನೆನಸಿಕೊಂಡು, ಕಣ್ಣಿಗೆ ಕಾಣದ ಆ ಭಗವಂತನನ್ನು, ಅಯ್ಯಾ ತಂದೇ ನಮ್ಮನ್ನು ಕಾಪಾಡು ಎಂದು ಕೋರಿಕೊಳ್ಳುವ ಈ ಸಮಾಜ, ಅದೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಯರನ್ನೇ ವಯಸ್ಸಾದ ನಂತರ ದೂರ ಇಡುವುದು ಎಷ್ಟು ವಿಪರ್ಯಾಸ ಅಲ್ವೇ?… Read More ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?