ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

ಪ್ರಕೃತಿ, ರೈತಾಪಿ ವರ್ಗ ಮತ್ತು ಅವರ ಸಾಕು ಪ್ರಾಣಿಗಳೊಂದಿಗೆ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯ ಸಂಜೆ ಬೆಂಕಿಯ ಮೇಲೆ ತಮ್ಮ ದನಕರುಗಳ ಕಿಚ್ಚು ಹಾಯಿಸುವುದರ ಸುಂದರ ಕ್ಷಣಗಳ ಜೊತೆ ಅದರ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

2021 ಕೊರೊನಾ, 2025 ಜಲಗಂಡಾಂತರ?

ಪ್ರತೀ ಮಕರ ಸಂಕ್ರಾಂತಿಯಂದು ಸಾಕ್ಷಾತ್​ ಸೂರ್ಯದೇವನೇ ಗವಿಪುರಂ ಗುಟ್ಟಹಳ್ಳಿಯ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಪಾದಕ್ಕೆ ಎರಗಿ ಆಶೀರ್ವಾದ ಮತ್ತು ಅನುಮತಿ ಕೋರಿ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುತ್ತಾನೆ ಎನ್ನುವ ನಂಬಿಕೆ ಇದ್ದು, ಈ ಬಾರಿ ಸೂರ್ಯನ ರಶ್ಮಿಯು ಸ್ವಾಮಿಯ ಮೇಲೆ ಬೀಳದಿರುವ ಕಾರಣ ಭಕ್ತಾದಿಗಳಲ್ಲಿ ಮೂಡಿರುವ ಆತಂಕದ ಕಥೆ-ವ್ಯಥೆ ಇದೋ ನಿಮಗಾಗಿ… Read More 2021 ಕೊರೊನಾ, 2025 ಜಲಗಂಡಾಂತರ?

ಶೂನ್ಯ ನೆರಳು ದಿನ

ಸೂರ್ಯನ ಬೆಳಕು ಯಾವುದೇ ಸಜೀವ/ನಿರ್ಜೀವ ವಸ್ತುವಿನ ಮೇಲೆ ಬಿದ್ದರೆ ಅಲ್ಲಿ ನೆರಳು ಉಂಟಾಗುವುದು ಸಹಜ ಪ್ರಕ್ರಿಯೆ. ಆದರೆ ಪ್ರಕೃತಿಯಲ್ಲಿ ವರ್ಷಕ್ಕೆ ಎರಡು ಬಾರಿ, ವಿಶಿಷ್ಟ ಸಮಯದಲ್ಲಿ ಆ ರೀತಿ ನೆರಳು ಬೀಳದಿರುವ ವಿಸ್ಮಯಕಾರಿ ಘಟನೆ ಸಂಭವಿಸುತ್ತದೆ.

ಹಾಗಾದರೆ ಶೂನ್ಯ ನೆರಳು ದಿನ ಎಂದರೆ ಏನು? ಏಪ್ರಿಲ್ 25ರ ಮಧ್ಯಾಹ್ನ 12.17 ಕ್ಕೆ ಬೆಂಗಳುರಿನಲ್ಲಿ ಆಗುವ ಈ ವಿಸ್ಮಯಕಾರಿ ಘಟನೆ ಉಳಿದ ಪ್ರದೇಶಗಳಲ್ಲಿ ಎಂದು ಕಾಣಿಸಿಕೊಳ್ಳುತ್ತದೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿ ಇದೋ ನಿಮಗಾಗಿ… Read More ಶೂನ್ಯ ನೆರಳು ದಿನ

ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಬಾಲ್ಯದಲ್ಲಿ ಸಣ್ಣ ಮಕ್ಕಳಿಗೆ ಅವರ ಅಪ್ಪಾ ಹೀರೋ ಎನಿಸಿದರೆ, ನನಗೆ ಮಾತ್ರಾ ನನ್ನ ಸೋದರ ಮಾವ ಚೆಲುವಣ್ಣಾ ಮಾವನೇ ಹೀರೋ. ಮೊನೆ ತಾನೇ ತಮ್ಮ 83ನೇ ವರ್ಷ ಹುಟ್ಟು ಆಚರಿಸಿಕೊಂಡು 2 ದಿನ ಕಳೆಯುತ್ತಿದ್ದಂತೆಯೇ ಗುರುವಾರ, 09.03.2023ರಂದು ನಮ್ಮನ್ನಗಲಿರುವುದು ದಃಖಕರವಾದ ಸಂಗತಿಯಾಗಿದೆ.

ಹುಟ್ಟೂ ಸಾವು ಎರಡರ ಮಧ್ಯೆ ಆ ಮೂರು ದಿನದ ಬಾಳಿನಲ್ಲಿ ಆವರೇಕೆ ನನಗೆ ಹೀರೋ ಎನಿಸಿದ್ದರು? ನನ್ನ ಮತ್ತು ಅವರ ಮಧುರ ಬಾಂಧವ್ಯ ಹೇಗಿತ್ತು? ಎಂಬ ಹೃದಯಸ್ಪರ್ಶಿ ಕಥನ ಇದೋ ನಿಮಗಾಗಿ … Read More ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಅತ್ತೆ ಮನೆ ಕೆನೆ ಮೊಸರು

ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳೇ ಒಂದು ರೀತಿಯ ಆಪ್ಯಾಯಮಾನವಾದದ್ದು. ಅದರ ಬಗ್ಗೆ ಅದೆಷ್ಟು ಹೊಗಳಿದರೂ ಮನಸ್ಸಿಗೆ ತೃಪ್ತಿನೇ ಅಗೋದಿಲ್ಲ. ಮೊನ್ನೆ ವಾರಾಂತ್ಯದಲ್ಲಿ ಸಂಕ್ರಾಂತಿ ಎಳ್ಳು ಬೀರಲು ನಮ್ಮ ಅತ್ತೆ ಅರ್ಥಾತ್ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದೇ ಊರಿನಲ್ಲಿ ಕೆಲವೇ ಕಿಮೀ ದೂರದಲ್ಲಿಯೇ ಇದ್ದರೂ ಪದೇ ಪದೇ ಅತ್ತೆ ಮನೆಗೆ ಹೋಗಲು ಸಾಧ್ಯವಾಗದಿದ್ದರೂ, ವರ್ಷಕ್ಕೆರಡು ಬಾರಿ ತಪ್ಪದೇ ಅತ್ತೇ ಮನೆಗೆ ಹೋಗಿ ಅವರ ಅದರಾತಿಧ್ಯವನ್ನು ಸವಿದು ಬಂದೇ ಬಿಡುತ್ತೇವೆ. ಒಂದು ಸಂಕ್ರಾಂತಿಗೆ ಎಳ್ಳು ಬೀರುವುದಕ್ಕಾದರೆ, ಎರಡನೆಯದು ಗೌರಿ ಹಬ್ಬಕ್ಕೆ… Read More ಅತ್ತೆ ಮನೆ ಕೆನೆ ಮೊಸರು

ಗೋವು ಕಳ್ಳರು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ… Read More ಗೋವು ಕಳ್ಳರು

ಪೇಪರ್.. ಪೇಪರ್…

ಪ್ರತಿ ದಿನವೂ ಬೆಳ್ಳಂ ಬೆಳಗ್ಗೆ ಛಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ತಪ್ಪದೇ ನಮ್ಮೆಲ್ಲರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಆ ಶ್ರಮ ಜೀವಿಗಳ ರೋಚಕ ಮತ್ತು ಅಷ್ಟೇ ಹೃದಯಸ್ಪರ್ಶಿ ಪ್ರಸಂಗಗಳನ್ನು ಸೆಪ್ಟಂಬರ್-4, ವಿಶ್ವ ಪತ್ರಿಕಾ ವಿತರಕರ ದಿನದಂದು ಮೆಲುಕು ಹಾಕುತ್ತಾ, ಆ ಪತ್ರಿಕಾ ಯೋಧರಿಗೆ ನಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸೋಣ ಅಲ್ವೇ?… Read More ಪೇಪರ್.. ಪೇಪರ್…

ಮಕರ ಸಂಕ್ರಾಂತಿ

ನೇಸರನು ತನ್ನ ಪಥವ ಬದಲಿಸಿ, ಮಾಗಿಯ ಚಳಿ ಮಾಯವಾಗಿ, ಜನ ಮಾನಸದಲ್ಲಿ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯ ವೈಶಿಷ್ಟ್ಯತೆಗಳೇನು? ಈ ಹಬ್ಬದಲ್ಲಿ ಹುಗ್ಗಿ, ಎಳ್ಳು ಬೆಲ್ಲವನ್ನು ನೈವೇದ್ಯಕ್ಕೆ ಏಕೆ ಇಡುತ್ತಾರೆ? ಈ ಹಬ್ಬವನ್ನು ಎಲ್ಲೆಲ್ಲಿ ಹೇಗೇಗೇ ಆಚರಿಸುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಮಕರ ಸಂಕ್ರಾಂತಿ

ಎಲ್ಲರೂ ಮಾಡುವುದು ಹೊಟ್ಟೆಗಾಗಿ

ಅನ್ನಂ ಪರಬ್ರಹ್ಮ ಸ್ವರೂಪ ಎಂದು ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲದವರಿಗಾಗಿ ನಮ್ಮ ಮಠ ಮಂದಿರಗಳಲ್ಲಿ ಅನ್ನ ದಾಸೋಹ ಎನ್ನುವ ಸುಂದರ ಪರಿಕಲ್ಪನೆ ನಿಧಾನವಾಗಿ ಮಾಯವಾಗುತ್ತಾ, ಅನ್ನವನ್ನೇ ಮಾರಾಟ ಮಾಡುವ ವ್ಯವಸ್ಥೆ ಆರಂಭವಾದ ಪರಿಣಾಮ ನಮ್ಮ ಅಡುಗೆ ಮನೆಗಳಲ್ಲಿ ಒಲೆಯನ್ನೇ ಹಚ್ಚದಿರುವಂತಹ ಆಘಾತಕಾರಿಯ ಕರಾಳ ವಾಸ್ತವಿಕತೆ ಇದೋ ನಿಮಗಾಗಿ… Read More ಎಲ್ಲರೂ ಮಾಡುವುದು ಹೊಟ್ಟೆಗಾಗಿ