ನ್ಯಾಯ ದೇವತೆಯೂ ಏಕಪಕ್ಷೀಯಳೇ?

nanyaಕೆಲವು ಕ್ಷಣಗಳ ಹಿಂದೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಓದುತ್ತಿದ್ದಾಗ, ಇಂದು ಬೆಳಿಗ್ಗೆ, ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur Sharma) ಅವರನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೇ, ಪ್ರವಾದಿಗಳ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಅದೇಶಿಸಿರುವ ವಿಷಯ ನಿಜಕ್ಕೂ ಆಘಾತಕರಿ ಎನಿಸಿದೆ.

ಭಾರತ ದೇಶದ ಪ್ರಜ್ಞಾವಂತನಾಗಿ ದೇಶದ ಸಂವಿಧಾನ, ಕಾನೂನು ಮತ್ತು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಅಪಾರವಾದ ಗೌರವವಿದ್ದು, ಅದರ ಆದೇಶವನ್ನು ಧಿಕ್ಕರಿಸಿಸುವ ಮನೋಭಾವನೆ ಖಂಡಿತವಾಗಿಯೂ ನನಗೆ ಇಲ್ಲದಿದ್ದರೂ, ನ್ಯಾಯಾಧೀಷರ ಇಂದಿನ ಈ ರೀತಿಯ ಆದೇಶ ಒಂದು ರೀತಿಯಾಗಿ ಏಕಪಕ್ಷೀಕವಾಗಿದ್ದು ಮತ್ತೊಮ್ಮೆ ಒಂದು ಕೋಮಿನ ವಿರುದ್ಧ ಮತ್ತೊಂದು ಕೋಮನ್ನು ದಂಗೆ ಏಳುವಂತೆ ಪರೋಕ್ಷವಾಗಿ ಪ್ರಚೋದಿಸುವಂತಿದೆ ಎಂದೆನಿಸುತ್ತಿದೆ.

naya2ಯಾವುದೇ ನ್ಯಾಯಾಲಗಳಲ್ಲಿ ವಿಚಾರಣೆ ನಡೆಯುವಾಗ ಮೊಕ್ಕದ್ದಮ್ಮೆಯ ಪರ ಮತ್ತು ವಿರೋಧದ ನಡುವೆ ಕೂಲಂಕುಶವಾದ ವಿಚಾರಣಾ ರೂಪದ ಚರ್ಚೆಗಳು ನಡೆದ ನಂತರವೇ ತೀರ್ಪು ನೀಡುವುದು ಸಹಜ ಪ್ರತಿಕ್ರಿಯೆ. ಹಾಗೆ ತೀರ್ಪು ನೀಡುವ ಮುನ್ನಾ ಆರೋಪಿ ಆ ರೀತಿಯ ಕೃತ್ಯಗಳನ್ನು ನಡೆಸಲು ಕಾರಣವಾದ ವಿಷಯವೇನು? ಆ ಆರೋಪಿ ಹಾಗೆ ಮಾಡಲು ಯಾರಾದರೂ ಪ್ರಚೋದಿಸಿದರೇ? ಹಾಗೆ ಪ್ರಚೋದನೆಗೆ ಒಳಪಟ್ಟಿದ್ದಲ್ಲಿ ಹಾಗೆ ಪ್ರಚೋದಿಸಿದರು ಸಹಾ ಆ ಕೃತ್ಯದಲ್ಲಿ ಸಮಭಾಗಿಗಳಾಗಿ ಅವರನ್ನೂ ಸಹಾ ಅಪರಾಧಿ ಎಂದೇ ಪರಿಗಣಿಸಲಾಗುತ್ತದೆ. ಇದೇ ಕುರಿತಂತೆ ಈ ಸುಂದರವಾದ ಸುಭಾಶಿತ ಸಮಯೋಚಿತವಾಗಿದೆ

ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ |
ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ ||

ಯಾವುದೇ ಒಂದು ಕರ್ಮಕ್ಕೆ ನಾಲ್ಕು ಜನ ಸಮಭಾಗಿಗಳಾಗಿರುತ್ತಾರೆ. ಅದು ಒಳ್ಳೆಯ ಕೆಲಸವೇ ಇರಲಿ, ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು ಮತ್ತು ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸಿದೆ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು ಹೀಗೆ ಈ ನಾಲ್ಕೂ ಜನರೂ ಆ ಕರ್ಮಗಳಿಗೆ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎನ್ನುತ್ತದೆ ಈ ಸುಭಾಷಿತ.

ನೂಪುರ್ ಶರ್ಮರ ಪ್ರವಾದಿ ಮೊಹಮ್ಮದ್ ಕುರಿತಾದ ವಿವಾದಾತ್ಮಕ ಹೇಳಿಕೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆಯಲ್ಲದೇ, ಉದಯ್‌ಪುರದಲ್ಲಿ ಟೈಲರ್‌ನ ಹತ್ಯೆಯಾದ ದುರದೃಷ್ಟಕರ ಘಟನೆಗೂ ಪರೋಕ್ಷವಾಗಿ ಆಕೆಯ ವಿರುದ್ಧದ ಆಕ್ರೋಶವೇ ಕಾರಣವಾಗಿದೆ ಎಂದು ನೂಪುರ್ ಶರ್ಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸುಪ್ರೀಂ ಕೋರ್ಟ್, ಅಮಾನತುಗೊಂಡಿರುವ ಬಿಜೆಪಿ ವಕ್ತಾರರು ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಕಿರುವುದನ್ನು ಗಮನಿಸಿ ಇಡೀ ದೇಶದ ಕ್ಷಮೆ ಯಾಚಿಸುವಂತೆ ಸೂಚಿಸಿದೆ. ಈ ರೀತಿಯ ಹೇಳಿಕೆಯಿಂದಾಗಿಯೇ 50ಕ್ಕೂ ಹೆಚ್ಚಿನ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವುದರ ಜೊತೆಗೆ ಈಗ ದೇಶದಲ್ಲಿ ಏನಾಗುತ್ತಿದೆಯೋ ಅದಕ್ಕೆಲ್ಲಾ ನೂಪುರ್ ಶರ್ಮಾ ಅವರೇ ಜವಾಬ್ದಾರರು  (http://dhunt.in/xD7Ny?s=a&uu=0x299d0fa15a013a30&ss=pd) ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿರುವುದು ಆಶ್ಚರ್ಯಕರವಾಗಿದೆ.

ನೂಪುರ್ ಶರ್ಮಾ ಅವರು ಕಾಶಿಯ ಜ್ಞಾನವ್ಯಾಪೀ ಮಸೀದಿಯಲ್ಲಿ ನ್ಯಾಯಾಲಯವೇ ನಡೆಸಿದ ಸಮೀಕ್ಷೆಯಲ್ಲಿ ಶಿವಲಿಂಗ ಕಂಡು ಬಂದಿದ್ದರ ಕುರಿತಾಗಿ ಪ್ರತಿಷ್ಟಿತ ಟಿವಿ ಛಾನೆಲ್ಲಿನ ಚರ್ಚೆಯೊಂದರಲ್ಲಿ ಬಿಜೆಪಿ ಪಕ್ಷದ ಅಧಿಕೃತ ವಕ್ತಾರೆಯಾಗಿಯೇ ಭಾಗವಹಿಸಿದ್ದರು. ಅದೇ ರೀತಿ ಆದೇ ಚರ್ಚೆಯಲ್ಲಿ ಇತರೇ ಪಕ್ಷಗಳ ವಕ್ತಾರರೂ ಮತ್ತು ಕೆಲ ಮುಸ್ಲಿಂ ಮುಖಂಡರು ಸಹಾ ಭಾಗವಹಿಸಿ, ಪದೇ ಪದೇ ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಮತ್ತು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳ ವಿರುದ್ಧ ಶಿವಲಿಂಗದ ವಿರುದ್ಧ ಆಸಹನೀಯವಾಗಿ ಮತ್ತು ಅಸಹ್ಯವಾಗಿ ಜೋರು ಜೋರು ಧ್ವನಿಯಲ್ಲಿ ಅವಹೇಳನ ಮಾಡುತ್ತಿದ್ದ ಸಮಯದಲ್ಲಿ ಏಟಿಗೆ ಎದುರೇಟಿನಂತೆ ಚರ್ಚೆಯಲ್ಲಿ ಪ್ರತ್ಯುತ್ತರ ರೂಪದಲ್ಲಿ 60 ವರ್ಷದ ಪ್ರವಾದಿಗಳು 8 ವರ್ಷದ ಬಾಲಕಿಯನ್ನು ಮದುವೆಯಾಗಿ 10 ವರ್ಷಕ್ಕೇ ಆಕೆಯನ್ನು ತಾಯಿಯಾಗಿ ಮಾಡಿದ್ದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಆಕೆ ಹಾಗೆ ಹೇಳಿರುವ ವಿಷಯ ತಪ್ಪಲ್ಲ ಅದು ಸತ್ಯ ಎಂದು ನಂತರ ಅನೇಕ ಮುಸ್ಲಿಂ ಧರ್ಮ ಗುರುಗಲೇ ಒಪ್ಪಿಕೊಂಡಿದ್ದು, ಆದರೆ ಆ ಕ್ಷಣದಲ್ಲಿ ಆಕೆಯ ಪ್ರತಿಕ್ರಿಯೆ ಒಂದು ರೀತಿ ಪ್ರಚೋದನಾತ್ಮಕವಾಗಿತ್ತು ಹಾಗಾಗಿ ಮುಸಲ್ಮಾನರು ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಹುತೇಕ ಮುಲ್ಲಾಗಳೇ ಒಪ್ಪಿಕೊಂಡಿದ್ದಾರೆ.

naya3ಆಕೆ ಹಾಗೆ ಹೇಳಿದ್ದು ತಪ್ಪು ಎಂದು ಭಾವಿಸಿ ದಂಗೆ ಎದ್ದು ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಿ, ಆಕೆಯ ತಲೆಯನ್ನು ಕಡಿಯಬೇಕು ಎಂದು ಕೂಗಾಡುತ್ತಾರೆ ಎಂದರೆ, ಆ ಕ್ಷಣದದಲ್ಲಿ ಆಕೆ ಆ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಪ್ರಯೋಚಿಸಿದ, ಹಿಂದೂಗಳ ಧಾರ್ಮಿಕ ಭಾವನೆಗಳ ವಿರುದ್ಧ ಅತ್ಯಂತ ಕೆಟ್ಟ ರೀತಿಯಾಗಿ ಮಾತನಾಡಿದ ಅ ಚರ್ಚೆಯಲ್ಲಿ ಭಾಗವಹಿಸಿದ ಮುಸ್ಲಿಂ ನಾಯಕ ಮತ್ತು ಆ ಕಾರ್ಯಕ್ರಮ ಆಯೋಜಿಸಿದ ಟಿವಿ ಛಾನೆಲ್ ಮತ್ತು ಆತ ಆ ರೀತಿ ಹಿಂದೂಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರೂ ಸುಮ್ಮನಾಗಿದ್ದ ಉಳಿದ ಚರ್ಚಾ ಪಟುಗಳಿಗೆ ಎಂತಹ ಕಠಿಣ ಶಿಕ್ಷೆ ಕೊಡಬೇಕು? ಎಂದು ಘನವೆತ್ತ ನ್ಯಾಯಾಲಯವೇ ತೀರ್ಮಾನಿಸಲಿ.

ನೂಪುರ್ ಶರ್ಮಾಳ ಆ ರೀತಿಯ ಹೇಳಿಕೆಯನ್ನು ಬಲವಾಗಿ ಖಂಡಿಸಿದ ಬಿಜೆಪಿ ಪಕ್ಷ ಆಕೆಯನ್ನೂ ಮತ್ತು ಜಿಂದಾಲ್ ಇಬ್ಬರನ್ನೂ ತಮ್ಮ ಪಕ್ಷದಿಂದ ಉಚ್ಚಾಟಿಸಿದೆ. ಅದಾದ ನಂತರ ನೂಪುರ್ ಶರ್ಮಾ ಸಹಾ ತಾನು ಹೇಳಿದ್ದು ಸತ್ಯವೇ ಆಗಿದ್ದರೂ ಜನರಿಗೆ ಅದರಿಂದ ಬೇಸರವಾಗಿದ್ದರೆ, ಅದಕ್ಕೆ ತಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದಾಗಲೇ ಈ ವಿಷಯ ಅಲ್ಲಿಗೆ ಮುಕ್ತಾಯವಾಗಬೇಕಿತ್ತು. ಬೆರಳಿನಲ್ಲಿ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರಂತೆ ಎನ್ನುವಂತೆ, ತಮ್ಮ ಧರ್ಮ, ರಾಜಕೀಯ ಅಸ್ಥಿತ್ವ ಮತ್ತು ಅಸ್ಮಿತೆಗಳ ವೈರುಧ್ಯಗಳಿಂದಾಗಿ ಪ್ರಚೋದಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾಳು ಮಾಡಿದ್ದನ್ನು ನ್ಯಾಯಾಲಯ ಯಾವ ರೀತಿ ನೋಡುತ್ತದೆ ?

ಇದೇ ಆದೇಶದ ಮುಂದುವರೆದ ಭಾಗವಾಗಿ ನೂಪುರ್ ಶರ್ಮಾ ನಾಲಿಗೆ ಸಡಿಲ ಬಿಟ್ಟು ಮಾತನಾಡಿದ್ದರಿಂದ ಇಡೀ ದೇಶಕ್ಕೆ ಬೆಂಕಿ ಬಿದ್ದಿತ್ತು. ಪ್ರಜಾಪ್ರಭುತ್ವದಲ್ಲಿ ಹುಲ್ಲಿಗೆ ಬೆಳೆಯುವ ಹಕ್ಕು ಇದೆ, ಕತ್ತೆಗೂ ತಿನ್ನುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನೇ ನೋಡಿದರೆ, ಹೋದರೇ ಪ್ರತೀ ಶುಕ್ರವಾರವೂ ದೇಶಾದ್ಯಂತ ಇರುವ ಲಕ್ಷಾಂತರ ಮಸೀದಿಗಳಲ್ಲಿ ನಮಾಜ್ ಸಮಯದಲ್ಲಿ ಈ ದೇಶ ಮತ್ತು ಹಿಂದೂಗಳ ವಿರುದ್ಧ ಕಿಡಿ ಕಾರುವಂತಹ ಅಮಾಯಕ ಜನರನ್ನು ಹಿಂದೂಗಳ ತಲೆ ತೆಗೆಯುವಂತೆ ಪ್ರಚೋದಿಸುವ ಮುಲ್ಲಾಗಳನ್ನೂ, ಏನೂ ಅರಿಯದ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಮೂಲಕ ಮತಾಂದತೆಯನ್ನು ತುರುಕುವ ಮದರಸಾಗಳನ್ನೂ ಮತ್ತು ಪ್ರತೀ ದಿನ ಮುಂಜಾನೆಯಿಂದ ರಾತ್ರಿಯ ವರೆಗೂ ಅವ್ಯಾಹತವಾಗಿ ಅಲ್ಲಾಹ್ ಒಬ್ಬನೇ ದೇವರು ಅವನೊಬ್ಬನೇ ಸರ್ವಶಕ್ತನು ಎಂದು ಕೂಗುತ್ತಾ ಧಾರ್ಮಿಕ ಅಸಹಿಷ್ಣುತೆಯನ್ನು ಉಂಟು ಮಾಡುತ್ತಿರುವವರ ವಿರುದ್ಧ ನ್ಯಾಯಾಲಯವೇಕೆ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ?

ಸಮಯ ಸಿಕ್ಕಾಗಲೆಲ್ಲಾ ಹಿಂದೂಗಳು ಆಚರಣೆ, ಸಂಪ್ರದಾಯ, ಶ್ರದ್ಧೆ ಮತ್ತು ‌ನಂಬಿಕೆಗಳ ವಿರುದ್ಧವೇ ಮಾತನಾಡುವ ಸ್ವಘೋಷಿತ ಬುದ್ದಿಜೀವಿಗಳು, ಕಮ್ಯೂನಿಷ್ಟರು, ಮೈಸೂರಿನ ಭಗವಾನ್, ನಟಿ ಸ್ವರಾ ಭಾಸ್ಕರ್, ನಟನೆಗಿಂತಲೂ ತನ್ನ ವಿವಾದಾತ್ಮಕ ಹೇಳಿಕೆಯಿಂದಲೇ ಕುಖ್ಯಾತನಗಿರುವ ಪ್ರಕಾಶ್ ರೈ, ಭಾರತೀಯ ಸಂಜಾತನಲ್ಲದಿದ್ದರೂ ಭಾರತದಲ್ಲೇ ಇರುವ ಅಹಿಂಸಾ ಚೇತನ್, ವರ್ಷದ 365 ದಿನಗಳೂ ಮುಸಲ್ಮಾನರ ಓಲೈಕೆಗಾಗಿಯೇ ಹಿಂದೂಗಳ ವಿರುದ್ಧ ಮಾತನಾಡುವ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಅವರಂತಹವರಿಗೆ ಘನವೆತ್ತ ನ್ಯಾಯಾಲಯ ಏನು ಹೇಳುತ್ತದೆ?

ಇನ್ನು ಉದಯ್‍ಪುರದಲ್ಲಿ ನಡೆದ ಟೈಲರ್ ಶಿರಚ್ಛೇದನ ಸಣ್ಣ ವಿಷಯವಾಗಿದ್ದು ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ ಎನ್ನುವ ಮೂಲಕ ಆ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ನ್ಯಾಯಾಲಯ ಏಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ?

ನ್ಯಾಯಾಲಯದ ಆದೇಶ ತಮ್ಮ ಮೂಗಿನ ನೇರಕ್ಕೆ ಇದ್ದಲ್ಲಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಒಪ್ಪುವುದು, ತಮ್ಮ ವಿರುದ್ಧ ಆದೇಶ ಬಂದರೆ ನಮಗೆ ಈ ದೇಶದ ಕಾನೂನಿಗಿಂತಲೂ ನಮ್ಮ ಧಾರ್ಮಿಕ ನಂಬಿಕೆ ಶರಿಯತ್ ಮುಖ್ಯ ಅದಕ್ಕಾಗಿ ಯಾವುದೇ ಬೆಲೆ ಕೊಡಲು ಸಿದ್ಧ ಎಂದು ಬಹಿರಂಗವಾಗಿಯೇ ಹೇಳುವ ಯು.ಟಿ ಖಾದರ್, ಸಾರ್ವಜನಿಕ ಆಸ್ತಿ ಹಾಳು ಮಾಡಿದ, ದೊಂಬಿ ಎಬ್ಬಿಸಿದವರು, ಶಾಸಕರ ಮನೆಗೆ ಬೆಂಕಿ ಹಾಕಿದವರು, ಕೊಲೆ ಆರೋಪದ ಮೇಲೆ ತನಿಖೆಗಾಗಿ ನ್ಯಾಯಾಂಗ ಬಂಧನದಲ್ಲಿ ಇರುವವರಿಗೆ ಸೆರೆಮನೆಗೆ ಹೋಗಿ ಅವರಿಗೆ ಆರ್ಥಿಕವಾಗಿ ಧನ ಸಹಾಯ ಮಾಡಿ ನಿಮ್ಮೆಲ್ಲಾ ಕುಕೃತ್ಯಗಳಿಗೆ ನಾವಿದ್ದೇವೆ ಎಂದು ನೇರವಾಗಿ ಹೇಳುವ ಝಮೀರ್ ಬಗ್ಗೆ ನ್ಯಾಯಾಲಯದ ಅಭಿಪ್ರಾಯವೇನು?

ನ್ಯಾಯಾಲಯವನ್ನು ವಿರೋಧಿಸುವ ಅಥವಾ ಘನವೆತ್ತ ನ್ಯಾಯಾಧೀಷರ ಆದೇಶಗಳನ್ನು ಟೀಕಿಸುವ ಮನಸ್ಥಿತಿ ಖಂಡಿತವಾಗಿಯೂ ಹಿಂದೂಗಳಿಗೆ ಇಲ್ಲದಿದ್ದರೂ, ರಾಷ್ಟ್ರ ಕವಿ ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಂಬಿಕೆ ಉಳ್ಳವರಾಗಿ, ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಎನ್ನುವ ಮನಸ್ಥಿಯವರಾಗಿದ್ದರೂ, ಪ್ರತೀ ಬಾರಿಯೂ ಬಹುಸಂಖ್ಯಾತ ಹಿಂದೂಗಳ ವಿರುದ್ಧವೇ ಈ ರೀತಿಯಾಗಿ ನ್ಯಾಯಾಲಯದ ಆದೇಶಗಳು ಬಂದು, ಆ ರೀತಿ ಪ್ರಚೋದಿಸುವವರ ವಿರುದ್ಧ ಕನಿಷ್ಟ ಪಕ್ಷ ನ್ಯಾಯಲಯ ಎಚ್ಚರಿಕೆಯನ್ನೂ ನೀಡದೇ ಹೋದಾಗ, ಭಾರತದಲ್ಲಿ ಸಂವಿಧಾನ ಮತ್ತು ಕಾನೂನು ಇರುವುದು ಕೇವಲ ಹಿಂದೂಗಳಿಗೆ ಮಾತ್ರವೇ? ಈ ದೇಶದಲ್ಲಿ ಸರಿ ಹೇಳುವುದು ತಪ್ಪೇ? ತಪ್ಪನ್ನು ಪ್ರಶ್ನಿಸುವುದು ಆಕ್ಷೇಪಾರ್ಹವೇ? ನ್ಯಾಯ ದೇವತೆಯೂ ಏಕಪಕ್ಷೀಯಳೇ? ಎನ್ನುವ ಭಾವನೆ ಮೂಡುವುದು ಸಹಜವಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s