ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ದೂರದರ್ಶನ ಮತ್ತು ಖಾಸಗೀ ಕಿರುತೆರೆಯಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಂತಹ ಶ್ರೀಮತಿ ಶೈಲಜಾ ಸಂತೋಷ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ಕಾಲ ಕೆಟ್ಟು ಹೋಯ್ತೇ?

ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ! ಎಂದು ಪದೇ ಪದೇ ಹೇಳುತ್ತೇವೆ. ಆದರೆ ಕಾಲ ಕೆಟ್ಟು ಹೋಗಿಲ್ಲಾ! ನಮ್ಮ ಮಕ್ಕಳು ಇನ್ನೂ ಸಂಸ್ಕಾರವಂತರಾಗಿಯೇ ಇದ್ದಾರೆ ಎಂದು ಸಾರುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ… Read More ಕಾಲ ಕೆಟ್ಟು ಹೋಯ್ತೇ?

ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ

ಸಮಾಜದ ಎಲ್ಲಾ ವರ್ಗದವರಿಗೂ ಕೈಗೆಟುಕುವಂತಹ  ಶಿಕ್ಷಣವನ್ನು ಕೊಡುವಂತಹ ಮಲ್ಲೇಶ್ವರಂ ಶಿಶುವಿಹಾರ ಎಂಬ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಕಳೆದ 7 ದಶಕಗಳಿಂದಲೂ  ಆಟ ಪಾಠಗಳ ಜೊತೆ ಮೌಲ್ಯಾಧಾರಿತ ಸಂಸ್ಕಾರ ಮತ್ತು ಸಂಪ್ರಾದಾಯಗಳನ್ನು ಕಲಿಸಿಕೊಟ್ಟ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ.ತಿರುಮಲಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ

ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ, ಜೀವನ ಶೈಲಿ ಎಲ್ಲವೂ ಬದಲಾಗಿ ಅವಿಭಕ್ತ ಕುಟುಂಬ ವಿಭಕ್ತಗಳಾಗಿ, ಐಶಾರಾಮ್ಯವಾದ ಜೀವನದ ಹಿಂದೆ ಬಿದ್ದು, ಗಂಡ ಹೆಂಡತಿ ಇಬ್ಬರೂ ಹೊರಗೆ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮದಿಂದಾಗಿ ಆಗಿರುವ ಈ ಹೃದಯವಿದ್ರಾವಕ ಪ್ರಸಂಗಗಳು ನಿಜಕ್ಕೂ ಎಚ್ಚರದ ಗಂಟೆಯಾಗಿದೆ.… Read More ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಟ್ಟ ಪೋಷಕರ ಔದಾರ್ಯತೆ, ಮನೆ ಮತ್ತು ಶಾಲೆಗಳ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?… Read More ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಬಹಳ ಹಿಂದೆ ಕರಾವಳಿ ಪ್ರದೇಶದವರು ಎಂದರೆ ಬಹಳ ಶಾಂತಿ ಪ್ರಿಯರು. ಸಂಪ್ರದಾಯ, ಸಂಸ್ಕಾರವಂತರಷ್ಟೇ ಅಲ್ಲದೇ ಸಹೃದಯಿಗಳಾಗಿ ಕುಡಿಯಲು ನೀರು ಕೇಳಿದರೂ, ನೀರಿನ ಜೊತೆ ಸಿಹಿಯಾದ ಬೆಲ್ಲದುಂಡೆಗಳನ್ನು ನೀಡುವಂತಹ ವಿಶಾಲಹೃದಯಿಗಳು. ಇವೆಲ್ಲದರ ಜೊತೆಗೆ ಓದಿನಲ್ಲಿ ಸದಾ ಕಾಲವೂ ಮುಂದಿರುವುದಲ್ಲದೇ, ಬಹಳ ಶ್ರಮದಿಂದ ಎಂತಹ ಕೆಲಸವನ್ನು ಮಾಡಬಲ್ಲವರು ಎಂದೇ ಎಂದೇ ಪ್ರಖ್ಯಾತರಾದವರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಕರಾವಳಿ ಮತ್ತು ಕೇರಳದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಬಹಳ ಬೇಸರವನ್ನು ತರಿಸುತ್ತಿದೆ. ಯಾವುದೋ ಮತಾಂಧರ ಮಾತುಗಳಿಗೆ ಬಲಿಯಾಗಿ ವಿದ್ಯೆಗಿಂತಲೂ ಧರ್ಮವೇ ಮುಖ್ಯ… Read More ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಇತ್ತೀಚೆಗೆ ವಾಟ್ಸಾಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಈ ಭಾವಾನುವಾದವನ್ನು ಮೊದಲು ಓದಿದ ನಂತರ ವಿಚಾರಕ್ಕೆ ಬರೋಣ. ಒಂದೂರಿನಲ್ಲಿದ್ದ  ದೇವಸ್ಥಾನವೊಂದಕ್ಕೆ ಪ್ರತಿದಿನ ಮುಂಜಾನೆ ಒಂದು ಚಿಕ್ಕ ಹುಡುಗಿ ಬಂದು ದೇವರ ಮುಂದೆ ನಿಂತು, ಕಣ್ಗಳನ್ನು ಮುಚ್ಚಿ, ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಸಿಕೊಂಡು ಒಂದೆರಡು ನಿಮಿಷಗಳ ಕಾಲ ಏನನ್ನೋ ಗೊಣಗುತ್ತಾ, ನಂತರ ಕಣ್ಣು ತೆರೆದು, ನಮಸ್ಕರಿಸಿ, ನಗುತ್ತಾ ಓಡಿಹೋಗುತ್ತಿದ್ದಳು. ಇದು ಆಕೆಯ ದೈನಂದಿನ ಕಾರ್ಯವಾಗಿತ್ತು. ಅ ಪುಟ್ಟ ಹುಡುಗಿಯನ್ನು ಪ್ರತಿದಿನವೂ ಗಮನಿಸುತ್ತಿದ್ದ ದೇವಸ್ಥಾನದ ಅರ್ಚಕರಿಗೆ ಅಷ್ಟು ಸಣ್ಣ ಹುಡುಗಿಗೆ ಧರ್ಮ ಆಚಾರ… Read More ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಮನೆಯಲ್ಲಿರುವ ಹಿರಿಯರು

ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ… Read More ಮನೆಯಲ್ಲಿರುವ ಹಿರಿಯರು

ನಾವೆಲ್ಲರೂ ಒಂದೇ..

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ… Read More ನಾವೆಲ್ಲರೂ ಒಂದೇ..